ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವನ ಅಮಾನವೀಯ ಕೃತ್ಯಗಳು ಕೊನೆಗೊಳ್ಳುವವೋ?

ಮಾನವನ ಅಮಾನವೀಯ ಕೃತ್ಯಗಳು ಕೊನೆಗೊಳ್ಳುವವೋ?

ಮಾನವನ ಅಮಾನವೀಯ ಕೃತ್ಯಗಳು ಕೊನೆಗೊಳ್ಳುವವೋ?

ಇಂದು ಜಗತ್ತಿನ ಅನೇಕ ಕಡೆಗಳಲ್ಲಿ ಗುಲಾಮಗಿರಿಯು ಮುಳ್ಳಿನಂತೆ ಚುಚ್ಚುತ್ತಿದೆ. ಇದರ ಕುರಿತು ಮಾರ್ಚ್‌ 8, 2000ದ ಅವೇಕ್‌! ಪತ್ರಿಕೆಯಲ್ಲಿ ಬರೆಯಲ್ಪಟ್ಟಿತ್ತು. ಆ ಪತ್ರಿಕೆಯ ಒಂದು ಪ್ರತಿಯನ್ನು, ಇಟಲಿ ದೇಶದ ಟರ್ಕೋದ ಲಿವಿಯಾದಲ್ಲಿರುವ ಇಟಲಿಯ ಸಾಮಾಜಿಕ ಐಕ್ಯಮತದ ಮಂತ್ರಿವರ್ಯರಿಗೆ ನೀಡಲಾಯಿತು. ಪತ್ರಿಕೆಯನ್ನು ಓದಿದ ನಂತರ ಅವರು, ಇಟಲಿಯಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಒಂದು ಪತ್ರವನ್ನು ಕಳುಹಿಸಿದರು. ಅದರಲ್ಲಿ ಅವರು ಒಪ್ಪಿಕೊಂಡಿದ್ದೇನೆಂದರೆ:

“ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಾಧಿಸುವಂತಹ ಆಧುನಿಕಕಾಲದ ಗುಲಾಮಗಿರಿಯ ರೂಪಗಳು, ಹೆಚ್ಚು ಗಂಭೀರವಾದ ತುರ್ತು ಪರಿಸ್ಥಿತಿಯನ್ನು ಉಂಟುಮಾಡಿವೆ. ಅದರಲ್ಲಿ ಲಕ್ಷಾಂತರ ಮಾನವ ಜೀವಗಳು ಅಮಾನವೀಯವಾದ ಪರಿಸ್ಥಿತಿಗಳಲ್ಲಿ ಈಗಲೂ ಕಷ್ಟಪಡುತ್ತಿವೆ.” ಅವರು ತಮ್ಮ ಪತ್ರವನ್ನು ಈ ರೀತಿಯಾಗಿ ಮುಕ್ತಾಯಗೊಳಿಸಿದ್ದರು: “ಸಂಭವಿಸುತ್ತಿರುವ ಅಹಿತಕರವಾದ ಅಮಾನವೀಯ ಕೃತ್ಯಗಳ ವಿರುದ್ಧ ಎಬ್ಬಿಸಲ್ಪಡುವ ರೋಷದ ಪ್ರತಿಯೊಂದು ಕೂಗು ಸಮಾಜಕ್ಕೆ ಅತ್ಯಂತ ಅಮೂಲ್ಯವಾದ ಕೊಡುಗೆಯಾಗಿದೆ. ಅದರಲ್ಲೂ ಹೆಚ್ಚು ವ್ಯಾಪಕವಾದ ಓದುಗರನ್ನು ಹೊಂದಿರುವ [ಎಚ್ಚರ!] ಪತ್ರಿಕೆಯಂಥವುಗಳ ಮೂಲಕ ಆ ಕೂಗು ಸಾರ್ವಜನಿಕರನ್ನು ಮುಟ್ಟುವಾಗ, ಅದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.”

ಎಚ್ಚರ! ಪತ್ರಿಕೆಯ ಪ್ರತಿಯೊಂದು ಸಂಚಿಕೆಯನ್ನು 82 ಭಾಷೆಗಳಲ್ಲಿ ಮುದ್ರಿಸಿ, 2 ಕೋಟಿಗಿಂತಲೂ ಹೆಚ್ಚಿನ ಪ್ರತಿಗಳನ್ನು ಹಂಚುತ್ತಿರುವುದಕ್ಕಾಗಿ ಉಪಕಾರಗಳು. ಈ ಪತ್ರಿಕೆಯು ಲಕ್ಷಾಂತರ ಮಂದಿ ಓದುಗರಿಗೆ ಇಂದಿನ ಸಮಸ್ಯೆಗಳೇನೆಂಬುದರ ಕುರಿತು ಮಾತ್ರವಲ್ಲ, ಅವುಗಳಿಗೆ ಬೈಬಲಾಧಾರಿತ ಪರಿಹಾರಗಳನ್ನು ಕೂಡ ಒದಗಿಸುವ ಮೂಲಕ ಮಾಹಿತಿಯನ್ನು ನೀಡುತ್ತಿದೆ.

ಆದರೂ, ಒಂದು ಪ್ರಶ್ನೆಯು ಮಾತ್ರ ಅನೇಕರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ. ಅದೇನೆಂದರೆ, ದೇವರೊಬ್ಬನು ಇರುವುದಾದರೆ, ಮುಗ್ಧ ಜನರಿಗೆ ಘೋರ ಸಂಕಷ್ಟಗಳನ್ನು ಏಕೆ ಅನುಮತಿಸುತ್ತಾನೆ? ಅನೇಕರು ಯೋಚಿಸುವುದೇನೆಂದರೆ, ‘ಸೃಷ್ಟಿಯ ಅದ್ಭುತಗಳಲ್ಲಿ ಸೃಷ್ಟಿಕರ್ತನ ವಿವೇಕವು ಸ್ಪಷ್ಟವಾಗಿ ಕಾಣುತ್ತದೆ. ಆದರೂ ಇಂದು ಕಷ್ಟಪಡುತ್ತಿರುವ ಜನರಿಗೆ ಕಿಂಚಿತ್ತೂ ಸಹಾನೂಭೂತಿಯನ್ನು ತೋರಿಸುವುದೇ ಇಲ್ಲವೋ ಎಂಬಂತೆ ಇರುವ ದೇವರನ್ನು ನಾನು ಹೇಗೆ ತಾನೇ ಪ್ರೀತಿಸಸಾಧ್ಯ?’ ಈ ರೀತಿಯ ಪ್ರಶ್ನೆಗಳಿಗೆ ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೊ? ಎಂಬ ಬ್ರೋಷರಿನಲ್ಲಿ ತೃಪ್ತಿದಾಯಕವಾಗಿ ಉತ್ತರಗಳು ಕೊಡಲ್ಪಟ್ಟಿವೆ. ಈ 32 ಪುಟಗಳ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಬಯಸುವುದಾದರೆ, ದಯವಿಟ್ಟು ಕೆಳಗೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ 5ನೇ ಪುಟದಲ್ಲಿರುವ ತಕ್ಕದಾದ ವಿಳಾಸಕ್ಕೆ ಬರೆಯುವ ಮೂಲಕ ಇದರೊಂದಿಗಿರುವ ಕೂಪನನ್ನು ತುಂಬಿಸಿ ಕಳುಹಿಸಿಕೊಡಿ.

ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರಿನ ಕುರಿತು ಹೆಚ್ಚು ಮಾಹಿತಿಯನ್ನು ಕಳುಹಿಸಿರಿ

□ ದಯವಿಟ್ಟು ಒಂದು ಉಚಿತ ಗೃಹ ಬೈಬಲ್‌ ಅಭ್ಯಾಸಕ್ಕಾಗಿ ನನ್ನನ್ನು ಸಂಪರ್ಕಿಸಿರಿ.