ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ದಾಂಪತ್ಯವನ್ನು ರಕ್ಷಿಸುವುದು ಏಪ್ರಿಲ್‌ - ಜೂನ್‌ 2001ರ ಎಚ್ಚರ! ಪತ್ರಿಕೆಯಲ್ಲಿ ಬಂದ “ನಾವು ನಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆಯೋ?” ಎಂಬ ಲೇಖನಮಾಲೆಗಾಗಿ ನನ್ನ ಹೃದಯದಾಳದಿಂದ ನಿಮಗೆ ಉಪಕಾರ ಸಲ್ಲಿಸುತ್ತೇನೆ. ಒಂದು ವರ್ಷದ ಹಿಂದೆ ನನ್ನ ಹಾಗೂ ನನ್ನ ಪತ್ನಿಯ ನಡುವೆ ವೈವಾಹಿಕ ಸಮಸ್ಯೆಗಳಿದ್ದವು. ಯಾವಾಗ ನೋಡಿದರೂ ಕೋಪವು ಸಿಡಿದೇಳುತ್ತಿದ್ದಂತಹ ಕುಟುಂಬಗಳಲ್ಲಿ ನಾವಿಬ್ಬರೂ ಬೆಳೆಸಲ್ಪಟ್ಟಿದ್ದೆವು. ಆದುದರಿಂದ, ನಾವು ನಿಜವಾಗಿಯೂ ಪರಸ್ಪರರ ಮನನೋಯಿಸುವಂಥ ಮಾತುಗಳನ್ನು ಆಡುತ್ತಿದ್ದೆವು. ಇದರಿಂದಾಗಿ ಪರಿಸ್ಥಿತಿಗಳು ಹತೋಟಿ ಮೀರುತ್ತಿದ್ದವು. ಆದರೆ ನಾವು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ಆರಂಭಿಸಿದ್ದೇವೆ, ಮತ್ತು ಈಗ ನಾವು ನಿಜವಾಗಿಯೂ ತುಂಬ ಸಂತೋಷದಿಂದಿದ್ದೇವೆ.

ಆರ್‌. ಓ., ಅಮೆರಿಕ (g01 8/22)

ಒಬ್ಬ ಸಭಾ ಹಿರಿಯನೋಪಾದಿ ನಾನು ಎದುರಿಸುವ ಅತ್ಯಂತ ಪಂಥಾಹ್ವಾನದಾಯಕ ಸನ್ನಿವೇಶಗಳಲ್ಲಿ ಒಂದು, ಪ್ರೀತಿರಹಿತವಾದ ಒಂದು ದಾಂಪತ್ಯದಲ್ಲಿ ಸಿಕ್ಕಿಕೊಂಡಿದ್ದೇವೆ ಎಂದು ನೆನಸುವವರಿಗೆ ಸಹಾಯಮಾಡಲು ಪ್ರಯತ್ನಿಸುವುದೇ ಆಗಿದೆ ಎಂಬುದು ನನ್ನ ಅರಿವಿಗೆ ಬಂದಿದೆ. ಈ ಎಲ್ಲ ವರ್ಷಗಳಲ್ಲಿ ಪ್ರಕಾಶನಗಳ ಮೂಲಕ ಅತ್ಯಧಿಕ ಮಟ್ಟದಲ್ಲಿ ಶಾಸ್ತ್ರೀಯ ಸಲಹೆಯನ್ನು ಪಡೆದುಕೊಂಡಿದ್ದೆವು. ಆದರೂ, ಈ ಪತ್ರಿಕೆಯ ಮುಖಪುಟವನ್ನು ನೋಡುವ ಮೂಲಕ, ಅಂಥವರಿಗೆ ನೇರವಾದ ಸಹಾಯವನ್ನು ಒದಗಿಸಲು ನಮಗೆ ಅಗತ್ಯವಾಗಿರುವ ವಿಷಯವು ಇದೇ ಆಗಿದೆ ಎಂಬುದನ್ನು ನಾನು ಗಮನಿಸಶಕ್ತನಾದೆ. ಈ ಲೇಖನವು ನನ್ನ ನಿರೀಕ್ಷಣೆಗಳಿಗನುಸಾರವಾಗಿತ್ತು ಎಂಬುದಂತೂ ಖಂಡಿತ!

ಎಲ್‌. ಆರ್‌., ಅಮೆರಿಕ (g01 8/22)

ನನ್ನ ದಾಂಪತ್ಯದಲ್ಲಿ ಒಂದು ಗುರಿ ಅಥವಾ ಉದ್ದೇಶ ಇಲ್ಲವೇ ಇಲ್ಲ ಎಂಬಂತೆ ನನಗೆ ತೋರಿತು. ನಾನು ಹಾಗೂ ನನ್ನ ಗಂಡನು ಪರಸ್ಪರ ಪ್ರೀತಿಸುತ್ತಿಲ್ಲ, ಬದಲಾಗಿ ಪರಸ್ಪರ ಕೇವಲ ಸಹಿಸಿಕೊಂಡು ಹೋಗುತ್ತಿದ್ದೇವಷ್ಟೇ ಎಂದು ನನಗನಿಸಿತು. ಕೆಲವೊಮ್ಮೆ ನಾನು ವಿಚ್ಛೇದವನ್ನು ಪಡೆದುಕೊಳ್ಳಬೇಕೆಂದು ಆಲೋಚಿಸಿದೆ. ಆದರೆ “ನಾವು ನಮ್ಮ ದಾಂಪತ್ಯವನ್ನು ರಕ್ಷಿಸಸಾಧ್ಯವಿದೆಯೋ?” (ಏಪ್ರಿಲ್‌ - ಜೂನ್‌ 2001) ಎಂಬ ಲೇಖನಮಾಲೆಯ ಫಲವಾಗಿ, ನಮ್ಮ ಪ್ರೀತಿಯು ಪುನರುಜ್ಜೀವಿಸಿದೆ.

ಇ. ಆರ್‌., ಸ್ಪೆಯ್ನ್‌ (g01 9/8)

ನಾನೊಬ್ಬ ಕ್ರೈಸ್ತ ಪತ್ನಿಯಾಗಿದ್ದೇನೆ, ಆದರೆ ಕಳೆದ ವರ್ಷ ನನ್ನ ದಾಂಪತ್ಯವು ತುಂಬ ದುರವಸ್ಥೆಗೀಡಾಗಿತ್ತು. ನಾನು ಹಾಗೂ ನನ್ನ ಪತಿಯು ಪರಸ್ಪರ ಎಷ್ಟು ಮಾನಸಿಕ ನೋವನ್ನು ಉಂಟುಮಾಡಿಕೊಂಡಿದ್ದೆವೆಂದರೆ, ನಮ್ಮ ಸಂಬಂಧವನ್ನು ಪುನಃ ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ನನಗೆ ತೋರಿತು. ಆದರೆ ನಾನು ಈ ಲೇಖನಗಳನ್ನು ಓದಿದಾಗ, ‘ಪ್ರಯತ್ನವನ್ನು ಬಿಟ್ಟುಬಿಡಬೇಡ!’ ಎಂದು ಯೆಹೋವನೇ ಹೇಳುತ್ತಿರುವಂತೆ ಅನಿಸಿತು. ನಾವು ಈ ಮುಂಚೆ ಪರಸ್ಪರ ಹೊಂದಿದ್ದ ಹೃತ್ಪೂರ್ವಕ ಪ್ರೀತಿಯನ್ನು ಪುನಃ ಪಡೆಯಲಿಕ್ಕಾಗಿ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ನಾನು ಪ್ರಚೋದಿಸಲ್ಪಟ್ಟೆ. ನನ್ನ ಪತಿಯಿಂದ ಈಗಾಗಲೇ ಪ್ರತಿಕ್ರಿಯೆ ದೊರಕಿದೆ. ನಾನು ಈ ಲೇಖನಗಳನ್ನು ಆಗಿಂದಾಗ್ಗೆ ಓದುತ್ತಿರುತ್ತೇನೆ.

ಎನ್‌. ಏಚ್‌., ಜಪಾನ್‌ (g01 9/8)

ನಾನು ಇತ್ತೀಚೆಗೆ ದೀಕ್ಷಾಸ್ನಾನ ಪಡೆದುಕೊಂಡಿದ್ದೆ ಮತ್ತು ನನ್ನ ಅವಿಶ್ವಾಸಿ ಪತ್ನಿಯಿಂದ ವಿರೋಧವನ್ನು ಎದುರಿಸುತ್ತಿದ್ದೇನೆ. ನನ್ನ ದಾಂಪತ್ಯವನ್ನು ನಾನು ಹೇಗೆ ಯಶಸ್ವಿಗೊಳಿಸಸಾಧ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಲೇಖನಗಳು ನನಗೆ ಸಹಾಯಮಾಡಿವೆ. ಅವು ಸರಿಯಾದ ಸಮಯಕ್ಕೆ ಬಂದವು.

ಡಬ್ಲ್ಯೂ. ಎಸ್‌., ಆಸ್ಟ್ರೇಲಿಯ (g01 9/8)

ನಾನು ಸಂತೋಷಭರಿತ ದಾಂಪತ್ಯವನ್ನು ನಡೆಸುತ್ತಿರುವುದರಿಂದ, ಇತರರಿಗೆ ಸಹಾಯಮಾಡುವುದರಲ್ಲಿ ಈ ಲೇಖನಗಳನ್ನು ಉಪಯೋಗಿಸಸಾಧ್ಯವಿದೆ ಎಂಬ ಆಲೋಚನೆಯಿಂದ ನಾನು ಇವುಗಳನ್ನು ಓದಲಾರಂಭಿಸಿದೆ. ಆದರೆ ಅವುಗಳ ಆರಂಭದಿಂದಲೇ, ನನ್ನ ಸ್ವಂತ ದಾಂಪತ್ಯ ಬಂಧಗಳನ್ನೇ ಬಲಗೊಳಿಸಸಾಧ್ಯವಿರುವ ಪ್ರಾಯೋಗಿಕ ಅಂಶಗಳು ಆ ಲೇಖನಮಾಲೆಯಲ್ಲಿ ಇದ್ದವು.

ಎಂ. ಡಿ., ಇಟಲಿ (g01 9/8)

ತನ್ನ ಅವಿಶ್ವಾಸಿ ಪತಿಯೊಂದಿಗೆ ತುಂಬ ಜಗಳ ನಡೆದಿದೆ ಮತ್ತು ತಾವೀಗ ಪ್ರತ್ಯೇಕವಾಗಿ ಜೀವಿಸುತ್ತಿದ್ದೇವೆ ಎಂದು, ನನ್ನ ಸಭೆಯಲ್ಲಿದ್ದ ಒಬ್ಬ ಕ್ರೈಸ್ತ ಸಹೋದರಿಯು ನನಗೆ ಹೇಳಿದಳು. ಸ್ವಲ್ಪ ಸಮಯಾನಂತರ ಅವಳು ನನಗೆ, ಈಗ ಸನ್ನಿವೇಶವು ತುಂಬ ಉತ್ತಮಗೊಂಡಿದೆ ಎಂದು ಹೇಳಿದಳು. ಅವಳು ಈ ಲೇಖನಗಳನ್ನು ಓದಿ “ತುಂಬ ಆನಂದಿಸಿದ್ದಳು” ಮತ್ತು ಅವಳ ಸಮಸ್ಯೆಯನ್ನು ಬಗೆಹರಿಸಲು ಅವು ಮಹತ್ತರವಾದ ರೀತಿಯಲ್ಲಿ ಸಹಾಯಮಾಡಿದ್ದವು. ಸಂವಾದದ ಕುರಿತಾದ ಹೇಳಿಕೆಗಳು ವಿಶೇಷವಾಗಿ ಉಪಯುಕ್ತಕರವಾಗಿದ್ದವು ಎಂದು ಅವಳು ಹೇಳಿದಳು. ಇದರಿಂದಾಗಿ ಅವಳ ಹಾಗೂ ಅವಳ ಪತಿಯ ಪುನರ್ಮಿಲನವಾಯಿತು.

ಎನ್‌. ಎಸ್‌., ಕೆನಡ (g01 9/8)

ಶಿಶುಗಳ ಹಲ್ಲುಗಳು ದಂತಚಿಕಿತ್ಸಾಲಯದಲ್ಲಿನ ನನ್ನ ಕೆಲಸದ ಒಂದು ಭಾಗದೋಪಾದಿ, ತಮ್ಮ ಶಿಶುಗಳ ಹಲ್ಲುಗಳನ್ನು ಹೇಗೆ ನೋಡಿಕೊಳ್ಳುವುದು ಎಂಬುದನ್ನು ನಾನು ತಾಯಂದಿರಿಗೆ ಕಲಿಸುತ್ತೇನೆ. “ಸೂಕ್ಷ್ಮವಾದ ಹಲ್ಲುಗಳನ್ನು ಸಂರಕ್ಷಿಸುವುದು” (ನವೆಂಬರ್‌ 22, 2000, ಇಂಗ್ಲಿಷ್‌) ಎಂಬ ಲೇಖನವು ತುಂಬ ಸಹಾಯಕರವಾಗಿತ್ತು. ಏಕೆಂದರೆ ಕಿಣ್ವ ಮತ್ತು ಬ್ಯಾಕ್ಟೀರಿಯದಿಂದಾಗುವ ಅಪಾಯವನ್ನು ಅದು ವಿವರಿಸುತ್ತದೆ. ನನ್ನನ್ನು ಸಂಪರ್ಕಿಸುವ ಎಲ್ಲ ತಾಯಂದಿರು ಈ ಪತ್ರಿಕೆಯ ಒಂದು ಪ್ರತಿಯನ್ನು ಪಡೆದುಕೊಳ್ಳುತ್ತಾರೆ ಮತ್ತು ಫಲಿತಾಂಶಗಳು ಅತ್ಯುತ್ತಮವಾಗಿವೆ!

ಟಿ.ಸಿ.ಎಸ್‌., ಬ್ರಸಿಲ್‌ (g01 7/8)