ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷವುಳ್ಳ ಕುಟುಂಬ ಜೀವನ—ಅದನ್ನು ಹೇಗೆ ಆನಂದಿಸಬಹುದು?

ಸಂತೋಷವುಳ್ಳ ಕುಟುಂಬ ಜೀವನ—ಅದನ್ನು ಹೇಗೆ ಆನಂದಿಸಬಹುದು?

ಸಂತೋಷವುಳ್ಳ ಕುಟುಂಬ ಜೀವನ—ಅದನ್ನು ಹೇಗೆ ಆನಂದಿಸಬಹುದು?

“ನಾನು ಸುಮಾರು 40 ವರ್ಷಗಳಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದುತ್ತಿದ್ದೇನೆ” ಎಂದು ದಕ್ಷಿಣ ಅಮೆರಿಕದ ಅರ್ಜೆಂಟೀನದ ಗ್ರೇಸ್ಯಲಾ ಬರೆಯುತ್ತಾಳೆ. “ಇವು ನನ್ನ ಅಗತ್ಯಗಳನ್ನು ಪೂರೈಸಿವೆ ಎಂದು ಇಷ್ಟು ವರ್ಷಗಳಾದ ನಂತರ ಇಂದು ನಾನು ಹೇಳಬಲ್ಲೆ. ಏಕೆಂದರೆ, ಇವು ನಾನು ಚಿಕ್ಕವಳಾಗಿದ್ದಾಗ, ಹದಿವಯಸ್ಕಳಾಗಿದ್ದಾಗ, ಮದುವೆಯಾಗುವ ಮುನ್ನ ನನ್ನ ಪತಿಯನ್ನು ಭೇಟಿಯಾಗುತ್ತಿದ್ದ ಸಮಯದಲ್ಲಿ ಹಾಗೂ ದಾಂಪತ್ಯ ಜೀವನದಲ್ಲಿ ಅಷ್ಟುಮಾತ್ರವಲ್ಲದೆ, ನನ್ನ ಆರು ಮಕ್ಕಳನ್ನು ಬೆಳೆಸುವ ಸಮಯದಲ್ಲಿ ಸಹ ನನಗೆ ನಿಜವಾಗಿಯೂ ಸಹಾಯಮಾಡಿವೆ.

“ಇನ್ನೂ ನಮ್ಮ ಜೊತೆಯಲ್ಲೇ ಇರುವ ನಮ್ಮ ನಾಲ್ಕು ಮಕ್ಕಳನ್ನು ಬೆಳೆಸುವುದರಲ್ಲಿ ಈ ಪತ್ರಿಕೆಗಳು ನನ್ನ ಪತಿಗೂ ನನಗೂ ಸಹಾಯಮಾಡುತ್ತಿವೆ. ನನ್ನ ಮಕ್ಕಳೊಂದಿಗೆ ಮತ್ತು ಶಾಲೆಯಲ್ಲಿ ಅವರ ಶಿಕ್ಷಕರೊಂದಿಗೆ ಮಾತಾಡುವುದಕ್ಕೆ ಈ ಪತ್ರಿಕೆಗಳನ್ನು ಉಪಯೋಗಿಸುತ್ತೇನೆ. ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರೊಂದಿಗೆ ಮಾತಾಡುವಾಗ ನಾನು ಎಚ್ಚರ! ಪತ್ರಿಕೆಯಿಂದ ನೇರವಾಗಿ ವಿಷಯವನ್ನು ಓದಿ ತಿಳಿಸಿದ್ದೇನೆ. ‘ಕಲಿಯುವ ಅಸಾಮರ್ಥ್ಯಗಳಿರುವ ಮಕ್ಕಳಿಗೆ ಸಹಾಯ’ (ಮಾರ್ಚ್‌ 8, 1997) ಎಂಬ ಮುಖಪುಟ ಶೀರ್ಷಿಕೆಯುಳ್ಳ ಪತ್ರಿಕೆಯ ಲೇಖನಮಾಲೆಯಿಂದಾಗಿ, ನಮ್ಮ ಪುತ್ರಿಯರಲ್ಲಿ ಒಬ್ಬಳಿಗೆ ಕಲಿಯುವ ಸಮಸ್ಯೆಯಿದೆ ಎಂಬುದನ್ನು ಕಂಡುಹಿಡಿದೆವು.”

ಕುಟುಂಬಗಳು ಎದುರಿಸುವಂತಹ ಅನೇಕ ಸಮಸ್ಯೆಗಳನ್ನು ನಿಭಾಯಿಸಲಿಕ್ಕೆ ಹಾಗೂ ಒಟ್ಟಿಗೆ ಒಂದು ಸಂತೋಷಕರವುಳ್ಳ ಕುಟುಂಬ ಜೀವನವನ್ನು ಆನಂದಿಸಲಿಕ್ಕೆ ವಾಚ್‌ ಟವರ್‌ ಸೊಸೈಟಿಯ ಪ್ರಕಾಶನಗಳು ಕುಟುಂಬಗಳಿಗೆ ಸಹಾಯಮಾಡಬಲ್ಲವು. ಉದಾಹರಣೆಗೆ, ಕುಟುಂಬ ಸಂತೋಷದ ರಹಸ್ಯ ಎಂಬ 192 ಪುಟಗಳುಳ್ಳ ಪುಸ್ತಕವು ಪತಿಪತ್ನಿಯರಿಗೆ, ಹೆತ್ತವರಿಗೆ, ಮಕ್ಕಳಿಗೆ, ಅಜ್ಜಅಜ್ಜಿಯರಿಗೆ, ಹೀಗೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಪ್ರಯೋಜನವನ್ನು ತರುವಂತಹದ್ದಾಗಿದೆ. ಅದರಲ್ಲಿರುವ ಬೋಧಪ್ರದ ಅಧ್ಯಾಯಗಳು ಹೀಗಿವೆ: “ನಿಮ್ಮ ಮಗುವನ್ನು ಶೈಶವದಿಂದ ತರಬೇತು ಮಾಡಿರಿ,” “ನಿಮ್ಮ ಹದಿಹರೆಯದವನು ಏಳಿಗೆ ಹೊಂದುವಂತೆ ನೆರವಾಗಿರಿ,” “ನಿಮ್ಮ ಕುಟುಂಬವನ್ನು ನಾಶಕಾರಕ ಪ್ರಭಾವಗಳಿಂದ ಸಂರಕ್ಷಿಸಿರಿ,” ಮತ್ತು “ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ.”

ಕುಟುಂಬ ಸಂತೋಷದ ರಹಸ್ಯ ಎಂಬ 192 ಪುಟದ ಈ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಇಷ್ಟಪಡುವುದಾದರೆ, ಇಲ್ಲಿ ಕೊಡಲ್ಪಟ್ಟಿರುವ ಕೂಪನನ್ನು ದಯವಿಟ್ಟು ಭರ್ತಿಮಾಡಿ, ಈ ಕೆಳಕಂಡ ವಿಳಾಸಕ್ಕೆ ಇಲ್ಲವೇ ಈ ಪತ್ರಿಕೆಯ 5ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕ ವಿಳಾಸಕ್ಕೆ ಅಂಚೆಯ ಮೂಲಕ ರವಾನಿಸಿರಿ. ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಸೃಷ್ಟಿಕರ್ತನು ಬಯಸುವಂತಹ ರೀತಿಯಲ್ಲಿ ಕುಟುಂಬ ಜೀವನವನ್ನು ಆನಂದದಾಯಕವನ್ನಾಗಿ ಮಾಡಲು ಸಾಧ್ಯವಿರುವ ನಿರ್ದಿಷ್ಟ ಸಲಹೆಗಳನ್ನು ನೀವು ಪಡೆದುಕೊಳ್ಳುವಿರಿ.

ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿರಿ.

□ ಉಚಿತ ಗೃಹ ಬೈಬಲ್‌ ಅಭ್ಯಾಸದ ಸಂಬಂಧದಲ್ಲಿ ನನ್ನನ್ನು ದಯವಿಟ್ಟು ಸಂಪರ್ಕಿಸಿರಿ.

[ಪುಟ 32ರಲ್ಲಿರುವ ಚಿತ್ರ]

ಗ್ರೇಸ್ಯಲಾ ಮತ್ತು ಅವಳ ಕುಟುಂಬ