ಲಕ್ಷಾಂತರ ಮಂದಿ ಹೋಗುತ್ತಿದ್ದಾರೆ ನೀವು ಸಹ ಹೋಗುವಿರೋ?
ಲಕ್ಷಾಂತರ ಮಂದಿ ಹೋಗುತ್ತಿದ್ದಾರೆ ನೀವು ಸಹ ಹೋಗುವಿರೋ?
ಎಲ್ಲಿಗೆ ಹೋಗುತ್ತಿದ್ದಾರೆ? ಯೇಸು ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ. 2000 ಇಸವಿಯಲ್ಲಿ, ಲೋಕವ್ಯಾಪಕವಾಗಿ ಒಟ್ಟು 1,48,72,086 ಮಂದಿ ಹಾಜರಾಗಿದ್ದರು.
ಆದರೆ ಜನರು ಈ ಜ್ಞಾಪಕಾಚರಣೆಗೆ ಏಕೆ ಹೋಗುತ್ತಾರೆ? ಏಕೆಂದರೆ ಮಾನವಕುಲಕ್ಕೆ ಕ್ರಿಸ್ತನ ಮರಣವು ಮಹತ್ವಾರ್ಥವುಳ್ಳದ್ದಾಗಿದೆ. ಅತಿ ಬೇಗನೆ ಅಸ್ವಸ್ಥತೆ, ಕಷ್ಟಾನುಭವ, ಹಾಗೂ ಮರಣದಿಂದ ಬಿಡುಗಡೆ ಹೊಂದುವುದೇ ಇದರ ಅರ್ಥವಾಗಿದೆ. ಮೃತಪಟ್ಟಿರುವಂಥ ಪ್ರಿಯ ಜನರು ಸಹ, ಪರದೈಸ ಭೂಮಿಯ ಮೇಲೆ ಪುನರುತ್ಥಾನಹೊಂದುವರು.
ಯೇಸುವಿನ ಮರಣವು ಇಂತಹ ಆಶೀರ್ವಾದಗಳನ್ನು ಹೇಗೆ ತರಸಾಧ್ಯವಿದೆ? ಇದನ್ನು ಸ್ವತಃ ನೀವೇ ತಿಳಿದುಕೊಳ್ಳುವಂತೆ ನಿಮಗೆ ಆಮಂತ್ರಣವಿದೆ. ಈ ಪ್ರಾಮುಖ್ಯ ಘಟನೆಯನ್ನು ಆಚರಿಸುವಾಗ ತಮ್ಮೊಂದಿಗೆ ಜೊತೆಗೂಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಸ್ವಾಗತಿಸುತ್ತಾರೆ.
ನಿಮ್ಮ ಮನೆಗೆ ಹತ್ತಿರದಲ್ಲಿರುವ ರಾಜ್ಯ ಸಭಾಗೃಹಕ್ಕೆ ಹಾಜರಾಗಿ. ಈ ವರ್ಷ ಏಪ್ರಿಲ್ 8ರ ಭಾನುವಾರದಂದು ಸೂರ್ಯಾಸ್ತಮಾನದ ನಂತರ ಇದನ್ನು ಆಚರಿಸಲಾಗುತ್ತದೆ. ನಿಗದಿತ ಸಮಯದ ಬಗ್ಗೆ ಸ್ಥಳಿಕ ಸಾಕ್ಷಿಗಳೊಂದಿಗೆ ವಿಚಾರಿಸಿ ತಿಳಿದುಕೊಳ್ಳಿ. (g01 3/22)