ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬನ್ನಿರಿ, “ನಮ್ಮ ವಿಧೇಯತೆ ಯಾರಿಗೆ ಸಲ್ಲತಕ್ಕದ್ದು?” ಎಂಬ ಸಾರ್ವಜನಿಕ ಭಾಷಣವನ್ನು ಆಲಿಸಿರಿ

ಬನ್ನಿರಿ, “ನಮ್ಮ ವಿಧೇಯತೆ ಯಾರಿಗೆ ಸಲ್ಲತಕ್ಕದ್ದು?” ಎಂಬ ಸಾರ್ವಜನಿಕ ಭಾಷಣವನ್ನು ಆಲಿಸಿರಿ

ಬನ್ನಿರಿ, “ನಮ್ಮ ವಿಧೇಯತೆ ಯಾರಿಗೆ ಸಲ್ಲತಕ್ಕದ್ದು?” ಎಂಬ ಸಾರ್ವಜನಿಕ ಭಾಷಣವನ್ನು ಆಲಿಸಿರಿ

ಒಬ್ಬರಿಗೆ ವಿಧೇಯರಾಗಬೇಕೆಂಬುದು ಹೆಚ್ಚಿನವರಿಗೆ ಇಷ್ಟವಾಗದ ಸಂಗತಿಯಾಗಿದೆ. ‘ನನಗಿಷ್ಟಬಂದಂತೆ ಮಾಡುತ್ತಾ ಸ್ವತಂತ್ರವಾಗಿರಲು ನಾನು ಬಯಸುತ್ತೇನೆ’ ಎಂಬುದು ಸರ್ವಸಾಮಾನ್ಯ ದೃಷ್ಟಿಕೋನವಾಗಿದೆ. ಆದರೆ ವಾಸ್ತವದ ಸಂಗತಿಯೇನೆಂದರೆ, ನಾವೆಲ್ಲರೂ ನಮ್ಮ ದೈನಂದಿನ ಜೀವಿತದಲ್ಲಿ ವಿಧೇಯತೆ ತೋರಿಸುವುದರ ಮೌಲ್ಯವನ್ನು ತಿಳಿದಿದ್ದೇವೆ. ಪ್ರತಿಸಲ ನೀವು ಒಂದು ಎಚ್ಚರಿಕೆಯ ಚಿಹ್ನೆ ಅಥವಾ ಅನುಸರಿಸಬೇಕಾದ ಸಲಹೆಗಳಿಗೆ ಗಮನಕೊಡುವಾಗ, ವಾಸ್ತವದಲ್ಲಿ ನೀವು ತಕ್ಕಮಟ್ಟಿನ ವಿಧೇಯತೆಯನ್ನು ತೋರಿಸುತ್ತಿದ್ದೀರಿ. ಮಾನವ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಐಹಿಕ ಅಧಿಕಾರಿಗಳ ನಿಯಮಗಳಿಗೆ ವಿಧೇಯತೆಯನ್ನು ತೋರಿಸುವುದು ಅತ್ಯಾವಶ್ಯಕವಾಗಿದೆ ಎಂಬುದನ್ನು ಯಾರು ತಾನೇ ಅಲ್ಲಗಳೆಯಸಾಧ್ಯವಿದೆ? ವಾಹನಸಂಚಾರದ ನಿಯಮಗಳಿಗೆ ವಿಧೇಯರಾಗಲು ಎಲ್ಲರೂ ನಿರಾಕರಿಸುವುದಾದರೆ ಏನು ಸಂಭವಿಸಬಹುದು ಎಂಬುದನ್ನು ತುಸು ಯೋಚಿಸಿರಿ!

ಆದರೆ ಮಾನವರು ಇತರ ಮಾನವರ ಮೇಲೆ ಅಧಿಕಾರವನ್ನು ಚಲಾಯಿಸುವಾಗ ಉಂಟಾಗುವ ಪರಿಣಾಮವು ಯಾವಾಗಲೂ ಸಕಾರಾತ್ಮಕವಾಗಿರುವುದಿಲ್ಲ. ಬಹಳ ಕಾಲಗಳ ಹಿಂದೆಯೇ ಬೈಬಲ್‌ ತಿಳಿಸಿದ್ದು, “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟು”ಮಾಡಿದ್ದಾನೆ. (ಪ್ರಸಂಗಿ 8:⁠9) ನಮ್ಮ ಭರವಸೆ ಮತ್ತು ವಿಧೇಯತೆಗೆ ಅರ್ಹನಾದ ಒಬ್ಬ ಅಧಿಕಾರಿ ಇದ್ದಾನೊ? ಇರುವುದಾದರೆ, ನಾವು ಹೇಗೆ ಅವನನ್ನು ಗುರುತಿಸಸಾಧ್ಯವಿದೆ? ಮತ್ತು ಅವನ ಆಳ್ವಿಕೆಯ ಕೆಳಗೆ ನಾವೇನನ್ನು ಎದುರುನೋಡಬಲ್ಲೆವು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು, “ನಮ್ಮ ವಿಧೇಯತೆ ಯಾರಿಗೆ ಸಲ್ಲತಕ್ಕದ್ದು?” ಎಂಬ ಆಸಕ್ತಿದಾಯಕ ಸಾರ್ವಜನಿಕ ಭಾಷಣದಲ್ಲಿ ನಾವು ಕಂಡುಕೊಳ್ಳಲಿದ್ದೇವೆ. ಈ ತಿಂಗಳಿನಲ್ಲಿ ಆರಂಭಗೊಳ್ಳಲಿರುವ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳಲ್ಲಿ ಈ ಭಾಷಣವು ನೀಡಲ್ಪಡುವುದು. ಲೋಕಾದ್ಯಂತ ಇಂಥ ನೂರಾರು ಅಧಿವೇಶನಗಳು ಜರಗಲಿವೆ. ನಿಮಗೆ ಸಮೀಪವಾಗಿರುವ ಸ್ಥಳವನ್ನು ಕಂಡುಕೊಳ್ಳಲು, ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ 5ನೇ ಪುಟದಲ್ಲಿರುವ ವಿಳಾಸಗಳಿಗೆ ಬರೆಯಿರಿ. (g05 5/22)