ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಮಾಟಮಂತ್ರ ನಾನು 13 ವರ್ಷದವಳು. ಮಾಟಮಂತ್ರಗಳಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವ ಒಬ್ಬ ಹುಡುಗಿಯನ್ನು ನಾನು ಶಾಲೆಯಲ್ಲಿ ಭೇಟಿಯಾದೆ. ಅವಳು ಒಂದು ದಿನ, ಮಾಟಮಂತ್ರಗಳ ಕುರಿತು ನನಗೇನು ಅನಿಸುತ್ತದೆ ಎಂದು ಕೇಳಿದಳು. ಅದಕ್ಕೆ ಉತ್ತರವಾಗಿ, ನಾನೊಬ್ಬ ಯೆಹೋವನ ಸಾಕ್ಷಿ ಮತ್ತು ಅಲೌಕಿಕ ಶಕ್ತಿಗಳನ್ನು ಉಪಯೋಗಿಸುವುದರಲ್ಲಿ ನನಗೆ ನಂಬಿಕೆಯಿಲ್ಲವೆಂದು ಹೇಳಿದೆ. ಅವಳಿಗೆ ತುಂಬ ಬೇಸರವಾಯಿತು. ಆಗಿನಿಂದ ಆ ವಿಷಯದ ಕುರಿತು ನನ್ನ ಹತ್ತಿರ ಅನೇಕಬಾರಿ ಮಾತಾಡಿದಳು. ಸಹಾಯಕ್ಕಾಗಿ ನಾನು ಯೆಹೋವನಿಗೆ ಪ್ರಾರ್ಥಿಸಿದೆ. ಅದಕ್ಕೆ ಉತ್ತರವು, “ಬೈಬಲಿನ ದೃಷ್ಟಿಕೋನ: ಮಾಟಮಂತ್ರದ ಹಿಂದೆ ಏನಿದೆ?” (ಡಿಸೆಂಬರ್‌ 8, 1999) ಎಂಬ ಎಚ್ಚರ! ಪತ್ರಿಕೆಯ ಲೇಖನದ ಮೂಲಕ ಸಿಕ್ಕಿತು. ನಾನು ಅವಳಿಗೆ ಆ ಲೇಖನವನ್ನು ಕೊಟ್ಟೆ. ಅದನ್ನು ಅವಳು ಓದಿದಾಗಿನಿಂದ ಆ ವಿಷಯದ ಕುರಿತು ನನ್ನ ಅನಿಸಿಕೆಗಳ ಬಗ್ಗೆ ಅವಳು ಕೇಳಲಿಲ್ಲ.

ಕೆ. ಇ., ಅಮೆರಿಕ

ಇಪ್ಪತ್ತನೆಯ ಶತಮಾನ “20ನೇ ಶತಮಾನ​—⁠ಬದಲಾವಣೆಯ ನಿರ್ಣಾಯಕ ವರ್ಷಗಳು” (ಜನವರಿ 8, 2000) ಎಂಬ ಲೇಖನಮಾಲೆಯ ಕುರಿತು ನಾನು ಬರೆಯುತ್ತಿದ್ದೇನೆ. 20ನೇ ಶತಮಾನದಲ್ಲಿ ನಾವು ಅನುಭವಿಸಿರುವ ಕಷ್ಟಕರ ಸಮಯಗಳ ಕುರಿತ ಮಾಹಿತಿಯನ್ನು ಸ್ಪಷ್ಟವಾದ ರೀತಿಯಲ್ಲಿ ಪ್ರಸ್ತುತಪಡಿಸಿರುವುದನ್ನು ನಾನು ತುಂಬ ಮೆಚ್ಚಿದ್ದೇನೆ. ಅಷ್ಟುಮಾತ್ರವಲ್ಲದೆ, ಹಿಂಸೆಯು ಮಾನವಕುಲವನ್ನು ಹೇಗೆ ಸ್ವಲ್ಪ ಸ್ವಲ್ಪವಾಗಿ ತಿಂದುಹಾಕುತ್ತಿದೆ ಎಂಬುದನ್ನು ಸಹ ನಾನು ನೋಡಶಕ್ತಳಾದೆ. ನೀವು ಮಾಡುತ್ತಿರುವ ಅತ್ಯುತ್ತಮ ಕೆಲಸಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.

ಡಬ್ಲ್ಯೂ. ಜಿ., ಪೋರ್ಟ ರಿಕೋ

ರಕ್ತರಹಿತ ಚಿಕಿತ್ಸೆ “ರಕ್ತರಹಿತ ಚಿಕಿತ್ಸೆ​—⁠ಭಾರೀ ಬೇಡಿಕೆ” (ಏಪ್ರಿಲ್‌ 8, 2000) ಎಂಬ ಲೇಖನಮಾಲೆಯು, ಒಂದು ಮುಂದುವರಿದ ಸಂಶೋಧನೆಯ ಮೇಲಾಧರಿತವಾದ ವಿಷಯವಾಗಿತ್ತು. ನಾನು ನರ್ಸಿಂಗ್‌ ಸ್ಕೂಲ್‌ಗೆ ಹೋಗುತ್ತಿದ್ದೇನೆ. ಈ ಪತ್ರಿಕೆಯನ್ನು, ನನ್ನ ಜೊತೆ ಕೆಲಸಮಾಡುವವರಿಗೂ ಹಾಗೂ ಟೀಚರುಗಳಲ್ಲಿ ಒಬ್ಬರಿಗೆ ನೀಡಿದೆ. ಇವರು ಈ ಹಿಂದೆ ಯೆಹೋವನ ಸಾಕ್ಷಿಗಳ ಕುರಿತು ಪೂರ್ವಾಗ್ರಹವನ್ನು ತೋರಿಸಿದ್ದರು. ಆದರೆ, ಈ ಲೇಖನಗಳೊಂದಿಗೆ ಯೆಹೋವನ ಸಾಕ್ಷಿಗಳ ಕುರಿತ ಇನ್ನಿತರ ಮಾಹಿತಿಯನ್ನೊಳಗೊಂಡ ಲೇಖನಗಳನ್ನು ಕೊಟ್ಟಾಗ, ಅದನ್ನು ಅವರು ಸಂತೋಷದಿಂದ ಸ್ವೀಕರಿಸಿದರು.

ಆರ್‌. ಪಿ., ಸ್ವಿಟ್ಸರ್‌ಲ್ಯಾಂಡ್‌

ನನ್ನ ಇಬ್ಬರು ಮಕ್ಕಳು 1998ರಲ್ಲಿ ಕಾರಿನ ಅಪಘಾತಕ್ಕೆ ಗುರಿಯಾಗಿದ್ದರು. ನನ್ನ ಮಗನ ಕಾಲು ಜಜ್ಜಿಹೋಗಿತ್ತು. ಡಾಕ್ಟರುಗಳ ಬಳಿ ತನಗೆ ರಕ್ತವು ಬೇಡವೆಂದು ಅವನು ಪದೇಪದೇ ಹೇಳಿದನು! ಆದರೆ, ಆಸ್ಪತ್ರೆಯಲ್ಲಿ ರಕ್ತರಹಿತ ಚಿಕಿತ್ಸೆಯನ್ನು ಮಾಡಲು ಯಾವುದೇ ಉಪಕರಣಗಳು ಇರಲಿಲ್ಲ. ನಂತರ ನನ್ನ ಮಗನನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ ಅಲ್ಲಿ ಕೂಡ, ಆಸ್ಪತ್ರೆಯ ಸಿಬ್ಬಂದಿಯವರು ನನ್ನ ಮಗನ ಹೆಮಟೊಕ್ರಿಟ್‌ 35ನ್ನು ತಲುಪುವುದಕ್ಕೆ ಮುಂಚೆ (ಅತ್ಯಂತ ಕೆಳಮಟ್ಟವಾದ 8.1 ಅನ್ನು ಮುಟ್ಟಿತ್ತು) ಶಸ್ತ್ರಚಿಕಿತ್ಸೆಯನ್ನು ಮಾಡಲು ಸಿದ್ಧರಿರಲಿಲ್ಲ. ಅವನು ಸಾಯುತ್ತಾನೋ ಇಲ್ಲವೋ ಎಂಬುದನ್ನು ನೋಡುವುದಕ್ಕಾಗಿ ಕಾಯುತ್ತಿರುವಂತೆ, ಆರಾಮವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಅವರು ತೋರಿಸುತ್ತಿದ್ದರು. ಆದರೆ, ರಕ್ತರಹಿತ ಚಿಕಿತ್ಸೆಯನ್ನು ಅಳವಡಿಸಿದ ಕೂಡಲೇ, ಅಂದರೆ ಕಾಲುಗಳನ್ನು ಮೇಲಕ್ಕೆತ್ತಿ ಎರಿತ್ರೋಪಾಯಿಟಿನ್‌ ಅನ್ನು ಕೊಡುವ ಮೂಲಕ ಮತ್ತು ಇನ್ನಿತರ ವಿಧಾನಗಳನ್ನು ಉಪಯೋಗಿಸುವ ಮೂಲಕ ಅವನ ಹೆಮಟೊಕ್ರಿಟ್‌ 35.8ಕ್ಕೆ ಹೆಚ್ಚಿತು! ಶಸ್ತ್ರಚಿಕಿತ್ಸೆಯೇನೋ ಯಶ್ವಸಿಯಾಗಿತ್ತು. ಆದರೆ, ಚಿಕಿತ್ಸೆಯಲ್ಲಾದ ವಿಳಂಬದಿಂದಾಗಿ ನನ್ನ ಮಗನಿಗೆ ಹೆಚ್ಚು ಶಾಶ್ವತವಾದ ಹಾನಿಯುಂಟಾಯಿತು. ಪ್ರತಿಯೊಬ್ಬ ಡಾಕ್ಟರ್‌, ಶಸ್ತ್ರತಜ್ಞ ಮತ್ತು ಅರಿವಳಿಕೆತಜ್ಞರು ಈ ಲೇಖನಗಳನ್ನು ಓದಬೇಕೆಂದು ನಾನು ಬಯಸುತ್ತೇನೆ.

ಎಲ್‌. ಎಲ್‌., ಅಮೆರಿಕ

ಯೆಹೋವನ ಸಾಕ್ಷಿಗಳೊಂದಿಗೆ ಸಹಕರಿಸಲು ಅನೇಕ ಡಾಕ್ಟರುಗಳು ಸಿದ್ಧರಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ನಿಜವಾಗಿಯೂ ಸಾಂತ್ವನದಾಯಕವಾಗಿದೆ. ಈ ಪತ್ರಿಕೆಯನ್ನು ಕೂಡಲೇ ನನ್ನ ಡಾಕ್ಟರಿಗೆ ಕಳುಹಿಸಿಕೊಡುತ್ತಿದ್ದೇನೆ. ಅವರು ಖಂಡಿತ ಅದನ್ನು ಗಣ್ಯಮಾಡುವರು ಎಂದು ನನಗೆ ಗೊತ್ತು.

ಯೂ. ಎಮ್‌., ಅಮೆರಿಕ

ನನಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಿರ್ಧರಿಸಿದ್ದ ಸಮಯಕ್ಕೆ ಸರಿಯಾಗಿ ಲೇಖನವು ಬಂದಿತು. ತೀವ್ರ ರಕ್ತನಷ್ಟವಾದುದರಿಂದ ನನ್ನ ರಕ್ತದ ಪ್ರಮಾಣವು ಕಡಿಮೆಯಾಯಿತು. ಈ ಪತ್ರಿಕೆಯ ಸಹಾಯದಿಂದ, ನಾನು ಏಕೆ ರಕ್ತವನ್ನು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಆಸ್ಪತ್ರೆಯ ಸಿಬ್ಬಂದಿಯವರಿಗೆ ವಿವರಿಸಿದೆ. ಯೆಹೋವನ ಸಹಾಯದಿಂದ ನಾನು ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ.

ಕೆ. ಬಿ., ಅಮೆರಿಕ

ಯುವಜನರ ಲೇಖನಗಳು ನನಗೆ 12 ವರ್ಷ ವಯಸ್ಸು. ನಿಮ್ಮ ಪತ್ರಿಕೆಗಳನ್ನು ಓದಲು ನಾನು ತುಂಬ ಸಂತೋಷಿಸುತ್ತೇನೆ. ನಾನು ನಿಮ್ಮ ಪತ್ರಿಕೆಯನ್ನು ಓದುವುದಕ್ಕೆ ಮುಂಚೆ, ನನಗೆ ಸ್ನೇಹಿತರೊಂದಿಗೆ ಹೊಂದಿಕೊಳ್ಳುವುದು ತುಂಬ ಕಷ್ಟವಾಗುತ್ತಿತ್ತು. ಏಕೆಂದರೆ, ಅವರೆಲ್ಲರೂ ನನಗಿಂತ ದೊಡ್ಡವರಾಗಿದ್ದರು. ಆದರೆ, “ಯುವಜನರು ಪ್ರಶ್ನಿಸುವುದು . . .” ಲೇಖನಗಳನ್ನು ಓದಿದ ನಂತರ, ಅವರೊಂದಿಗೆ ಹೊಂದಿಕೊಳ್ಳುವುದು ನನಗೆ ಸುಲಭವಾಗಿದೆ. ನಿಮ್ಮ ಪತ್ರಿಕೆಗಳಿಗಾಗಿ ತುಂಬ ಧನ್ಯವಾದಗಳು. ಅವು ತುಂಬ ಉಪಯುಕ್ತವಾಗಿವೆ.

ಎನ್‌. ಐ., ರಷ್ಯಾ