ನೀವು ತಪ್ಪಿಸಿಕೊಳ್ಳಲು ಬಯಸಲಾರಿರಿ!
ನೀವು ತಪ್ಪಿಸಿಕೊಳ್ಳಲು ಬಯಸಲಾರಿರಿ!
ತಪ್ಪಿಸಿಕೊಳ್ಳುವುದೇ! ಯಾವುದನ್ನು? ಯೆಹೋವನ ಸಾಕ್ಷಿಗಳ “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನವನ್ನೇ! ಅಮೆರಿಕದಲ್ಲಿ ಮೇ ತಿಂಗಳಿನಲ್ಲಿ ಆರಂಭವಾಗಿರುವ ಈ ಅಧಿವೇಶನದ ಸರಮಾಲೆಯು ಬರಲಿರುವ ತಿಂಗಳುಗಳಲ್ಲಿ ಜಗತ್ತಿನಾದ್ಯಂತ ನೂರಾರು ನಗರಗಳಲ್ಲಿ ನಡೆಯಲಿವೆ. ಅಧಿಕಾಂಶ ಸ್ಥಳಗಳಲ್ಲಿ ಕಾರ್ಯಕ್ರಮವು ಶುಕ್ರವಾರ ಬೆಳಗ್ಗೆ 9.30ಕ್ಕೆ ಸಂಗೀತದೊಂದಿಗೆ ಆರಂಭವಾಗುವುದು.
ದೇವರ ವಾಕ್ಯವು ಏನು ಹೇಳುತ್ತದೆ ಎಂಬುದಕ್ಕೆ ಗಮನಕೊಡುವಂತೆ ಪ್ರೋತ್ಸಾಹನೆಯ ಆರಂಭದ ಮಾತುಗಳನ್ನು ಹೇಳಿದ ನಂತರ, ಬೆಳಗ್ಗಿನ ಕಾರ್ಯಕ್ರಮವು “ಯೆಹೋವನ ಒಳ್ಳೇತನದಿಂದ ಕಳೆ ತುಂಬಿದವರಾಗಿರಿ” ಮತ್ತು “ಅದೃಶ್ಯನಾಗಿರುವಾತನನ್ನು ದೃಷ್ಟಿಸುತ್ತಿದ್ದೀರೋ ಎಂಬಂತೆ ದೃಢಚಿತ್ತರಾಗಿ ಮುಂದುವರಿಯಿರಿ” ಎಂಬ ಭಾಷಣಗಳೊಂದಿಗೆ ಮುಂದುವರಿಯುವುದು. ಅದಾದ ನಂತರ, ಬೆಳಗ್ಗಿನ ಕಾರ್ಯಕ್ರಮವು “ಅದ್ಭುತಕಾರ್ಯಗಳನ್ನು ನಡೆಸುವಾತನಾದ ಯೆಹೋವನನ್ನು ಸ್ತುತಿಸಿರಿ” ಎಂಬ ಸಮ್ಮೇಳನದ ಮುಖ್ಯಭಾಷಣದೊಂದಿಗೆ ಮುಕ್ತಾಯವಾಗುವುದು.
ಮಧ್ಯಾಹ್ನದ ಕಾರ್ಯಕ್ರಮದ ಮೊದಲ ಭಾಷಣವು “ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳದೆ ಇರೋಣ.” ಇದಾದ ನಂತರ ಮೂರು ಭಾಗಗಳುಳ್ಳ ಭಾಷಣಮಾಲೆಯು ಮುಂದುವರಿಯುವುದು. ಅದು, ಯೋಗ್ಯವಾದ ವಿವಾಹ ಸಂಗಾತಿಯನ್ನು ಹೇಗೆ ಆಯ್ಕೆಮಾಡುವುದು, ಆತ್ಮಿಕವಾಗಿ ಬಲವಾದ ಕುಟುಂಬವನ್ನು ಹೇಗೆ ಕಟ್ಟುವುದು, ಮತ್ತು ಯೆಹೋವನನ್ನು ಪ್ರೀತಿಸುವಂತೆ ಮಕ್ಕಳಿಗೆ ಹೇಗೆ ಕಲಿಸುವುದು ಎಂಬ ವಿಷಯಗಳ ಮೇಲೆ ಆಧಾರಿತವಾಗಿರುವುದು. ಆ ದಿನದ ಅಂತಿಮ ಭಾಷಣವು, “ಯೆಹೋವನ ಸಂಸ್ಥೆಯೊಂದಿಗೆ ಸಮವಾಗಿ ಹೆಜ್ಜೆಹಾಕುವುದು” ಎಂಬುದಾಗಿದೆ. ಅದರಲ್ಲಿ ಆಧುನಿಕ ದಿನಗಳಲ್ಲಿ ದೇವರ ಉದ್ದೇಶಗಳ ಕುರಿತು ಅರ್ಥಮಾಡಿಕೊಂಡಿರುವುದರಲ್ಲಿ ಆಗಿರುವ ಪ್ರಗತಿಪರ ಬೆಳವಣಿಗೆಯನ್ನು ಪುನರ್ವಿಮರ್ಶಿಸಲಾಗುವುದು.
ಶನಿವಾರ ಬೆಳಗ್ಗಿನ ಕಾರ್ಯಕ್ರಮದ ವೈಶಿಷ್ಟ್ಯವು ಮೂರು ಭಾಗಗಳುಳ್ಳ ಎರಡನೇ ಭಾಷಣಮಾಲೆಯಾಗಿದೆ. ಆ ಭಾಷಣದ ಶೀರ್ಷಿಕೆಯು, “ದೇವರ ವಾಕ್ಯದ ಶುಶ್ರೂಷಕರು” ಎಂಬುದಾಗಿದೆ. ಇದರಲ್ಲಿ, ಶಿಷ್ಯರನ್ನಾಗಿ ಮಾಡುವ ನಮ್ಮ ಕೆಲಸವನ್ನು ನಾವು ಹೇಗೆ ಮುಂದುವರಿಸಿಕೊಂಡು ಹೋಗಬಹುದು ಎಂಬುದರ ಕುರಿತು ಸಲಹೆಗಳು ನೀಡಲಾಗುವುದು. ತದನಂತರ “ದೇವರು ನಾಚಿಕೆಪಡುವಂತೆ ಯಾವುದೇ ಕಾರಣವನ್ನು ಕೊಡದಿರಿ” ಎಂಬ ಹುರಿದುಂಬಿಸುವ ಭಾಷಣವು ಇರುವುದು. ಇದಾದ ಮೇಲೆ ದೀಕ್ಷಾಸ್ನಾನದ ಕುರಿತು ಭಾಷಣವಿರುವುದು. ನಂತರ ದೀಕ್ಷಾಸ್ನಾನಕ್ಕೆ ಅರ್ಹರಾಗಿರುವವರಿಗೆ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಅವಕಾಶವು ಕೊಡಲ್ಪಡುವುದು.
ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಮೂರು ಭಾಗಗಳುಳ್ಳ ಭಾಷಣಮಾಲೆಯು ಇರುವುದು. ಅದು “ಆತ್ಮಿಕತೆಯನ್ನು ಬೆಳೆಸಿಕೊಳ್ಳಲು ಕಷ್ಟಪಡಿರಿ,” ಎಂಬ ಮುಖ್ಯ ಶೀರ್ಷಿಕೆಯನ್ನು ಎತ್ತಿತೋರಿಸುವುದು. ಆ ಭಾಷಣದಲ್ಲಿ ಆತ್ಮಿಕತೆಯನ್ನು ಹೇಗೆ ಬೆಳೆಸಿಕೊಳ್ಳಬಹುದು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳು ನೀಡಲ್ಪಡುವವು. “ದೇವರ ಪ್ರಗತಿಪರ ಬೆಳಕಿನಲ್ಲಿ ನಡೆಯುವುದು” ಎಂಬ ಜ್ಞಾನೋದಯವನ್ನು ಉಂಟುಮಾಡುವ ಭಾಷಣದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು. ಆ ಭಾಷಣದಲ್ಲಿ ಯೆಶಾಯ ಪುಸ್ತಕದ 25 ಮತ್ತು 26ನೇ ಅಧ್ಯಾಯಗಳು ಚರ್ಚಿಸಲ್ಪಡುವವು ಮತ್ತು ಈ ಮನಮೋಹಕವಾದ ಪುಸ್ತಕವನ್ನು ನಾವು ಉತ್ತಮ ರೀತಿಯಲ್ಲಿ ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ವರ್ಣಿಸಲಾಗುವುದು.
ಭಾನುವಾರ ಬೆಳಗ್ಗಿನ ಕಾರ್ಯಕ್ರಮದಲ್ಲಿ, “ದೇವರ ಚಿತ್ತವನ್ನು ಮಾಡುವವರಿಗೆ ಚೆಫನ್ಯನ ಅರ್ಥಭರಿತ ಪ್ರವಾದನೆ” ಎಂಬ ಮೂರು ಭಾಗಗಳುಳ್ಳ ಅಂತಿಮ ಭಾಷಣಮಾಲೆಯು ಸೇರಿರುವುದು. ಆ ಭಾಷಣದಲ್ಲಿ, ಪ್ರಾಚೀನ ಯೂದಾಯಕ್ಕೆ ಈ ಪ್ರವಾದನೆಯು ಹೇಗೆ ಅನ್ವಯಿಸಿತು ಮತ್ತು ಇಂದು, ಅದರಲ್ಲೂ ವಿಶೇಷವಾಗಿ ಲೋಕದ ಧರ್ಮಗಳಿಗೆ ಹೇಗೆ ಅನ್ವಯಿಸುತ್ತದೆ ಎಂಬುದನ್ನು ಅದು ವಿವರಿಸುವುದು. ತದನಂತರ, ವೇಷಭೂಷಣಗಳನ್ನು ಧರಿಸಿದ “ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು” ಎಂಬ ಡ್ರಾಮವನ್ನು ನೀವು ಆನಂದಿಸುವಿರಿ. ಅದು, ವಾಗ್ದತ್ತ ದೇಶದೊಳಗೆ ಪ್ರವೇಶಿಸುವುದಕ್ಕೆ ಸ್ವಲ್ಪ ಮುಂಚೆ ಇಸ್ರಾಯೇಲ್ಯರು ಒಳಗೂಡಿದ ಅನೈತಿಕತೆಯ ಕುರಿತು ಚರ್ಚಿಸುವುದು. ಸಮ್ಮೇಳನದ ಕೊನೆಯ ಮುಖ್ಯಾಂಶವಾಗಿರುವ ಭಾನುವಾರದ ಮಧ್ಯಾಹ್ನದ ಕಾರ್ಯಕ್ರಮವು ಬಹಿರಂಗ ಭಾಷಣವಾಗಿದೆ. ಅದರ ಶೀರ್ಷಿಕೆಯು, “ದೇವರ ಅದ್ಭುತಕರ ಕ್ರಿಯೆಗಳಿಗೆ ಏಕೆ ಗಮನಕೊಡಬೇಕಾಗಿದೆ” ಎಂಬುದಾಗಿದೆ.
ಮೂರು ದಿನಗಳ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗಲು ಈಗಲೇ ಯೋಜನೆ ಮಾಡಿರಿ. ನಿಮ್ಮ ಮನೆಗೆ ಹತ್ತಿರವಿರುವ ಸಮ್ಮೇಳನದ ಸ್ಥಳವನ್ನು ತಿಳಿದುಕೊಳ್ಳಲು ಸ್ಥಳಿಕ ಯೆಹೋವನ ಸಾಕ್ಷಿಗಳ ಸಭಾಗೃಹವನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ.