ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ತುಟಿಯೋದುವ ವಿಧ

ಅವರು ತುಟಿಯೋದುವ ವಿಧ

ಅವರು ತುಟಿಯೋದುವ ವಿಧ

ಬ್ರಿಟನ್‌ನಲ್ಲಿರುವ ಎಚ್ಚರ! ಲೇಖಕರಿಂದ

ಒಂದು ಸಾರ್ವಜನಿಕ ಉದ್ಯಾನವನದಲ್ಲಿ ಇಬ್ಬರು ಸಂದೇಹಾಸ್ಪದ ಭಯೋತ್ಪಾದಕರು ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಚಿತ್ರೀಕರಿಸಲಾಯಿತು. ಅವರು ಮಾತನಾಡಿದ್ದನ್ನು ಕೇಳಿಸಿಕೊಳ್ಳಲು ಅಸಾಧ್ಯವಾಗಿತ್ತಾದರೂ ಪೊಲೀಸರು ಅವರನ್ನು ಬಂಧಿಸಿದರು, ಹಾಗೂ ಮುಂದಿನ ಅನೇಕ ವರ್ಷಗಳ ಸೆರೆವಾಸದ ತೀರ್ಪು ಅವರಿಗೆ ವಿಧಿಸಲ್ಪಟ್ಟಿತು. ಅವರ ಚಿತ್ರೀಕರಿಸಲ್ಪಟ್ಟ ಸಂಭಾಷಣೆಯು, ಬ್ರಿಟನ್‌ನವರ ಪರಿಣತ ಸಾಕ್ಷಿಯೆಂದೂ ಬ್ರಿಟಿಷ್‌ ಪೊಲೀಸರ “ತೀಕ್ಷ್ಣ ರಹಸ್ಯಾಸ್ತ್ರ”ವೆಂದೂ ಅಂಗೀಕರಿಸಲ್ಪಟ್ಟಿರುವ ತುಟಿಯೋದುವಂಥ ಒಬ್ಬ ವ್ಯಕ್ತಿಯಿಂದ ಓದಲ್ಪಟ್ಟಿತು.

ತುಟಿಯೋದುವ ಕೌಶಲವನ್ನು ಹೆಚ್ಚಾಗಿ ತಿಳಿಯಲಿಕ್ಕಾಗಿ ನಾನು ಮೈಕ್‌ ಮತ್ತು ಕ್ರಿಸ್ಟೀನಳನ್ನು ನೋಡಲು ಹೋದೆ. ಕ್ರಿಸ್ಟೀನ ತನ್ನ 3 ವರ್ಷ ಪ್ರಾಯದಿಂದ ಕಿವುಡಿಯಾಗಿದ್ದಾಳೆ. ನಂತರ ಅವಳು ಕಿವುಡರ ಶಾಲೆಯಲ್ಲಿ ತುಟಿಯೋದುವುದನ್ನು ಕಲಿತಳು. ಮೈಕ್‌ ತುಟಿಯೋದುವುದನ್ನು ಸ್ವತಃ ಕಲಿತು, ಕ್ರಿಸ್ಟೀನಳನ್ನು ಮದುವೆಯಾದ ನಂತರ ಆ ಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಂಡಿದ್ದನು.

ತುಟಿಯೋದುವದು ಎಷ್ಟು ಕಷ್ಟಕರ? “ನೀವು ತುಟಿ, ನಾಲಿಗೆ, ಕೆಳದವಡೆಯ ಆಕಾರ ಮತ್ತು ಚಲನೆಯ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಬೇಕು” ಎಂದು ಮೈಕ್‌ ಹೇಳಿದನು. ಮತ್ತು ಕ್ರಿಸ್ಟೀನ ಕೂಡಿಸಿದ್ದು: “ವ್ಯಕ್ತಿಯೊಬ್ಬನು ನಿಮ್ಮೊಟ್ಟಿಗೆ ಮಾತನಾಡುವಾಗ ಅವನನ್ನು ತೀವ್ರ ಗಮನಕೊಟ್ಟು ನೋಡಿರಿ. ನಿಮ್ಮ ತುಟಿಯೋದುವ ಸಾಮರ್ಥ್ಯವು ಬೆಳೆಯುತ್ತಿರುವಾಗ, ನೀವು ಮುಖಭಾವ ಮತ್ತು ದೇಹಭಾಷೆಗೂ ನಿಕಟ ಗಮನಕೊಡುತ್ತೀರಿ.”

ಉಚ್ಚ ಸ್ವರದಲ್ಲಿ ಮಾತಾಡುವುದು ಅಥವಾ ವಿಪರೀತವಾಗಿ ತುಟಿಯನ್ನು ಚಲಿಸುವುದು, ಮಾತನಾಡುತ್ತಿರುವ ವ್ಯಕ್ತಿಯು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆಯೆಂಬುದು ನನಗೆ ತಿಳಿದುಬಂದಿದೆ. ಅಂತಹ ವಿಕೃತ ಅಭಿನಯಗಳು ಗಲಿಬಿಲಿಯನ್ನು ಉಂಟುಮಾಡಸಾಧ್ಯವಿದೆ ಮತ್ತು ಅದರ ಮೂಲ ಉದ್ದೇಶವನ್ನೇ ಹಾಳುಮಾಡಸಾಧ್ಯವಿದೆ. ಒಮ್ಮೆ ಈ ತುಟಿಯೋದುವಿಕೆಯ ಕಲೆಯಲ್ಲಿ ಪರಿಣತಿಯನ್ನು ಪಡೆದ ಬಳಿಕ, ಅದನ್ನು ಮಾಡುವವನು ಪ್ರಾದೇಶಿಕ ಉಚ್ಚರಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಆದರೆ ಇದೆಲ್ಲಾ ಅಷ್ಟು ಸುಲಭವಲ್ಲ! ತುಟಿಯೋದುವುದನ್ನು ಕಲಿಸುವುದರಲ್ಲಿ ವಿಶೇಷ ತರಬೇತಿಯನ್ನು ಕೊಡುವ, ಹಿಯರಿಂಗ್‌ ಕನ್ಸರ್ನ್‌ ಎಂಬ ಸಂಸ್ಥೆಯು ಸ್ಪಷ್ಟವಾಗಿ ಹೇಳುವುದು: “ತುಟಿಯೋದುವಿಕೆಗೆ ಅಭ್ಯಾಸ, ಅಭ್ಯಾಸ ಮತ್ತು ಹೆಚ್ಚಿನ ಅಭ್ಯಾಸವು ಆವಶ್ಯಕ.”

ಬಸ್‌ ಅಥವಾ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿರುವಾಗ, ತಾನು ಅಪ್ರಜ್ಞಾಪೂರ್ವಕವಾಗಿ ಒಂದು ಸಂಭಾಷಣೆಗೆ “ಗಮನಕೊಡುತ್ತಿರುವುದು” ತನ್ನ ಅರಿವಿಗೆ ಬಂದಾಗ ಅದು ಪೇಚಾಟವನ್ನುಂಟುಮಾಡಿದೆ ಎಂಬುದನ್ನು ಕ್ರಿಸ್ಟೀನ ಒಪ್ಪಿಕೊಳ್ಳುತ್ತಾಳೆ. ಅಂಥ ಸಮಯದಲ್ಲಿ ಅವಳು ಮಾಡಸಾಧ್ಯವಿರುವುದು, ತತ್‌ಕ್ಷಣ ಬೇರೆ ಕಡೆಗೆ ದೃಷ್ಟಿಹರಿಸುವುದೇ ಆಗಿದೆ. ಆದರೆ ಅವಳ ಈ ಸಾಮರ್ಥ್ಯವು ಒಂದು ಸಂರಕ್ಷಣೆಯಾಗಿರಸಾಧ್ಯವಿದೆ. ಕ್ರಿಸ್ಟೀನ ಟಿವಿಯಲ್ಲಿ ಈಗ ಕಾಲ್ಚೆಂಡಾಟವನ್ನು ನೋಡುವುದಿಲ್ಲ. ಏಕೆಂದರೆ ಕೆಲವು ಆಟಗಾರರ ಮಾತನ್ನು ನೋಡುವಾಗ, ಅನೇಕ ಬಾರಿ ಅವಳಿಗೆ ಜಿಗುಪ್ಸೆ ಉಂಟಾಗುತ್ತದೆ.

ಬ್ರಿಟಿಷ್‌ ಪೊಲೀಸರ “ರಹಸ್ಯಾಸ್ತ್ರ”ದ ಕೌಶಲವನ್ನು ಕೇವಲ ಕೆಲವರು ಮಾತ್ರ ಅರಿತಿದ್ದಾರೆ. ಆದರೆ ತೀಕ್ಷ್ಣ ಶ್ರವಣಶಕ್ತಿಯನ್ನು ಕಳೆದುಕೊಳ್ಳುವಾಗ, ಸರಳ ತುಟಿಯೋದುವಿಕೆಯೂ ಬೆಳೆಸಿಕೊಳ್ಳಲು ಅಮೂಲ್ಯವಾದ ಕಲೆಯಾಗಿರಸಾಧ್ಯವಿದೆ. (g02 10/08)

[ಪುಟ 31ರಲ್ಲಿರುವ ಚಿತ್ರ]

ಕ್ರಿಸ್ಟೀನ

[ಪುಟ 31ರಲ್ಲಿರುವ ಚಿತ್ರ]

ಮೈಕ್‌