ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದು ಗಾಳಿಯಲ್ಲಿ ಹಾರಿಬಂತು

ಅದು ಗಾಳಿಯಲ್ಲಿ ಹಾರಿಬಂತು

ಅದು ಗಾಳಿಯಲ್ಲಿ ಹಾರಿಬಂತು

ಒಬ್ಬ ಸಭ್ಯ ವ್ಯಕ್ತಿಯು ಭಾರತದ ಮುಂಬೈ ಶಹರದ ಬೀದಿಗಳಲ್ಲಿ ನಡೆದಾಡುತ್ತಿದ್ದಾಗ ಒಂದು ಕರಪತ್ರವು ಗಾಳಿಯಲ್ಲಿ ಹಾರಿಬಂದು ಅವನ ಪಾದಗಳ ಬಳಿ ಬಿದ್ದಿತು. ಅದು, “ಹೊಸ ಸಹಸ್ರಮಾನ​—⁠ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?” ಎಂಬ ಶೀರ್ಷಿಕೆಯುಳ್ಳ ರಾಜ್ಯ ವಾರ್ತೆ ನಂ. 36ರ ಒಂದು ಪ್ರತಿಯಾಗಿತ್ತು. ವಿಷಯವು ಅವನ ಗಮನವನ್ನು ಸೆಳೆಯಿತು. ಸ್ವಲ್ಪವೂ ಸಮಯ ಹಾಳುಮಾಡದೆ ಅವನದನ್ನು ಎತ್ತಿಕೊಂಡು ಪೂರ್ತಿಯಾಗಿ ಓದಿದನು. ಅವನ ಆಸಕ್ತಿಯು ಕೆರಳಿಸಲ್ಪಟ್ಟಿತು. ಅವನಿನ್ನೂ ಹೆಚ್ಚನ್ನು ತಿಳಿಯಬಯಸಿದ್ದರಿಂದ, ಒಂದು ಬೈಬಲನ್ನು ಮತ್ತು ಇತರ ಸಾಹಿತ್ಯವನ್ನು ಕಳುಹಿಸಿಕೊಡುವಂತೆ ವಿನಂತಿಸಿದನು.

ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ಕರಪತ್ರದಲ್ಲಿ ನಂಬಿಕೆಯನ್ನು ಬಲಪಡಿಸುವಂಥ ವಿಚಾರಗಳಿವೆ. ಅನಾರೋಗ್ಯ, ಬಡತನ, ಮತ್ತು ಯುದ್ಧವನ್ನೂ ಒಳಗೊಂಡು ನಾವು ಎದುರಿಸುತ್ತಿರುವ ಸಮಸ್ಯೆಗಳು, “ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ, ಅಥವಾ ರಾಜಕೀಯದಿಂದ ತಡೆಗಟ್ಟಲು ಅಸಾಧ್ಯವಾಗಿರುವ ಗುಣಲಕ್ಷಣಗಳಾದ ಲೋಭ, ಅಪನಂಬಿಕೆ ಮತ್ತು ಸ್ವಾರ್ಥತೆಯಿಂದ” ಉಂಟಾಗಿವೆ ಎಂದು ಅದು ಸ್ಪಷ್ಟವಾಗಿ ವಿವರಿಸುತ್ತದೆ. ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ಈ ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದುಹಾಕಲಿದ್ದಾನೆಂದು ಸಹ ಕರಪತ್ರವು ತಿಳಿಸುತ್ತದೆ.

ಭವಿಷ್ಯತ್ತಿಗಾಗಿರುವ ಬೈಬಲಿನ ವಾಗ್ದಾನಗಳ ಕುರಿತು ನೀವು ಹೆಚ್ಚನ್ನು ತಿಳಿಯಬಯಸುತ್ತೀರೊ? ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ಸೇರಿಸಿ ಇತರ ಬೈಬಲ್‌ ಆಧಾರಿತ ಸಾಹಿತ್ಯಗಳನ್ನೂ ಉಪಯೋಗಿಸುತ್ತಾ ಯೆಹೋವನ ಸಾಕ್ಷಿಗಳು ಲಕ್ಷಾಂತರ ಜನರಿಗೆ ಅವರ ಮನೆಯಲ್ಲಿಯೇ ಬೈಬಲಿನ ಶಿಕ್ಷಣವನ್ನು ಒದಗಿಸುತ್ತಾರೆ. ದೇವರು ಯಾರು? ಭೂಮಿಗಾಗಿ ದೇವರ ಉದ್ದೇಶವು ಏನು? ದೇವರ ರಾಜ್ಯವು ಏನು? ನಿಮ್ಮ ಕುಟುಂಬ ಜೀವಿತವನ್ನು ಬೈಬಲ್‌ ಹೇಗೆ ಉತ್ತಮಗೊಳಿಸಸಾಧ್ಯವಿದೆ? ಮುಂತಾದ ಪ್ರಶ್ನೆಗಳನ್ನು ಈ ಬ್ರೋಷರ್‌ ಉತ್ತರಿಸುತ್ತದೆ.

ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ಏನು ಮಾಡಲಿದ್ದಾನೆ ಎಂಬುದರ ಕುರಿತು ತಿಳಿದುಕೊಳ್ಳಲು ಸಹಾಯಮಾಡುವಂತೆ ಯೆಹೋವನ ಸಾಕ್ಷಿಗಳು ನಿಮ್ಮ ಮನೆಯನ್ನು ಭೇಟಿಮಾಡಲು ನೀವು ಬಯಸುವುದಾದರೆ, ಅವರದನ್ನು ಮಾಡಲು ಸಂತೋಷಿಸುತ್ತಾರೆ ಮತ್ತು ದೇವರ ರಾಜ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ಅವರು ನಿಮಗೆ ಒದಗಿಸುತ್ತಾರೆ. ಅವರು ಹಾಗೆ ಮಾಡಸಾಧ್ಯವಾಗುವಂತೆ ಇದೇ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಅಂಚೆಯ ಮೂಲಕ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕದಾದ ವಿಳಾಸಕ್ಕೆ ಕಳುಹಿಸಬಹುದು. (g03 1/22)

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್‌ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.