ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೆರಗುಗೊಳಿಸುವ ಕಡಲ ಸಾಮ್ರಾಟ

ಬೆರಗುಗೊಳಿಸುವ ಕಡಲ ಸಾಮ್ರಾಟ

ಬೆರಗುಗೊಳಿಸುವ ಕಡಲ ಸಾಮ್ರಾಟ

ಪೆಂಗ್ವಿನುಗಳಲ್ಲೇ ಅತಿ ದೊಡ್ಡದಾದದು ಸಾಮ್ರಾಟ ಪೆಂಗ್ವಿನ್‌. ಅದು ನಾಲ್ಕು ಅಡಿಗಳಿಗಿಂತಲೂ ಹೆಚ್ಚು ಎತ್ತರವಿದ್ದು, ಸುಮಾರು 40 ಕಿಲೋಗ್ರ್ಯಾಮುಗಳಷ್ಟು ತೂಕವುಳ್ಳದ್ದಾಗಿರುತ್ತದೆ. ಅಂಟಾರ್ಟಿಕ ದೇಶದ ರಕ್ತಹೆಪ್ಪುಗಟ್ಟುವಂತಹ ದಟ್ಟವಾದ ಹಿಮದಿಂದ ಕೂಡಿದ ಚಳಿಗಾಲವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಇನ್ನಿತರ ಪೆಂಗ್ವಿನುಗಳು ಉತ್ತರ ದಿಕ್ಕಿಗೆ ಹೋದರೆ, ಸಾಮ್ರಾಟ ಪೆಂಗ್ವಿನುಗಳು ದಕ್ಷಿಣ ದಿಕ್ಕಿನಲ್ಲಿರುವ ಅಂಟಾರ್ಟಿಕಕ್ಕೆ ಹೋಗುತ್ತವೆ! ಯಾಕೆ ಎಂದು ನೀವು ಕೇಳಬಹುದು. ಆಶ್ಚರ್ಯಕರವಾಗಿ, ತಮ್ಮ ಮರಿಗಳನ್ನು ಮಾಡುವುದಕ್ಕಾಗಿಯೇ.

ಹೆಣ್ಣು ಸಾಮ್ರಾಟ ಪೆಂಗ್ವಿನ್‌ ಮೊಟ್ಟೆಗಳನ್ನಿಟ್ಟ ನಂತರ, ಕೂಡಲೇ ಗಂಡು ಅವುಗಳನ್ನೆಲ್ಲಾ ಬಾಚಿಕೊಂಡು ಹಿಮದಿಂದ ಮೇಲಕ್ಕೆತ್ತಿ ತನ್ನ ಕಾಲಿನ ಮೇಲೆ ಇಟ್ಟುಕೊಳ್ಳುತ್ತದೆ. ನಂತರ, ಅದು ತನ್ನ ಕಿಬ್ಬೊಟ್ಟೆಯ ಕೆಳಗೆ, ಮರಿಮಾಡುವ ಚರ್ಮದ ಚೀಲದ ಮಡಿಕೆಯಲ್ಲಿ ಅವುಗಳನ್ನು ಸೇರಿಸಿಕೊಳ್ಳುತ್ತದೆ. ಇದಾದ ಮೇಲೆ, ಹೆಣ್ಣು ಪೆಂಗ್ವಿನ್‌ ಹಿಮಗಡ್ಡೆಗಳಿಲ್ಲದ ಸಾಗರದ ತಿಳಿನೀರಿನಲ್ಲಿ ಈಜುವುದಕ್ಕಾಗಿ ಮತ್ತು ಆಹಾರವನ್ನು ಹುಡುಕುವುದಕ್ಕಾಗಿಯೂ ಹೋಗಿಬಿಡುತ್ತದೆ. ಸುಮಾರು 65 ದಿನಗಳ ವರೆಗೆ, ತೀಕ್ಷ್ಣವಾದ ಹವಾಮಾನದಲ್ಲಿ ಗಂಡು ಪೆಂಗ್ವಿನ್‌ ಮೊಟ್ಟೆಗಳಿಗೆ ಕಾವುಕೊಡುತ್ತಾ, ತನ್ನ ದೇಹದಲ್ಲಿರುವ ಕೊಬ್ಬಿನಲ್ಲೇ ಜೀವಿಸುತ್ತಿರುತ್ತದೆ. ಒಂದು ಗಂಟೆಗೆ 200 ಕಿಲೋಮೀಟರುಗಳ ವೇಗವನ್ನು ಮುಟ್ಟಬಹುದಾದ ಬೀಸುವ ಹಿಮಗರೆಯುವ ಬಿರುಗಾಳಿಯಲ್ಲಿ ಹೊಡೆದುಕೊಂಡು ಹೋಗದಿರುವಂತೆಯೂ ಮತ್ತು ತನ್ನ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿಯೂ ಈ ಜಾಣ ಪಕ್ಷಿಗಳು ದೊಡ್ಡ ಗುಂಪುಗಳಲ್ಲಿ ಒತ್ತಾಗಿ ನಿಂತುಕೊಳ್ಳುತ್ತವೆ. ಚಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಗುಂಪಿನ ಕೊನೆಯಲ್ಲಿರುವ ಪ್ರತಿಯೊಂದು ಪೆಂಗ್ವಿನ್‌ ಒಳಗೆ ಹೋಗುತ್ತಾ, ಒಳಗಿರುವವು ಕೊನೆಗೆ ಹೋಗುತ್ತವೆ. ಹೀಗೆ, ಸರದಿಯನ್ನು ತೆಗೆದುಕೊಳ್ಳುತ್ತಾ ಬಿರುಗಾಳಿಗೆ ತಮ್ಮ ಬೆನ್ನನ್ನು ತೋರಿಸಿಕೊಂಡು ನಿಂತಿರುತ್ತವೆ.

ಮೊದಲೇ ಹೇಳಿಟ್ಟಂತೆ, ತಕ್ಕ ಸಮಯದ ಗಡುವಿನೊಳಗೆ ಮೊಟ್ಟೆಯಿಂದ ಮರಿಗಳು ಹೊರಬರುತ್ತಿದ್ದಂತೆಯೇ, ಅದೇ ಸಮಯಕ್ಕೆ ಸರಿಯಾಗಿ ತಾಯಿಯೂ ಹಿಂದಿರುಗುತ್ತದೆ. ಒಂದೇ ರೀತಿ ಕಾಣುವ ಸಾವಿರಾರು ಗಂಡು ಪೆಂಗ್ವಿನುಗಳ ಮಧ್ಯೆಯಲ್ಲಿ ಹೆಣ್ಣು ತನ್ನ ಜೋಡಿಯನ್ನು ಹೇಗೆ ಕಂಡುಹಿಡಿಯುತ್ತದೆ? ಹಾಡು ಹೇಳುವ ಮೂಲಕವೇ. ಹೇಗೆಂದರೆ, ಅವು ಮೊದಮೊದಲು ಕೂಡುವ ಸಮಯದಲ್ಲಿ, ಜೋಡಿಗಳು ಪರಸ್ಪರ ಹಾಡನ್ನು ಹಾಡಿರುತ್ತವೆ ಹಾಗೂ ತಮ್ಮ ಜೋಡಿಯ ಹಾಡನ್ನು ಜ್ಞಾಪಕದಲ್ಲಿಟ್ಟುಕೊಂಡಿರುತ್ತವೆ. ಹೆಣ್ಣು ಪೆಂಗ್ವಿನುಗಳು ಹಿಂದಿರುಗುವಾಗ, ಗಂಡು ಮತ್ತು ಹೆಣ್ಣು ಪೆಂಗ್ವಿನುಗಳು ಕೂಡಿ ಹೃದಯಪೂರ್ವಕವಾಗಿ ತಮ್ಮ ಹಾಡನ್ನು ಹಾಡುತ್ತವೆ. ಮಾನವರೇನಾದರೂ ಅಲ್ಲಿ ನಿಂತುಕೊಂಡು ಅದನ್ನು ಕೇಳಿಸಿಕೊಂಡರೆ, ಆ ಕರ್ಕಶ ನಾದಕ್ಕೆ ಸಂಪೂರ್ಣವಾಗಿ ಗೊಂದಲರಾಗಿಬಿಡುವರು. ಆದರೆ, ಸಾಮ್ರಾಟ ಪೆಂಗ್ವಿನುಗಳ ವಿಷಯದಲ್ಲಿ ಅದು ಹಾಗಲ್ಲ. ಅವು ತಮ್ಮ ಜೋಡಿಯನ್ನು ಸ್ವಲ್ಪಸಮಯದರೊಳಗಾಗಿ ಕಂಡುಹಿಡಿದುಬಿಡುತ್ತವೆ. ನಂತರ, ಗಂಡು ತಾನು ಕಾವುಕೊಟ್ಟು ಮರಿಮಾಡಿದ ಹೊಸದಾದ ಮರಿಗಳನ್ನು ಮನಸ್ಸಿಲ್ಲದೆ ಹೆಣ್ಣು ಜೋಡಿಯ ಬಳಿ ಬಿಟ್ಟು, ಹಸಿದು ಕಂಗಾಲಾಗಿರುವ ಗಂಡು ಪೆಂಗ್ವಿನ್‌ ತನ್ನ ದೇಹವನ್ನು ಅತ್ತಿತ್ತ ವಾಲಿಸಿಕೊಂಡು ಪುಟ್ಟಪುಟ್ಟ ಹೆಜ್ಜೆಗಳನ್ನಿಡುತ್ತ, ಸಾಗರದ ನೀರಿಗಾಗಿಯೂ ಮತ್ತು ಆಹಾರಕ್ಕಾಗಿಯೂ ಸುಮಾರು 75 ಕಿಲೋಮೀಟರುಗಳಷ್ಟು ದೂರದ ವರೆಗೆ, ತನ್ನ ಹೊಟ್ಟೆಯನ್ನು ನೀರಿನಲ್ಲಿ ಆಚೆಈಚೆಗೆ ಜಾರಿಸಿಕೊಳ್ಳುತ್ತಾ ಹಿಮತುಂಬಿರುವ ಸಾಗರವನ್ನು ದಾಟಿಹೋಗುತ್ತದೆ.

[ಪುಟ 31ರಲ್ಲಿರುವ ಚಿತ್ರ ಕೃಪೆ]

By courtesy of John R. Peiniger