ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅದು ನನ್ನ ಹೃದಯವನ್ನು ತಲಪಿತು’

‘ಅದು ನನ್ನ ಹೃದಯವನ್ನು ತಲಪಿತು’

‘ಅದು ನನ್ನ ಹೃದಯವನ್ನು ತಲಪಿತು’

ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ನೀವು ಹೇಗೆ ಪಡೆಯಸಾಧ್ಯವಿದೆ? ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್‌) ಎಂಬ ಪುಸ್ತಕದ ಮೂಲಕ ಅನೇಕರು ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಉದಾಹರಣೆಗೆ 25 ವರುಷಗಳಿಂದ ಯೆಹೋವನ ಸಾಕ್ಷಿಯಾಗಿರುವ ಒಬ್ಬಾಕೆ ಸ್ತ್ರೀಯು ತಿಳಿಸುವುದು: “ಈ ಪುಸ್ತಕವು ಒಂದು ಅತ್ಯುತ್ತಮ ಕೌಶಲದ ಕೃತಿಯಾಗಿದೆ.” ಅವಳು ಮುಂದುವರಿಸಿದ್ದು: “ಇದು ನನ್ನ ಹೃದಯದಾಳವನ್ನು ತಲಪಿತು ಮತ್ತು ಯೆಹೋವನಿಗಾಗಿ ಹಿಂದೆಂದೂ ಇರದಂಥ ಹುರುಪನ್ನು ನನ್ನಲ್ಲಿ ಕೆರಳಿಸಿತು. ಇದು ನನ್ನನ್ನು ಯೆಹೋವನ, ನನ್ನ ಗಂಡನ, ಮತ್ತು ಸಭೆಯ ಸಮೀಪಕ್ಕೆ ತಂದಿತು.”

ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್‌) ಪುಸ್ತಕವು ನಿಮಗೂ ಸಹಾಯಮಾಡಸಾಧ್ಯವಿದೆ. ಪುಸ್ತಕದ ಪೀಠಿಕೆಯು ಹೀಗೆ ತಿಳಿಸುತ್ತದೆ: “ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ರೀತಿಯಲ್ಲಿ ದೇವರ ಗುಣಗಳನ್ನು ಮತ್ತು ಮಾರ್ಗಗಳನ್ನು ತಿಳಿಯುವುದು ಅಧ್ಯಯನದ ಪ್ರಾಮುಖ್ಯ ಭಾಗವಾಗಿದೆ. ಯೆಹೋವನು ಯಾವ ರೀತಿಯಲ್ಲಿ ತನ್ನ ಪ್ರತಿಯೊಂದು ಗುಣಗಳನ್ನು ವ್ಯಕ್ತಪಡಿಸಿದ್ದಾನೆ ಎಂಬುದರ ಕುರಿತು ಮನನ ಮಾಡುವುದು, ಯೇಸು ಕ್ರಿಸ್ತನು ಯಾವ ರೀತಿಯಲ್ಲಿ ದೇವರ ಪ್ರತಿಯೊಂದು ಗುಣವನ್ನು ತನ್ನ ಜೀವನದಲ್ಲಿ ಪ್ರತಿಬಿಂಬಿಸಿದ್ದಾನೆ ಎಂಬುದನ್ನು ನೋಡುವುದು, ಮತ್ತು ನಾವು ಸಹ ಅವುಗಳನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು ಎಂಬುದನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ದೇವರ ಸಮೀಪಕ್ಕೆ ತರುತ್ತದೆ.”

ಯೆಹೋವನ ಸಮೀಪಕ್ಕೆ ಬನ್ನಿರಿ (ಇಂಗ್ಲಿಷ್‌) ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಲು ಬಯಸುವಲ್ಲಿ, ದಯವಿಟ್ಟು ಕೆಳಗೆ ಕೊಡಲ್ಪಟ್ಟಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ.(g03 3/22)

ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನನಗೆ ಕಳುಹಿಸಿಕೊಡಿ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.