ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ವೈದೃಶ್ಯಗಳ ದೇಶ”ವೊಂದರ ಮನಮುಟ್ಟುವ ಚರಿತ್ರೆ

“ವೈದೃಶ್ಯಗಳ ದೇಶ”ವೊಂದರ ಮನಮುಟ್ಟುವ ಚರಿತ್ರೆ

“ವೈದೃಶ್ಯಗಳ ದೇಶ”ವೊಂದರ ಮನಮುಟ್ಟುವ ಚರಿತ್ರೆ

ಬ್ರಸಿಲಿನ ಎಚ್ಚರ! ಸುದ್ದಿಗಾರರಿಂದ

ಬ್ರಸಿಲನ್ನು “ವೈದೃಶ್ಯಗಳ ದೇಶ” ಎಂದು ಕರೆಯುತ್ತಾರೆ ಮತ್ತು ಹಾಗೆ ಕರೆಯಲು ಸ್ಪಷ್ಟವಾದ ಕಾರಣಗಳೂ ಇವೆ. ನಾವು ಮಾತಾಡುತ್ತಿರುವ ಈ ಬ್ರಸಿಲ್‌ ದೇಶ ಮುಖ್ಯವಾಗಿ ಉಷ್ಣವಲಯದ ದೇಶವಾಗಿದೆ. ಇಲ್ಲಿನ ಹವಾಮಾನವು ದಕ್ಷಿಣದಲ್ಲಿರುವ ಉಷ್ಣವಲಯದಿಂದ ಪ್ರಾರಂಭಿಸಿ, ಅಮೆಜಾನ್‌ ಪ್ರದೇಶದಲ್ಲಿರುವ ಭೂಮಧ್ಯರೇಖೆಯ ವರೆಗೂ ಭಿನ್ನಭಿನ್ನವಾಗಿರುತ್ತದೆ. ಬ್ರಸಿಲ್‌ನ ಇತಿಹಾಸವು ದೊಡ್ಡ ವ್ಯತ್ಯಾಸಗಳಿಂದಲೂ ಗುರುತಿಸಲ್ಪಡುತ್ತದೆ. 85,11,899 ಚದರ ಕಿಲೋಮೀಟರುಗಳಷ್ಟು ಸಮತಲ ಭಾಗವನ್ನು ಆವರಿಸುವ ಮತ್ತು 7,400 ಕಿಲೋಮೀಟರುಗಳಷ್ಟು ಕಡಲತೀರವನ್ನು ಹೊಂದಿರುವ ಈ ವಿಶಾಲವಾದ ಭೂಪ್ರದೇಶವು ಅನೇಕ ವರ್ಷಗಳಿಂದಲೂ ಬೇರೆ ಬೇರೆ ಸಂಸ್ಕೃತಿಗಳಿಂದ ಬಂದಿರುವ ಜನರಿಗೆ ನಿವಾಸಸ್ಥಾನವಾಗಿದೆ.

ಸುಮಾರು 500 ವರ್ಷಗಳ ಹಿಂದೆ ಬ್ರಸಿಲಿಗೆ ಬಂದು ನೆಲೆಸಿದ ಪೋರ್ಚುಗೀಸರು, ಆ ದೇಶದ ಜನರಲ್ಲಿ ನೋಡಿದ ಮೊದಲ ಗುಣವು ಅತಿಥಿಸತ್ಕಾರವಾಗಿತ್ತು. ವಾಸ್ತವದಲ್ಲಿ, ಇಸವಿ 1500ರಲ್ಲಿ ಪೆರೋ ವಾಜ್‌ ಡೋ ಕಾಮೋನ್ಯನನು ಪೋರ್ಚುಗೀಸ್‌ ರಾಜನಾಗಿದ್ದ 1 ನೇ ಮ್ಯಾನ್ಯುವೆಲ್‌ನಿಗೆ ಪತ್ರ ಬರೆದನು. ಈ ಪತ್ರದಲ್ಲಿ ಸ್ಥಳೀಯ ಬ್ರಸಿಲಿಯನ್ನರು ತಮ್ಮ ಪೋರ್ಚುಗೀಸ್‌ ಸಂದರ್ಶಕರೊಂದಿಗೆ ಸುಲಭವಾಗಿ ಬೆರೆತರು ಮತ್ತು ಪ್ರೀತಿಯಿಂದ ಅವರನ್ನು ಆಲಂಗಿಸಿದರು ಎಂದು ವಿವರಿಸಿದನು. ಆದರೆ ಪೋರ್ಚುಗೀಸರು ಬ್ರಸಿಲಿಗೆ ಬಂದದ್ದೇಕೆ?

ಮಾರ್ಚ್‌ 9, 1500ರಲ್ಲಿ ಪೇದ್ರೂ ಅಲ್ವರಿಸ್‌ ಕಬ್ರಾಲ್‌, ಭಾರತದ ಕ್ಯಾಲಿಕಟ್‌ನಲ್ಲಿ ಒಂದು ಟ್ರೇಡಿಂಗ್‌ ಕಂಪೆನಿಯನ್ನು ಸ್ಥಾಪಿಸುವ ಉದ್ದೇಶದಿಂದ ಅತಿ ಶಕ್ತಿಶಾಲಿಯಾಗಿದ್ದ 13 ಹಡಗುಗಳೊಂದಿಗೆ ಪೋರ್ಚುಗಲ್‌ನಿಂದ ಪ್ರಯಾಣ ಬೆಳೆಸಿದನು. ಆದರೆ, ನಿಗದಿತ ಸ್ಥಳವನ್ನು ತಲುಪುವ ಮುಂಚೆ, ಅಂದರೆ ಏಪ್ರಿಲ್‌ 23, 1500ರಲ್ಲಿ ಕಬ್ರಾಲ್‌ನು ಬ್ರಸಿಲ್‌ ರಾಜ್ಯದ ಬಹಿಯ ಎಂಬುದಾಗಿ ಈಗ ಕರೆಯಲಾಗುವ ಕಡಲತೀರಕ್ಕೆ ಬಂದಿಳಿದನು.

ಪೋರ್ಚುಗೀಸರಿಗೆ ಈಗಾಗಲೇ ಬ್ರಸಿಲ್‌ ದೇಶದ ಅಸ್ತಿತ್ವದ ಕುರಿತು ತಿಳಿದಿತ್ತೆಂದು ಮತ್ತು ಕಬ್ರಾಲ್‌ನು ಬಹಿಯದಲ್ಲಿ ಬಂದಿಳಿದಿದ್ದ ಸಂಗತಿಯು ಮೊದಲೇ ಯೋಜನೆಮಾಡಲಾಗಿತ್ತು ಎಂದು ಕೆಲವು ಸಂಶೋಧಕರು ಹೇಳುತ್ತಾರೆ. * ಏನೇ ಆಗಲಿ, ಬ್ರಸಿಲ್‌ ದೇಶದಲ್ಲಿ ಒಂದೇ ಒಂದು ಉಪಯುಕ್ತ ವಸ್ತುವು ಸಿಗಲಿತ್ತು. ಅದೇನಂದರೆ, ಗಟ್ಟಿಯಾದ ಕೆಂಬಣ್ಣದ ದ್ರವ್ಯವನ್ನು ಕೊಡುತ್ತಿದ್ದ ಬ್ರಸಿಲ್‌ ಮರವಾಗಿತ್ತು. ಈ ಮರವು ಬಹಳ ಪ್ರಯೋಜನಕರವಾಗಿತ್ತಾದರೂ, ಬ್ರಸಿಲ್‌ ಇಂಡಿಯನ್‌ ಮಸಾಲೆಗಳು ಇದಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿದ್ದವು.

ಹೀಗೆ, ಪೋರ್ಚುಗಲ್‌ ದೇಶವು ತನ್ನ ನಿವಾಸಿಯಾಗಿದ್ದ ಫರ್ನಂಡೋ ಡೀ ನೊರಾನ್ಹನಿಗೆ ಬ್ರಸಿಲ್‌ ಅನ್ನು ಹತ್ತು ವರ್ಷಗಳ ವರೆಗೆ ಗುತ್ತಿಗೆಯಾಗಿ ಕೊಟ್ಟಿತು. ಇವನು ಬ್ರಸಿಲ್‌ ಮರವನ್ನು ಸಂಗ್ರಹಿಸಿದನು ಮತ್ತು ಪೋರ್ಚುಗೀಸ್‌ ಸರ್ವಾಧಿಕಾರಿಗೆ ತೆರಿಗೆಯನ್ನು ಕಟ್ಟಿದನು. ಆದರೆ ಇತರ ಯೂರೋಪಿಯನ್‌ ದೇಶಗಳು ಸಹ, ಈ ಹೊಸ ದೇಶದೊಂದಿಗೆ ತಮ್ಮ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸಿಕೊಳ್ಳಲು ಬಯಸಿದವು. ಫ್ರೆಂಚ್‌, ಇಂಗ್ಲೆಂಡ್‌ ಹಾಗೂ ಸ್ಪೇನಿನ ನಾವಿಕರು ಹೆಚ್ಚೆಚ್ಚಾಗಿ ಮಾಡುತ್ತಿದ್ದ ಕಾನೂನುಬಾಹಿರ ಕೃತ್ಯಗಳನ್ನು ಅಳಿಸಿಹಾಕಲು ನೊರಾನ್ಹನಿಗೆ ಸಾಧ್ಯವಾಗಲೇ ಇಲ್ಲ. ಬ್ರಸಿಲ್‌ ದೇಶವು ತಮಗೆ ಸಿಗಲಿಕ್ಕಿಲ್ಲವೆಂಬ ಭಯದಿಂದ ಪೋರ್ಚುಗೀಸರು 1532ರಲ್ಲಿ ವಸಾಹತುಕರಣವನ್ನು ಆರಂಭಿಸಿದರು. ಸಕ್ಕರೆ ಉತ್ಪಾದನೆಯು ಬ್ರಸಿಲ್‌ನ ಆದಾಯ ತರುವ ಮೊದಲ ವ್ಯಾಪಾರವಾಯಿತು.

ಬಂಗಾರದ ಗಣಿಕೆಲಸ ಮತ್ತು ವಜ್ರದ ಗಣಿಕೆಲಸಗಳು ಹದಿನೆಂಟನೆಯ ಶತಮಾನದಲ್ಲಿ ಯಶಸ್ವಿ ವ್ಯಾಪಾರಗಳಾಗಿದ್ದವು. ಆದರೆ ಹತ್ತೊಂಬತ್ತನೆಯ ಶತಮಾನವು ಪ್ರಾರಂಭವಾಗುವುದರೊಳಗಾಗಿ, ರಬ್ಬರ್‌ ಮರದಿಂದ ತೆಗೆಯಲಾಗುವ ಲೇಟೆಕ್ಸ್‌ನ ಉತ್ಪಾದನೆಯು ಅಮೆಜಾನ್‌ ಪ್ರದೇಶದಲ್ಲಿ ಅತಿ ಹೆಚ್ಚು ಲಾಭತರುವ ಮುಖ್ಯ ವ್ಯಾಪಾರವಾಯಿತು. * ತದನಂತರ, ಬ್ರಸಿಲನ್ನು ಒಂದು ನಗರವಾಗಿ ಮಾಡುವುದರಲ್ಲಿ ಕಾಫಿ ಬೇಸಾಯವು ಬಹುಮುಖ್ಯ ಪಾತ್ರವನ್ನು ವಹಿಸಿತು. ಈ ಬೇಸಾಯವು ರೈಲುಮಾರ್ಗದ ನಿರ್ಮಾಣಕ್ಕೆ ಮತ್ತು ಸ್ಯಾಂತಸ್‌ ಹಾಗೂ ರಿಯೋ ಡೇ ಜನೈರೊದ ಬಂದರಿಗೆ ಆಧುನಿಕ ಮೆರುಗನ್ನು ಕೊಡಲು ಹಣ ಒದಗಿಸಿತು. ಹತ್ತೊಂಬತ್ತನೆಯ ಶತಮಾನದ ಅಂತ್ಯದೊಳಗೆ, ಲೋಕದ ಸುತ್ತಲೂ ಬೆಳೆಸಲಾಗುವ ಕಾಫಿಯಲ್ಲಿ ಅರ್ಧದಷ್ಟನ್ನು ಬ್ರಸಿಲ್‌ ದೇಶದಲ್ಲೇ ಬೆಳೆಸಲಾಯಿತು ಮತ್ತು ಸೌ ಪೌಲೂ ನಗರವು ಬ್ರಸಿಲ್‌ನ ಮುಖ್ಯ ಆರ್ಥಿಕ ಕೇಂದ್ರವಾಗಿತ್ತು.

ಆದರೆ ಬ್ರಸಿಲ್‌ನ ಇತಿಹಾಸದಲ್ಲಿ ಗುಲಾಮ ಪದ್ಧತಿಯು ಸೇರಿತ್ತು ಎಂಬುದು ದುಃಖದ ಸಂಗತಿಯಾಗಿದೆ. ಮೊದಮೊದಲು ಪೋರ್ಚುಗೀಸ್‌ನಲ್ಲಿ ನೆಲೆಸಿದವರು ಬ್ರಸಿಲ್‌ ಮರವನ್ನು ಕಡಿಯಲು ಮತ್ತು ಅದನ್ನು ಬೇರೆ ಕಡೆಗಳಿಗೆ ಸಾಗಿಸಲು ಬ್ರಸಿಲ್‌ ಇಂಡಿಯನ್ನರನ್ನು ಉಪಯೋಗಿಸಿದರು. ಇದಾದ ನಂತರ, ಬ್ರಸಿಲ್‌ ಇಂಡಿಯನ್ನರು ಕಬ್ಬಿನ ತೋಟದಲ್ಲಿ ಕೆಲಸಮಾಡುವುದಕ್ಕೆ ಕಳುಹಿಸಲ್ಪಟ್ಟರು. ಬಹಳಷ್ಟು ಮಂದಿ ನಾಗರಿಕರಿಗೆ ಯೂರೋಪಿಯನ್‌ ರೋಗಗಳು ತಗಲಿದವು ಮತ್ತು ಈ ಕಾರಣ ಅನೇಕರು ಸತ್ತರೆಂಬುದು ದುರಂತಮಯ ಸಂಗತಿಯೇ ಸರಿ. ಆದ್ದರಿಂದ ಈ ಕೆಲಸಗಾರರ ಬದಲು, ಪೋರ್ಚುಗಲ್‌ ದೇಶವು ಆಫ್ರಿಕದಿಂದ ಗುಲಾಮರನ್ನು ತಂದಿತು.

ಅನೇಕ ವರ್ಷಗಳಿಂದ ಲಕ್ಷಾಂತರ ಆಫ್ರಿಕನ್ನರನ್ನು ಗುಲಾಮರಾಗಿ ಬ್ರಸಿಲ್‌ ದೇಶಕ್ಕೆ ತರಲಾಯಿತು. ಅವರು ತಮ್ಮ ಜೊತೆಯಲ್ಲಿ ತಮ್ಮ ಸಂಸ್ಕೃತಿಯನ್ನು ಮಾತ್ರವಲ್ಲ, ಪೂರ್ವಜರಿಂದ ಬಂದಿರುವ ಪರಂಪರೆಯನ್ನು ಸಹ ತಂದರು. ಅದರ ಪ್ರಭಾವವು ಸಾಂಬಾ ಮುಂತಾದ ಕೆಲವು ಜನಪ್ರಿಯ ಸಂಗೀತಗಳಲ್ಲಿ ತೋರಿಬರುತ್ತದೆ ಮತ್ತು ಕಾಪೋರಾ ಎಂಬ ಹೋರಾಟದಲ್ಲಿ ಕೂಡ ತೋರಿಬರುತ್ತದೆ. ಅಷ್ಟೇ ಅಲ್ಲ, ಹಂದಿಮಾಂಸ, ಸಾಸೆಜ್‌ ಮತ್ತು ಸಂರಕ್ಷಿಸಿಡಲಾದ ಮಾಂಸದೊಂದಿಗೆ ಕಪ್ಪು ಬೀನ್ಸ್‌ ಅನ್ನು ಬೇಯಿಸಿ ತಯಾರಿಸಲಾದ ಫಾಝ್ಯುಡದಂತಹ ಆಹಾರದಲ್ಲಿಯೂ ಸಹ ತೋರಿಬರುತ್ತದೆ. ಆದರೆ ಕೊನೆಗೂ 1888ರಲ್ಲಿ ಗುಲಾಮ ಪದ್ಧತಿಯನ್ನು ಬ್ರಸಿಲ್‌ನಲ್ಲಿ ರದ್ದುಪಡಿಸಲಾಯಿತು. ಹಾಗಾಗಿ, ಸುಮಾರು 7,50,000 ಜನರು ಮುಕ್ತಗೊಳಿಸಲ್ಪಟ್ಟರು. ಇವರಲ್ಲಿ ಅನೇಕರು ತೋಟದಲ್ಲಿ ಕೆಲಸಮಾಡುವವರಾಗಿದ್ದರು.

ಹತ್ತೊಂಬತ್ತನೆಯ ಶತಮಾನದಿಂದ, ಕೋಟ್ಯಂತರ ವಿದೇಶಿಯರು ಬ್ರಸಿಲ್‌ಗೆ ಪ್ರವಾಹದಂತೆ ನುಗ್ಗಿ ಬಂದಿದ್ದಾರೆ. ಇವರಲ್ಲಿ ಇಟಲಿಯನ್ನರು, ಜರ್ಮನರು, ಜಪಾನಿನವರು, ಪೊಲೆಂಡಿನವರು, ಸ್ಪೇನಿನ ನಿವಾಸಿಗಳು ಮಾತ್ರವಲ್ಲ, ಸ್ವಿಟ್ಸರ್‌ಲ್ಯಾಂಡ್‌ನ ನಿವಾಸಿಗಳು ಮತ್ತು ಸಿರಿಯ ಮತ್ತು ಲೆಬನನ್‌ನ ನಿವಾಸಿಗಳು ಸಹ ಸೇರಿದ್ದರು. ಬ್ರಸಿಲ್‌ ದೇಶವು ವಾಸಿಸಲು ಆಹ್ಲಾದಕರವಾದ ಸ್ಥಳವಾಗಿದೆ. ಅದರ ಪ್ರಾಣಿವರ್ಗ ಮತ್ತು ಸಸ್ಯವರ್ಗವು ಹೇರಳವಾಗಿದೆ. ಬ್ರಸಿಲ್‌ ದೇಶದ ಅನೇಕ ಭಾಗಗಳಲ್ಲಿ ಪ್ರಾಕೃತಿಕ ವಿಪತ್ತುಗಳು ಸಂಭವಿಸುವುದಿಲ್ಲ. ಯಾಕೆಂದರೆ ಅಲ್ಲಿ ಯುದ್ಧಗಳು, ಭೂಕಂಪಗಳು, ಜ್ವಾಲಾಮುಖಿ, ಚಂಡಮಾರುತಗಳು ಅಥವಾ ಭೀಕರ ಗಾಳಿಯ ಕಾರಣ ಕಡಲನೀರು ವಿಪರೀತವಾಗಿ ಏರುವಂತಹ ಘಟನೆಗಳು ಉಂಟಾಗುವುದಿಲ್ಲ. ಹಾಗಾದರೆ ಬ್ರಸಿಲ್‌ ದೇಶದ ಜನಪ್ರಿಯವಾಗಿರುವ ಪ್ರೇಕ್ಷಣೀಯ ಸ್ಥಳಗಳಲ್ಲಿ ಕೆಲವನ್ನು ನೀವು ಭೇಟಿಮಾಡುವುದರ ಮೂಲಕ ಆ ದೇಶದ ಕುರಿತು ಯಾಕೆ ತಿಳಿದುಕೊಳ್ಳಬಾರದು? ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರನ್ನು ಪ್ರಭಾವಿಸಿದ ಅದೇ ಅತಿಥಿಸತ್ಕಾರ ಮತ್ತು ಸ್ವಾಭಾವಿಕ ಸೌಂದರ್ಯವನ್ನು ನೀವು ಸಹ ಅನುಭವಿಸುವಿರಿ.

[ಪಾದಟಿಪ್ಪಣಿಗಳು]

^ ಪೋರ್ಚುಗೀಸರು ಮತ್ತು ಸ್ಪೇನಿನವರು ಇಸವಿ 1494ರಲ್ಲಿ, ಟೋರ್‌ಡಿಸಿಲಾಸ್‌ ಒಪ್ಪಂದಕ್ಕೆ ಸಹಿಹಾಕಿದಾಗ, ಇವರಿಬ್ಬರು ದಕ್ಷಿಣ ಅಟ್ಲಾಂಟಿಕ್‌ನ ಪಶ್ಚಿಮಭಾಗದಲ್ಲಿರುವ ಭೂಮಿಯನ್ನು ಹಂಚಿಕೊಂಡರು. ಆದುದರಿಂದ, ಈಗಾಗಲೇ ಪೋರ್ಚುಗಲ್‌ಗೆ ಗೊತ್ತುಪಡಿಸಲಾಗಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನಿಶ್ಚಿತ ಉದ್ದೇಶದಿಂದ ಕಬ್ರಾಲ್‌ನು ಅಲ್ಲಿಗೆ ಹೊರಟನೆಂಬುದಾಗಿಯೂ ಕೆಲವರು ಹೇಳುತ್ತಾರೆ.

^ ಮೇ 22, 1997ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ, ಪುಟಗಳು 14-17ನ್ನು ನೋಡಿರಿ.

[ಪುಟ 16, 17ರಲ್ಲಿರುವ ಭೂಪಟ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಅಮೆಜಾನ್‌ ಪ್ರದೇಶ

ಬಹಿಯ ರಾಜ್ಯ

ಬ್ರಸಿಲ್ಯ

ರಿಯೋ ಡೇ ಜನೈರೊ

ಸೌ ಪೌಲೂ

ಸ್ಯಾಂತಸ್‌

ಇಗ್ವಕು ಜಲಪಾತ

[ಚಿತ್ರಗಳು]

1. ಪೇದ್ರೂ ಅಲ್ವರಿಸ್‌ ಕಬ್ರಾಲ್‌

2. ಟೋರ್‌ಡಿಸಿಲಾಸ್‌ ಒಪ್ಪಂದ, 1494

3. ಕಾಫಿ ಬೀಜಗಳನ್ನು ಹೊರುವವರು

4. ಇಗ್ವಕು ಜಲಪಾತ, ಬ್ರಸಿಲ್‌ ದೇಶದಿಂದ ನೋಡುವಾಗ

5. ಇಪಿಕ್ಸುನ ಇಂಡಿಯನ್‌

[ಕೃಪೆ]

Culver Pictures

Courtesy of Archivo General de Indias, Sevilla, Spain

From the book Brazil and the Brazilians, 1857

FOTO: MOURA

[ಪುಟ 18ರಲ್ಲಿರುವ ಚಿತ್ರ]

1. ಪ್ಯೂಮ ಕಾಡುಬೆಕ್ಕುಗಳು ಬ್ರಸಿಲ್‌ನಲ್ಲಿ ಹೇರಳವಾಗಿ ಕಾಣಸಿಗುತ್ತವೆ

2. ಅಮೆಜಾನ್‌ ಕಾಡುಗಳಲ್ಲಿ ಆರ್ಕಿಡ್‌ಗಳು

3. ಬಹಿಯದ ಸಾಲ್ವಡರ್‌ನ ಸಾಂಪ್ರದಾಯಿಕ ಉಡುಪು

4. ಮಕಾ ಎಂಬ ಜಾತಿಯ ಗಿಣಿ

5. ರಿಯೋ ಡೇ ಜನೈರೊದಲ್ಲಿರುವ ಕೊಪಕಾಬಾನ ಬೀಚ್‌. ಬ್ರಸಿಲ್‌ ದೇಶದಲ್ಲಿ 7,000 ಕಿಲೋಮೀಟರುಗಳ ಸುಂದರವಾದ ಕರಾವಳಿ ಪ್ರದೇಶವಿದೆ

[ಕೃಪೆ]

Courtesy São Paulo Zoo

[ಪುಟ 19ರಲ್ಲಿರುವ ಚಿತ್ರ]

ಬ್ರಸಿಲ್ಯ—1960ರಿಂದ ಬ್ರಸಿಲಿನ ರಾಜಧಾನಿ

[ಪುಟ 19ರಲ್ಲಿರುವ ಚಿತ್ರ]

ಸೌ ಪೌಲೂ—ಬ್ರಸಿಲಿನ ಆರ್ಥಿಕ ಕೇಂದ್ರ

[ಕೃಪೆ]

FOTO: MOURA

[ಪುಟ 16ರಲ್ಲಿರುವ ಚಿತ್ರ ಕೃಪೆ]

© 1996 Visual Language