ನಮ್ಮ ವಾಚಕರಿಂದ
ನಮ್ಮ ವಾಚಕರಿಂದ
ಅಸ್ವಸ್ಥ ಹೆತ್ತವರು “ಯುವ ಜನರು ಪ್ರಶ್ನಿಸುವುದು . . . ಅಮ್ಮ ಏಕೆ ಇಷ್ಟೊಂದು ಅಸ್ವಸ್ಥರಾಗಿದ್ದಾರೆ?” (ಆಗಸ್ಟ್ 8, 1999) ಎಂಬ ಲೇಖನವು ಹೃದಯಸ್ಪರ್ಶಿಯಾಗಿತ್ತು. ನನ್ನಂತೆಯೇ ಒಬ್ಬ ಅಸ್ವಸ್ಥ ಪ್ರಿಯ ವ್ಯಕ್ತಿಯನ್ನು ಪರಾಮರಿಸುವ ಸುಯೋಗವು ಇನ್ನೂ ಎಷ್ಟೋ ಯುವ ಜನರಿಗಿದೆಯೆಂದು ನನಗನಿಸಿರಲಿಲ್ಲ. ನನ್ನ ಅಜ್ಜಿ ನಮ್ಮೊಂದಿಗಿರುತ್ತಾರೆ, ಮತ್ತು ಅವರು ನಾಲ್ಕು ತಿಂಗಳುಗಳಿಂದ ಹಾಸಿಗೆಹಿಡಿದಿದ್ದಾರೆ. ಅವರನ್ನು ನೋಡಿಕೊಳ್ಳುವುದು ನನಗೆ ದೊಡ್ಡ ಹೊರೆ ಅನಿಸುತ್ತಿತ್ತು ಮತ್ತು ಅವರ ಶುಶ್ರೂಷೆಯನ್ನು ಮಾಡಿ ದಣಿದುಹೋಗುತ್ತಿದ್ದೆ. ಆ ಲೇಖನವನ್ನು ಓದಿ ನನಗೆ ತುಂಬ ಅಗತ್ಯವಾಗಿದ್ದ ಬಲವನ್ನು ಪಡೆದುಕೊಂಡೆ. ಯೆಹೋವನ ಬೆಂಬಲದ ಕುರಿತಾಗಿ ಅದು ನನ್ನಲ್ಲಿ ಭರವಸೆಯನ್ನು ಮೂಡಿಸಿತು.
ಜೆ. ಪಿ., ಫಿಲಿಪ್ಪೀನ್ಸ್
ಆ ಲೇಖನವು ನನಗೆ ತುಂಬ ಸಾಂತ್ವನವನ್ನು ಕೊಟ್ಟಿತು. ಅಷ್ಟುಮಾತ್ರವಲ್ಲದೆ, ಖಿನ್ನತೆಯಿಂದ ಬಳಲುತ್ತಿರುವ ನನ್ನ ತಾಯಿಗೆ ಬೆಂಬಲನ್ನು ಕೊಡಲು ನನಗೆ ಬಲವನ್ನು ನೀಡಿತು. ಸನ್ನಿವೇಶವನ್ನು ಹೆಚ್ಚು ವಾಸ್ತವಿಕ ದೃಷ್ಟಿಯಿಂದ ನೋಡುವಂತೆ ಮತ್ತು ಹೆಚ್ಚಿನ ಸಹಾನುಭೂತಿ, ತಿಳುವಳಿಕೆ ಹಾಗೂ ಜಾಣ್ಮೆಯನ್ನು ತೋರಿಸುವಂತೆ ಆ ಲೇಖನದಲ್ಲಿ ಕೊಡಲ್ಪಟ್ಟಿರುವ ಸಲಹೆಸೂಚನೆಗಳನ್ನು ನಾನು ಉಪಯೋಗಿಸಲು ಶಕ್ತನಾದೆ.
ಜಿ. ಎಲ್., ಇಟಲಿ
ಈ ಲೇಖನವು ಸಮಯಕ್ಕೆ ಸರಿಯಾಗಿ ಬಂತು. ನನಗೆ ಕ್ಯಾನ್ಸರ್ ರೋಗವಿದೆ ಮತ್ತು ನನ್ನ ಮಗ ನನ್ನೊಂದಿಗಿದ್ದಾನೆ. ಅವನು ನನ್ನನ್ನು ನೋಡಿ ಎಷ್ಟು ಸಂಕಟಪಡುತ್ತಿದ್ದನೆಂದರೆ, ಅವನನ್ನು ಹೇಗೆ ಸಂತೈಸುವುದೆಂದು ನನಗೆ ಗೊತ್ತಾಗುತ್ತಿರಲಿಲ್ಲ. ಆ ಲೇಖನವು ಅವನ ಭಾವನೆಗಳನ್ನೇ ತಿಳಿಸುವಂತಿತ್ತು. ಈ ಲೇಖನಗಳು ಕೇವಲ ಯುವ ಜನರ ಕುರಿತಾಗಿ ಮಾತ್ರವಲ್ಲ, ಜೀವನದ ಕುರಿತಾಗಿಯೇ ತಿಳಿಸುತ್ತವೆ.
ಆರ್. ಝೆಡ್., ಜರ್ಮನಿ
ಆತ್ಮಿಕವಾಗಿ ಸಕ್ರಿಯರಾಗಿರುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ಈ ಲೇಖನವು ನನಗೆ ಮನದಟ್ಟುಮಾಡಿತು. ನಿಮ್ಮ ಸ್ವಂತ ಜೀವನವು ದೇವರ ರಾಜ್ಯದ ಮೇಲೆ ಕೇಂದ್ರೀಕರಿಸಲ್ಪಟ್ಟಿರುವಾಗಲೇ, ನೀವು ಒಬ್ಬ ಅಸ್ವಸ್ಥ ವ್ಯಕ್ತಿಗೆ ಸಹಾಯಮಾಡಬಲ್ಲಿರೆಂಬ ಅರಿವನ್ನು ಇದು ಮೂಡಿಸಿತು.
ಪಿ. ಇ., ಆಸ್ಟ್ರಿಯ
ಏಣಿ ಸುರಕ್ಷೆ “ಏಣಿಗಳ ಉಪಯೋಗ—ಸುರಕ್ಷೆಗಾಗಿ ಅವುಗಳನ್ನು ನೀವು ಪರೀಕ್ಷಿಸುತ್ತೀರೊ?” (ಸೆಪ್ಟೆಂಬರ್ 8, 1999) ಎಂಬ ಲೇಖನಕ್ಕಾಗಿ ಉಪಕಾರ. ಇತ್ತೀಚೆಗೆ ನಾನು ಒಂದು ಏಣಿಯಿಂದ ಬಿದ್ದು, ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ನೀವು ಕೊಟ್ಟಿರುವ ಹತ್ತು ಸೂಚನೆಗಳನ್ನು ಗಣ್ಯಮಾಡುತ್ತೇನೆ ಮತ್ತು ಮುಂದಿನ ಸಲ ಏಣಿಯನ್ನು ಉಪಯೋಗಿಸುವಾಗ ಅದನ್ನು ನೆನಪಿನಲ್ಲಿಟ್ಟುಕೊಳ್ಳುವೆ.
ಡಿ. ಎನ್., ಮೆಕ್ಸಿಕೊ
ಹಿಂಸೆಯನ್ನು ಪಾರಾಗುವುದು “ಮರಣದ ಎದುರಿನಲ್ಲೂ ದೇವರಿಗೆ ಸೇವೆಸಲ್ಲಿಸುವುದು” (ಸೆಪ್ಟೆಂಬರ್ 8, 1999) ಎಂಬ ಲೇಖನವನ್ನು ನಾನು ಈಗತಾನೇ ಓದಿಮುಗಿಸಿದೆ. ಅಂಗೋಲ ದೇಶವು ಒಂದು ಕಾಲದಲ್ಲಿ ಆತ್ಮಿಕವಾಗಿ ಬಂಜರಾಗಿ ತೋರುತ್ತಿದ್ದರೂ, ಅಲ್ಲಿರುವ ಸಹೋದರರು 17ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ತಾಳಿಕೊಂಡಿರುವುದರಿಂದ, ಈಗ ಅಲ್ಲಿ ಹೇರಳವಾದ ಸಮೃದ್ಧಿಯಿದೆ!
ಆರ್. ವೈ., ಜಪಾನ್