ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ತಿಳಿದಿದೆಯೊ?

ನಿಮಗೆ ತಿಳಿದಿದೆಯೊ?

ನಿಮಗೆ ತಿಳಿದಿದೆಯೊ?

(ಈ ಪ್ರಶ್ನಮಾಲೆಗೆ ಉತ್ತರಗಳನ್ನು, ಕೊಡಲ್ಪಟ್ಟಿರುವ ಬೈಬಲ್‌ ವಚನಗಳ ಉಲ್ಲೇಖಗಳಲ್ಲಿ ಕಂಡುಕೊಳ್ಳಬಹುದು, ಮತ್ತು ಉತ್ತರಗಳ ಇಡೀ ಪಟ್ಟಿಯನ್ನು 16ನೆಯ ಪುಟದಲ್ಲಿ ಮುದ್ರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ “ಶಾಸ್ತ್ರಗಳ ಕುರಿತಾದ ಒಳನೋಟ” [ಇಂಗ್ಲಿಷ್‌] ಎಂಬ ಪ್ರಕಾಶನವನ್ನು ನೋಡಿ.)

1. ಯೆಹೋವನ ದಿನದಲ್ಲಿ ಬೆಳ್ಳಿಬಂಗಾರದ ವಿಗ್ರಹಗಳನ್ನು ಇಲಿಕಣ್ಣುಕಪಟಗಳಿಗೆ ಬಿಸಾಡುವುದರ ಕುರಿತಾಗಿ ಯೆಶಾಯನು ಮಾತಾಡುವುದೇಕೆ? (ಯೆಶಾಯ 2:⁠20)

2. ತಮ್ಮ ಹೊಲಗಳ ಮೂಲೆಗಳಲ್ಲಿರುವುದನ್ನೆಲ್ಲಾ ಕೊಯ್ಯಬಾರದೆಂದು ಇಸ್ರಾಯೇಲ್ಯರಿಗೆ ಹೇಳಲಾಗಿತ್ತೇಕೆ? (ಯಾಜಕಕಾಂಡ 19:⁠9)

3. ಒಬ್ಬ ಮನುಷ್ಯನು ತನ್ನ ದಾಸನ ಕಣ್ಣನ್ನು ನಷ್ಟಪಡಿಸಿದರೆ ಅಥವಾ ಹಲ್ಲನ್ನು ಉದುರಿಸಿದರೆ, ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಏನು ಮಾಡಬೇಕಾಗಿತ್ತು? (ವಿಮೋಚನಕಾಂಡ 21:​26, 27)

4. ಹತ್ಯೆಮಾಡಿದವನೊಬ್ಬನು ಯಾವಾಗ ಮಾತ್ರ ಆಶ್ರಯನಗರದಿಂದ ಹೊರಬರಬಹುದಿತ್ತು? (ಅರಣ್ಯಕಾಂಡ 35:⁠25)

5. ಕೊರ್ನೇಲ್ಯನು ದೇವರಿಗೆ ಪ್ರಾರ್ಥನೆ ಮಾಡುವುದಕ್ಕೂ, ಪೇತ್ರನು ಅವನನ್ನು ಭೇಟಿಮಾಡಲು ಬರುವುದಕ್ಕೂ ನಡುವಿನ ಸಮಯದ ಅಂತರ ಎಷ್ಟಾಗಿತ್ತು? (ಅ. ಕೃತ್ಯಗಳು 10:​30-33)

6. ‘ಭೇದಗಳನ್ನೂ ವಿಘ್ನಗಳನ್ನೂ ಉಂಟುಮಾಡುವವರ’ ವಿಷಯದಲ್ಲಿ ಯಾವ ಕ್ರಮಕೈಗೊಳ್ಳಬೇಕೆಂದು ಪೌಲನು ಹೇಳುತ್ತಾನೆ? (ರೋಮಾಪುರ 16:⁠17)

7. ಯೋಬನು ತನ್ನ ಸಮಗ್ರತೆಯನ್ನು ರಾಜಿಮಾಡಿಕೊಳ್ಳುವಂತೆ ಮಾಡಲು ಸೈತಾನನು ಪ್ರಯತ್ನಿಸಿದಾಗ, ಯೋಬನ ಆರೋಗ್ಯವನ್ನು ಅವನು ಹೇಗೆ ಬಾಧಿಸಿದನು? (ಯೋಬ 2:⁠7)

8. ಇಸ್ರಾಯೇಲ್ಯರು ಮೊತ್ತಮೊದಲ ಬಾರಿ ಮನ್ನವನ್ನು ತಿಂದಾಗ ಮತ್ತು ಸಬ್ಬತ್‌ ನಿಯಮವು ಮೊದಲ ಬಾರಿ ಜಾರಿಗೆ ತರಲ್ಪಟ್ಟಾಗ ಅವರು ಎಲ್ಲಿದ್ದರು? (ವಿಮೋಚನಕಾಂಡ 16:⁠1)

9. ಏಹೂದನು ಮೋವಾಬ್ಯರ ಅರಸನಾದ ಎಗ್ಲೋನನನ್ನು ಹೇಗೆ ಕೊಂದನು? (ನ್ಯಾಯಸ್ಥಾಪಕರು 3:⁠16)

10. ಯೋಹಾನನು ಸಂದೇಶಗಳನ್ನು ಕಳುಹಿಸಿದಂಥ ಏಳು ಸಭೆಗಳು ಯಾವ ರೋಮನ್‌ ಪ್ರಾಂತದಲ್ಲಿದ್ದವು? (ಪ್ರಕಟನೆ 1:⁠4)

11. ಯೇಸುವನ್ನು ಹೆಚ್ಚಾಗಿ ಯಾವ ಪ್ರಾಣಿಯೊಂದಿಗೆ ಜೋಡಿಸಲಾಗುತ್ತದೆ, ಮತ್ತು ಏಕೆ? (ಯೋಹಾನ 1:⁠29)

12. ನೆಲದಿಂದ ಭಿನ್ನವಾಗಿ ಗುರುತಿಸಲಾಗಿರುವ ಭೂಮಿಯ ನೀರನ್ನು ಸಾಮೂಹಿಕವಾಗಿ ಸೂಚಿಸಲು ಯಾವ ಪದವನ್ನು ಉಪಯೋಗಿಸಲಾಗಿದೆ? (ಹಬಕ್ಕೂಕ 2:⁠14)

13. ನಾವೆಯೊಳಗೆ ನೀರು ಬರದಂತೆ ನೋಹನು ಯಾವ ಸಾಮಗ್ರಿಯನ್ನು ಬಳಸಿದನು? (ಆದಿಕಾಂಡ 6:⁠14)

14. ಕ್ರಿಸ್ತನು ಸಿಂಹಾಸನಾರೂಢನಾದ ಬಳಿಕ ಸ್ವರ್ಗದಲ್ಲಿ ಏನು ನಡೆಯಿತು? (ಪ್ರಕಟನೆ 12:⁠7)

15. ತನ್ನ ಕೊನೆ ಪಸ್ಕಾಚರಣೆಗೆ ಸಿದ್ಧತೆಗಳನ್ನು ಮಾಡಲು ಯೇಸು ಯಾವ ಇಬ್ಬರು ಶಿಷ್ಯರನ್ನು ಕಳುಹಿಸಿದನು? (ಲೂಕ 22:​7-13)

16. ಯೇಸು ಯಾವ ಪ್ರಾಣಿಯ ಮೇಲೆ ಸವಾರಿ ಮಾಡಿ ಯೆರೂಸಲೇಮಿನೊಳಗೆ ವಿಜಯೋತ್ಸಾಹದಿಂದ ಪ್ರವೇಶಿಸುವನೆಂದು ಮುಂತಿಳಿಸಲಾಗಿತ್ತು? (ಜೆಕರ್ಯ 9:⁠9)

17. ಸೋಮಾರಿಗಳಿಗೆ ಯಾವ ಕೀಟದ ಮಾರ್ಗಗಳನ್ನು ಅನುಕರಿಸುವಂತೆ ಬುದ್ಧಿಹೇಳಲಾಗಿದೆ? (ಜ್ಞಾನೋಕ್ತಿ 6:⁠6)

18. ಯೇಸುವನ್ನು ರಕ್ಷಿಸುವ ಪ್ರಯತ್ನದಲ್ಲಿ ಪೇತ್ರನು ತನ್ನ ಕತ್ತಿಯನ್ನು ಬಳಸಿದಾಗ ಏನು ಫಲಿಸಿತು? (ಯೋಹಾನ 18:⁠10)

19. ಸಂಪ್ರದಾಯಬದ್ಧವಾಗಿ ಕಲುಷಿತರಾಗದಂತೆ ಫರಿಸಾಯರು ಯಾವ ಕೀಟವನ್ನು ಸೋಸಿ ತೆಗೆಯಲು ಬಹಳಷ್ಟು ಜಾಗ್ರತೆ ವಹಿಸುತ್ತಿದ್ದರು? (ಮತ್ತಾಯ 23:24)

20. ಯೆಹೋವನಿಗಿಂತಲೂ ಹೆಚ್ಚಾಗಿ ತನ್ನ ಮಕ್ಕಳನ್ನು ಗೌರವಿಸಿದ್ದಕ್ಕಾಗಿ ಯಾರನ್ನು ಜ್ಞಾಪಿಸಿಕೊಳ್ಳಲಾಗುತ್ತದೆ? (1 ಸಮುವೇಲ 2:​22, 29) (g02 4/8)

ಪ್ರಶ್ನಮಾಲೆಗೆ ಉತ್ತರಗಳು

1. ಏಕೆಂದರೆ ಅಂಥ ವಿಗ್ರಹಗಳು ಕತ್ತಲೆ ಮತ್ತು ಅಶುದ್ಧತೆಯ ಸ್ಥಳಕ್ಕೇ ಅರ್ಹವಾಗಿವೆ ಹೊರತು ಮಾನ ಮತ್ತು ಪ್ರತಿಷ್ಠೆಯ ಸ್ಥಳಕ್ಕಲ್ಲ

2. ಬಾಧಿತರು ಮತ್ತು ಪರದೇಶಸ್ಥರಿಗೆ ಹಕ್ಕಲಾಯಲು ಏನಾದರೂ ಇರಲಿಕ್ಕಾಗಿಯೇ

3. ದಾಸನನ್ನು ಬಿಡುಗಡೆಮಾಡಬೇಕಿತ್ತು

4. ಮಹಾ ಯಾಜಕನು ಸತ್ತಾಗ

5. ನಾಲ್ಕು ದಿನ

6. ಅವರನ್ನು ಗುರುತಿಟ್ಟು, ಬಿಟ್ಟು ತೊಲಗಿ ಹೋಗಬೇಕು

7. ಯೋಬನ ಇಡೀ ದೇಹವನ್ನು ಆವರಿಸಿದಂಥ ಕೆಟ್ಟಕುರುಗಳನ್ನು ಹುಟ್ಟಿಸುವ ಮೂಲಕ ಅವನನ್ನು ಬಾಧಿಸಿದನು

8. ಸೀನೆಂಬ ಅರಣ್ಯದಲ್ಲಿ

9. ಇಬ್ಬಾಯಿಕತ್ತಿಯಿಂದ

10. ಆಸ್ಯಸೀಮೆಯಲ್ಲಿ

11. ಕುರಿಮರಿ. ಯೇಸುವಿನ ಯಜ್ಞಾರ್ಪಿತ ಪಾತ್ರದಿಂದಾಗಿ

12 .ಸಮುದ್ರ

13. ರಾಳ

14. ಸೈತಾನನನ್ನು ಪರಲೋಕದಿಂದ ಹೊರದಬ್ಬುವುದರಲ್ಲಿ ಫಲಿಸಿದ ಒಂದು ಯುದ್ಧ

15. ಪೇತ್ರ ಮತ್ತು ಯೋಹಾನ

16. ಒಂದು ಕತ್ತೆಮರಿ

17.ಇರುವೆ

18. ಮಹಾಯಾಜಕನ ಆಳಾಗಿದ್ದ ಮಲ್ಕನ ಬಲಗಿವಿಯು ಕತ್ತರಿಸಲ್ಪಟ್ಟಿತು

19. ಸೊಳ್ಳೆ

20. ಮಹಾಯಾಜಕನಾದ ಏಲಿ