ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ಪತ್ರಿಕೆಯನ್ನು ಓದಿದ್ದರಿಂದ ಎಚ್ಚರಿಕೆ ಸಿಕ್ಕಿದ್ದು

ಎಚ್ಚರ! ಪತ್ರಿಕೆಯನ್ನು ಓದಿದ್ದರಿಂದ ಎಚ್ಚರಿಕೆ ಸಿಕ್ಕಿದ್ದು

ಎಚ್ಚರ! ಪತ್ರಿಕೆಯನ್ನು ಓದಿದ್ದರಿಂದ ಎಚ್ಚರಿಕೆ ಸಿಕ್ಕಿದ್ದು

ಕ್ರಮವಾಗಿ ಎಚ್ಚರ! ಪತ್ರಿಕೆಯನ್ನು ಓದುವವರು ಅದರ ಲೇಖನಗಳ ಮೌಲ್ಯವನ್ನು ಗಣ್ಯಮಾಡುತ್ತಾರೆ. ಕಳೆದ ಡಿಸೆಂಬರ್‌ ತಿಂಗಳಿನಲ್ಲಿ, ಥಾಯ್‌ಲೆಂಡ್‌ನ ಖಾವೊ ಲಾಕ್‌ನಲ್ಲಿ ರಜಾಕಾಲವನ್ನು ಕಳೆಯುತ್ತಿದ್ದ ಒಬ್ಬ ಜರ್ಮನ್‌ ದಂಪತಿಗೆ, ಫೆಬ್ರವರಿ 8, 2001ರ (ಇಂಗ್ಲಿಷ್‌) ಸಂಚಿಕೆಯಲ್ಲಿ ಬಂದಿದ್ದ “ವಿನಾಶಕ ಅಲೆಗಳು​—⁠ಊಹಾಪೋಹಗಳು ಮತ್ತು ವಾಸ್ತವಿಕತೆಗಳು” ಎಂಬ ಲೇಖನವು ಅತ್ಯಂತ ಅಮೂಲ್ಯವಾದದ್ದಾಗಿ ರುಜುವಾಯಿತು.

ಫ್ರಾಂಕನ್‌ಪೋಸ್ಟ್‌ (ಸೆಲ್‌ಬ ಟಾಗ್‌ಬ್ಲಾಟ್‌) ಎಂಬ ಜರ್ಮನ್‌ ವಾರ್ತಾಪತ್ರಿಕೆಯು ಈ ದಂಪತಿಯ ಅನುಭವವನ್ನು ಹೀಗೆ ವರದಿಸಿತು: “‘ನಾವು ಈಜುತ್ತಾ ಇದ್ದೆವು’ ಎಂದು ರೋಸ್ವೇಟಾ ಗಸಲ್‌ ಜ್ಞಾಪಿಸಿಕೊಳ್ಳುತ್ತಾರೆ. ಸಮುದ್ರದಲ್ಲಿ ಈಜಾಡಿದ ಬಳಿಕ, ಗಸಲ್‌ ದಂಪತಿಗಳು ಬಟ್ಟೆ ಬದಲಾಯಿಸಲಿಕ್ಕಾಗಿ ತಮ್ಮ ಹೋಟೆಲ್‌ಗೆ ಹೋದರು. ತದನಂತರ ಅವರಿಗೆ ಕಂಡ ವಿಚಿತ್ರ ದೃಶ್ಯವನ್ನು ರೈನರ್‌ ಗಸಲ್‌ ಹೀಗೆ ವರ್ಣಿಸುತ್ತಾರೆ: ‘ಹತ್ತು ನಿಮಿಷಗಳ ಬಳಿಕ ನಾವು ಸಮುದ್ರ ತೀರಕ್ಕೆ ಹಿಂದಿರುಗಿದಾಗ, ಸಮುದ್ರವು ಕಣ್ಮರೆಯಾಗಿತ್ತು.’ ಸಮುದ್ರ ತೀರದಿಂದ ಸುಮಾರು ಏಳು ಕಿಲೊಮೀಟರುಗಳಷ್ಟು [ನಾಲ್ಕು ಮೈಲಿಗಳು] ದೂರದಲ್ಲಿದ್ದ ಬಂಡೆಯ ಸಾಲುಗಳ ವರೆಗೆ ನಾವು ನೋಡಸಾಧ್ಯವಿದ್ದದ್ದು, ಕಡಲತಳ ಮಾತ್ರವೇ. ‘ಅಷ್ಟರ ತನಕ ನೀರಿನಲ್ಲಿದ್ದ ಎಲ್ಲ ಈಜುಗಾರರು ಸಮುದ್ರಕ್ಕೆ ಸೆಳೆದೊಯ್ಯಲ್ಪಟ್ಟಿದ್ದರು.’ ಎಚ್ಚರ! ಪತ್ರಿಕೆಯಲ್ಲಿನ ಒಂದು ಲೇಖನದಿಂದಾಗಿ ತಾವು ಬದುಕಿ ಉಳಿದೆವು ಎಂದು ಗಸಲ್‌ ದಂಪತಿಯು ಹೇಳುತ್ತಾರೆ.” ಸುನಾಮಿ ಅಲೆಗಳು ಬರುವುದಕ್ಕೆ ಮುಂಚೆ ನೀರಿನ ಅಸಾಧಾರಣವಾದ ಇಳಿತವಿರುತ್ತದೆ ಎಂದು ಆ ಲೇಖನವು ವಿವರಿಸಿತ್ತು.

“ಗಸಲ್‌ ದಂಪತಿಯು ಬಹಳ ದೂರದಲ್ಲೇ ಒಂದು ರಾಕ್ಷಸ ಅಲೆಯನ್ನು ಕಂಡಾಗ, ಹಿಂದೆ ತಿರುಗಿ ಓಡಿಬರಲಾರಂಭಿಸಿದರು. ರೈನರ್‌ ಗಸಲ್‌ ಜ್ಞಾಪಿಸಿಕೊಳ್ಳುವಂತೆ, ನೀರಿನ ಗೋಡೆಯು ಸುಮಾರು 12ರಿಂದ 15 ಮೀಟರುಗಳಷ್ಟು [40ರಿಂದ 50 ಅಡಿಗಳು] ಎತ್ತರಕ್ಕೇರಿರುವಂತೆ ತೋರಿತು. ಅವರ ಸ್ಮರಣೆಯಲ್ಲಿ ಉಳಿದಿರುವಂಥ ಅತ್ಯಂತ ಭೀಕರ ಸಂಗತಿಗಳಲ್ಲಿ ಒಂದು ಯಾವುದಾಗಿತ್ತೆಂದರೆ, ಸಮುದ್ರ ತೀರದಲ್ಲಿದ್ದ ಇತರ ಪ್ರವಾಸಿಗರು ತುಂಬ ವಿಸ್ಮಯದಿಂದ ಸಮುದ್ರವನ್ನು ದಿಟ್ಟಿಸುತ್ತಾ ಇದ್ದರು. ‘ಅವರು ಸ್ವಲ್ಪವೂ ಕದಲಲಿಲ್ಲ. ಸುರಕ್ಷಿತ ಸ್ಥಳಕ್ಕೆ ಓಡಿಹೋಗುವಂತೆ ನಾನು ಅವರಿಗೆ ಕೂಗಿಹೇಳಿದೆ, ಆದರೆ ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ.’ ಅವರಲ್ಲಿ ಒಬ್ಬರೂ ಬದುಕಿ ಉಳಿಯಲಿಲ್ಲ.”

ಗಸಲ್‌ ದಂಪತಿಯ ಬಗ್ಗೆ ಮಾತಾಡುತ್ತಾ ಆ ವಾರ್ತಾಪತ್ರಿಕೆಯ ಲೇಖನವು ಇನ್ನೂ ಹೇಳಿಕೆ ನೀಡಿದ್ದು: “ಯೆಹೋವನ ಸಾಕ್ಷಿಗಳಾಗಿರುವ ಅವರು ತಮ್ಮ ರಜಾಕಾಲದಲ್ಲಿ ಸಮೀಪದಲ್ಲಿದ್ದ ಸಭೆಯೊಂದಿಗೆ ಸಹವಾಸಿಸುತ್ತಿದ್ದರು, ಅದು ಖಾವೊ ಲಾಕ್‌ನಿಂದ 140 ಕಿಲೊಮೀಟರುಗಳಷ್ಟು [85 ಮೈಲಿಗಳು] ದೂರವಿತ್ತು. ಈ ಮಹಾದುರಂತದ ಬಗ್ಗೆ ಅವರ ಜೊತೆ ವಿಶ್ವಾಸಿಗಳಿಗೆ ಗೊತ್ತಾದಾಗ, ಅವರನ್ನು ಹುಡುಕಲಿಕ್ಕಾಗಿ ಇಡೀ ಸಭೆಯು ಖಾವೊ ಲಾಕ್‌ಗೆ ಪ್ರಯಾಣಿಸಿತು.”

ಈಗ ಸುರಕ್ಷಿತವಾಗಿ ಜರ್ಮನಿಗೆ ಹಿಂದಿರುಗಿರುವ ಈ ದಂಪತಿ, ಎಚ್ಚರ! ಪತ್ರಿಕೆಯಲ್ಲಿ ಇದ್ದಂಥ ಅಮೂಲ್ಯ ಮಾಹಿತಿಗಾಗಿ ಎಷ್ಟು ಕೃತಜ್ಞರಾಗಿದ್ದಾರೆ! ಮತ್ತು ಅವರಿಗೆ ಸಹಾಯಮಾಡಿದಂಥ ಥಾಯ್‌ಲೆಂಡ್‌ನ ಜನರಿಗೆ ಅದರಲ್ಲೂ ವಿಶೇಷವಾಗಿ ಯಥಾರ್ಥ ಕ್ರೈಸ್ತ ಪ್ರೀತಿಯನ್ನು ತೋರಿಸಿದಂಥ ಅವರ ಆಧ್ಯಾತ್ಮಿಕ ಸಹೋದರರಿಗೆ ಅವರೆಷ್ಟು ಆಭಾರಿಗಳಾಗಿದ್ದಾರೆ! (g05 7/22)