ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವನ್ನು ಆಳವಾಗಿ ಪರಿಶೀಲಿಸಿ ನೋಡಿ!

ದೇವರ ವಾಕ್ಯವನ್ನು ಆಳವಾಗಿ ಪರಿಶೀಲಿಸಿ ನೋಡಿ!

ದೇವರ ವಾಕ್ಯವನ್ನು ಆಳವಾಗಿ ಪರಿಶೀಲಿಸಿ ನೋಡಿ!

ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕವು ಇದನ್ನೇ ಮಾಡುವಂತೆ ನಿಮಗೆ ಸಹಾಯಮಾಡುತ್ತದೆ. ಈ ಪ್ರಕಾಶನವು, ಬೈಬಲ್‌ ವಿದ್ಯಾರ್ಥಿಗಳು ತಮ್ಮ ಜೀವಿತಗಳಲ್ಲಿ ದೇವರ ವಾಕ್ಯದ ಬೋಧನೆಗಳನ್ನು ಅನ್ವಯಿಸಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ವಿನ್ಯಾಸಿಸಲ್ಪಟ್ಟಿದೆ. ಪಶ್ಚಿಮ ಆಫ್ರಿಕದ ನೈಜೀರಿಯದಲ್ಲಿರುವ ಬೈಬಲ್‌ ಬೋಧಕನೊಬ್ಬನು ಹೇಳಿದ್ದು: “ಪ್ರತಿಯೊಂದು ಅಧ್ಯಾಯದಲ್ಲಿ ಕೊಡಲ್ಪಟ್ಟಿರುವ ಆಲೋಚನಾಪ್ರೇರಕ ಪ್ರಶ್ನೆಗಳೇ ನನಗೆ ತುಂಬ ಆಸಕ್ತಿದಾಯಕವಾಗಿದ್ದವು; ಇವು ವಾಚಕನು ತಾನು ಓದುತ್ತಿರುವಂಥ ವಿಷಯಗಳನ್ನು ಗ್ರಹಿಸಲು ಮತ್ತು ಅವುಗಳ ಕುರಿತು ಧ್ಯಾನಿಸಲು ಸಹಾಯಮಾಡುತ್ತವೆ.”

ಅನೇಕ ವರ್ಷಗಳಿಂದ ಬೈಬಲಿನ ಕುರಿತು ಕಲಿಸುತ್ತಿರುವ ಸ್ತ್ರೀಯೊಬ್ಬಳು ತಿಳಿಸಿದ್ದು: “ಈ ಪುಸ್ತಕವು ಎಷ್ಟು ಸರಳವಾದ ರೀತಿಯಲ್ಲಿ ಬರೆಯಲ್ಪಟ್ಟಿದೆ! ಇದನ್ನು ಉಪಯೋಗಿಸಿ ಅಧ್ಯಯನಗಳನ್ನು ನಡೆಸುವುದು ನಿಜವಾಗಿಯೂ ಆನಂದದಾಯಕ ಸಂಗತಿಯಾಗಿದೆ.”

“ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ,” “ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?” “ಪುನರುತ್ಥಾನದ ನಿರೀಕ್ಷೆಗಿರುವ ಶಕ್ತಿ,” ಮತ್ತು “ಸಲಹೆಗೆ ಕಿವಿಗೊಡಿರಿ, ಶಿಸ್ತನ್ನು ಅಂಗೀಕರಿಸಿರಿ” ಎಂಬ ಅಧ್ಯಾಯಗಳನ್ನು ನೀವು ಪರೀಕ್ಷಿಸುವಾಗ, ಈ ಪುಸ್ತಕದ ಕುರಿತು ಬಹುಶಃ ನಿಮಗೂ ಇದೇ ರೀತಿ ಅನಿಸಬಹುದು. ಇದರ ಜೊತೆಯಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಕೊಡಲ್ಪಟ್ಟಿರುವ ವಿಳಾಸಕ್ಕೆ ಅಥವಾ ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ 192-ಪುಟದ ಕಾಗದದ ರಟ್ಟುಳ್ಳ ಈ ಪುಸ್ತಕದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನೀವು ವಿನಂತಿಸಬಹುದು. (g04 4/8)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಒಬ್ಬನೇ ಸತ್ಯ ದೇವರನ್ನು ಆರಾಧಿಸಿರಿ ಎಂಬ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.

[ಪುಟ 32ರಲ್ಲಿರುವ ಚಿತ್ರ ಕೃಪೆ]

ಪುಸ್ತಕದ ಮುಖಪುಟ: U.S. Navy photo