ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೆಕ್ಸಿಕೊದಲ್ಲಿರುವ ಮನಸ್ಸಾಕ್ಷಿಯ ಸ್ವಾತಂತ್ರ್ಯವು ಉತ್ತಮಗೊಳ್ಳುವುದೊ?

ಮೆಕ್ಸಿಕೊದಲ್ಲಿರುವ ಮನಸ್ಸಾಕ್ಷಿಯ ಸ್ವಾತಂತ್ರ್ಯವು ಉತ್ತಮಗೊಳ್ಳುವುದೊ?

ಮೆಕ್ಸಿಕೊದಲ್ಲಿರುವ ಮನಸ್ಸಾಕ್ಷಿಯ ಸ್ವಾತಂತ್ರ್ಯವು ಉತ್ತಮಗೊಳ್ಳುವುದೊ?

ಮೆಕ್ಸಿಕೊದ ಎಚ್ಚರ! ಸುದ್ದಿಗಾರರಿಂದ

ಮೆಕ್ಸಿಕೊದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಕಾನೂನು ಒಪ್ಪಿಗೆಯನ್ನು ನೀಡಿದೆ. ಆದರೂ, ಆರಾಧನಾ ಸ್ವಾತಂತ್ರ್ಯದ ಮೇಲೆ ಕಾನೂನು ಈಗಲೂ ಕೆಲವು ನಿರ್ಬಂಧಗಳನ್ನು ಹೇರುತ್ತಿದೆ. ದೃಷ್ಟಾಂತಕ್ಕೆ, ಧಾರ್ಮಿಕ ಕಾರಣಗಳಿಗಾಗಿ ಮಿಲಿಟರಿ ಸೇವೆಯನ್ನು ನಿರಾಕರಿಸುವ ವಿಚಾರವು ಈ ದೇಶದಲ್ಲಿರುವ ಜನರಿಗೆ ಹೆಚ್ಚೇನೂ ಗೊತ್ತಿಲ್ಲ. ನ್ಯಾಷನಲ್‌ ಆಟಾನಮಸ್‌ ಯೂನಿವರ್ಸಿಟಿ ಆಫ್‌ ಮೆಕ್ಸಿಕೊ (ಯುಎನ್‌ಎಎಮ್‌)ವಿನ ಲೀಗಲ್‌ ಇನ್‌ವೆಸ್ಟಿಗೇಷನ್‌ ಇನ್‌ಸ್ಟಿಟ್ಯೂಟ್‌ (ಕಾನೂನು ಪರಿಶೋಧನಾ ಸಂಸ್ಥೆಯು) ಒಂದು ಅಂತಾರಾಷ್ಟ್ರೀಯ ಭಾಷಣಮಾಲೆಯನ್ನು ಸಾದರಪಡಿಸಲು ಯೋಜಿಸಿತು ಮತ್ತು ಅದರ ಶೀರ್ಷಿಕೆಯು, “ಮೆಕ್ಸಿಕೊ ಮತ್ತು ಲೋಕದಲ್ಲೆಲ್ಲಾ ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಿಸುವುದು” ಎಂದಾಗಿತ್ತು. ಯುಎನ್‌ಎಎಮ್‌ನ ಲೀಗಲ್‌ ಇನ್‌ವೆಸ್ಟಿಗೇಷನ್‌ನ ಇನ್‌ಸ್ಟಿಟ್ಯೂಟ್‌ ಸರಕಾರದ ಕಡೆಗೆ ಜವಾಬ್ದಾರಿಯುಳ್ಳದ್ದಾಗಿರಬೇಕು ಮತ್ತು ತಮ್ಮ ಕೃತ್ಯಗಳಿಗೆ ಲೆಕ್ಕವೊಪ್ಪಿಸಲು ಸಿದ್ಧವಾಗಿರುವ ಸ್ಥಿತಿಯಲ್ಲಿರಬೇಕಾಗಿದೆ. ಆದರೂ, ಈಗಾಗಲೇ ಇರುವ ನಿಯಮಗಳ ಕುರಿತು ಮತ್ತು ಅದರ ಅನ್ವಯಿಸುವಿಕೆಯ ಕುರಿತು ತನಿಖೆಮಾಡುವ ಉದ್ದೇಶವು ಅದಕ್ಕಿತ್ತು. “ಯೆಹೋವನ ಸಾಕ್ಷಿಗಳು ಮತ್ತು ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಿಸುವುದು” ಎಂಬ ಭಾಷಣವನ್ನು ಕೊಡಲು ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳು ತಮ್ಮ ಪ್ರತಿನಿಧಿಯೊಬ್ಬರನ್ನು ಕಳುಹಿಸಬೇಕೆಂದು ಅವರು ಕೇಳಿಕೊಂಡರು.

ಪ್ರೊಫೆಸರ್‌ರು ಮಾತಾಡುತ್ತಾರೆ

ಸ್ಪೇನಿನಲ್ಲಿರುವ ಗ್ರಾನಾಡಾ ಯೂನಿವರ್ಸಿಟಿ ಆಫ್‌ ಲಾ ಎಂಬ ಸಂಸ್ಥೆಯಲ್ಲಿ ಪ್ರೊಫೆಸರರಾಗಿದ್ದ ಡಾ. ಝೇವಿಯರ್‌ ಮಾರ್ಟಿನಸ್‌ ಟೋರನ್‌ರವರು “ಅಂತಾರಾಷ್ಟ್ರೀಯ ಕಾನೂನಿನಲ್ಲಿ ಮನಸ್ಸಾಕ್ಷಿಯ ಆಧಾರದ ಮೇಲೆ ಮಿಲಿಟರಿ ಸೇವೆಯನ್ನು ನಿರಾಕರಿಸುವುದು” ಎಂಬ ನಿರೂಪಣೆಯನ್ನು ಸಾದರಪಡಿಸಿದರು. ಮನಸ್ಸಾಕ್ಷಿಯ ಸ್ವಾತಂತ್ರ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕಾರವಿದೆ ಮತ್ತು ಮನಸ್ಸಾಕ್ಷಿಯ ಕಾರಣದಿಂದಾಗಿ ಕೆಲವು ನಿಯಮಗಳಿಗೆ ಅಥವಾ ಕರ್ತವ್ಯಗಳಿಗೆ ಒಳಪಡುವುದಕ್ಕೆ ನಿರಾಕರಿಸುವ ಹಕ್ಕು ಸಹ ಈಗಾಗಲೇ ಅಂಗೀಕಾರವನ್ನು ಪಡೆದಿದೆ ಎಂಬುದನ್ನು ಅವರು ಒತ್ತಿಹೇಳಿದರು. ಸ್ಪೇನಿನಲ್ಲಿರುವ ಯೆಹೋವನ ಸಾಕ್ಷಿಗಳ ಸನ್ನಿವೇಶವನ್ನು ಅವರು ತಿಳಿಸಿದರು ಮತ್ತು ಇದರ ಜೊತೆಗೆ ಗ್ರೀಸಿನಲ್ಲಿ ಕೊಕಿನಕಿಸ್‌ರ ಮೇಲೆ ಮಾಡಲಾದ ಮೊಕದ್ದಮೆಯ ಕುರಿತು ಸಹ ಅವರು ತಿಳಿಸಿದರು. *

ಡಾ. ಹೋಸಾ ಲೋಓಸ್‌ ಸೋಬರನೆಸ್‌ ಫೆರ್‌ನಾನ್‌ಡಿಸ್‌ ಎಂಬ ಹೆಸರಿನ ಯುಎನ್‌ಎಎಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಲೀಗಲ್‌ ಇನ್‌ವೆಸ್ಟಿಗೇಷನ್ಸ್‌ನ ಪ್ರೊಫೆಸರರೊಬ್ಬರು “ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಣೆ ತೋರಿಸುವುದರ ವಿಷಯದಲ್ಲಿ ಮೆಕ್ಸಿಕೊದ ಅನುಭವ” ಎಂಬ ವಿಷಯದ ಮೇಲೆ ಮಾತಾಡಿದರು. ಅವರು ಹೇಳಿದ್ದು: “ಧಾರ್ಮಿಕ ಕೂಟಗಳ ಮತ್ತು ಬಹಿರಂಗ ಆರಾಧನೆಯ ಕುರಿತು ಮೆಕ್ಸಿಕೊದಲ್ಲಿ ಅನೇಕ ಕಾನೂನುಗಳು ಮಾಡಲ್ಪಟ್ಟಿವೆ. ಆದರೆ ಈ ಎಲ್ಲಾ ಕಾನೂನುಗಳು ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಣೆ ತೋರಿಸುವ ಕುರಿತು ನಿಷೇಧವನ್ನು ಹೇರುತ್ತವೆ ಎಂಬುದನ್ನು ನಾವು ನಿಮಗೆ ಹೇಳಲು ಬಯಸುತ್ತೇವೆ.” ಇದನ್ನು ಹೇಳುವಾಗ ಅವರು ಕಾನೂನಿನ ಮೊದಲ ಅನುಚ್ಛೇದವನ್ನು ಉಲ್ಲೇಖಿಸಿದರು. ಆ ಅನುಚ್ಛೇದವು ಹೀಗೆ ತಿಳಿಸುತ್ತದೆ: “ಈ ದೇಶದ ನಿಯಮಗಳನ್ನು ಅನುಸರಿಸಿಕೊಂಡು ಹೋಗಲು ತನ್ನ ಧಾರ್ಮಿಕ ನಂಬಿಕೆಗಳು ತಡೆಯುತ್ತವೆಂದು ಯಾರೊಬ್ಬನೂ ಹೇಳಸಾಧ್ಯವಿಲ್ಲ. ಕಾನೂನು ವಿಧಿಸಿದ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ತಪ್ಪಿಸುವುದು ನ್ಯಾಯವಾದದ್ದೆಂದು ಸಮರ್ಥಿಸಲು ಧಾರ್ಮಿಕ ಕಾರಣಗಳನ್ನು ಕೊಡುವುದಕ್ಕೂ ಸಾಧ್ಯವಿಲ್ಲ.” ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಡಾ. ಸೋಬರನೆಸ್‌ ಹೇಳಿದ್ದು: “ಮೆಕ್ಸಿಕೊದಲ್ಲಿ ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಿಸುವುದರ ವಿಷಯದಲ್ಲಿ ಕಾನೂನನ್ನು ಮಾಡುವುದು ತುರ್ತಿನದ್ದಾಗಿದೆಯೆಂದು ನಾವು ನಂಬುತ್ತೇವೆ.”

ಮೆಕ್ಸಿಕೊದಲ್ಲಿ ಪ್ರತಿ ವರ್ಷ ನೂರಾರು ಸಾಕ್ಷಿ ಮಕ್ಕಳು ಬೈಬಲಾಧಾರಿತ ನಂಬಿಕೆಯ ಕಾರಣ ಧ್ವಜವನ್ನು ವಂದಿಸಲು ನಿರಾಕರಿಸುತ್ತಾರೆ ಮತ್ತು ಈ ಕಾರಣದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆಂಬ ನಿಜತ್ವವನ್ನು ಸಹ ಅವರು ತಿಳಿಸಿದರು. ಕೆಲವು ಸಾಕ್ಷಿ ಮಕ್ಕಳಿಗೆ ಶಾಲೆಗೆ ನೋಂದಾಯಿಸಲು ಸಹ ಅನುಮತಿಯಿಲ್ಲ. ಹೀಗಿದ್ದರೂ, ಮಾನವ ಹಕ್ಕುಗಳ ನಿಯೋಗದ ಮೂಲಕ ಮಾಡಲಾದ ಅಪೀಲುಗಳಿಂದಾಗಿ ಶಿಕ್ಷಣ ಪಡೆಯುವ ಹಕ್ಕು ಅನೇಕ ಮಕ್ಕಳಿಗೆ ಪುನಃ ನೀಡಲಾಗಿದೆ. ಸಾಕ್ಷಿ ಮಕ್ಕಳನ್ನು ಶಾಲೆಯಿಂದ ಹೊರಹಾಕುವುದನ್ನು ತಡೆಯುವುದಕ್ಕೆ ಕೆಲವು ಶಿಕ್ಷಣ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಕೆಲವು ಅಧ್ಯಾಪಕರು ಇಂತಹ ಪ್ರಯತ್ನಗಳನ್ನು ನಿರ್ಲಕ್ಷಿಸಿದ್ದಾರೆ. ಅಧಿಕಾರಿಗಳು ಸಾಕ್ಷಿಗಳ ನಿಲುವಿನ ಕಡೆಗೆ ತಾಳ್ಮೆಯಿಂದಿದ್ದಾರೆ, ಆದರೆ ಮೆಕ್ಸಿಕೊದ ಶಾಲೆಗಳಲ್ಲಿ ಈ ರೀತಿ ಅನುಸರಿಸಬಹುದಾದ ಯಾವುದೇ ನೈತಿಕ ಮೂಲತತ್ವವಿಲ್ಲ.

ಪವಿತ್ರವೆಂದು ಪರಿಗಣಿಸಲಾಗುವ ದಿನಗಳಲ್ಲಿ ಕೆಲಸಮಾಡುವುದಕ್ಕೆ ಒತ್ತಾಯಿಸುವುದು ಮತ್ತು ಕೆಲಸದ ಸ್ಥಳಗಳಲ್ಲಿ ತಮ್ಮ ಧಾರ್ಮಿಕ ನಂಬಿಕೆಗಳನ್ನು ಉಲ್ಲಂಘಿಸುವಂತಹ ಉಡುಪನ್ನು ಧರಿಸುವುದು, ಇವೇ ಮುಂತಾದ ಕೆಲವು ವಿಷಯಗಳ ಮೇಲೆ ಬೇರೆ ಧರ್ಮಗಳ ಪ್ರತಿನಿಧಿಗಳು ಮಾತಾಡಿದರು. ಮನಸ್ಸಾಕ್ಷಿಗೆ ಅಡ್ಡಿಯಾಗುವಂತಹ ವಿಷಯಗಳ ಕುರಿತು ಸಹ ಚರ್ಚಿಸಿದರು. ಮಿಲಿಟರಿ ಸೇವೆ ಮತ್ತು ಕೆಲವು ವೈದ್ಯಕೀಯ ಉಪಚಾರಗಳನ್ನು ಪಡೆದುಕೊಳ್ಳುವುದರಲ್ಲಿರುವ ಆಕ್ಷೇಪಣೆಗಳನ್ನು ಸಹ ಅವರು ಚರ್ಚಿಸಿದರು.

ಯೆಹೋವನ ಸಾಕ್ಷಿಗಳು ಮತ್ತು ಕೈಸರನು

ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಸಲ್ಲಿಸುತ್ತಿರುವ ಒಬ್ಬ ಸದಸ್ಯನು ಅವರ ಮೂಲಭೂತ ನಂಬಿಕೆಗಳ ಸಾರಾಂಶವನ್ನು ಸಾದರಪಡಿಸಿದನು. ಲೂಕ 20:25ರಲ್ಲಿರುವ ಬೈಬಲ್‌ ಮೂಲತತ್ವಗಳಿಗೆ ಕ್ರೈಸ್ತರು ಅಂಟಿಕೊಂಡಿರುತ್ತಾರೆಂಬುದನ್ನು ಅವನು ವಿವರಿಸಿದನು. ಅಲ್ಲಿ ಹೇಳುವುದು: “ಕೈಸರನದನ್ನು ಕೈಸರನಿಗೆ ಕೊಡಿರಿ.” ಕ್ರೈಸ್ತರು ಐಹಿಕ ಅಧಿಕಾರಿಗಳಿಗೆ ಗೌರವವನ್ನು ತೋರಿಸಬೇಕೆಂಬುದನ್ನು ಸೂಚಿಸುವ ರೋಮಾಪುರ 13:1ರಲ್ಲಿರುವ ವಚನವನ್ನು ಸಹ ಅವನು ಉಲ್ಲೇಖಿಸಿದನು. ಯೆಹೋವನ ಸಾಕ್ಷಿಗಳು ಇತರರಂತೆ ಸಾಮಾನ್ಯ ಜೀವಿತಗಳನ್ನು ನಡೆಸುತ್ತಾರೆ, ತಮ್ಮ ತೆರಿಗೆಗಳನ್ನು ಕಟ್ಟಲು ಪ್ರಯಾಸಪಡುವ ಮೂಲಕ ನಿಯಮಪಾಲಕ ಪ್ರಜೆಗಳಾಗಿರುತ್ತಾರೆ, ಕ್ರಮಬದ್ಧವಾದ ಜೀವನವನ್ನು ನಡೆಸುತ್ತಾರೆ, ತಮ್ಮ ಮನೆಗಳನ್ನು ಶುಚಿಯಾಗಿಡುತ್ತಾರೆ ಮತ್ತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ ಎಂಬ ವಿಷಯಗಳನ್ನು ಅವನು ತನ್ನ ಭಾಷಣಮಾಲೆಯಲ್ಲಿ ಒತ್ತಿಹೇಳಿದನು.

ಇದಾದ ನಂತರ, ಧ್ವಜವನ್ನು ವಂದಿಸಲು ಸಾಕ್ಷಿಗಳು ನಿರಾಕರಿಸುವುದಕ್ಕೆ ಶಾಸ್ತ್ರೀಯ ಆಧಾರವಿದೆ ಎಂಬುದನ್ನು ಅವನು ಎತ್ತಿತೋರಿಸಿದನು. ಇದು ದಶಾಜ್ಞೆಗಳಲ್ಲಿ ಕಂಡುಬರುತ್ತದೆ. ಆ ಆಜ್ಞೆಗಳಲ್ಲೊಂದು ವಿಮೋಚನಕಾಂಡ 20:3-5ರಲ್ಲಿ ತಿಳಿಸಲಾಗಿದೆ: “ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು ಪೂಜೆಮಾಡಲೂ ಬಾರದು.”

ಯೆಹೋವನ ಸಾಕ್ಷಿಗಳು ದೇವರೊಬ್ಬನನ್ನೇ ಆರಾಧಿಸುತ್ತಾರೆ ಮತ್ತು ಯಾವುದೇ ಸಂದರ್ಭದಲ್ಲಿ ವಿಗ್ರಹವನ್ನು ಅವರು ಆರಾಧಿಸುವುದಿಲ್ಲ. ಹೀಗಿದ್ದರೂ, ಒಂದು ರಾಷ್ಟ್ರೀಯ ಚಿಹ್ನೆಯ ವಿರುದ್ಧ ಅಗೌರವವನ್ನು ತೋರಿಸುವ ಕೃತ್ಯವನ್ನು ಅವರು ಮಾಡುವುದಿಲ್ಲ ಅಥವಾ ಅದಕ್ಕೆ ಅಗೌರವಪೂರ್ವಕವಾಗಿ ಎಂದಿಗೂ ಮಾತಾಡುವುದಿಲ್ಲ.

ಈ ವಿಷಯಗಳಲ್ಲಿ ಯೆಹೋವನ ಸಾಕ್ಷಿಗಳು ಸಹಮತದಿಂದಿದ್ದಾರೆ ಎಂಬುದನ್ನು ಒತ್ತಿಹೇಳುವ ಉದ್ದೇಶದಿಂದ, ಪರ್ಪಲ್‌ ಟ್ರೈಆ್ಯಂಗಲ್ಸ್‌ ಎಂಬ ವಿಡಿಯೋವನ್ನು ತೋರಿಸಲಾಯಿತು. ನಾಸಿ ಆಳ್ವಿಕೆಯ ಸಮಯದಲ್ಲಿದ್ದ (1933-45) ಯೆಹೋವನ ಸಾಕ್ಷಿಗಳು, ಜರ್ಮನ್‌ನಲ್ಲಿ ಯಾವ ದೃಢ ನಿಲುವನ್ನು ತೆಗೆದುಕೊಂಡರೆಂಬುದನ್ನು ಆ ವಿಡಿಯೊ ತೋರಿಸಿತು. ನಾಸಿ ಆಳ್ವಿಕೆಯ ಸಮಯದಲ್ಲಿ ತಮ್ಮ ನಂಬಿಕೆಗಳಲ್ಲಿ ಅಚಲರಾಗಿ ಉಳಿದ ಕುಸೆರೋ ಕುಟುಂಬದ ಕಥೆಯನ್ನು ಆ ವಿಡಿಯೋ ತೋರಿಸಿತು. *

ಯೆಹೋವನ ಸಾಕ್ಷಿಗಳಿಗೆ ರಕ್ತಪೂರಣಗಳನ್ನು ತೆಗೆದುಕೊಳ್ಳದೇ ಇರುವುದಕ್ಕೆ ಶಾಸ್ತ್ರೀಯ ಆಧಾರವು ಇದೆಯೆಂಬುದನ್ನು ಸಹ ಆ ಭಾಷಣಮಾಲೆಯಲ್ಲಿ ವಿವರಿಸಲಾಯಿತು. (ಆದಿಕಾಂಡ 9:3, 4; ಅ. ಕೃತ್ಯಗಳು 15:28, 29) ಲೋಕದ ಸುತ್ತಲೂ ಏರ್ಪಡಿಸಲಾಗಿರುವ ಹಾಸ್ಪಿಟಲ್‌ ಲೈಏಸನ್‌ ಕಮಿಟಿಗಳ ಕುರಿತು ಸಹ ವಿವರಣೆ ನೀಡಲಾಯಿತು. ಇದಕ್ಕೆ ಕೂಡಿಸಿ, ಯೆಹೋವನ ಸಾಕ್ಷಿಗಳಿಗೆ ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಹಕಾರವನ್ನು ತೋರಿಸುವ ಡಾಕ್ಟರರ ಸಾಧನೆಗಳನ್ನು ಸಹ ಎತ್ತಿತೋರಿಸಲಾಯಿತು.

ಪ್ರತಿ ದಿನ, ಸುಮಾರು 100 ಜನರು ಭಾಷಣಮಾಲೆಯನ್ನು ಆಲಿಸಲು ಬರುತ್ತಿದ್ದರು ಮತ್ತು ಇವರಲ್ಲಿ ಅನೇಕರು ವಕೀಲರಾಗಿದ್ದರು. ಮೆಕ್ಸಿಕೊದ ಧಾರ್ಮಿಕ ವ್ಯವಹಾರಗಳ ಕಾರ್ಯಾಲಯದಲ್ಲಿರುವ ಪ್ರತಿನಿಧಿಗಳು ಸಹ ಹಾಜರಾಗಿದ್ದರು. ಮನಸ್ಸಾಕ್ಷಿಯ ಆಧಾರದ ಮೇಲೆ ಆಕ್ಷೇಪಣೆಯನ್ನು ತೋರಿಸುವ ಮೂಲಕ ಕೆಲವೊಂದು ವಿಷಯಗಳಲ್ಲಿ ಭಾಗವಹಿಸದಿರುವ ನಿಲುವಿಗೆ ಪರಿಣಿತರು ಗೌರವವನ್ನು ವ್ಯಕ್ತಪಡಿಸಿದರು. ಹೀಗೆ ಹಾಜರಾಗಿದ್ದವರೆಲ್ಲರಿಗೆ ಈ ಗೌರವಾರ್ಹ ಹೇಳಿಕೆಗಳನ್ನು ಆಲಿಸುವ ಅವಕಾಶವು ಸಿಕ್ಕಿತು. ಈ ವಿಚಾರವು ಮೆಕ್ಸಿಕೊದಲ್ಲಿರುವ ಶಾಸಕರಿಗೆ ಹೊಸದಾಗಿರುವುದಾದರೂ ಫ್ರಾನ್ಸ್‌, ಪೋರ್ಚುಗಲ್‌, ಸ್ಪೇನ್‌ ಮತ್ತು ಅಮೆರಿಕ ಮುಂತಾದ ಅನೇಕ ಪ್ರಜಾಪ್ರಭುತ್ವ ದೇಶಗಳಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿದೆ. ಅಷ್ಟುಮಾತ್ರವಲ್ಲ, ಅದು ಕೆಲವು ಹಿಂದಿನ ಕಮ್ಯೂನಿಸ್ಟ್‌ ದೇಶಗಳಾದ ಜೆಕಿಯಾ ಮತ್ತು ಸ್ಲೊವಾಕಿಯದಲ್ಲಿಯೂ ಸಹ ಅಂಗೀಕರಿಸಲ್ಪಟ್ಟಿದೆ.

[ಪಾದಟಿಪ್ಪಣಿಗಳು]

^ ಸೆಪ್ಟೆಂಬರ್‌ 1, 1993ರ ಕಾವಲಿನಬುರುಜುವಿನಲ್ಲಿರುವ “ಯೂರೋಪಿಯನ್‌ ಹೈಕೋರ್ಟ್‌ ಗ್ರೀಸಿನಲ್ಲಿ ಸಾರುವ ಹಕ್ಕನ್ನು ಎತ್ತಿಹಿಡಿಯುತ್ತದೆ” ಎಂಬ ಲೇಖನವನ್ನು ಮತ್ತು ಡಿಸೆಂಬರ್‌ 1, 1998ರ ಸಂಚಿಕೆಯ “ಕಾನೂನುಬದ್ಧವಾಗಿ ಸುವಾರ್ತೆಯನ್ನು ಸಂರಕ್ಷಿಸುವುದು” ಎಂಬ ಲೇಖನವನ್ನು ನೋಡಿರಿ.

^ ಸೆಪ್ಟೆಂಬರ್‌ 1, 1985ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದಿರುವ “ಸೆರೆಮನೆ ಮತ್ತು ಮರಣದ ಮಧ್ಯೆಯೂ ದೇವರ ಕಡೆಗೆ ನನ್ನ ಕುಟುಂಬಕ್ಕಿದ್ದ ಪ್ರೀತಿ” ಎಂಬ ಲೇಖನವನ್ನು ನೋಡಿರಿ. ಮತ್ತು ಜನವರಿ 15, 1994ರ ಸಂಚಿಕೆಯ ಪುಟ 5ನ್ನು ಸಹ ನೋಡಿರಿ.

[ಪುಟ 23ರಲ್ಲಿರುವ ಚಿತ್ರ]

ಮೆಕ್ಸಿಕೊದಲ್ಲಿರುವ ಯೆಹೋವನ ಸಾಕ್ಷಿಗಳು ಸಾರಲಿಕ್ಕಾಗಿ ತಮಗಿರುವ ಸ್ವಾತಂತ್ರ್ಯವನ್ನು ಅತ್ಯಮೂಲ್ಯವೆಂದೆಣಿಸುತ್ತಾರೆ