ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಮಕ್ಕಳು “ಮಕ್ಕಳು​—⁠ಅವರಿಗೆ ಹೆತ್ತವರಿಂದ ಅಗತ್ಯವಿರುವ ವಿಷಯಗಳು” ಎಂಬ ಲೇಖನಮಾಲೆಯನ್ನು ಪಡೆದಾಕ್ಷಣ ನಾನದನ್ನು ಕಾತುರದಿಂದ ಓದಿದೆ. (ಏಪ್ರಿಲ್‌-ಜೂನ್‌ 2004) ಆ ಲೇಖನಗಳು ಐದು ಮಕ್ಕಳ ತಾಯಿಯಾಗಿರುವ ನನ್ನ ಮನಸ್ಸನ್ನು ಆಳವಾಗಿ ಸ್ಪರ್ಶಿಸಿದವು. ಲೋಕದಲ್ಲಿರುವ ಎಲ್ಲಾ ತಾಯಂದಿರು ಅವುಗಳನ್ನು ಓದಲು ಸಾಧ್ಯವಾಗಬೇಕೆಂದು ಹಾರೈಸುತ್ತೇನೆ.

ಸಿ. ಎಮ್‌., ಫ್ರಾನ್ಸ್‌ (g04 10/22)

ನೀವು ಪ್ರಕಟಪಡಿಸುವ ಲೇಖನಗಳು ನನಗೆ ಸರಿಯಾದ ಸಮಯದಲ್ಲಿ ಬರುತ್ತಿರುವಂತೆ ತೋರುತ್ತದೆ. ನಾನು ಗರ್ಭಿಣಿಯೆಂದು ನನಗೂ ನನ್ನ ಗಂಡನಿಗೂ ತಿಳಿದುಬಂದಾಗ ನೀವು ಗರ್ಭಿಣಿ ಸ್ತ್ರೀಯರಿಗಾಗಿ ಮಾಹಿತಿಯನ್ನು ಪ್ರಕಟಿಸಿದಿರಿ. (ಏಪ್ರಿಲ್‌-ಜೂನ್‌, 2003) ನಮಗೀಗ ಮೂರು ತಿಂಗಳ ಗಂಡುಮಗು ಇದೆ ಮತ್ತು ನಾವು ಅದರ ಸಂತೋಷಭರಿತ ಹೆತ್ತವರಾಗಿದ್ದೇವೆ. ಈಗ ನೀವು ಹಸುಳೆಗಳನ್ನು ಬೆಳೆಸುವ ಬಗ್ಗೆ ಅದ್ಭುತವಾದ ಕಿವಿಮಾತನ್ನು ಮುದ್ರಿಸಿದ್ದೀರಿ. ಒಬ್ಬ ಯುವ ತಾಯಿಗೆ ಈ ಲೇಖನಗಳು ತುಂಬ ಸಹಾಯಕಾರಿಯಾಗಿವೆ.

ಡಿ. ಕೆ., ಪೋಲೆಂಡ್‌ (g04 10/22)

ಗಿಡಮೂಲಿಕೆ ಔಷಧಿಗಳು “ಗಿಡಮೂಲಿಕೆ ಔಷಧಿಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೋ?” ಎಂಬ ಲೇಖನವನ್ನು ಓದಿ ಸಂತೋಷವಾಯಿತು. (ಜನವರಿ-ಮಾರ್ಚ್‌, 2004) ನಾನೊಬ್ಬ ರೆಜಿಸ್ಟರ್ಡ್‌ ನರ್ಸ್‌ ಆಗಿದ್ದೇನೆ, ಮತ್ತು ನನ್ನ ಕೀಲುನೋವುಗಳಿಗಾಗಿ ಹಲವಾರು ಪ್ರಾಕೃತಿಕ ಔಷಧಿಗಳನ್ನು ಬಳಸುತ್ತೇನೆ. ನನಗೆ ಅವು ತುಂಬ ಪ್ರಯೋಜನವನ್ನು ತಂದಿವೆ. ಆದರೆ ಕೆಲವೊಂದು ಗಿಡಮೂಲಿಕೆಗಳು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವಿಪರೀತವಾದ ರಕ್ತಸ್ರಾವಕ್ಕೆ ನಡೆಸಬಲ್ಲವೆಂದು ನೀವು ತಿಳಿಸಲಿಲ್ಲ. ಶಸ್ತ್ರಚಿಕಿತ್ಸೆಯ ಮುಂಚೆ ಕೆಲವೊಂದು ಗಿಡಮೂಲಿಕೆಗಳ ಸೇವನೆಯನ್ನು ನಿಲ್ಲಿಸುವುದು ಯೆಹೋವನ ಸಾಕ್ಷಿಗಳಿಗೆ ಒಂದು ಪ್ರಮುಖ ವಿಷಯವಾಗಿದೆ.

ಜೆ. ಎಚ್‌., ಯುನೈಟಡ್‌ ಸ್ಟೇಟ್ಸ್‌ (g04 10/22)

“ಎಚ್ಚರ!” ಪ್ರತಿಕ್ರಿಯಿಸುವುದು: ಈ ಮಹತ್ವಪೂರ್ಣ ಮರುಜ್ಞಾಪನವನ್ನು ನಾವು ಗಣ್ಯಮಾಡುತ್ತೇವೆ. ಶಸ್ತ್ರಚಿಕಿತ್ಸೆಯ ಮುಂಚೆ, ಒಬ್ಬ ರೋಗಿಯು ತನ್ನ ಡಾಕ್ಟರರಿಗೆ ತಾನು ತೆಗೆದುಕೊಳ್ಳುವ, ಗಿಡಮೂಲಿಕೆಗಳ ಸಮೇತ ಎಲ್ಲಾ ಔಷಧಗಳ ಕುರಿತು ತಿಳಿಸುವುದು ಪ್ರಾಮುಖ್ಯ. ‘ರಕ್ತವನ್ನು ವಿಸರ್ಜಿಸಿರಿ’ ಎಂಬ ಬೈಬಲಿನ ಆಜ್ಞೆಯನ್ನು ಪಾಲಿಸುವವರಿಗೆ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ.​—⁠ಅ. ಕೃತ್ಯಗಳು 15:28.

ಒಡಹುಟ್ಟಿದವರ ನಡುವೆ ಪ್ರತಿಸ್ಪರ್ಧೆ “ಯುವ ಜನರು ಪ್ರಶ್ನಿಸುವುದು . . . ನಾನು ನನ್ನ ಒಡಹುಟ್ಟಿದವರ ಛಾಯೆಯಿಂದ ಹೇಗೆ ಹೊರಬರಬಲ್ಲೆ?” ಎಂಬ ಲೇಖನಕ್ಕಾಗಿ ನನ್ನ ಗಾಢವಾದ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. (ಜನವರಿ-ಮಾರ್ಚ್‌ 2004) ನನಗೆ 16 ವರ್ಷ ಪ್ರಾಯ, ಮತ್ತು ನನ್ನ ಅಕ್ಕ ಯಾವಾಗಲೂ ಇತರರ ಗಮನಕ್ಕೆ ಪಾತ್ರಳಾಗುತ್ತಾಳೆಂದು ನನಗೆ ತೋರುತ್ತದೆ. ಯೆಹೋವನು ನನ್ನನ್ನು ಗಮನಿಸುತ್ತಾನೆಂದು ನನಗೆ ತಿಳಿದಿದೆ, ಆದರೆ ಯಾಕೋ ನನಗೆ ಈಗಲೂ ಒಂಟಿಭಾವನೆಯು ಕಾಡುತ್ತದೆ. ಈ ಲೇಖನವು ನನ್ನ ಭಾವನೆಗಳ ಕುರಿತಾಗಿಯೇ ಚರ್ಚಿಸಿತು. ಮತ್ತು ಅದರಲ್ಲಿ ತುಂಬ ಸೌಮ್ಯವಾದ ಪದಗಳು ಬಳಸಲ್ಪಟ್ಟಿರುವುದರಿಂದ, ಅದನ್ನು ಓದುವಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿತು. ವ್ಯಾವಹಾರಿಕ ಸಲಹೆಗಾಗಿ ನಿಮಗೆ ಉಪಕಾರ. ಅದು ನನ್ನ ಹೃದಯವನ್ನು ಸೌಮ್ಯಗೊಳಿಸಿತು.

ಎಮ್‌. ಓ., ಜಪಾನ್‌ (g04 9/22)

ಕೆಲವೊಮ್ಮೆ ನನಗೆ ಆ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಯುವ ಜನರಂತೆಯೇ ಅನಿಸಿದ್ದಿದೆ. ನನಗೆ ನೆನಪಿರುವಷ್ಟು ಸಮಯದಿಂದ, ನನ್ನ ಅಕ್ಕನನ್ನು ಒಂದು ಒಳ್ಳೇ ಮಾದರಿಯಾಗಿ ಪರಿಗಣಿಸಲಾಗಿರುತ್ತದೆ. ಆದುದರಿಂದ, ಕುಟುಂಬದ ಇನ್ನೊಬ್ಬ ಸದಸ್ಯರೊಂದಿಗೆ ಯಾವಾಗಲೂ ಹೋಲಿಸಲ್ಪಡುವಾಗ ಹೇಗನಿಸುತ್ತದೆಂದು ನನಗೆ ತಿಳಿದಿದೆ. ಸ್ವತಃ ನಾವು ಚೆನ್ನಾಗಿ ಮಾಡಬಲ್ಲ ಕೆಲಸಗಳನ್ನು ಮಾಡಲು ಪ್ರಯತ್ನಿಸುವುದರ ಕುರಿತು ನೀವು ಹೇಳಿದ ಮಾತು, “ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣು”ಗಳಂತೆ ಸರಿಯಾದ ಸಮಯಕ್ಕೆ ಬಂದ ಮಾತುಗಳಾಗಿದ್ದವು.​—⁠ಜ್ಞಾನೋಕ್ತಿ 25:⁠11.

ಎಸ್‌. ಟಿ., ಯುನೈಟಡ್‌ ಸ್ಟೇಟ್ಸ್‌ (g04 9/22)

ನನಗೊಬ್ಬ ಅಕ್ಕ ಮತ್ತು ಒಬ್ಬ ತಮ್ಮನಿದ್ದಾನೆ. ಅವರಿಬ್ಬರು ಯಾವುದೇ ಕೆಲಸವನ್ನು ಮಾಡಿದರೂ ನನಗಿಂತಲೂ ಹೆಚ್ಚು ಉತ್ತಮ ರೀತಿಯಲ್ಲಿ ಅದನ್ನು ಮಾಡುತ್ತಾರೆ. ಆದುದರಿಂದ ನಾನು ನಿಮ್ಮ ಹಿತವಚನವನ್ನು ಪಾಲಿಸುತ್ತಾ ಈಗ ಸ್ಪ್ಯಾನಿಷ್‌ ಭಾಷೆಯನ್ನು ಕಲಿಯುತ್ತಿದ್ದೇನೆ ಮತ್ತು ಶುಶ್ರೂಷೆಯಲ್ಲಿ ಹೆಚ್ಚು ಬಾರಿ ಪಾಲ್ಗೊಳ್ಳುತ್ತಿದ್ದೇನೆ. ಅದನ್ನು ಕಲಿಯುವುದು ತುಂಬ ಮೋಜುದಾಯಕ ಮತ್ತು ಜನರು ನನ್ನನ್ನು ಗಮನಿಸುತ್ತಿದ್ದಾರೆ.

ಎಚ್‌. ಬಿ., ಯುನೈಟಡ್‌ ಸ್ಟೇಟ್ಸ್‌ (g04 9/22)

ಹೋಮ್‌ವರ್ಕ್‌ ನಾನು ಮಾಧ್ಯಮಿಕ ಶಾಲೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದೇನೆ. ನನಗೆ ಯಾವಾಗಲೂ, ಸಮಯವನ್ನು ಉಪಯೋಗಿಸುವ ವಿಷಯದಲ್ಲಿ ಸಮಸ್ಯೆಗಳಿರುತ್ತಿದ್ದವು. “ಯುವ ಜನರು ಪ್ರಶ್ನಿಸುವುದು . . . ನನ್ನ ಹೋಮ್‌ವರ್ಕ್‌ ಮಾಡಲು ನಾನು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ?” ಎಂಬ ಲೇಖನವನ್ನು ಓದಿ ನನಗೆ ತುಂಬ ಸಹಾಯ ಸಿಕ್ಕಿತು. (ಏಪ್ರಿಲ್‌-ಜೂನ್‌ 2004) ನಾನು ತೀರ ಹೆಚ್ಚು ಟಿ.ವಿ. ನೋಡುತ್ತಿರಲಿಲ್ಲ. ಆದರೆ ಅದನ್ನು ನೋಡಲು ಕುಳಿತರಂತೂ ಒಂದರ ನಂತರ ಇನ್ನೊಂದು ಕಾರ್ಯಕ್ರಮಗಳನ್ನು ನೋಡುತ್ತಾ ಇರುತ್ತಿದ್ದೆ. ಈಗಂತೂ ನಾನದನ್ನು ನೋಡುವುದೇ ಇಲ್ಲ.

ಆರ್‌. ಓ., ಜಪಾನ್‌ (g04 11/8)