ಯೇಸುವಿನ ಜೀವ ಒಂದು ಬಹುಮೂಲ್ಯ ಉಡುಗೊರೆ
ಯೇಸುವಿನ ಜೀವ ಒಂದು ಬಹುಮೂಲ್ಯ ಉಡುಗೊರೆ
ಸುಮಾರು 2,000 ವರ್ಷಗಳ ಹಿಂದೆ ದೇವರು ಮಾವವಕುಲಕ್ಕೆ ಹಿಂದೆಂದೂ ಕೊಡದಂಥ ಅತ್ಯಂತ ಮಹತ್ತರವಾದ ಉಡುಗೊರೆಯನ್ನು ಒದಗಿಸಿದನು. ಅದು, ನಿತ್ಯಜೀವವನ್ನು ಪಡೆದುಕೊಳ್ಳಲು ನಮಗೆ ಸಾಧ್ಯವನ್ನಾಗಿ ಮಾಡಿದ ಆತನ ಮಗನಾದ ಯೇಸು ಕ್ರಿಸ್ತನ ಜೀವವೇ ಆಗಿದೆ. (ಯೋಹಾನ 3:16) ಇದನ್ನು ಗಣ್ಯಮಾಡಿದವರಾಗಿ ಅನೇಕರು, ನಾಲ್ಕು ಸುವಾರ್ತಾ ಪುಸ್ತಕಗಳಲ್ಲಿ ತಿಳಿಸಿರುವಂತೆಯೇ ಯೇಸು ಕ್ರಿಸ್ತನ ಜೀವನವನ್ನು ವಿವರಿಸುವ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವನ್ನು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.
ತನಗೆ ಯಾರು ಕ್ರಿಸ್ಮಸ್ ಕಾರ್ಡ್ ಅನ್ನು ಕಳುಹಿಸುತ್ತಾರೋ ಅವರಿಗೆ ತಾನು ಈ ಪುಸ್ತಕವನ್ನು ನೀಡುತ್ತೇನೆಂದು ಸ್ವಲ್ಪ ಸಮಯದ ಹಿಂದೆ ಒಬ್ಬ ವ್ಯಕ್ತಿಯು ವಿವರಿಸಿದನು. ಅವನು ಅವರಿಗೆ ಪತ್ರ ಬರೆದು, ತಾನೇಕೆ ಕ್ರಿಸ್ಮಸ್ ಆಚರಿಸುವುದಿಲ್ಲ ಎಂಬುದನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾನೆ, ಮತ್ತು ಎನ್‌ಸೈಕ್ಲಪೀಡಿಯ, ಡಿಕ್ಷನರಿ ಹಾಗೂ ಬೈಬಲಿನಿಂದ ಉಲ್ಲೇಖಗಳನ್ನು ಅವನು ಉಪಯೋಗಿಸುತ್ತಾನೆ. ನಂತರ ಅವನು ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಪುಸ್ತಕದ ಒಂದು ಪ್ರತಿಯನ್ನು ಸೇರಿಸುತ್ತಾನೆ.
ವಿಶ್ವವಿದ್ಯಾನಿಲಯದ ಅಧ್ಯಾಪಕರಿಂದ ತನಗೆ ಎರಡು ಅತಿ ಉತ್ತೇಜನದಾಯಕವಾದ ಪ್ರತಿಕ್ರಿಯೆಗಳು ದೊರಕಿವೆ ಎಂದು ಆ ವ್ಯಕ್ತಿಯು ಹೇಳಿದನು. ಅವನಿಗೆ ಬಂದ ಎರಡು ಪತ್ರಗಳಲ್ಲಿ ಒಂದು ತಿಳಿಸಿದ್ದು: “ನಿಮ್ಮ ಅತ್ಯುತ್ತಮ ಉಡುಗೊರೆಯಾದ ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕವು ನಮಗೆ ತಲಪಿದೆ. ಅದನ್ನು ಪಡೆದುಕೊಂಡಿದ್ದಕ್ಕಾಗಿ ನಾವು ತುಂಬ ಸಂತೋಷಿಸಿದೆವು. ಇದು ಅನೇಕ ವಿಧಗಳಲ್ಲಿ ಅತ್ಯುತ್ತಮವಾಗಿದೆ. ಈಗಾಗಲೇ ನಾವು ಅದನ್ನು ಬಹಳವಾಗಿ ಉಪಯೋಗಿಸಿದ್ದೇವೆ.”
ಈ ಪುಸ್ತಕದಲ್ಲಿ ಯೇಸು ನೀಡಿದ ಪ್ರಸಂಗಗಳಿವೆ. ಅಷ್ಟುಮಾತ್ರವಲ್ಲದೆ, ಅವನ ಸಾಮ್ಯಗಳು ಮತ್ತು ಅದ್ಭುತಗಳು ಸಹ ಸೇರಿವೆ. ಸಾಧ್ಯವಾಗುವಷ್ಟರ ಮಟ್ಟಿಗೆ ಈ ಪುಸ್ತಕದಲ್ಲಿ ವಿಷಯಗಳನ್ನು ಅವು ಸಂಭವಿಸಿದ ಅನುಕ್ರಮದಲ್ಲಿ ತಿಳಿಸಲಾಗಿದೆ. ಯೇಸು ಮತ್ತು ಅವನ ಸಮಕಾಲೀನರ ಭಾವನೆಗಳನ್ನು ವ್ಯಕ್ತಪಡಿಸಲು ಸುಂದರವಾದ, ಬಹು ಜಾಗರೂಕತೆಯಿಂದ ಸಂಶೋಧಿಸಿದ ಚಿತ್ರಗಳು ವಿನ್ಯಾಸಿಸಲ್ಪಟ್ಟಿವೆ.
ನಿಮಗೆ, 448 ಪುಟಗಳ ಈ ಪುಸ್ತಕದ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಆಸಕ್ತಿಯಿರುವುದಾದರೆ, ಇದರ ಜೊತೆಯಲ್ಲಿರುವ ಕೂಪನ್ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ. (g03 12/22)
□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನಾನು ವಿನಂತಿಸಿಕೊಳ್ಳುತ್ತೇನೆ.
□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.