ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ಪತ್ರಿಕೆಯು ಅವನ ಜೀವವನ್ನು ಉಳಿಸಿದ ರೀತಿ

ಎಚ್ಚರ! ಪತ್ರಿಕೆಯು ಅವನ ಜೀವವನ್ನು ಉಳಿಸಿದ ರೀತಿ

ಎಚ್ಚರ! ಪತ್ರಿಕೆಯು ಅವನ ಜೀವವನ್ನು ಉಳಿಸಿದ ರೀತಿ

“ನಾನು ನನ್ನ ಕುಟುಂಬಕ್ಕೆ ಒಂದು ಹೊರೆಯಾಗಿ ಮುಂದುವರಿಯಲು ಬಯಸಲಿಲ್ಲ. ಆದುದರಿಂದ, ಇದಕ್ಕೆ ಆತ್ಮಹತ್ಯೆಯೇ ಪರಿಹಾರವೆಂದು ನಿರ್ಧರಿಸಿದೆ.” ಇದನ್ನು ನೇಪಾಲದ ಒಬ್ಬ ಮನುಷ್ಯನು ಬರೆದನು. ಅವನು ಮುಂದುವರಿಸಿ ಹೇಳುವುದು: “ನಾನೊಂದು ಹಗ್ಗವನ್ನು ಸಿದ್ಧಗೊಳಿಸಿ, ಯಾವ ಸ್ಥಳದಲ್ಲಿ ಮತ್ತು ಯಾವ ತಾರೀಖಿನಂದು ಆತ್ಮಹತ್ಯೆ ಮಾಡಿಕೊಳ್ಳುವುದು ಎಂಬುದನ್ನು ನಿರ್ಧರಿಸಿದೆ. ಆದರೆ ಆ ದಿನಕ್ಕೆ ಕೇವಲ ಒಂದು ವಾರ ಇರುವಾಗ, ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 2000, ಫೆಬ್ರವರಿ 22ರ ಸಂಚಿಕೆಯು ನನ್ನ ಕೈಸೇರಿತು.”

ಆ ಸಂಚಿಕೆಯಲ್ಲಿ (ಮಾರ್ಚ್‌ 8, 2000, ಕನ್ನಡ) “ಆತ್ಮಹತ್ಯೆ​—⁠ಯಾರು ಹೆಚ್ಚು ಅಪಾಯದಲ್ಲಿದ್ದಾರೆ?” ಎಂಬುದು ಮುಖಪುಟ ಲೇಖನಗಳಾಗಿದ್ದವು. ಆ ಮನುಷ್ಯನು ಬರೆಯುವುದು: “ಆ ಪತ್ರಿಕೆಯನ್ನೆತ್ತಿ ಓದಲು ನಾನು ನನ್ನಲ್ಲಿದ್ದ ಎಲ್ಲ ಶಕ್ತಿಯನ್ನೂ, ಧೈರ್ಯವನ್ನೂ ಒಟ್ಟುಗೂಡಿಸಬೇಕಾಯಿತು. ಆತ್ಮಹತ್ಯೆಯ ಹತ್ತು ಸಂಭಾವ್ಯ ಕಾರಣಗಳ ಕುರಿತಾದ ವರ್ಣನೆಯು ನನ್ನ ಮನಸ್ಸಿನ ಮೇಲೆ ಪ್ರಭಾವ ಬೀರಿ, ನಾನು ಮನಸ್ಸು ಬದಲಾಯಿಸುವಂತೆ ಮಾಡಿತು.” ಅವನು ಕೊನೆಯಲ್ಲಿ ಹೇಳಿದ್ದು: “ನೀವು ನನಗಾಗಿ ಏನನ್ನು ಮಾಡಿದ್ದೀರೊ ಅದಕ್ಕಾಗಿ ಉಪಕಾರ ಹೇಳದೇ ಇರಲಾರೆ. ಈ ಲೇಖನವನ್ನು ಬರೆಯಲು ನೀವು ಮಾಡಿದ ಪ್ರಯತ್ನವು ನನ್ನ ಜೀವವನ್ನೇ ಉಳಿಸಿತು!”

ಇಂದು ಗಗನಕ್ಕೇರುತ್ತಿರುವ ಆತ್ಮಹತ್ಯೆಯ ಪ್ರಮಾಣಗಳಿಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಒಂದು ಕಾರಣವೇನೆಂದರೆ, ಅಂಥವರಲ್ಲಿ ತಮ್ಮ ಜೀವನಕ್ಕೆ ಯಾವುದೇ ಉದ್ದೇಶವಿಲ್ಲವೆಂಬ ಭಾವನೆಯಿರುತ್ತದೆ. ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರ್‌, ಒಂದು ಒಳ್ಳೆಯ ಜೀವನದ ನಿರೀಕ್ಷೆಯು ನಿಜವಾಗಿಯೂ ಇದೆ ಎಂಬುದನ್ನು ಗ್ರಹಿಸಲು ಅನೇಕರಿಗೆ ಸಹಾಯಮಾಡಿದೆ. ಈ ಬ್ರೋಷರಿನ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ವಿನಂತಿಸಿಕೊಳ್ಳಬಹುದು. ಇದೇ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಅಂಚೆಯ ಮೂಲಕ ಕೂಪನಿನ ಮೇಲೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ ಪುಟ 5ರಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು. (g01 10/8)

ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? ಎಂಬ ಬ್ರೋಷರ್‌ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.