ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನ್ನ ಪ್ರೊಫೆಸರರು ಬಹಳ ಸಂತೋಷಪಟ್ಟರು”

“ನನ್ನ ಪ್ರೊಫೆಸರರು ಬಹಳ ಸಂತೋಷಪಟ್ಟರು”

“ನನ್ನ ಪ್ರೊಫೆಸರರು ಬಹಳ ಸಂತೋಷಪಟ್ಟರು”

ಈ ಮೇಲಿನ ಮಾತನ್ನು, ಜಾರ್ಜಿಯ ದೇಶದ ಟಬಿಲಿಸೀ ರಾಜ್ಯದ ವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿನ ಮೊದಲನೇ ವರುಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬನು ಎಚ್ಚರ! ಪತ್ರಿಕೆಯ ಪ್ರಕಾಶಕರಿಗೆ ಬರೆದ ಪತ್ರದಲ್ಲಿ ತಿಳಿಸಿದನು. ಈ ವಿದ್ಯಾರ್ಥಿಯು ಎಚ್ಚರ! ಪತ್ರಿಕೆಯ ಪ್ರಕಾಶಕರಿಗೆ ಪತ್ರ ಬರೆದದ್ದೇಕೆ?

“ಇಸವಿ 1998ರಿಂದ ನಾನು ನಿಮ್ಮ ಪತ್ರಿಕೆಗಳನ್ನು ಓದುತ್ತಿದ್ದೇನೆ. . . . ಅವು ನಿಜವಾಗಿಯೂ ನನಗೆ ನನ್ನ ವಿದ್ಯಾಭ್ಯಾಸದಲ್ಲಿ ಬಹಳ ಸಹಾಯಮಾಡುತ್ತಿವೆ. ಲೇಖನಗಳು ಯಾವಾಗಲೂ ಸಮಯೋಚಿತವಾಗಿರುತ್ತವೆ ಮತ್ತು ಅವು ನಂಬಲರ್ಹವಾದ ಮಾಹಿತಿಯಿಂದ ತುಂಬಿರುತ್ತವೆ. ಇತ್ತೀಚೆಗೆ ‘ಕ್ಲೋನಿಂಗ್‌ ಮತ್ತು ಸ್ಟೆಮ್‌ ಸೆಲ್‌ ಪ್ರಭೇದಗಳು’ ಎಂಬ ವಿಷಯದ ಕುರಿತು ನಾನು ಪ್ರಬಂಧವನ್ನು ಬರೆಯಬೇಕಿತ್ತು. ಅದನ್ನು ಬರೆಯಲು ನಾನು ಎಚ್ಚರ! ಪತ್ರಿಕೆಯ ನವೆಂಬರ್‌ 22, 2002ರ ಸಂಚಿಕೆಯಲ್ಲಿ ಬಂದಿರುವ ಸ್ಟೆಮ್‌ ಸೆಲ್ಸ್‌​—⁠ವಿಜ್ಞಾನವು ತುಂಬ ದೂರ ಹೋಗಿದೆಯೊ? (ಇಂಗ್ಲಿಷ್‌) ಎಂಬ ಲೇಖನಮಾಲೆಯಲ್ಲಿರುವ ಮಾಹಿತಿಯನ್ನು ಉಪಯೋಗಿಸಿದೆ. ನನ್ನ ಪ್ರೊಫೆಸರರು ಬಹಳ ಸಂತೋಷಪಟ್ಟರು ಮತ್ತು ನನಗೆ ಗರಿಷ್ಠ ಅಂಕಗಳು ದೊರೆತವು.

“ಇಂಥ ಆಸಕ್ತಿಕರ ವಿಷಯಗಳ ಕುರಿತು, ಅದರಲ್ಲೂ ಮುಖ್ಯವಾಗಿ ಔಷಧಗಳ ಕುರಿತು ನೀವು ಲೇಖನಗಳನ್ನು ಪ್ರಕಟಪಡಿಸುವುದಕ್ಕಾಗಿ ನನಗೆ ತುಂಬ ಸಂತೋಷ. ನಾನಾಗಲಿ ನನ್ನ ಕುಟುಂಬದವರಾಗಲಿ ಯೆಹೋವನ ಸಾಕ್ಷಿಗಳಲ್ಲದಿದ್ದರೂ, ನಾವು ನಿಮ್ಮ ಪತ್ರಿಕೆಗಳನ್ನು ಓದಿ ತುಂಬ ಆನಂದಿಸುತ್ತೇವೆ. ಇವು, ನಮ್ಮ ಸುತ್ತಲಿನ ಲೋಕದ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ.”

ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಂಥ ಪ್ರಾಯೋಗಿಕ ಮಾರ್ಗದರ್ಶನವು ಬೈಬಲಿನಲ್ಲಿ ಅಡಕವಾಗಿದೆ ಎಂಬುದನ್ನು ತಿಳಿಯುವಾಗ ನಿಮಗೆ ಆಶ್ಚರ್ಯವಾಗಬಹುದು. ಈ ವಿಷಯವನ್ನು, ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ 32 ಪುಟಗಳ ಆಸಕ್ತಿಕರವಾದ ಬ್ರೋಷರಿನಲ್ಲಿ ಎತ್ತಿತೋರಿಸಲಾಗಿದೆ. ಈ ಪುಟದಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ, ಈ ಬ್ರೋಷರಿನ ಕುರಿತಾದ ಹೆಚ್ಚಿನ ಮಾಹಿತಿಗಾಗಿ ನೀವು ವಿನಂತಿಸಬಹುದು. (g05 1/22)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರಿನ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡುವಂತೆ ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.