ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಶಿಕ್ಷಕರು ಕಳೆದ ನಾಲ್ಕು ವರ್ಷಗಳಿಂದ ನಾನು ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದೇನೆ, ಮತ್ತು “ಶಿಕ್ಷಕರು ಇಲ್ಲದಿದ್ದಲ್ಲಿ ನಾವೇನು ಮಾಡುತ್ತಿದ್ದೆವು?” (ಏಪ್ರಿಲ್‌ - ಜೂನ್‌, 2002) ಎಂಬ ಲೇಖನಮಾಲೆಯನ್ನು ಓದಿ ನನಗೆ ಸಂತೋಷವಾಯಿತು. ಮಕ್ಕಳಲ್ಲಿ ನಾನು ಗಮನಿಸುವಂಥ ಚಿಂತಾಭರಿತ ಪ್ರವೃತ್ತಿಯು ಯಾವುದೆಂದರೆ, ಅವರಿಗೆ ಒಳ್ಳೇದು ಮತ್ತು ಕೆಟ್ಟದ್ದರ ನಡುವಣ ವ್ಯತ್ಯಾಸದ ಅರಿವು ಇಲ್ಲದಿರುವುದೇ. ಶಿಕ್ಷಕರಿಗೆ ಮತ್ತೊಂದು ಕಷ್ಟಕರ ಸಂಗತಿಯೇನೆಂದರೆ, ಮಕ್ಕಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದಕ್ಕೆ ಮೊದಲೇ ತಮ್ಮ ಹಕ್ಕುಗಳೇನೆಂಬದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದೇ. ಆದರೂ, ಬೋಧಿಸುವುದು ಒಂದು ಪ್ರತಿಫಲದಾಯಕ ಜೀವನೋದ್ಯೋಗವಾಗಿದೆ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಕಲಿಯುವುದರಲ್ಲಿ ಆಸಕ್ತರಾಗಿರುವಾಗ ಮತ್ತು ಪ್ರಗತಿಯನ್ನು ಮಾಡುತ್ತಿರುವಾಗ ಇದು ನಿಜವಾಗಿದೆ.

ಜೆ. ಕೆ., ಅಮೆರಿಕ (g02 10/22)

ಈ ಲೇಖನಗಳಿಗಾಗಿ ತುಂಬ ಉಪಕಾರ. ಅನೇಕವೇಳೆ ನಾವು ಶಿಕ್ಷಕರಿಗಾಗಿ ತ್ಯಾಗಗಳನ್ನು ಮಾಡದಿದ್ದರೂ, ನಮಗಾಗಿ ಅವರು ಎಷ್ಟೆಲ್ಲಾ ತ್ಯಾಗಗಳನ್ನು ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವು ನನಗೆ ಸಹಾಯಮಾಡಿದವು.

ಎಸ್‌. ಎಮ್‌., ಇಟಲಿ (g02 10/22)

ನಾನು ಎಂಟು ವರ್ಷ ಪ್ರಾಯದವಳು. ಶಿಕ್ಷಕರ ಕುರಿತಾದ ನಿಮ್ಮ ಲೇಖನಗಳು, ಶಿಕ್ಷಕರು ಮಕ್ಕಳನ್ನು ತುಂಬ ಪ್ರೀತಿಸುತ್ತಾರೆ ಎಂಬುದನ್ನು ಅರಿತುಕೊಳ್ಳಲು ಸಹಾಯಮಾಡಿದವು. ಕಲಿಸುವುದು ಕಷ್ಟಕರವಾಗಿರುವಾಗಲೂ ಅವರು ಮಕ್ಕಳಿಗೆ ಕಲಿಸಲು ಇಷ್ಟಪಡುತ್ತಾರೆ. ನಾನು ನನ್ನ ಶಿಕ್ಷಕರಿಗೆ ಒಂದು ಥ್ಯಾಂಕ್ಯೂ ಕಾರ್ಡನ್ನು ಕೊಟ್ಟೆ. ಯೆಹೋವನ ಕುರಿತು ಜನರಿಗೆ ಹೇಗೆ ಕಲಿಸುವುದು ಎಂಬುದನ್ನು ನನ್ನ ನಾಲ್ಕು ವರ್ಷದ ತಂಗಿ ಮತ್ತು ನಾನು ಕಲಿಯುತ್ತಿದ್ದೇವೆ. ಕೆಲವೊಮ್ಮೆ ಹೀಗೆ ಮಾಡುವುದು ಕಷ್ಟಕರವಾಗಿರುವುದಾದರೂ ನಾವಿದನ್ನು ಮಾಡುತ್ತೇವೆ, ಏಕೆಂದರೆ ನಾವು ಜನರನ್ನು ಪ್ರೀತಿಸುತ್ತೇವೆ.

ಟಿ. ಎಮ್‌., ಅಮೆರಿಕ (g02 10/22)

ನನ್ನ ಶಿಕ್ಷಕ ಉದ್ಯೋಗವನ್ನು ಬಿಟ್ಟ ನಾಲ್ಕು ವರ್ಷಗಳ ಬಳಿಕ, ಒಬ್ಬ ವಿದ್ಯಾರ್ಥಿನಿಯು ನನಗೊಂದು ಪತ್ರ ಬರೆದಳು. ನಾನು ಅವಳಿಗೆ ಮಾಡಿದ್ದ ಸಹಾಯಕ್ಕಾಗಿ ತನ್ನ ಗಣ್ಯತೆಯನ್ನು ಅದರಲ್ಲಿ ವ್ಯಕ್ತಪಡಿಸಿದ್ದಳು. ತಾನು ಸ್ವತಃ ಮಾಡಿದ್ದ ಒಂದು ಬುಕ್‌ಮಾರ್ಕನ್ನು ಅದರೊಂದಿಗೆ ಕಳುಹಿಸಿದ್ದಳು. ಆ ಪತ್ರವನ್ನು ಪಡೆದುಕೊಂಡಾಗ ನಾನೆಷ್ಟು ಸಂತೋಷಪಟ್ಟೆ ಎಂಬುದನ್ನು ನೀವು ಊಹಿಸಿಕೊಳ್ಳಸಾಧ್ಯವಿದೆ!

ಎ. ಆರ್‌., ಸ್ಲೊವೇನಿಯ (g02 10/22)

ನಾನು ಈ ಪತ್ರಿಕೆಯನ್ನು, ನನ್ನ ಮಕ್ಕಳು ಯಾವ ಶಾಲೆಗೆ ಹೋಗುತ್ತಾರೋ ಆ ಶಾಲೆಯ ಪ್ರಾಂಶುಪಾಲರಿಗೆ ಮತ್ತು ಇಬ್ಬರು ಶಿಕ್ಷಕರಿಗೆ ಕೊಟ್ಟೆ. ಎರಡು ದಿನಗಳ ವರೆಗೆ ಕಾದಿದ್ದ ಮೇಲೆ ಅವರ ಅಭಿಪ್ರಾಯವನ್ನು ಕೇಳಲು ಹಿಂದಿರುಗಿದೆ. ಅವರು ಮಕ್ಕಳ ಹೆತ್ತವರಿಗೆ ಕೊಡಲಿಕ್ಕಾಗಿ ಸ್ಪ್ಯಾನಿಷ್‌ ಹಾಗೂ ಇಂಗ್ಲಿಷ್‌ ಭಾಷೆಯ ಇನ್ನೂ 20 ಪತ್ರಿಕೆಗಳನ್ನು ತಂದುಕೊಡುವಂತೆ ವಿನಂತಿಸಿದರು.

ಎಮ್‌. ಎಮ್‌., ಅಮೆರಿಕ (g02 10/22)

ಕಳೆದ ವರ್ಷದಲ್ಲಿ ನಾಲ್ಕು ತಿಂಗಳುಗಳ ವರೆಗೆ ನಾನು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕೆಲಸಮಾಡಿದೆ. ಹೆತ್ತವರು ತೋರಿಸುವ ಗಣ್ಯತೆಯ ಕೊರತೆಯಿಂದಾಗಿ ಶಿಕ್ಷಕರೋಪಾದಿ ತಮ್ಮ ಕೆಲಸವು ತುಂಬ ಕಷ್ಟಕರವಾಗಿ ಪರಿಣಮಿಸಿದೆ ಎಂದು, ನಾನು ಯಾರೊಂದಿಗೆ ಕೆಲಸಮಾಡುತ್ತಿದ್ದೆನೋ ಆ ಜೊತೆ ಶಿಕ್ಷಕರು ಹೇಳಿದರು. ಆದುದರಿಂದ, ಈ ಲೇಖನಮಾಲೆಯು ತಮ್ಮನ್ನೇ ಅರ್ಪಿಸಿಕೊಂಡಿರುವ ಶಿಕ್ಷಕರ ಕೆಲಸವನ್ನು ತುಂಬ ಅಮೂಲ್ಯವಾದದ್ದಾಗಿ ಪರಿಗಣಿಸುತ್ತದೆ ಎಂದು ನಿಜವಾಗಿಯೂ ಸಂತೋಷಿಸಿದೆ. ನನ್ನ ಕೆಲಸಾವಧಿಯು ಕೊನೆಗೊಂಡಾಗ, ನನ್ನ ವಿದ್ಯಾರ್ಥಿಗಳಿಂದ ನಾನು ಅನೇಕ ಥ್ಯಾಂಕ್ಯೂ ಪತ್ರಗಳನ್ನು ಪಡೆದುಕೊಂಡೆ. ಪ್ರತಿಯೊಂದು ಪತ್ರವೂ ನನಗೆ ತುಂಬ ಅಮೂಲ್ಯವಾಗಿದೆ!

ಎಸ್‌. ಐ., ಜಪಾನ್‌ (g02 10/22)

ಬಲೂನ್‌ ಹಾರಾಟ “ಗಾಳಿಯ ಜೊತೆ ಜೊತೆ” (ಏಪ್ರಿಲ್‌ - ಜೂನ್‌, 2002) ಎಂಬ ನಿಮ್ಮ ಅತ್ಯುತ್ತಮವಾದ ಲೇಖನಕ್ಕಾಗಿ ನಿಮಗೆ ತುಂಬ ಉಪಕಾರ. ಒಂದು ಬಲೂನಿನಲ್ಲಿ ಪ್ರಯಾಣಿಸುವುದು ಬಹಳ ದೀರ್ಘ ಸಮಯದಿಂದಲೂ ನನ್ನ ಮನದಾಳದ, ಆದರೆ ಈ ವರೆಗೂ ಪೂರೈಸಲ್ಪಟ್ಟಿರದ ಬಯಕೆಯಾಗಿದೆ. ನಿಮ್ಮ ಲೇಖನವು ನನಗೆ ಒಂದು ಪರಿಹಾರದಂತಿತ್ತು, ಏಕೆಂದರೆ ನಾನು ಆ ಪ್ರಯಾಣವನ್ನು ಮಾಡಲು ಹೋಗಿದ್ದೆನೋ ಎಂಬ ಅನಿಸಿಕೆ ನಿಜವಾಗಿಯೂ ನನಗಾಯಿತು! ವಾಸ್ತವದಲ್ಲಿ ಬುಟ್ಟಿಯು ಹೊರಟು ಒಂದು ಬದಿಯಿಂದ ಇನ್ನೊಂದು ಬದಿಗೆ ತೂಗಾಡುತ್ತಾ ಹೋದಂಥ “ಅನಿಸಿಕೆ” ನನಗಾಯಿತು. ಅಷ್ಟು ಮೇಲಿನಿಂದ ಜಗತ್ತು ತುಂಬ ಚಿಕ್ಕದಾಗಿ ಕಾಣಬಹುದು, ಆದರೂ ಅದು ಮತ್ತು ಮಾನವಕುಲವು ಯೆಹೋವನಿಗೆ ತುಂಬ ಪ್ರಾಮುಖ್ಯವಾದದ್ದಾಗಿದೆ.

ಎಸ್‌. ಎ., ಜರ್ಮನಿ (g02 10/22)

ಅಪರಾಧಿ ಮನೋಭಾವ “ಬೈಬಲಿನ ದೃಷ್ಟಿಕೋನ: ಅಪರಾಧಿ ಮನೋಭಾವವಿರುವುದು ಯಾವಾಗಲೂ ತಪ್ಪಾಗಿದೆಯೋ?” (ಏಪ್ರಿಲ್‌ - ಜೂನ್‌, 2002) ಎಂಬ ಲೇಖನವು ನನಗೆ ನಿಜವಾಗಿಯೂ ಅಗತ್ಯವಿತ್ತು. ನನ್ನ ಆಕಾಂಕ್ಷೆಗಳು ತುಂಬ ಉಚ್ಚವಾಗಿದ್ದುದರಿಂದ, ಪೂರ್ಣ ಸಮಯದ ಸೌವಾರ್ತಿಕ ಕೆಲಸದಲ್ಲಿ ನನ್ನ ಸಂಗಾತಿಯೊಂದಿಗೆ ವ್ಯವಹರಿಸುವಾಗ ನನ್ನ ಭಾವೋದ್ವೇಗಗಳನ್ನು ಹತ್ತಿಕ್ಕುವುದು ತುಂಬ ಕಷ್ಟಕರವೆಂದು ನನಗನಿಸುತ್ತಿತ್ತು. ಆದರೆ ಇತರರು ನಾವು ನೆನಸುವಂಥ ರೀತಿಯಲ್ಲಿ ಕೆಲಸಗಳನ್ನು ಮಾಡದಿರುವಲ್ಲಿ, ಅವರು ಅಪರಾಧಿ ಮನೋಭಾವವನ್ನು ತಾಳುವಂತೆ ಮಾಡಲು ಸತತವಾಗಿ ಪ್ರಯತ್ನಿಸುವುದು ಪ್ರೀತಿರಹಿತವಾದದ್ದೂ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುವಂಥದ್ದೂ ಆಗಿದೆ ಎಂದು ಈ ಲೇಖನವು ಸೂಚಿಸಿತು. ನನ್ನ ಹೊರನೋಟವನ್ನು ಸರಿಪಡಿಸಲು ಶಕ್ತಳಾದುದಕ್ಕಾಗಿ ನಾನು ಸಂತೋಷಿತಳಾಗಿದ್ದೇನೆ. ವಿಷಯಗಳನ್ನು ಯೆಹೋವನು ವೀಕ್ಷಿಸುವ ವಿಧಾನವನ್ನು ನಮಗೆ ಕಲಿಸುವುದನ್ನು ದಯವಿಟ್ಟು ಮುಂದುವರಿಸಿ.

ಕೆ. ಕೆ., ಜಪಾನ್‌ (g02 10/22)