ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನಗೆ ಇದರ ಕುರಿತು ಹೆಮ್ಮೆಯನಿಸಬೇಕು’

‘ನಿನಗೆ ಇದರ ಕುರಿತು ಹೆಮ್ಮೆಯನಿಸಬೇಕು’

‘ನಿನಗೆ ಇದರ ಕುರಿತು ಹೆಮ್ಮೆಯನಿಸಬೇಕು’

ಪ್ರಾಮಾಣಿಕರಾಗಿ ಇರುವುದರ ಮುಖ್ಯತೆಯನ್ನು ದೇವರ ನಿಜ ಸೇವಕರು ಗಣ್ಯಮಾಡುತ್ತಾರೆ. ಸೃಷ್ಟಿಕರ್ತನ ಮೇಲಿರುವ ಪ್ರೀತಿಯು ಪ್ರಾಮಾಣಿಕರಾಗಿರುವಂತೆ ಅವರನ್ನು ಪ್ರಚೋದಿಸುತ್ತದೆ. ಉದಾಹರಣೆಗೆ, ಲಾಸಾರೋವಿನ ವಿಷಯವನ್ನು ಪರಿಗಣಿಸಿರಿ. ಕೆಲವು ಸಮಯದ ಹಿಂದೆ, ಮೆಕ್ಸಿಕೊವಿನ ವಾಟೂಲ್‌ಕೊ ಎಂಬಲ್ಲಿನ ಒಂದು ಹೋಟೆಲಿನಲ್ಲಿ ಅವನು ಕೆಲಸಮಾಡುತ್ತಿದ್ದಾಗ ಪ್ರವೇಶಾಂಗಣದಲ್ಲಿ ಅವನಿಗೆ 70 ಡಾಲರ್‌ ಹಣ ಸಿಕ್ಕಿತು. ಕೂಡಲೆ ಅವನು ಆ ಹಣವನ್ನು ಮ್ಯಾನೆಜರ್‌ಗೆ ಕೊಟ್ಟನು. ಸ್ವಲ್ಪ ಸಮಯದ ನಂತರ ಒಂದು ಸ್ನಾನದ ಕೋಣೆಯಲ್ಲಿ ಅವನು ಒಂದು ಪರ್ಸನ್ನು ಕಂಡುಕೊಂಡನು. ಅದನ್ನು ಸಹ ಅವನು ರಿಸೆಪ್ಷನ್‌ ಡೆಸ್ಕ್‌ಗೆ ನೀಡಿದನು. ಇದರಿಂದಾಗಿ ಅದನ್ನು ಕಳೆದುಕೊಂಡಿದ್ದ ಸ್ತ್ರೀಗೆ ಬಹಳ ಸಂತೋಷವಾಯಿತು.

ಅವನ ಈ ಕೃತ್ಯಗಳು ಜನರಲ್‌ ಮ್ಯಾನೆಜರನ ಗಮನಕ್ಕೆ ಬಂತು. ಹಣವನ್ನು ಮತ್ತು ಪರ್ಸನ್ನು ಹಿಂದಿರುಗಿಸುವಂತೆ ಲಾಸಾರೋವನ್ನು ಪ್ರೇರಿಸಿದ್ದು ಯಾವುದು ಎಂದು ಅವನು ಕೇಳಿದನು. ಬೈಬಲಿನಿಂದ ತಾನು ಕಲಿತಂಥ ನೈತಿಕ ಮೌಲ್ಯಗಳೇ ತನಗೆ ಸೇರಿರದ ವಸ್ತುವನ್ನು ತೆಗೆದುಕೊಳ್ಳದಂತೆ ಪ್ರೇರಿಸಿತು ಎಂದು ಲಾಸಾರೋ ತಿಳಿಸಿದನು. ಆ ಜನರಲ್‌ ಮ್ಯಾನೆಜರ್‌ ಒಂದು ಗಣ್ಯತಾ ಪತ್ರದಲ್ಲಿ ಲಾಸಾರೋವಿಗೆ ಹೇಳಿದ್ದು: “ಈ ರೀತಿಯ ಉಚ್ಚ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಜನರನ್ನು ಇಂದು ಕಂಡುಕೊಳ್ಳುವುದು ತೀರ ವಿರಳ. ನಿನ್ನ ಮನೋಭಾವವನ್ನು ನಾವು ಶ್ಲಾಘಿಸುತ್ತೇವೆ. ನೀನೊಬ್ಬ ಸಭ್ಯ ವ್ಯಕ್ತಿ ಎಂಬುದನ್ನು ರುಜುಪಡಿಸಿದೆ. ನಿನ್ನ ಸಹೋದ್ಯೋಗಿಗಳಿಗೆ ನೀನು ಒಂದು ಮಾದರಿಯಾಗಿದ್ದಿ. ನಿನಗೆ ಮತ್ತು ನಿನ್ನ ಕುಟುಂಬಕ್ಕೆ ಇದರ ಕುರಿತು ಹೆಮ್ಮೆಯನಿಸಬೇಕು.” ಲಾಸಾರೋವನ್ನು ಆ ತಿಂಗಳಿನ ಅತ್ಯುತ್ತಮ ಉದ್ಯೋಗಿ ಎಂದು ಗೌರವಿಸಲಾಯಿತು.

ಹಣ ಮತ್ತು ಪರ್ಸನ್ನು ಹಿಂದಿರುಗಿಸಿ ಲಾಸಾರೋ ತಪ್ಪು ಮಾಡಿದನೆಂದು ಅವನ ಕೆಲವು ಸಹೋದ್ಯೋಗಿಗಳು ನೆನಸಿದರು. ಆದರೆ ತಮ್ಮ ಧಣಿಯ ಪ್ರತಿಕ್ರಿಯೆಯನ್ನು ನೋಡಿದ ನಂತರ ಅವರು, ಲಾಸಾರೋ ನೈತಿಕ ಮೂಲತತ್ತ್ವಗಳನ್ನು ಎತ್ತಿಹಿಡಿದದ್ದಕ್ಕಾಗಿ ಅವನನ್ನು ಅಭಿನಂದಿಸಿದರು.

‘ಎಲ್ಲರಿಗೆ ಒಳ್ಳೇದನ್ನು ಮಾಡುವಂತೆ’ ಮತ್ತು ‘ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳುವಂತೆ’ ಯೇಸುವಿನ ನಂಬಿಗಸ್ತ ಹಿಂಬಾಲಕರನ್ನು ಬೈಬಲ್‌ ಉತ್ತೇಜಿಸುತ್ತದೆ. (ಗಲಾತ್ಯ 6:10; ಇಬ್ರಿಯ 13:​18, NW) ಕ್ರೈಸ್ತರಾದ ನಾವು ಪ್ರಾಮಾಣಿಕತೆಯನ್ನು ಪ್ರದರ್ಶಿಸುವಾಗ, “ನೀತಿಯುಳ್ಳವನೂ ಯಥಾರ್ಥನೂ” ಆಗಿರುವ ಬೈಬಲಿನ ದೇವರಾದ ಯೆಹೋವನಿಗೆ ಅದು ನಿಸ್ಸಂಶಯವಾಗಿ ಘನತೆಯನ್ನು ತರುತ್ತದೆ.​—⁠ಧರ್ಮೋಪದೇಶಕಾಂಡ 32:⁠4. (g05 6/8)