ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಳೇ ಪೇಪರ್‌ ಅಂಗಡಿಯಲ್ಲಿ ಕಾಣಸಿಕ್ಕಿತು

ಹಳೇ ಪೇಪರ್‌ ಅಂಗಡಿಯಲ್ಲಿ ಕಾಣಸಿಕ್ಕಿತು

ಹಳೇ ಪೇಪರ್‌ ಅಂಗಡಿಯಲ್ಲಿ ಕಾಣಸಿಕ್ಕಿತು

ಭಾರತದ ಚೆನ್ನೈಯಲ್ಲಿರುವ ತಮಿಳು ಭಾಷೆಯನ್ನಾಡುವ ಒಬ್ಬ ಯುವಕನಿಗೆ, ಎಚ್ಚರ! ಪತ್ರಿಕೆಯ 1999, ಆಗಸ್ಟ್‌ 8ರ ಪ್ರತಿಯು ಕಾಣಸಿಕ್ಕಿತು. ಆ ಪತ್ರಿಕೆಯನ್ನು ಮತ್ತು ಅವನ ಕೈಗೆ ಸಿಕ್ಕಿದ ಬೇರೆ ಪ್ರತಿಗಳನ್ನು ಪರೀಕ್ಷಿಸಿದ ನಂತರ, ಅವನು ಯೆಹೋವನ ಸಾಕ್ಷಿಗಳ ಭಾರತದ ಬ್ರಾಂಚ್‌ ಆಫೀಸಿಗೆ ಪತ್ರ ಬರೆಯುತ್ತಾ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದನು.

“ಎಚ್ಚರ! ಪತ್ರಿಕೆಯು ಒಂದು ಅತ್ಯುತ್ಕೃಷ್ಟ ಪತ್ರಿಕೆಯಾಗಿದ್ದು, ಮಾಹಿತಿ ನೀಡುವಂಥದ್ದೂ ತುಂಬ ಉಪಯುಕ್ತವೂ ಆಗಿದೆ. ಅದರಲ್ಲಿ ಕೊಡಲ್ಪಟ್ಟಿರುವ ವಿಷಯಗಳು ತುಂಬ ಸಹಾಯಕಾರಿಯಾಗಿವೆ. ಅಭಿನಂದನೆಗಳು!”

ತದನಂತರ ಆ ಯುವಕನು ಈ ವಿನಂತಿಯನ್ನು ಮಾಡಿದನು: “ಲೋಕದ ಮೂಲೆಮೂಲೆಗೂ ತಲಪುವ ಈ ಮಾಹಿತಿಭರಿತ ಪತ್ರಿಕೆಯು, ನನ್ನ ವೈಯಕ್ತಿಕ ಲೈಬ್ರರಿಯ ಭಾಗವೂ ಆಗಿರಬೇಕೆಂದು ನಾನು ಬಯಸುತ್ತೇನೆ. ಇಷ್ಟರ ವರೆಗೆ ಪ್ರಕಾಶಿಸಲ್ಪಟ್ಟಿರುವ ಪತ್ರಿಕೆಗಳನ್ನು ಓದಿದ ನಂತರ, ಮುಂದಿನ ಸಂಚಿಕೆಗಳನ್ನು ನಾನು ಪಡೆಯಲು ಬಯಸುತ್ತೇನೆ.”

ಎಚ್ಚರ! ಪತ್ರಿಕೆಯ ನಾಲ್ಕನೆಯ ಪುಟದಲ್ಲಿ ವಿವರಿಸಲ್ಪಟ್ಟಿರುವಂತೆ, ಇದು ಅನೇಕ ವಿಷಯಗಳ ಮೇಲೆ ಜ್ಞಾನೋದಯವನ್ನು ಒದಗಿಸುತ್ತದೆ. ಆದರೆ, ಅಲ್ಲಿ ಕೊಡಲ್ಪಟ್ಟಿರುವ ಉದ್ದೇಶವು ಹೀಗೂ ತಿಳಿಸುತ್ತದೆ: “ಅತಿ ಪ್ರಾಮುಖ್ಯವಾಗಿ, ಸದ್ಯದ ದುಷ್ಟ, ನ್ಯಾಯರಹಿತ ವಿಷಯಗಳ ವ್ಯವಸ್ಥೆಯನ್ನು ಇನ್ನೇನು ಸ್ಥಾನಾಂತರಿಸಲಿಕ್ಕಿರುವ, ಶಾಂತಿಯ ಮತ್ತು ಭದ್ರ ನೂತನ ಲೋಕವೊಂದರ ನಿರ್ಮಾಣಿಕನ ವಾಗ್ದಾನದಲ್ಲಿ ಈ ಪತ್ರಿಕೆಯು ಭರವಸೆಯನ್ನು ಸ್ಥಾಪಿಸುತ್ತದೆ.”

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರು, ದೇವರ ಉದ್ದೇಶವನ್ನು ಎತ್ತಿತೋರಿಸುತ್ತಾ, ಆತನ ಮೆಚ್ಚುಗೆಯನ್ನು ಗಳಿಸಲು ನಾವೇನು ಮಾಡಬೇಕೆಂಬುದರ ಕುರಿತು ಬೈಬಲಿನಿಂದ ಮಾಹಿತಿಯನ್ನು ಒದಗಿಸುತ್ತದೆ. ಈ ಬ್ರೋಷರಿನ ಕುರಿತಾದ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ವಿನಂತಿಸಿಕೊಳ್ಳಬಹುದು. ಇದೇ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಅಂಚೆಯ ಮೂಲಕ ಕೂಪನಿನ ಮೇಲೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು.(g02 2/8)

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.