ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಾನು ಇನ್ನೂ ಹೆಚ್ಚನ್ನು ತಿಳಿಯಬೇಕಾಗಿದೆ”

“ನಾನು ಇನ್ನೂ ಹೆಚ್ಚನ್ನು ತಿಳಿಯಬೇಕಾಗಿದೆ”

“ನಾನು ಇನ್ನೂ ಹೆಚ್ಚನ್ನು ತಿಳಿಯಬೇಕಾಗಿದೆ”

“ನಾನು ಅಂಚೆಯ ಮೂಲಕ ವಿನಂತಿಸಿದ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ನಿನ್ನೆ ಪಡೆದುಕೊಂಡೆ” ಎಂದು ಕಳೆದ ವರ್ಷ ಒಬ್ಬ ಸ್ತ್ರೀ ಬರೆದಳು. ಈ ಬ್ರೋಷರಿನ ಎರಡು ಜಾಹೀರಾತುಗಳನ್ನು ಮುಂಚೆಯೇ ಪಡೆದಿದ್ದೆನೆಂದು ಆಕೆ ವಿವರಿಸುತ್ತಾಳೆ. “ನಾನು ಅದಕ್ಕಾಗಿ ಕಾತುರಳಾಗಿ ನಿರೀಕ್ಷಿಸುತ್ತಿದ್ದೆ, ಏಕೆಂದರೆ ಆ ಜಾಹೀರಾತುಗಳನ್ನು ಓದಿದ ನಂತರ ನಾನು ಇನ್ನೂ ಹೆಚ್ಚನ್ನು ತಿಳಿಯಬೇಕಾಗಿದೆ ಎಂದು ನನಗನಿಸಿತು. ನಾನು ಬ್ರೋಷರನ್ನು ಪಡೆದುಕೊಂಡ ತಕ್ಷಣವೇ, ನನ್ನಿಂದ ಸಾಧ್ಯವಾದಷ್ಟು ಬೇಗನೆ ಅದನ್ನು ಓದತೊಡಗಿದೆ. ನಿಮ್ಮ ಬ್ರೋಷರಿನಲ್ಲಿರುವ ಎಲ್ಲಾ ವಿಷಯಗಳು ವಿವೇಕಯುತವಾದವೂ ಬೈಬಲ್‌ ಆಧಾರಿತವಾದವುಗಳೂ ಆಗಿವೆ,” ಎಂದು ಆಕೆ ಹೇಳಿದಳು.

“ನಾನು ಓದಿದ ವಿಷಯಗಳನ್ನು ಅನ್ವಯಿಸಿಕೊಳ್ಳಬೇಕೆಂಬ ಕಾತುರ ನನ್ನಲ್ಲುಂಟಾಗಿದೆ” ಎಂದು ಆಕೆ ಕೊನೆಗೊಳಿಸುತ್ತಾಳೆ.

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ 32 ಪುಟದ ಬ್ರೋಷರನ್ನು ಓದುವುದರಿಂದ ನೀವು ಸಹ ಪ್ರಯೋಜನ ಪಡೆಯುವಿರೆಂದು ನಾವು ನಂಬುತ್ತೇವೆ. ಈ ಬ್ರೋಷರ್‌ನಲ್ಲಿ “ಯೇಸು ಕ್ರಿಸ್ತನು ಯಾರು?” ಎಂಬ ಪರಿಣಾಮಕರ ಪಾಠದ ಜೊತೆಗೆ, “ದೇವರು ಯಾರು?,” “ಭೂಮಿಗಾಗಿ ದೇವರ ಉದ್ದೇಶವು ಏನು?” ಮತ್ತು “ದೇವರ ರಾಜ್ಯವು ಏನು?” ಎಂಬ ಪಾಠಗಳನ್ನೂ ನೀವು ಕಂಡುಕೊಳ್ಳುವಿರಿ. ಈ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಬಯಸುವುದಾದರೆ, ಇದೇ ಪುಟದಲ್ಲಿರುವ ಕೂಪನನ್ನು ಭರ್ತಿಮಾಡಿ, ಅಂಚೆಯ ಮೂಲಕ ಕೂಪನಿನ ಮೇಲೆ ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5 ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು. (g02 09/08)

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.