ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಂಜರು ಭೂಮಿಯನ್ನು ಫಲೋತ್ಪಾದಕವಾಗಿ ಮಾಡುವುದು

ಬಂಜರು ಭೂಮಿಯನ್ನು ಫಲೋತ್ಪಾದಕವಾಗಿ ಮಾಡುವುದು

ಬಂಜರು ಭೂಮಿಯನ್ನು ಫಲೋತ್ಪಾದಕವಾಗಿ ಮಾಡುವುದು

ಭಾರತದ ಎಚ್ಚರ! ಲೇಖಕನಿಂದ

ಲದಾಖ್‌​—⁠ಉತ್ತರ ಭಾರತದಲ್ಲಿರುವ ಈ ಒಂದು ಪ್ರದೇಶದ ಬಂಜರು ಭೂಮಿಯನ್ನು ಉತ್ಪನ್ನದಾಯಕವಾಗಿ ಹೇಗೆ ಮಾಡಸಾಧ್ಯವಿದೆ? ಈ ಪ್ರಶ್ನೆಯು, ನಿವೃತ್ತ ಸಿವಿಲ್‌ ಇಂಜಿನಿಯರ್‌ ಟ್ಸೆವಾಂಗ್‌ ನಾರ್‌ಫಲ್‌ರ ಮನಸ್ಸನ್ನು ಆಕ್ರಮಿಸಿತ್ತು. ಹಿಮಾಲಯ ಪರ್ವತಗಳ ಎತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ನೈಸರ್ಗಿಕ ನೀರ್ಗಲ್ಲ ನದಿಗಳು ಕರಗಿ, ಕಡಿಮೆ ಮಳೆಯಿರುವ ಮತ್ತು ರೈತರು ತಮ್ಮ ಹೊಲಗಳಿಗೆ ನೀರನ್ನು ಹಾಯಿಸಬೇಕಾಗುವ ಏಪ್ರಿಲ್‌ ತಿಂಗಳಿನಲ್ಲಿ ಹರಿಯುವ ಬದಲು, ಜೂನ್‌ ತಿಂಗಳಿನಲ್ಲಿ ಹರಿಯಲು ಆರಂಭಿಸುತ್ತವೆ. ಜಾಣತನದ ಒಂದು ಪರಿಹಾರವು ನಾರ್‌ಫಲ್‌ರಿಗೆ ಹೊಳೆಯಿತು: ಎಲ್ಲಿ ವರ್ಷದ ಆರಂಭದಲ್ಲೇ ನೀರ್ಗಲ್ಲಿನ ಕರಗುವಿಕೆಯು ಆರಂಭವಾಗುತ್ತದೋ ಅಂತಹ ಎತ್ತರ ಕಡಿಮೆಯಾಗಿರುವ ಸ್ಥಳಗಳಲ್ಲಿ ಕೃತಕ ನೀರ್ಗಲ್ಲ ನದಿಗಳನ್ನು ಕಟ್ಟಬೇಕು.

ಭಾರತದ ದ ವೀಕ್‌ ಎಂಬ ವಾರ್ತಾಪತ್ರಿಕೆಗನುಸಾರವಾಗಿ, ನಾರ್‌ಫಲ್‌ರೂ ಅವರ ತಂಡವೂ ಒಂದು ಪರ್ವತ ಪ್ರವಾಹವನ್ನು ತಿರುಗಿಸಿ, ಅದನ್ನು 700 ಅಡಿ ಉದ್ದ ಮತ್ತು 70 ಹೊರಗಂಡಿಗಳಿರುವ ಒಂದು ಮಾನವ-ನಿರ್ಮಿತ ಕಾಲುವೆಯಾಗಿ ರಚಿಸಿದರು. ಆ ಹೊರಗಂಡಿಗಳಿಂದ ನೀರು ಪರ್ವತ ಇಳಿಜಾರಿನ ಮೇಲೆ ನಿಧಾನವಾಗಿ ಹಾಗೂ ನಿಗದಿತವಾದ ಪ್ರಮಾಣದಲ್ಲಿ ಕೆಳಕ್ಕೆ ಹರಿಯುವುದು ಮತ್ತು ಆ ಇಳಿಜಾರಿನ ತಗ್ಗುಭಾಗದಲ್ಲಿ ಕಟ್ಟಲ್ಪಟ್ಟಿರುವ ತಡೆ ಗೋಡೆಗಳನ್ನು ತಲಪುವ ಮುನ್ನ ನೀರ್ಗಲ್ಲಾಗುವುದು. ನೀರ್ಗಲ್ಲು ಹೆಚ್ಚುತ್ತಾ ಹೆಚ್ಚುತ್ತಾ, ಕೊನೆಗೆ ಆ ಗೋಡೆಗಳನ್ನು ಆವರಿಸುವುದು. ಪರ್ವತದ ನೆರಳಿನಲ್ಲಿರುವ ಕಾರಣ, ಏಪ್ರಿಲ್‌ ತಿಂಗಳಿನಲ್ಲಿ ಉಷ್ಣತೆಯು ಹೆಚ್ಚಿದಾಗ ಮಾತ್ರ ಇದು ಕರಗಿ, ನೀರುಹಾಯಿಸುವಿಕೆ ಅತ್ಯಗತ್ಯವಾಗಿರುವ ಆ ಸಮಯದಲ್ಲಿ ನೀರನ್ನು ಒದಗಿಸುತ್ತದೆ.

ಒಂದು ಕೃತಕ ನೀರ್ಗಲ್ಲ ನದಿಯನ್ನು ಕಟ್ಟುವ ಆ ಉಪಾಯವು ಯಶಸ್ವಿಯಾಯಿತೋ? ವಾಸ್ತವದಲ್ಲಿ, ನಾರ್‌ಫಲ್‌ರ ಉಪಾಯವು ಎಷ್ಟು ಪ್ರಾಯೋಗಿಕವಾಗಿ ಪರಿಣಮಿಸಿತೆಂದರೆ, ತದ್ರೀತಿಯ ಹತ್ತು ನೀರ್ಗಲ್ಲ ನದಿಗಳು ಲದಾಖ್‌ನಲ್ಲಿ ಕಟ್ಟಲ್ಪಟ್ಟಿವೆ, ಮತ್ತು ಇನ್ನೂ ಹೆಚ್ಚನ್ನು ಕಟ್ಟಲಿಕ್ಕಾಗಿ ಯೋಜನೆಗಳು ಮಾಡಲ್ಪಡುತ್ತಿವೆ. 4,500 ಅಡಿಗಳಷ್ಟು ಎತ್ತರದಲ್ಲಿ ಕಟ್ಟಲ್ಪಟ್ಟಿರುವ ಇಂತಹ ಒಂದು ನೀರ್ಗಲ್ಲ ನದಿ, 340 ಲಕ್ಷ ಲೀಟರ್‌ಗಳಷ್ಟು ನೀರನ್ನು ಒದಗಿಸುತ್ತದೆ. ಮತ್ತು ಇದರ ವೆಚ್ಚವೆಷ್ಟು? “ಒಂದು ಕೃತಕ ನೀರ್ಗಲ್ಲ ನದಿಯನ್ನು ನಿರ್ಮಿಸಲಿಕ್ಕೆ ಹೆಚ್ಚುಕಡಿಮೆ ಎರಡು ತಿಂಗಳು ಹಿಡಿಯುತ್ತದೆ ಹಾಗೂ 80,000 ರೂಪಾಯಿಗಳ ವೆಚ್ಚವಾಗುತ್ತದೆ. ಇದರಲ್ಲಿ ಹೆಚ್ಚಿನದ್ದು ಕಾರ್ಮಿಕರ ವೆಚ್ಚವಾಗಿದೆ,” ಎಂಬುದಾಗಿ ದ ವೀಕ್‌ ವಾರ್ತಾಪತ್ರಿಕೆಯು ಹೇಳುತ್ತದೆ.

ಮಾನವನ ಕಲ್ಪನಾ ಚಾತುರ್ಯ ಸರಿಯಾಗಿ ನಿರ್ದೇಶಿಸಲ್ಪಡುವಾಗ, ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆಂಬುದು ನಿಶ್ಚಯ. ದೇವರ ಸ್ವರ್ಗೀಯ ರಾಜ್ಯದ ಮಾರ್ಗದರ್ಶನದ ಕೆಳಗೆ ಮಾನವಕುಲವು ಏನನ್ನು ಸಾಧಿಸಲು ಶಕ್ತವಾಗಿರುವುದು ಎಂಬುದನ್ನು ತುಸು ಯೋಚಿಸಿ ನೋಡಿ! ಬೈಬಲ್‌ ವಾಗ್ದಾನಿಸುವುದು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು.” (ಯೆಶಾಯ 35:1, 6) ನಮ್ಮ ಭೂಮಿಯನ್ನು ಅಂದಗೊಳಿಸುವುದರಲ್ಲಿ ಭಾಗವಹಿಸುವುದು ಎಂತಹ ಹರ್ಷಾನಂದದ ವಿಷಯವಾಗಿರುವುದು! (g01 4/8)

[ಪುಟ 31ರಲ್ಲಿರುವ ಚಿತ್ರ ಕೃಪೆ]

Mountain High Maps® Copyright © 1997 Digital Wisdom, Inc. ▸

ಅರ್‌ವಿಂದ್‌ ಜೈನ್‌, ದ ವೀಕ್‌ ಪತ್ರಿಕೆ