ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹಗಳನ್ನು ಕಾಪಾಡಲು ಸಹಾಯಮಾಡಬಲ್ಲ ಒಂದು ಪುಸ್ತಕ

ವಿವಾಹಗಳನ್ನು ಕಾಪಾಡಲು ಸಹಾಯಮಾಡಬಲ್ಲ ಒಂದು ಪುಸ್ತಕ

ವಿವಾಹಗಳನ್ನು ಕಾಪಾಡಲು ಸಹಾಯಮಾಡಬಲ್ಲ ಒಂದು ಪುಸ್ತಕ

ಲೆಸ್ಲೀ ಎಂಬ ಸ್ತ್ರೀಗೆ,  ಅಮೆರಿಕದ ಲೂಯ್ಸಿಯಾನದಲ್ಲಿ ಕಳೆದ ವರ್ಷ ಟೂಲೇನ್‌ ವಿಶ್ವವಿದ್ಯಾನಿಲಯದ ಪ್ರತಿನಿಧಿಯಿಂದ ಒಂದು ಫೋನ್‌ ಕರೆ ಬಂತು. ಟೂಲೇನ್‌ ಮತ್ತು ಇನ್ನೊಂದು ವಿಶ್ವವಿದ್ಯಾನಿಲಯವು ಲೂಯ್ಸಿಯಾನದಲ್ಲಿ ನೂತನ ವಿವಾಹಜೊತೆಗಳ ವಿಷಯದಲ್ಲಿ ಒಂದು ಸಮೀಕ್ಷೆಯನ್ನು ನಡೆಸುತ್ತಿರುವುದಾಗಿ ಆ ಪ್ರತಿನಿಧಿ ಹೇಳಿದರು.

ಆ ಸಮೀಕ್ಷೆಯಲ್ಲಿ ಭಾಗವಹಿಸಲು ಒಪ್ಪಿದ ಲೆಸ್ಲೀ ಪ್ರಶ್ನಾವಳಿ ಪತ್ರವನ್ನು ಪಡೆದು, ಅದನ್ನು ತುಂಬಿಸಿ, ಕುಟುಂಬ ಸಂತೋಷದ ರಹಸ್ಯ ಪುಸ್ತಕದ ಒಂದು ಪ್ರತಿಯೊಂದಿಗೆ ಹಿಂದೆ ಕಳುಹಿಸಿದಳು. ತಾನೂ ತನ್ನ ಗಂಡನೂ ಯೆಹೋವನ ಸಾಕ್ಷಿಗಳೆಂದೂ, ತಮ್ಮ ವಿವಾಹಕ್ಕೆ ಸಿದ್ಧತೆಯ ರೂಪದಲ್ಲಿ ತಾವಿಬ್ಬರೂ ಈ ಪುಸ್ತಕವನ್ನು ಅಧ್ಯಯನ ಮಾಡಿದ್ದೆವೆಂದೂ ಆಕೆ ತಿಳಿಸಿದಳು.

ಕೆಲವು ವಾರಗಳ ತರುವಾಯ, ಆ ಯೋಜನೆಯ ನಿರ್ದೇಶಕನಿಂದ ಬಂದ ಪತ್ರ ಲೆಸ್ಲೀಗೆ ಸಿಕ್ಕಿತು. ಅದರಲ್ಲಿ ಅವರು ಬರೆದುದು: “ವಿವಾಹಗಳು ಬಲವಾಗಿಯೂ ಆರೋಗ್ಯಕರವಾಗಿಯೂ ಇರುವಂತೆ ಮಾಡಲು ನಿಮ್ಮ ಮತ್ತು ನಿಮ್ಮ ಗಂಡನಂತಹ ದಂಪತಿಗಳು ನಮಗೆ ಕಲಿಸಬಲ್ಲಿರಿ ಎಂಬ ವಿಷಯದಲ್ಲಿ ನಾವು ಅತಿ ಆಶಾಭರಿತರಾಗಿದ್ದೇವೆ. ನೀವು ವಿಭಿನ್ನ ಹಿನ್ನೆಲೆಗಳಿಂದ ಬಂದವರಾಗಿರುವ ನಿಜತ್ವವು ಪ್ರಾಮುಖ್ಯ, ಏಕೆಂದರೆ ಇದು ಅನೇಕವೇಳೆ ವಿವಾಹದ ಮೇಲೆ ಒತ್ತಡವನ್ನು ತರುತ್ತದೆ. ಆದರೆ ವಿವಾಹಕ್ಕೆ ನೀವು ಮಾಡಿರುವ ಸಿದ್ಧತೆ, ಅದರಲ್ಲೂ ನೀವು ಕಳುಹಿಸಿದ ಪುಸ್ತಕಗಳಂಥ ವಿಷಯಗಳಿಂದ ನೀವು ಮಾಡಿರುವ ಸಿದ್ಧತೆಯು, ಎದ್ದು ಬರುವ ಯಾವುದೇ ಭಿನ್ನಭೇದಗಳನ್ನು ನಿಭಾಯಿಸಲು ನಿಮಗೆ ಅವಕಾಶವನ್ನು ಕೊಡುವುದು. ಮತ್ತು ನಿಜವಾಗಿಯೂ, ವಿವಾಹಕ್ಕಿರುವ ಧಾರ್ಮಿಕ ಅಸ್ತಿವಾರವು ಅತಿ ಪ್ರಾಮುಖ್ಯವಾದ ವಿಷಯ. ದೃಢವಾದ ನಂಬಿಕೆ ಮತ್ತು ದೇವರಿಂದ ಬರುವ ಸಹಾಯದ ಮೇಲೆ ಭರವಸೆಯಲ್ಲಿ ಪಾಲಿಗರಾಗಿರುವ ನೀವಿಬ್ಬರೂ ಭಾಗ್ಯಶಾಲಿಗಳೇ ಸರಿ.

“ನೀವು ಕಳುಹಿಸಿದ ಪುಸ್ತಕ ನನ್ನ ಮೇಜಿನ ಮೇಲಿದೆ, ಮತ್ತು ಈಗ, ನನ್ನ ವಿದ್ಯಾರ್ಥಿಗಳು ವಿವಾಹದ ವಿಚಾರದಲ್ಲಿ ಸಲಹೆಯನ್ನು ಕೇಳುವಾಗ ನಾನು ಅದನ್ನು ಅವರಿಗೆ ತೋರಿಸುತ್ತೇನೆ. ನಾನು ಈ ಪುಸ್ತಕವನ್ನು ಹಿಂದೆಂದೂ ನೋಡಿರಲಿಲ್ಲ ಮತ್ತು ಅದು ನಿಜವಾಗಿಯೂ ಅದ್ಭುತಕರವಾಗಿದೆ.”

ನೀವೂ ಈ ಪುಸ್ತಕವನ್ನು ಅತಿ ಪ್ರಯೋಜನಕರವಾದುದಾಗಿ ಕಂಡುಕೊಳ್ಳುವಿರೆಂದು ನಮ್ಮ ನಂಬಿಕೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿರುವ ಕೂಪನನ್ನು ತುಂಬಿಸಿ, ಕೂಪನಿನಲ್ಲಿರುವ ವಿಳಾಸಕ್ಕಾಗಲಿ, ಈ ಪತ್ರಿಕೆಯ ಪುಟ 5ರಲ್ಲಿರುವ ತಕ್ಕ ವಿಳಾಸಕ್ಕಾಗಲಿ ಕಳುಹಿಸಿರಿ. ಈ ಪುಸ್ತಕದಲ್ಲಿ ನಿಮಗೆ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಕುಟುಂಬ ಜೀವನವು ಸೃಷ್ಟಿಕರ್ತನು ಉದ್ದೇಶಿಸಿದ ಹಾಗೆ ಸಂತೋಷಕರವಾಗಿರಲು ಸಹಾಯಕರವಾದ ನಿರ್ದಿಷ್ಟ ಸೂಚನೆಗಳು ದೊರೆಯುವುವು. (g02 4/22)

ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.