ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರಯಾಣವು ಸುರಕ್ಷಿತವಾಗಿರಲಿ!

ನಿಮ್ಮ ಪ್ರಯಾಣವು ಸುರಕ್ಷಿತವಾಗಿರಲಿ!

ನಿಮ್ಮ ಪ್ರಯಾಣವು ಸುರಕ್ಷಿತವಾಗಿರಲಿ!

“ಹೆಚ್ಚುಕಡಿಮೆ ವಾರಕ್ಕೊಮ್ಮೆಯಾದರೂ ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸವು ನಡೆಯುತ್ತಿರುತ್ತದೆ” ಎಂದು ಯುಎಸ್‌ಎ ಟುಡೇ ಪತ್ರಿಕೆಯಲ್ಲಿನ ವರದಿಯೊಂದು ತಿಳಿಸುತ್ತದೆ. ಇವುಗಳಲ್ಲಿ ಅನೇಕವು ಸಣ್ಣಪುಟ್ಟ ಘಟನೆಗಳಾಗಿರುತ್ತವೆ ಇಲ್ಲವೆ ಜನರನ್ನು ಸಾವಧಾನಗೊಳಿಸುವುದಕ್ಕಾಗಿರುವ ಹುಸಿ ಎಚ್ಚರಿಕೆ ಗಂಟೆಗಳಾಗಿರುತ್ತವೆ. ಆದರೂ ನೀವು ಈ ಮುಂದಿನ ಸಲಹೆಗಳನ್ನು ಅನುಸರಿಸುವುದಾದರೆ, ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸವು ಹೆಚ್ಚು ಸುಲಭವಾಗಿರಬಹುದು:

ತಕ್ಕ  ಉಡುಪನ್ನು ಧರಿಸಿಕೊಂಡಿರಿ.  ಎದ್ದು ಓಡಾಡಲು ಮತ್ತು ಕುಳಿತುಕೊಳ್ಳಲು ಸುಲಭವಾಗಿರುವಂತಹ ಉಡುಪನ್ನು ಧರಿಸಿಕೊಳ್ಳಿ. ನಿಮ್ಮ ಮೈಯನ್ನು ಎಷ್ಟು ಮಟ್ಟಿಗೆ ಮುಚ್ಚಲು ಸಾಧ್ಯವೋ ಅಷ್ಟರ ಮಟ್ಟಿಗಿನ ಉಡುಪನ್ನು ಧರಿಸಿಕೊಂಡಿರಿ. ಪ್ಯಾಂಟು ಮತ್ತು ಉದ್ದ ತೋಳುಗಳಿರುವ ಮೇಲಿನ ಅಂಗಿಗಳನ್ನು ಧರಿಸಿಕೊಳ್ಳಿ. ಮತ್ತು ಪ್ರಾಕೃತಿಕ ವಸ್ತುಗಳಿಂದ ತಯಾರಿಸಿದ ಬಟ್ಟೆಗಳಾದ ಹತ್ತಿ, ಉಣ್ಣೆ, ಡೆನಿಮ್‌ ಮತ್ತು ಚರ್ಮದ ಬಟ್ಟೆಗಳನ್ನು ಧರಿಸಿಕೊಳ್ಳಿ. ಸಿನ್‌ಥೆಟಿಕ್‌ ಬಟ್ಟೆಗಳಾದಂತಹ ರೆಯಾನ್‌, ಪಾಲಿಯೆಸ್ಟರ್‌, ನೈಲಾನ್‌ (ವಿಶೇಷವಾಗಿ ಒಳ ಉಡುಪುಗಳು) ಉಡುಪುಗಳನ್ನು ಧರಿಸಬೇಡಿ. ಏಕೆಂದರೆ, ಅಂಥ ಬಟ್ಟೆಗಳು ಬಿಸಿಯಾದಾಗ ಕರಗಿಬಿಡಸಾಧ್ಯವಿದೆ. ಹಾಗೂ ಇವು ದೇಹಕ್ಕೆ ಮತ್ತು ಕಾಲುಗಳಿಗೆ ಗಂಭೀರವಾದ ಸುಟ್ಟಗಾಯಗಳನ್ನು ಉಂಟುಮಾಡಬಲ್ಲವು.

ಮಾನಸಿಕವಾಗಿ  ಸಜ್ಜಾಗಿರಿ.  ತುರ್ತಿನ ಸಮಯದಲ್ಲಿ ಏನು ಮಾಡಬೇಕು ಎಂದು ಯೋಚಿಸಿರಿ. ಒಮ್ಮೆ ನಿಮ್ಮ ಸೀಟಿನಲ್ಲಿ ಹೋಗಿ ಕುಳಿತುಕೊಂಡ ಮೇಲೆ, ಹಿಂದೆ ಮತ್ತು ಮುಂದೆ ತುರ್ತಿನ ದಾರಿ ಎಲ್ಲಿದೆ ಎಂದು ನೋಡಿಕೊಳ್ಳಿ. ವಿಮಾನ ಹೊರಡುವುದಕ್ಕೆ ಮುಂಚೆ ಫ್ಲೈಟ್‌ ಅಟೆಂಡೆಂಟ್‌ ಕೊಡುವ ರಕ್ಷಣೆಯ ಕುರಿತ ನಿರ್ದಿಷ್ಟ ಸೂಚನೆಗಳಿಗೆ ಕಿವಿಗೊಡಿ. ವಿಮಾನದಿಂದ ಹೊರಬರುವ ವಿಧಾನಗಳ ಕುರಿತು ರಕ್ಷಣಾ ಕಾರ್ಡಿನಲ್ಲಿ ಕೊಡಲ್ಪಟ್ಟಿರುವ ಸಲಹೆಗಳನ್ನು ಮತ್ತೆ ಓದಿನೋಡಿ.

ಹೆದರಬೇಡಿ. ತುರ್ತು ಪರಿಸ್ಥಿತಿಯು ಉಂಟಾಗುವಾಗ ಪ್ರಶಾಂತರಾಗಿರಿ ಮತ್ತು ಚಾಲಕ ವರ್ಗದವರು ಕೊಡುವ ಸೂಚನೆಗಳನ್ನು ಅನುಸರಿಸಿರಿ. ವಿಮಾನದಿಂದ ಹೊರಬರುವುದು ಆವಶ್ಯಕವಾದರೆ, ನಿಮ್ಮಲ್ಲಿರುವ ವಸ್ತುಗಳನ್ನು ಅಲ್ಲೇ ಬಿಟ್ಟು ಹತ್ತಿರವಿರುವ ತುರ್ತು ಬಾಗಿಲ ಬಳಿಗೆ ಹೋಗಿ.

ಜಾಗರೂಕತೆಯಿಂದ  ವಿಮಾನದಿಂದ ಹೊರಬನ್ನಿ.  ಜಾರುವ ಅಡ್ಡಗಟ್ಟಿನ ಮೇಲೆ ಕಾಲುಗಳನ್ನು ಮೊದಲು ಇಡುವ ಮೂಲಕ ಜಿಗಿಯಿರಿ. ಕುಳಿತುಕೊಂಡು ಜಾರಲು ಪ್ರಯತ್ನಿಸಬೇಡಿ. ನಿಮ್ಮ ಕೈಗಳನ್ನು ಎದೆಯ ಮೇಲೆ ಮಡಿಚಿಟ್ಟುಕೊಳ್ಳಿ. ನಿಮ್ಮ ಕಾಲುಗಳನ್ನು ಹಾಗೂ ಪಾದಗಳನ್ನು ಹತ್ತಿರದಲ್ಲಿಟ್ಟುಕೊಳ್ಳಿ. ಚೂಪಾದ ಹಿಮ್ಮಡಿಯಿರುವ ಷೂಗಳನ್ನು ಹಾಕಿಕೊಂಡಿರುವುದಾದರೆ ಅದನ್ನು ಬಿಚ್ಚಿಡಿ. ಒಮ್ಮೆ ನೀವು ನೆಲದ ಮೇಲೆ ಬಂದೊಡನೆ, ವಿಮಾನವಿರುವ ಸ್ಥಳದಿಂದ ದೂರಹೋಗಿರಿ. ತುರ್ತು ವಾಹನಗಳು ಬರುತ್ತಿರುವುದಾದರೆ ಹುಷಾರಾಗಿರಿ.

ಈ ಮಾರ್ಗದರ್ಶನಗಳನ್ನು ಅನುಸರಿಸುವುದರಿಂದ ನಿಜವಾಗಿಯೂ ಯಾವುದಾದರೂ ಪ್ರಯೋಜನವಿದೆಯೇ? ಹೌದು! “ಎಲ್ಲಾ ವಿಮಾನ ಅಪಘಾತಗಳು ಅಪಾಯಕರವಾದುವುಗಳಲ್ಲ” ಎಂದು ಫೆಡರಲ್‌ ಏವಿಯೇಷನ್‌ ಫೆಡರೇಶನ್‌ ನ್ಯೂಸ್‌ಲೆಟರ್‌ ಇಂಟರ್‌ಕಾಮ್‌ ಹೇಳುತ್ತದೆ. ಅದು ಮತ್ತೂ ಕೂಡಿಸಿ ಹೇಳಿದ್ದು: “ಹೆಚ್ಚುಕಡಿಮೆ 50 ಪ್ರತಿಶತದಷ್ಟು ಎಲ್ಲಾ ವ್ಯಾಪಾರಿ ವಿಮಾನಗಳಿಗಾಗುವ ಅಪಾಯಗಳು ತಪ್ಪಿಸಿಕೊಳ್ಳಬಹುದಾದ ಅಪಘಾತಗಳಾಗಿವೆ.”