ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಬೈಬಲ್‌ ವರ್ಷ”

“ಬೈಬಲ್‌ ವರ್ಷ”

“ಬೈಬಲ್‌ ವರ್ಷ”

ಆಸ್ಟ್ರೀಯ, ಜರ್ಮನಿ, ಫ್ರಾನ್ಸ್‌ ಮತ್ತು ಸ್ವಿಟ್ಸರ್ಲೆಂಡ್‌ನಲ್ಲಿ, 2003ನೆಯ ಇಸವಿಯನ್ನು “ಬೈಬಲ್‌ ವರ್ಷ” ಎಂದು ಹೆಸರಿಸಲಾಗಿದೆ. ಫ್ರಾಂಕ್‌ಫುರ್ಟರ್‌ ಆಲ್‌ಗೆಮೀನ ಟ್ಸೈಟುಂಗ್‌ ಎಂಬ ಜರ್ಮನ್‌ ವಾರ್ತಾಪತ್ರಿಕೆಯು ಹೇಳುವುದು: “ಇಸವಿ 1992ರಲ್ಲಿ ಬೈಬಲ್‌ ವರ್ಷವು ಪ್ರಥಮ ಬಾರಿ ಮತ್ತು ಕೊನೆಯ ಬಾರಿ ಆಚರಿಸಲ್ಪಟ್ಟಾಗ ಉದ್ದೇಶಿಸಿದಂತೆಯೇ, ಈಗಲೂ [ಚರ್ಚುಗಳು] ಈ ‘ಜೀವಬಾಧ್ಯರ ಪುಸ್ತಕದ’ ಕುರಿತು ಜನರ ಅರಿವನ್ನು ಹೆಚ್ಚಿಸಲು ಮತ್ತು ಪವಿತ್ರ ಶಾಸ್ತ್ರಗಳ ಸಾಂಸ್ಕೃತಿಕ ಮೌಲ್ಯವನ್ನು ಒತ್ತಿಹೇಳಲು ಉದ್ದೇಶಿಸುತ್ತಿವೆ.”

ಜೂನ್‌ 2002ರ ಬೀಬೆಲ್‌ರಿಪೋರ್ಟ್‌ಗನುಸಾರ, ಬೈಬಲು​—⁠ಕಡಿಮೆಪಕ್ಷ ಬೈಬಲಿನ ಕೆಲವೊಂದು ಭಾಗಗಳು​—⁠2,287 ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ. ಇಷ್ಟರ ತನಕ, ಸುಮಾರು ಐನೂರು ಕೋಟಿ ಬೈಬಲುಗಳು ವಿತರಿಸಲ್ಪಟ್ಟಿವೆ ಎಂಬುದನ್ನು ಅಂದಾಜುಗಳು ಸಹ ತೋರಿಸುತ್ತವೆ. ಇಂಥ ಬೃಹತ್‌ ಪ್ರಯತ್ನಗಳು, ಈ ಗ್ರಂಥದ ಕಡೆಗೆ ಜನರಿಗಿರುವ ಉದಾತ್ತ ಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಂದು ಅಧಿಕಾಂಶ ಜನರು, ಬೈಬಲ್‌ ಪ್ರಾಯೋಗಿಕವಾದ ಗ್ರಂಥವಾಗಿದೆ ಎಂಬ ಮನವರಿಕೆ ಇಲ್ಲದವರಾಗಿರಬಹುದು. ಬೈಬಲಿನಲ್ಲಿ ಕೊಡಲ್ಪಟ್ಟಿರುವ ಮಟ್ಟಗಳು ಹಳೇ ಶೈಲಿಯವುಗಳಾಗಿವೆ ಮತ್ತು ಜೀವನದ ವಾಸ್ತವಿಕತೆಗಳೊಂದಿಗೆ ತಾಳೆಹೊಂದುವುದಿಲ್ಲ ಎಂಬುದು ಅನೇಕರ ಅನಿಸಿಕೆ. ಆದರೂ, ಈ ಬೈಬಲ್‌ ವರ್ಷದಲ್ಲಿ ಜರ್ಮನಿಯ ಚರ್ಚುಗಳು ಎರಡು ವಿಷಯಗಳನ್ನು ಸಾಧಿಸುವ ನಿರೀಕ್ಷೆಯಲ್ಲಿವೆ​—⁠ಬೈಬಲಿಗೆ ಹೆಚ್ಚು ನಿಕಟವಾಗಿ ಜೀವಿಸುವಂತೆ ಜನರನ್ನು ಉತ್ತೇಜಿಸುವುದು ಮತ್ತು ಯಾರು ಚರ್ಚಿನಿಂದ ವಿಮುಖರಾಗಿದ್ದಾರೋ ಅವರಲ್ಲಿ ಬೈಬಲಿಗಾಗಿ ಹುರುಪನ್ನು ಬಡಿದೆಬ್ಬಿಸುವುದು.

ಬೈಬಲನ್ನು ಆರಂಭದಿಂದ ಹಿಡಿದು ಕೊನೆಯ ತನಕ ಓದುವುದು ಒಂದು ಚಿಕ್ಕ ಸಾಧನೆಯಲ್ಲವಾದರೂ, ಶಾಸ್ತ್ರವಚನಗಳ ಪ್ರಮುಖ ಅಂಶಗಳನ್ನು ಗ್ರಹಿಸಲು ಇದು ಪರಿಣಾಮಕಾರಿ ವಿಧವಾಗಿದೆ ಎಂಬುದಂತೂ ಖಂಡಿತ. ಆದರೂ, ಬೈಬಲಿನಿಂದ ಅತ್ಯಧಿಕ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುವಂಥ ಒಬ್ಬ ವ್ಯಕ್ತಿಯು, 2 ತಿಮೊಥೆಯ 3:​16, 17ರಲ್ಲಿರುವ ಹೇಳಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗಿದೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”

ಜರ್ಮನ್‌ ಕವಿಯಾಗಿದ್ದ ಯೋಹಾನ್‌ ವೊಲ್ಫ್‌ಗ್ಯಾಂಗ್‌ ಫೋನ್‌ ಗೋಥೆ (1749-1832) ಈ ರೀತಿ ಹೇಳಿದನು: “ಒಬ್ಬನು ಬೈಬಲನ್ನು ಎಷ್ಟು ಹೆಚ್ಚಾಗಿ ಅರ್ಥಮಾಡಿಕೊಳ್ಳುತ್ತಾನೋ ಅಷ್ಟೇ ಹೆಚ್ಚಾಗಿ ಅದು ಅವನಿಗೆ ಸುಂದರವಾಗಿ ಕಾಣತೊಡಗುತ್ತದೆ ಎಂಬ ಸಂಗತಿಯು ನನಗೆ ಪೂರ್ಣವಾಗಿ ಮನದಟ್ಟಾಗಿದೆ.” ನಿಜವಾಗಿಯೂ, ನಾವೆಲ್ಲಿಂದ ಬಂದಿದ್ದೇವೆ, ನಾವೇಕೆ ಇಲ್ಲಿದ್ದೇವೆ ಮತ್ತು ಭವಿಷ್ಯತ್ತು ಏನನ್ನು ತರಲಿದೆ ಎಂಬುದಕ್ಕೆ ಸದೃಢವಾದ ವಿವರಣೆಯನ್ನು ನಾವು ಕಂಡುಕೊಳ್ಳುವುದು ದೇವರ ವಾಕ್ಯದಲ್ಲಿ ಮಾತ್ರವೇ.​—⁠ಯೆಶಾಯ 46:9, 10. (g03 9/22)

[ಪುಟ 31ರಲ್ಲಿರುವ ಚಿತ್ರ ಕೃಪೆ]

From the book Bildersaal deutscher Geschichte