ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ

ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ

ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿ

ಎಲ್ಲಾ ರೀತಿಗಳ ಲೈಂಗಿಕ ಮಾಹಿತಿಯು ಟಿ.ವಿ., ಚಲನಚಿತ್ರ, ಸಂಗೀತ ವಿಡಿಯೋ, ಮತ್ತು ಇಂಟರ್‌ನೆಟ್‌ ಮೂಲಕ ಸುಲಭವಾಗಿ ದೊರಕುತ್ತದೆ. ನಾವು ನಂಬಬೇಕೆಂದು ಅನೇಕರು ಬಯಸುವಂತೆ, ಅಶ್ಲೀಲವಾದ ಲೈಂಗಿಕತೆಯನ್ನು ಪ್ರತಿಬಿಂಬಿಸುವ ಈ ಚಿತ್ರಣಗಳ ಅವಿರತ ಆಕ್ರಮಣವು ಹಾನಿರಹಿತವಾಗಿವೆಯೋ? *

ವಯಸ್ಕರ ಮೇಲೆ ಅಶ್ಲೀಲ ಸಾಹಿತ್ಯದ ಪರಿಣಾಮಗಳು

ಅಶ್ಲೀಲ ಸಾಹಿತ್ಯದ ಪ್ರತಿವಾದಿಗಳು ಅದರ ಕುರಿತು ಏನೇ ಹೇಳಿದರೂ, ಅದು ಲೈಂಗಿಕ ಸಂಬಂಧಗಳ ಮತ್ತು ಲೈಂಗಿಕ ವರ್ತನೆಯ ಕುರಿತಾದ ಜನರ ದೃಷ್ಟಿಕೋನಗಳ ಮೇಲೆ ತೀವ್ರವಾದ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಎಂಬುದು ನಿಶ್ಚಯ. ಕುಟುಂಬ ಸಂಶೋಧನೆ ಹಾಗೂ ಶಿಕ್ಷಣಕ್ಕೆ ರಾಷ್ಟ್ರೀಯ ಅಸ್ಥಿವಾರ ಎಂಬಲ್ಲಿನ ಸಂಶೋಧಕರು ತಿಳಿಸುವುದು: “ಅಶ್ಲೀಲ ಸಾಹಿತ್ಯವನ್ನು ನೋಡುವುದು, ಸ್ವಾಭಾವಿಕವಲ್ಲದ ಲೈಂಗಿಕ ವರ್ತನೆಯನ್ನು ಬೆಳೆಸಿಕೊಳ್ಳುವ ಹೆಚ್ಚಿನ ಗಂಡಾಂತರಕ್ಕೆ ವೀಕ್ಷಕರನ್ನು ಒಳಪಡಿಸುತ್ತದೆ.” ಒಂದು ವರದಿಗನುಸಾರ, “ಅತ್ಯಾಚಾರದ ಮಿಥ್ಯೆ (ಸ್ತ್ರೀಯರೇ ಅತ್ಯಾಚಾರಕ್ಕೆ ಕಾರಣರಾಗಿದ್ದಾರೆ ಮತ್ತು ಅವರು ಅತ್ಯಾಚಾರವನ್ನು ಆನಂದಿಸುತ್ತಾರೆ ಹಾಗೂ ಅತ್ಯಾಚಾರವೆಸಗುವವರು ಸಾಮಾನ್ಯ ಸ್ಥಿತಿಯ ಜನರಾಗಿದ್ದಾರೆ ಎಂಬ ನಂಬಿಕೆ) ಎಂಬುವಂತದ್ದು, ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವ ಹವ್ಯಾಸವಿರುವ ಗಂಡಸರಲ್ಲಿ ಅತಿ ವ್ಯಾಪಕವಾಗಿದೆ.”

ಕ್ರಮವಾಗಿ ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವುದು, ಸಹಜವಾದ ವೈವಾಹಿಕ ಆಪ್ತತೆಯಲ್ಲಿ ಆನಂದಿಸುವ ಮತ್ತು ಭಾಗವಹಿಸುವ ಸಾಮರ್ಥ್ಯವನ್ನು ತಡೆಯಸಾಧ್ಯವಿದೆ ಎಂದು ಕೆಲವು ಸಂಶೋಧಕರು ತಿಳಿಸುತ್ತಾರೆ. ಸೆಕ್ಸ್‌ ವ್ಯಸನಿಗಳ ಚಿಕಿತ್ಸೆಯಲ್ಲಿ ವಿಶೇಷಜ್ಞರಾಗಿರುವ ಡಾ. ವಿಕ್ಟರ್‌ ಕ್ಲೈನ್‌ರವರು, ಅಶ್ಲೀಲ ಸಾಹಿತ್ಯದ ಉಪಯೋಗದಲ್ಲಿನ ನಿಧಾನಗತಿಯ ಬೆಳವಣಿಗೆಯನ್ನು ಗಮನಿಸಿದ್ದಾರೆ. ಒಂದುವೇಳೆ ಅದನ್ನು ಆರಂಭದಲ್ಲಿಯೇ ನಿಯಂತ್ರಿಸದಿದ್ದಲ್ಲಿ, ಯಾವುದು ಅಶ್ಲೀಲ ಸಾಹಿತ್ಯದ ಆಕಸ್ಮಿಕ ವೀಕ್ಷಣೆಯಾಗಿ ಆರಂಭವಾಯಿತೋ ಅದು ಕ್ರಮೇಣವಾಗಿ ನಿರ್ಲಜ್ಜವಾದ ಅತ್ಯಂತ ಅಶ್ಲೀಲ ಸಂಗತಿಗಳನ್ನು ನೋಡುವಷ್ಟರ ಮಟ್ಟಿಗೆ ಬೆಳೆಯಬಲ್ಲದು. ಇದು ಅಸ್ವಾಭಾವಿಕ ಲೈಂಗಿಕ ಕೃತ್ಯಗಳಿಗೆ ನಡಿಸಬಲ್ಲದ್ದು ಎಂದು ಅವರು ವಾದಿಸುತ್ತಾರೆ. ಮಾನವರ ವರ್ತನೆಯನ್ನು ಅಧ್ಯಯನ ಮಾಡುವ ವಿಜ್ಞಾನಿಗಳೂ ಇದನ್ನು ಒಪ್ಪುತ್ತಾರೆ. “ಯಾವುದೇ ರೀತಿಯ ಅಸ್ವಾಭಾವಿಕ ಲೈಂಗಿಕ ವರ್ತನೆಯು ಈ ರೀತಿ ಆರಂಭವಾಗಸಾಧ್ಯವಿದೆ . . . ಮತ್ತು ತೀವ್ರವಾದ ತಪ್ಪಿತಸ್ಥ ಭಾವನೆಗಳಿಂದಲೂ ಇದನ್ನು ತಡೆಗಟ್ಟಸಾಧ್ಯವಿಲ್ಲ” ಎಂದು ಡಾ. ಕ್ಲೈನ್‌ ವರದಿಮಾಡುತ್ತಾರೆ. ಕ್ರಮೇಣ, ವೀಕ್ಷಕನು ಅಶ್ಲೀಲವಾದ ಅನೈತಿಕ ಕಲ್ಪನೆಗಳನ್ನು ಸ್ವತಃ ಕಾರ್ಯರೂಪಕ್ಕೆ ಹಾಕಲು ಪ್ರಯತ್ನಿಸಬಹುದು. ಇದು, ಅನೇಕವೇಳೆ ಧ್ವಂಸಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.

ಈ ಸಮಸ್ಯೆಯ ಪಥವು ನಿಧಾನವಾಗಿರಬಹುದು ಮತ್ತು ಪತ್ತೆಹಚ್ಚಲಾಗದಿರಬಹುದು ಎಂದು ಕ್ಲೈನ್‌ ತಿಳಿಸುತ್ತಾರೆ. ಅವರು ಹೇಳುವುದು: “ಕ್ಯಾನ್ಸರ್‌ ರೋಗದಂತೆ ಅದು ಬೆಳೆಯುತ್ತಾ, ಹರಡುತ್ತಾ ಹೋಗುತ್ತದೆ. ಅದರ ಬೆಳವಣಿಗೆ ನಿಲ್ಲುವುದು ಬಹು ಅಪರೂಪ ಮತ್ತು ಅದಕ್ಕೆ ಚಿಕಿತ್ಸೆ ನೀಡಿ, ಗುಣಪಡಿಸುವುದು ಸಹ ಅತಿ ಕಷ್ಟಕರವಾಗಿದೆ. ಈ ಚಟಕ್ಕೆ ಬಲಿಯಾದ ಗಂಡಸು, ತಾನು ಇದಕ್ಕೆ ವ್ಯಸನಿಯಾಗಿದ್ದೇನೆಂದು ಒಪ್ಪಿಕೊಳ್ಳದೆ ಇರುವುದು ಮತ್ತು ಸಮಸ್ಯೆಯನ್ನು ಎದುರಿಸಲು ನಿರಾಕರಿಸುವುದು ಒಂದು ಸಾಮಾನ್ಯ ಹಾಗೂ ನಿರೀಕ್ಷಿಸಬಹುದಾದ ವಿಷಯವಾಗಿದೆ. ಆದುದರಿಂದ, ಇದು ಬಹುಮಟ್ಟಿಗೆ ಎಲ್ಲಾ ಸಂದರ್ಭದಲ್ಲಿ ವೈವಾಹಿಕ ತಾರತಮ್ಯಕ್ಕೆ, ಕೆಲವೊಮ್ಮೆ ವಿವಾಹ ವಿಚ್ಛೇದಕ್ಕೆ, ಆಪ್ತ ಸಂಬಂಧದ ಮುರಿಯುವಿಕೆಗೆ ನಡೆಸುತ್ತದೆ.”

ಯುವ ಜನರಿಗೆ ಸಂಭವಿಸುವ ಹಾನಿಗಳು

ಸಂಖ್ಯಾಸಂಗ್ರಹಣಗಳಿಗನುಸಾರ, 12 ಮತ್ತು 17ರ ಮಧ್ಯದ ಪ್ರಾಯದ ಹುಡುಗರು ಅಶ್ಲೀಲ ಸಾಹಿತ್ಯದ ಪ್ರಮುಖ ವೀಕ್ಷಕರಾಗಿದ್ದಾರೆ. ವಾಸ್ತವದಲ್ಲಿ, ಅನೇಕರಿಗೆ ಅಶ್ಲೀಲ ಸಾಹಿತ್ಯವೇ ಅವರ ಲೈಂಗಿಕ ಶಿಕ್ಷಣದ ಪ್ರಮುಖ ಮೂಲವಾಗಿದೆ. ಇದಕ್ಕೆ ಅತಿ ಕಳವಳಗೊಳಿಸುವ ಫಲಿತಾಂಶಗಳಿವೆ. “ಅಶ್ಲೀಲ ಸಾಹಿತ್ಯದಲ್ಲಿ ತೋರಿಸಲಾದ ನಡವಳಿಕೆಗಳಿಂದ ಯಾವುದೇ ನಕಾರಾತ್ಮಕ ಪರಿಣಾಮಗಳಿಲ್ಲ ಎಂದು ನಂಬುವಂತೆ ಮಾಡಲು, ಹದಿಹರೆಯದ ಗರ್ಭಧಾರಣೆ ಮತ್ತು ಏಡ್ಸ್‌ನಂಥ ಯಾವುದೇ ವಿಷಯಗಳನ್ನು ಅದರಲ್ಲಿ ಎಂದೂ ತೋರಿಸಲಾಗುವುದಿಲ್ಲ.”

ಕೆಲವು ಸಂಶೋಧಕರಿಗನುಸಾರ, ಅಶ್ಲೀಲ ಸಾಹಿತ್ಯವು ಮಕ್ಕಳ ಮಿದುಳಿನ ಸಾಮಾನ್ಯ ಬೆಳವಣಿಗೆಯ ಮೇಲೆಯೂ ಪ್ರಭಾವವನ್ನು ಬೀರುತ್ತದೆ. ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಜೂಡಿತ್‌ ರೈಮನ್‌ ತಿಳಿಸುವುದು: “ಅಶ್ಲೀಲ ಚಿತ್ರಗಳ ಮತ್ತು ಶಬ್ದಗಳ ಕಡೆಗೆ ಮಿದುಳಿನ ಸ್ವಾಭಾವಿಕ ಪ್ರತಿಕ್ರಿಯೆಯ ಕುರಿತಾದ ನರಶಾಸ್ತ್ರೀಯ ಆರೋಗ್ಯ ವೀಕ್ಷಣೆಗಳು ಸೂಚಿಸಿದ್ದೇನಂದರೆ ಅಶ್ಲೀಲ ಸಾಹಿತ್ಯವನ್ನು ವೀಕ್ಷಿಸುವುದು ಜೀವವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಘಟನೆಯಾಗಿದೆ. ಅಂದರೆ, ಒಂದು ವಿಷಯದ ಕುರಿತಾಗಿ ಸರಿಯಾದ ತಿಳಿವಳಿಕೆಯನ್ನು ಹೊಂದಿದ ನಂತರವೇ ಅದನ್ನು ಸ್ವೀಕರಿಸುವ ಮಿದುಳಿನ ಸಾಮರ್ಥ್ಯವನ್ನು ಅದು ಅಳಿಸಿಬಿಡುತ್ತದೆ. ಮತ್ತು ಮಿದುಳಿನ ಈ ಸಾಮರ್ಥ್ಯವನ್ನು ಅಳಿಸಿಬಿಡುವುದು, ಮಕ್ಕಳ [ಬೇಕಾದ ಹಾಗೆ ವಿನ್ಯಾಸಿಸಬಹುದಾದ] ‘ಪ್ಲ್ಯಾಸ್ಟಿಕ್‌’ ಮಿದುಳಿಗೆ ಹಾನಿಕಾರಕವಾಗಿದೆ. ಏಕೆಂದರೆ, ವಾಸ್ತವಿಕ ವಿಷಯವನ್ನು ಗ್ರಹಿಸುವ ಅವರ ಗ್ರಹಣಶಕ್ತಿಯನ್ನು ಅದು ಗಂಡಾಂತರಕ್ಕೊಡ್ಡುತ್ತದೆ ಮತ್ತು ಈ ರೀತಿಯಲ್ಲಿ ಅವರ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು, ಅವರ ಸುಕ್ಷೇಮ ಮತ್ತು ಸಂತೋಷದ ಬೆನ್ನಟ್ಟುವಿಕೆಯನ್ನು ಹಾನಿಗೊಳಿಸುತ್ತದೆ.”

ಸಂಬಂಧಗಳ ಮೇಲೆ ಅದರ ಪರಿಣಾಮಗಳು

ಅಶ್ಲೀಲ ಸಾಹಿತ್ಯವು ಮನೋಭಾವಗಳನ್ನು ರೂಪಿಸುತ್ತದೆ ಮತ್ತು ವರ್ತನೆಯನ್ನು ಪ್ರಭಾವಿಸುತ್ತದೆ. ಅದರ ಸಂದೇಶಗಳು ಕಾಲ್ಪನಿಕವಾಗಿದ್ದು, ವಾಸ್ತವಿಕತೆಗಿಂತಲೂ ಅತಿ ಹೆಚ್ಚು ಆಕರ್ಷಣೀಯವನ್ನಾಗಿ ಮಾಡಿ ಪ್ರದರ್ಶಿಸಲ್ಪಡುವ ಕಾರಣ ಅವು ಸಿಲುಕಿಸುವಂಥದ್ದಾಗಿವೆ. (“ಯಾವ ಸಂದೇಶವನ್ನು ನೀವು ಸ್ವೀಕರಿಸುವಿರಿ?” ಎಂಬ ಚೌಕವನ್ನು ನೋಡಿರಿ.) “ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವವರು ನೈಜವಲ್ಲದ ವಿಷಯಗಳನ್ನು ನಿರೀಕ್ಷಿಸುತ್ತಾರೆ ಮತ್ತು ಇದು ಮುರಿಯಲ್ಪಟ್ಟ ಸಂಬಂಧಗಳಿಗೆ ನಡೆಸುತ್ತದೆ” ಎಂಬುದಾಗಿ ಒಂದು ವರದಿಯು ಸೂಚಿಸುತ್ತದೆ.

ಅಶ್ಲೀಲ ಸಾಹಿತ್ಯವು, ವಿವಾಹದಲ್ಲಿ ಅತ್ಯಾವಶ್ಯಕ ಗುಣಗಳಾದ ಭರವಸೆ ಮತ್ತು ಪ್ರಾಮಾಣಿಕತೆಯನ್ನು ಧ್ವಂಸಗೊಳಿಸಬಲ್ಲದ್ದು. ಅಶ್ಲೀಲ ಸಾಹಿತ್ಯವನ್ನು ಮುಖ್ಯವಾಗಿ ಗುಪ್ತವಾಗಿ ನೋಡಲಾಗುವುದರಿಂದ, ಅದರ ಉಪಯೋಗವು ಅನೇಕವೇಳೆ ವಂಚನೆ ಮತ್ತು ಸುಳ್ಳುಹೇಳುವುದಕ್ಕೆ ನಡೆಸುತ್ತದೆ. ಇದರ ಫಲಿತಾಂಶವಾಗಿ, ಯಾರು ಇದನ್ನು ನೋಡುತ್ತಾರೋ ಅವರ ವಿವಾಹ ಸಂಗಾತಿಗಳಿಗೆ, ತಮಗೆ ದ್ರೋಹ ಮಾಡಲ್ಪಟ್ಟಿದೆ ಎಂಬ ಅನಿಸಿಕೆಯಾಗುತ್ತದೆ. ಅಷ್ಟುಮಾತ್ರವಲ್ಲದೆ, ತಮ್ಮ ವಿವಾಹ ಸಂಗಾತಿಗೆ ತಾವೇಕೆ ಈಗ ಅಪೇಕ್ಷಣೀಯವಾಗಿ ಕಾಣುವುದಿಲ್ಲ ಎಂಬುದು ಅವರಿಗೆ ತಿಳಿಯುವುದಿಲ್ಲ.

ಆತ್ಮಿಕ ಹಾನಿ

ಆಶ್ಲೀಲ ಸಾಹಿತ್ಯದ ಉಪಯೋಗವು, ಗಂಭೀರವಾದ ಆತ್ಮಿಕ ಹಾನಿಯನ್ನು ಉಂಟುಮಾಡುತ್ತದೆ. ದೇವರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಲು ಬಯಸುವ ವ್ಯಕ್ತಿಗೆ ಇದೊಂದು ನಿಜವಾದ ತಡೆಯಾಗಬಲ್ಲದು. * ಬೈಬಲ್‌, ಕಾಮಾಭಿಲಾಷೆಯನ್ನು ದುರಾಶೆ ಮತ್ತು ವಿಗ್ರಹಾರಾಧನೆಯೊಂದಿಗೆ ಹೋಲಿಸಿ ಮಾತಾಡುತ್ತದೆ. (ಕೊಲೊಸ್ಸೆ 3:​5, NW) ದುರಾಶೆಪಡುವ ಒಬ್ಬನು ತಾನು ದುರಾಶೆಪಡುವ ವಸ್ತುವನ್ನು ಎಷ್ಟೊಂದು ಆಶಿಸುತ್ತಾನೆಂದರೆ ಅದು ಅವನ ಜೀವಿತದ ಅತಿ ಪ್ರಧಾನ ವಿಷಯವಾಗಿ ಪರಿಣಮಿಸಿ, ಬೇರೆಲ್ಲಾ ವಿಷಯಗಳನ್ನು ಹಿಂದಕ್ಕೆ ತಳ್ಳುತ್ತದೆ. ವಾಸ್ತವದಲ್ಲಿ, ಅಶ್ಲೀಲ ಸಾಹಿತ್ಯದ ಚಟಕ್ಕೆ ಬಲಿಯಾದವರು ತಮ್ಮ ಲೈಂಗಿಕ ಇಚ್ಛೆಯನ್ನು ದೇವರಿಗಿಂತಲೂ ಉನ್ನತವಾದ ಸ್ಥಾನದಲ್ಲಿ ಇಡುತ್ತಾರೆ. ಈ ರೀತಿಯಲ್ಲಿ ಅವರು ಅದನ್ನು ಮೂರ್ತೀಕರಿಸುತ್ತಾರೆ. ಯೆಹೋವ ದೇವರ ಆಜ್ಞೆಯು ತಿಳಿಸುವುದು: “ನಾನಲ್ಲದೆ [ನಿಮಗೆ] ಬೇರೆ ದೇವರುಗಳು ಇರಬಾರದು.”​—⁠ವಿಮೋಚನಕಾಂಡ 20:⁠3.

ಅಶ್ಲೀಲ ಸಾಹಿತ್ಯವು ಪ್ರೀತಿಪರ ಸಂಬಂಧಗಳನ್ನು ಸಹ ನಾಶಗೊಳಿಸುತ್ತದೆ. ಸ್ವತಃ ವಿವಾಹಿತ ಪುರುಷನಾದ ಅಪೊಸ್ತಲ ಪೇತ್ರನು ಕ್ರೈಸ್ತ ಗಂಡಂದಿರಿಗೆ ತಮ್ಮ ತಮ್ಮ ಹೆಂಡತಿಯರನ್ನು ಗೌರವಿಸಬೇಕೆಂದು ಉತ್ತೇಜಿಸಿದನು. ಇದನ್ನು ಮಾಡಲು ತಪ್ಪಿಹೋಗುವ ಗಂಡನು ತನ್ನ ಪ್ರಾರ್ಥನೆಯು ದೇವರಿಗೆ ಸಲ್ಲುವುದಿಲ್ಲವೆಂಬುದನ್ನು ಕಂಡುಕೊಳ್ಳುವನು. (1 ಪೇತ್ರ 3:7) ಹೆಂಗಸರ ಅಶ್ಲೀಲ ಚಿತ್ರಗಳನ್ನು ಗುಪ್ತವಾಗಿ ವೀಕ್ಷಿಸುವ ಒಬ್ಬನು ತನ್ನ ಸ್ವಂತ ಹೆಂಡತಿಯನ್ನು ಗೌರವಿಸುತ್ತಾನೆಂದು ಹೇಳಸಾಧ್ಯವಿದೆಯೇ? ಇದು ಅವಳಿಗೆ ತಿಳಿದುಬಂದರೆ ಅವಳಿಗೆ ಹೇಗನಿಸಬಹುದು? ಮತ್ತು ‘ನ್ಯಾಯವಿಚಾರಣೆಗೆ ಪ್ರತಿಯೊಂದು ಕಾರ್ಯವನ್ನು ಗುರಿಮಾಡುವ’ ಹಾಗೂ ‘ಅಂತರಂಗವನ್ನು ಪರೀಕ್ಷಿಸುವ’ ದೇವರು ಏನು ನೆನಸಬಹುದು? (ಪ್ರಸಂಗಿ 12:14; ಜ್ಞಾನೋಕ್ತಿ 16:2) ಅಶ್ಲೀಲ ಸಾಹಿತ್ಯವನ್ನು ವೀಕ್ಷಿಸುವವನು ತನ್ನ ಪ್ರಾರ್ಥನೆಯು ದೇವರಿಂದ ಆಲಿಸಲ್ಪಡುವುದು ಎಂದು ನಿರೀಕ್ಷಿಸಲು ಯಾವುದೇ ಕಾರಣವಿದೆಯೇ?

ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವವರ ಎದ್ದುಕಾಣುವ ವೈಶಿಷ್ಟ್ಯ ಯಾವುದೆಂದರೆ, ಏನೇ ಆದರೂ ತಮ್ಮ ಸ್ವಾರ್ಥಪರ ಇಚ್ಛೆಗಳನ್ನು ಪೂರೈಸಲೇಬೇಕೆಂಬ ಅಭಿಲಾಷೆಯೇ ಆಗಿದೆ. ಹಾಗಿರುವುದರಿಂದ, ಅಶ್ಲೀಲ ಸಾಹಿತ್ಯವನ್ನು ವೀಕ್ಷಿಸುವುದು ಪ್ರೀತಿರಹಿತ ಕಾರ್ಯವಾಗಿದೆ. ಸಭ್ಯತೆಯನ್ನು ಮತ್ತು ದೇವರ ಮುಂದೆ ಒಂದು ಶುದ್ಧವಾದ ನೈತಿಕ ಮಟ್ಟವನ್ನು ಕಾಪಾಡಿಕೊಳ್ಳಲು ಕ್ರೈಸ್ತನೊಬ್ಬನು ಮಾಡುವ ಹೋರಾಟವನ್ನು ಅದು ಬಲಹೀನಗೊಳಿಸುತ್ತದೆ. “ದೇವರ ಚಿತ್ತವೇನಂದರೆ ನೀವು . . . ಹಾದರಕ್ಕೆ ದೂರವಾಗಿರಬೇಕು. ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. . . . , ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡಬಾರದು” ಎಂದು ಅಪೊಸ್ತಲ ಪೌಲನು ಬರೆದನು.​—⁠1 ಥೆಸಲೊನೀಕ 4:​3-7.

ಅಶ್ಲೀಲ ಸಾಹಿತ್ಯವು ಮುಖ್ಯವಾಗಿ ಹೆಂಗಸರನ್ನೂ ಮಕ್ಕಳನ್ನೂ ಶೋಷಿಸುತ್ತದೆ. ಅದು ಅವರನ್ನು ತುಚ್ಛೀಕರಿಸುತ್ತದೆ ಮತ್ತು ಅವರ ಗೌರವ ಹಾಗೂ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಆದುದರಿಂದ ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವವನೊಬ್ಬನು, ಅಂತಹ ಶೋಷಣೆಯಲ್ಲಿ ಭಾಗವಹಿಸುವವನೂ ಅದನ್ನು ಬೆಂಬಲಿಸುವವನೂ ಆಗಿರುತ್ತಾನೆ. “ಒಬ್ಬ ಪುರುಷನು ತಾನು ಎಷ್ಟೇ ಒಳ್ಳೆಯವನೆಂದು ನೆನಸಿದರೂ, ಅಶ್ಲೀಲ ಸಾಹಿತ್ಯದ ಅವನ ಮೌನ ಅಂಗೀಕಾರವು ತಾನೇ ಅವನನ್ನು ಎಲ್ಲಾ ಸಂದರ್ಭಗಳಲ್ಲಿಯೂ ಒಬ್ಬ ಸ್ತ್ರೀದ್ವೇಷಿಯನ್ನಾಗಿ ಮಾಡುತ್ತದೆ. ಅವನು ಯಾವ ವ್ಯಕ್ತಿಯ ಬಗ್ಗೆ ತುಂಬ ಕಾಳಜಿವಹಿಸುತ್ತೇನೆಂದು ಹೇಳುತ್ತಾನೋ ಆ ವ್ಯಕ್ತಿಯ ಕಡೆಗೂ ಅವನು ಇದೇ ಗುಣವನ್ನು ಪ್ರದರ್ಶಿಸುತ್ತಾನೆ” ಎಂದು ಸಂಶೋಧಕರಾದ ಸ್ಟೀವನ್‌ ಹಿಲ್‌ ಮತ್ತು ನೀನ ಸಿಲ್ವರ್‌ ತಿಳಿಸುತ್ತಾರೆ.

ಅಶ್ಲೀಲ ಸಾಹಿತ್ಯವನ್ನು ನೋಡುವ ಹವ್ಯಾಸದಿಂದ ಮುಕ್ತರಾಗುವುದು

ಅಶ್ಲೀಲ ಸಾಹಿತ್ಯವನ್ನು ನೋಡುವ ಚಟದ ವಿರುದ್ಧ ನೀವು ಈಗ ಹೋರಾಡುತ್ತಿರುವುದಾದರೆ ಆಗೇನು? ಈ ಹವ್ಯಾಸದಿಂದ ಮುಕ್ತರಾಗಲು ಏನಾದರೂ ಮಾಡಸಾಧ್ಯವಿದೆಯೋ? ಬೈಬಲ್‌ ನಮಗೆ ನಿರೀಕ್ಷೆಯನ್ನು ನೀಡುತ್ತದೆ! ಕ್ರಿಸ್ತನನ್ನು ತಿಳಿಯುವ ಮುನ್ನ ಕೆಲವು ಆದಿ ಕ್ರೈಸ್ತರು ಜಾರರು, ವ್ಯಭಿಚಾರಿಗಳು, ಮತ್ತು ಲೋಭಿಗಳಾಗಿದ್ದರು. “ಆದರೆ . . . ನೀವು ತೊಳೆಯಲ್ಪಟ್ಟಿರಿ,” ಎಂದು ಪೌಲನು ತಿಳಿಸುತ್ತಾನೆ. ಇದು ಹೇಗೆ ಸಾಧ್ಯವಾಯಿತು? ಅವನು ಉತ್ತರಿಸಿದ್ದು: “ನಮ್ಮ ದೇವರಾತ್ಮನ ಮೂಲಕ . . . ಪರಿಶುದ್ಧರಾದಿರಿ.”​—⁠1 ಕೊರಿಂಥ 6:​9-11, ಪರಿಶುದ್ಧ ಬೈಬಲ್‌. *

ದೇವರ ಪವಿತ್ರಾತ್ಮದ ಶಕ್ತಿಯನ್ನು ಎಂದಿಗೂ ಅಲ್ಪವಾಗಿ ಎಣಿಸಬೇಡಿರಿ. ‘ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸುವುದಿಲ್ಲ’ ಎಂಬುದಾಗಿ ಬೈಬಲ್‌ ತಿಳಿಸುತ್ತದೆ. ನಿಶ್ಚಯವಾಗಿಯೂ ಆತನು ತಪ್ಪಿಸಿಕೊಳ್ಳಲು ಮಾರ್ಗವನ್ನು ಸಿದ್ಧಮಾಡುವನು. (1 ಕೊರಿಂಥ 10:13) ಸತತವಾದ ಪ್ರಾರ್ಥನೆಯು​—⁠ಪಟ್ಟುಹಿಡಿದು ನಿಮ್ಮ ಸಮಸ್ಯೆಯನ್ನು ದೇವರ ಮುಂದೆ ತಿಳಿಸುವುದು​—⁠ಪ್ರತಿಫಲವನ್ನು ತರುತ್ತದೆ. ಆತನ ವಾಕ್ಯವು ಉತ್ತೇಜಿಸುವುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”​—⁠ಕೀರ್ತನೆ 55:22.

ಅದೇ ಸಮಯದಲ್ಲಿ, ನೀವು ನಿಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕ್ರಿಯೆಗೈಯಬೇಕೆಂಬುದು ನಿಜ. ಅಶ್ಲೀಲ ಸಾಹಿತ್ಯದ ಚಟವನ್ನು ತ್ಯಜಿಸಲು, ವಿವೇಚಿತ ಮತ್ತು ಹೃತ್ಪೂರ್ವಕ ನಿರ್ಣಯವನ್ನು ನೀವು ಮಾಡಬೇಕಾಗಿದೆ. ಇಂಥ ಸಮಯದಲ್ಲಿ ಒಬ್ಬ ಭರವಸಾರ್ಹ ಸ್ನೇಹಿತ ಅಥವಾ ಕುಟುಂಬ ಸದಸ್ಯನು ಅಮೂಲ್ಯ ನೆರವಾಗಿರುತ್ತಾನೆ. ನೀವು ನಿಮ್ಮ ನಿರ್ಣಯಕ್ಕೆ ಅಂಟಿಕೊಳ್ಳುವಂತೆ ನಿಮಗೆ ಅಗತ್ಯವಿರುವ ಬೆಂಬಲವನ್ನು ಮತ್ತು ಉತ್ತೇಜನವನ್ನು ಅವನು ನೀಡಬಲ್ಲನು. (“ಸಹಾಯವನ್ನು ಪಡೆದುಕೊಳ್ಳುವುದು” ಎಂಬ ಚೌಕವನ್ನು ನೋಡಿರಿ.) ನೀವು ತೆಗೆದುಕೊಂಡ ನಿರ್ಣಯವು ಖಂಡಿತವಾಗಿಯೂ ದೇವರನ್ನು ಮೆಚ್ಚಿಸುವಂಥದ್ದಾಗಿದೆ ಎಂಬುದನ್ನು ನೆನಪಿಸಿಕೊಳ್ಳುವುದು ತಾನೇ ನೀವು ನಿಮ್ಮ ನಿರ್ಣಯಕ್ಕೆ ಬದ್ಧರಾಗಿರಲು ನಿಮಗೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 27:11) ಅದಕ್ಕೆ ಕೂಡಿಕೆಯಾಗಿ, ಅಶ್ಲೀಲ ಸಾಹಿತ್ಯದ ವೀಕ್ಷಣೆಯು ದೇವರನ್ನು ಸಿಟ್ಟೆಬ್ಬಿಸುವಂಥದ್ದಾಗಿದೆ ಎಂದು ತಿಳಿಯುವುದು ಸಹ ಅದನ್ನು ಬಿಟ್ಟುಬಿಡುವಂತೆ ನಮಗೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತದೆ. (ಆದಿಕಾಂಡ 6:​5, 6) ಇದೊಂದು ಸುಲಭದ ಹೋರಾಟವಾಗಿರುವುದಿಲ್ಲ, ಆದರೂ ಇದು ಗೆಲ್ಲಸಾಧ್ಯವಿರುವ ಒಂದು ಹೋರಾಟವಾಗಿದೆ. ಅಶ್ಲೀಲ ಸಾಹಿತ್ಯವನ್ನು ನೋಡುವ ಹವ್ಯಾಸವನ್ನು ಖಂಡಿತವಾಗಿಯೂ ಮುರಿಯಸಾಧ್ಯವಿದೆ!

ಅಶ್ಲೀಲ ಸಾಹಿತ್ಯದ ಉಪಯೋಗದಿಂದಾಗುವ ಅಪಾಯಗಳು ನಿಜವಾದವುಗಳಾಗಿವೆ. ಅದು ಹಾನಿಕಾರಕವೂ ನಾಶಕಾರಕವೂ ಆಗಿದೆ. ಅದರ ತಯಾರಕರನ್ನೂ ಬಳಕೆದಾರರನ್ನೂ ಅದು ಮಲಿನಗೊಳಿಸುತ್ತದೆ. ಅದು ಸ್ತ್ರೀಪುರುಷರಿಬ್ಬರಿಗೂ ಅವಮಾನವಾಗಿದೆ, ಮಕ್ಕಳಿಗೆ ಗಂಡಾಂತರವಾಗಿದೆ, ಮತ್ತು ತ್ಯಜಿಸಲೇಬೇಕಾದ ಒಂದು ಹವ್ಯಾಸವಾಗಿದೆ.(g03 7/22)

[ಪಾದಟಿಪ್ಪಣಿಗಳು]

^ ಇಂಟರ್‌ನೆಟ್‌ ಮೂಲಕ ದೊರೆಯುವ ಅಶ್ಲೀಲ ಸಾಹಿತ್ಯದಿಂದ ಉಂಟಾಗುವ ಹಾನಿಗಳ ಕುರಿತ ವಿವರವಾದ ಚರ್ಚೆಗಾಗಿ, 2000, ಜೂನ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟಗಳು 3-10ರಲ್ಲಿರುವ “ಇಂಟರ್‌ನೆಟ್‌ ಅಶ್ಲೀಲ ಸಾಹಿತ್ಯ​—⁠ಅದು ಯಾವ ಹಾನಿಯನ್ನು ಉಂಟುಮಾಡಸಾಧ್ಯವಿದೆ?” ಎಂಬ ಲೇಖನಮಾಲೆಯನ್ನು ದಯಮಾಡಿ ನೋಡಿರಿ.

^ ಅಶ್ಲೀಲ ಸಾಹಿತ್ಯದ ಕುರಿತ ಬೈಬಲಿನ ದೃಷ್ಟಿಕೋನದ ಚರ್ಚೆಗಾಗಿ, 2002, ಜುಲೈ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟಗಳು 19-21ನ್ನು ದಯವಿಟ್ಟು ನೋಡಿರಿ.

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 10ರಲ್ಲಿರುವ ಚೌಕ/ಚಿತ್ರ]

ಸಹಾಯವನ್ನು ಪಡೆದುಕೊಳ್ಳುವುದು

ಅಶ್ಲೀಲ ಸಾಹಿತ್ಯದ ಚಟಕ್ಕೆ ವಿರುದ್ಧವಾಗಿ ಹೋರಾಡುವುದನ್ನು ಸುಲಭವಾದ ಕೆಲಸವೆಂದು ಎಣಿಸಬಾರದು; ಅದೊಂದು ಅತಿ ಕಷ್ಟಕರವಾದ ಹೋರಾಟವಾಗಿರಬಹುದು. ನೂರಾರು ಸೆಕ್ಸ್‌ ವ್ಯಸನಿಗಳಿಗೆ ಚಿಕಿತ್ಸೆಯನ್ನು ನೀಡಿದ ಡಾ. ವಿಕ್ಟರ್‌ ಕ್ಲೈನ್‌ ತಿಳಿಸುವುದು: “ಕೇವಲ ಮಾತು ಕೊಟ್ಟರೆ ಸಾಕಾಗುವುದಿಲ್ಲ. ಒಳ್ಳೆಯ ಉದ್ದೇಶವಿದ್ದರೆ ಸಾಕಾಗುವುದಿಲ್ಲ. [ಒಬ್ಬ ಸೆಕ್ಸ್‌ ವ್ಯಸನಿ] ಒಬ್ಬಂಟಿಗನಾಗಿ ಇದನ್ನು ಮಾಡಸಾಧ್ಯವಿಲ್ಲ.” ಕ್ಲೈನ್‌ಗನುಸಾರ, ವ್ಯಕ್ತಿಯು ವಿವಾಹಿತನಾಗಿರುವಲ್ಲಿ ಅವನ ಸಂಗಾತಿಯ ಸಹಕಾರವೇ ಯಶಸ್ವಿಕರ ಚಿಕಿತ್ಸೆಗೆ ಒಂದು ಪೂರ್ವಾಪೇಕ್ಷಿತ ವಿಷಯವಾಗಿದೆ. “ಚಿಕಿತ್ಸೆಯಲ್ಲಿ ಇಬ್ಬರೂ ಭಾಗವಹಿಸುವುದಾದರೆ ಆಗ ಚಿಕಿತ್ಸೆಯು ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಇಬ್ಬರೂ ಗಾಯಗೊಂಡಿದ್ದಾರೆ. ಇಬ್ಬರಿಗೂ ಸಹಾಯದ ಅಗತ್ಯವಿದೆ” ಎಂದು ಅವರು ಹೇಳುತ್ತಾರೆ.

ವ್ಯಕ್ತಿಯು ಅವಿವಾಹಿತನಾಗಿರುವಲ್ಲಿ, ಅನೇಕವೇಳೆ ಒಬ್ಬ ಭರವಸಾರ್ಹ ಸ್ನೇಹಿತನು ಅಥವಾ ಕುಟುಂಬದ ಸದಸ್ಯನು ಅವನಿಗೆ ಶಕ್ತಿಸ್ತಂಭವಾಗಿರಸಾಧ್ಯವಿದೆ. ಚಿಕಿತ್ಸೆಯಲ್ಲಿ ಯಾರೇ ಒಳಗೊಂಡಿರಲಿ, ಬದಲಾಯಿಸಲಾರದ ಒಂದು ನಿಯಮವನ್ನು ಕ್ಲೈನ್‌ ತಿಳಿಸುತ್ತಾರೆ. ಅದೇನೆಂದರೆ: ಸಮಸ್ಯೆಯ ಕುರಿತಾಗಿ ಮತ್ತು ಯಾವುದೇ ಮರುಕಳಿಸುವಿಕೆಗಳ ಕುರಿತಾಗಿ ಮುಚ್ಚುಮರೆಯಿಲ್ಲದೆ ತಿಳಿಯಪಡಿಸಿ. “ಗುಟ್ಟುಗಳು ‘ನಿಮ್ಮನ್ನು ನಾಶಗೊಳಿಸುತ್ತವೆ.’ ಅದು ನಿಮ್ಮಲ್ಲಿ ನಾಚಿಕೆಯ ಮತ್ತು ತಪ್ಪಿತಸ್ಥ ಮನೋಭಾವವನ್ನು ಉಂಟುಮಾಡುತ್ತದೆ” ಎಂದು ಕ್ಲೈನ್‌ ತಿಳಿಸುತ್ತಾರೆ.

[ಪುಟ 9ರಲ್ಲಿರುವ ಚಾರ್ಟು]

ಯಾವ ಸಂದೇಶವನ್ನು ನೀವು ಸ್ವೀಕರಿಸುವಿರಿ?

ಅಶ್ಲೀಲ ಸಾಹಿತ್ಯದ ಸಂದೇಶ ಬೈಬಲಿನ ದೃಷ್ಟಿಕೋನ

◼ ಯಾವುದೇ ವ್ಯಕ್ತಿಯೊಂದಿಗೆ, ಯಾವುದೇ ◼ “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು.

ಸಮಯದಲ್ಲಿ, ಯಾವುದೇ ಸಂದರ್ಭಗಳ ಕೆಳಗೆ, ಜಾರರಿಗೂ ವ್ಯಭಿಚಾರಿಗಳಿಗೂ ದೇವರು

ಮತ್ತು ಯಾವುದೇ ರೀತಿಯಲ್ಲಿ ನಡೆಸುವ ಲೈಂಗಿಕ ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.”

ಸಂಬಂಧವು ಸರಿಯಾಗಿದೆ ಮತ್ತು ಇದರಿಂದ ​—⁠ಇಬ್ರಿಯ 13:⁠4.

ಯಾವುದೇ ನಕಾರಾತ್ಮಕ ಪರಿಣಾಮಗಳು ಆಗುವುದಿಲ್ಲ.

 

“ಜಾರತ್ವಮಾಡುವವನು ತನ್ನ ದೇಹಕ್ಕೆ ಹಾನಿಕರವಾದ

ಪಾಪವನ್ನು ಮಾಡುತ್ತಾನೆ.”​—⁠1 ಕೊರಿಂಥ 6:18;

ರೋಮಾಪುರ 1:​26, 27ನ್ನು ಸಹ ನೋಡಿರಿ.

◼ ಲೈಂಗಿಕ ಅಭಿಲಾಷೆಯನ್ನು ತಣಿಸಲು ◼ “ಯೌವನಕಾಲದ ಪತ್ನಿಯಲ್ಲಿ ಆನಂದಿಸು. . . .

ವಿವಾಹವು ಒಂದು ತಡೆಯಾಗಿದೆ. ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು.”

​—⁠ಜ್ಞಾನೋಕ್ತಿ 5:​18, 19; ಮತ್ತು ಆದಿಕಾಂಡ

1:28; 2:24; 1 ಕೊರಿಂಥ 7:3ನ್ನು ಸಹ ನೋಡಿರಿ.

◼ ಹೆಂಗಸರಿಗೆ ಕೇವಲ ಒಂದೇ ಉದ್ದೇಶವಿದೆ ◼ “ನಾನು [ಯೆಹೋವ ದೇವರು] ಅವನಿಗಾಗಿ ಒಬ್ಬ

​—⁠ಗಂಡಸರ ಲೈಂಗಿಕ ಅಗತ್ಯಗಳನ್ನು ಸಹಕಾರಿಣಿಯನ್ನು, ಒಬ್ಬ ಸಹಾಯಕಳನ್ನು

ತೃಪ್ತಿಪಡಿಸುವುದು. ಉಂಟುಮಾಡುವೆನು.”​—⁠ಆದಿಕಾಂಡ 2:​18, NW;

ಎಫೆಸ 5:28ನ್ನು ಸಹ ನೋಡಿರಿ.

◼ ಸ್ತ್ರೀಪುರುಷರು ತಮ್ಮ ಲೈಂಗಿಕ ◼ “ಆದದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ

ತೃಷೆಗೆ ದಾಸರಾಗಿದ್ದಾರೆ. ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾ

ಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ

ಇವುಗಳನ್ನು ವಿಸರ್ಜಿಸಿಬಿಡಿರಿ.”​—⁠ಕೊಲೊಸ್ಸೆ 3:⁠5.

 

“ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ

ಘನತೆಯಿಂದಲೂ ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು

ತಿಳಿಯಬೇಕು.”​—⁠1 ಥೆಸಲೊನೀಕ 4:⁠4.

 

“ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನ

ಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿ

ಯರೆಂದೂ” ಎಣಿಸಬೇಕು.​—⁠1 ತಿಮೊಥೆಯ 5:​1, 2;

1 ಕೊರಿಂಥ 9:27ನ್ನು ಸಹ ನೋಡಿರಿ.

[ಪುಟ 7ರಲ್ಲಿರುವ ಚಿತ್ರ]

ಅಶ್ಲೀಲ ಸಾಹಿತ್ಯದ ವೀಕ್ಷಣೆಯು ಮಕ್ಕಳ ಮಿದುಳಿನ ಸಾಮಾನ್ಯ ಬೆಳವಣಿಗೆಯನ್ನು ಬಾಧಿಸುತ್ತದೆ ಎಂಬುದಾಗಿ ಕೆಲವು ಸಂಶೋಧಕರು ತಿಳಿಸುತ್ತಾರೆ

[ಪುಟ 8ರಲ್ಲಿರುವ ಚಿತ್ರ]

ಅಶ್ಲೀಲ ಸಾಹಿತ್ಯದ ವೀಕ್ಷಣೆಯು, ವಿವಾಹದಲ್ಲಿನ ಭರವಸೆ ಮತ್ತು ಪ್ರಾಮಾಣಿಕತೆಯನ್ನು ಧ್ವಂಸಗೊಳಿಸುತ್ತದೆ

[ಪುಟ 10ರಲ್ಲಿರುವ ಚಿತ್ರ]

ಸತತವಾದ ಪ್ರಾರ್ಥನೆಯು ಪ್ರತಿಫಲವನ್ನು ತರುತ್ತದೆ