ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ನಮ್ಮ ವಾಚಕರಿಂದ

ಯುವ ಜನರು ಪ್ರಶ್ನಿಸುವುದು “ಯುವ ಜನರು ಪ್ರಶ್ನಿಸುವುದು . . . ನಾನು ಸೋಲನ್ನು ಹೇಗೆ ಎದುರಿಸಬಲ್ಲೆ?” ಎಂಬ ಅಪೂರ್ವ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು. (ಜನವರಿ-ಮಾರ್ಚ್‌, 2005) ಆ್ಯನಳಂತೆ, ನಾನು ಸಹ ದೇವರಿಗೆ ನಿರಾಶೆಯನ್ನುಂಟುಮಾಡಿದ್ದೇನೆ ಮತ್ತು ಆತನ ಕ್ಷಮಾಪಣೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ನನಗೂ ಅನಿಸಿತು. ಆದರೆ ಆ ಲೇಖನವು ವಿವರಿಸಿದಂತೆ, ಯೆಹೋವನು ದಾವೀದನನ್ನು ಕ್ಷಮಿಸಿದನು ಮತ್ತು ಅವನಿಗೆ ಬಲಹೀನತೆಗಳಿದ್ದರೂ ಅವನಿಗೆ ಸಮೀಪವಾಗಿ ಉಳಿದನು. ನಾವು ಬೀಳುವುದಾದರೂ, ಪುನಃ ನಿಲ್ಲಲಿಕ್ಕಾಗಿ ಯೆಹೋವನು ನಮಗೆ ಸಹಾಯಮಾಡುವನು ಎಂದು ತಿಳಿದಿರುವುದು ಎಷ್ಟು ಉತ್ತೇಜನದಾಯಕವಾಗಿದೆ!

ಜಿ. ಕೆ., ಇಟಲಿ

ನನಗೆ ತುಂಬ ಸಹಾಯ ನೀಡಿದ್ದು ಗಲಾತ್ಯ 6:4ನೆಯ ವಚನವೇ. ನಾನು ಯಾವಾಗಲೂ ನನ್ನ ತರಗತಿಯಲ್ಲಿರುವ ಅತ್ಯುತ್ತಮ ವಿದ್ಯಾರ್ಥಿಗಳೊಂದಿಗೆ ನನ್ನನ್ನು ಹೋಲಿಸಿ ನೋಡುತ್ತೇನೆ ಎಂಬುದು ನನಗೆ ಮನವರಿಕೆಯಾಯಿತು. ನನಗೆ ನಾನೇ ಹಾನಿಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಈ ಲೇಖನವು ಸಹಾಯಮಾಡಿತು.

ಸಿ. ಪಿ., ಫ್ರಾನ್ಸ್‌ (g05 9/8)

ಶಾಲೆಯಲ್ಲಿ ಸಾಕ್ಷಿನೀಡುವುದು “ತಮ್ಮ ನಂಬಿಕೆಯ ಬಗ್ಗೆ ಧೀರತೆಯಿಂದ ಮಾತನಾಡುವ ಯುವ ಜನರು” ಎಂಬ ಲೇಖನವು ನಿಜವಾಗಿಯೂ ನನ್ನನ್ನು ಪ್ರಭಾವಿಸಿತು. (ಅಕ್ಟೋಬರ್‌-ಡಿಸೆಂಬರ್‌, 2004) ಹೊಲೀ, ಜೆಸಿಕ ಮತ್ತು ಮೆಲಿಸರ ಅನುಭವಗಳು, ಶಾಲೆಯಲ್ಲಿ ಸಹಪಾಠಿಗಳೊಂದಿಗಾಗಲಿ ಶಿಕ್ಷಕರೊಂದಿಗಾಗಲಿ ನನ್ನ ನಂಬಿಕೆಯ ಕುರಿತು ಮಾತಾಡುವಂತೆ ನನಗೆ ಸಹಾಯಮಾಡಿವೆ. ಮೊದಮೊದಲು ನಾನು ಸಾಕ್ಷಿನೀಡಲು ನಾಚಿಕೆಪಡುತ್ತಿದ್ದೆ. ಆದರೆ ಈಗ ಶಾಲೆಯಲ್ಲಿ ನನಗೆ ಸಿಗುವಂಥವರೊಂದಿಗೆ ಮಾತಾಡಲು ಉತ್ತೇಜಿತನಾಗಿದ್ದೇನೆ.

ಜಿ. ಓ., ನೈಜೀರಿಯ (g05 9/8)

ತೊನ್ನು ಇತ್ತೀಚಿಗೆ ನನ್ನ ಹೃದಯವನ್ನು ಸ್ಪರ್ಶಿಸಿರುವ ಒಂದು ಲೇಖನವು, “ತೊನ್ನು ಎಂದರೇನು?” ಎಂಬುದೇ ಆಗಿತ್ತು. (ಜನವರಿ-ಮಾರ್ಚ್‌, 2005) ನಾನು ಒಂಬತ್ತು ವರ್ಷದವಳಾಗಿದ್ದಾಗಿನಿಂದಲೂ ನನಗೆ ತೊನ್ನು ಇತ್ತು. ಈಗ ನಾನು 30ಗಳ ಪ್ರಾಯದಲ್ಲಿದ್ದೇನೆ. ಅನೇಕ ಅಸಫಲ ಚಿಕಿತ್ಸೆಗಳ ಬಳಿಕ, ಇದು ಗುಣವಾಗಲಿಕ್ಕಾಗಿ ದೇವರ ನೂತನ ಲೋಕವು ಬರುವ ತನಕ ಕಾಯಲೇಬೇಕು ಎಂಬ ವಾಸ್ತವಾಂಶವನ್ನು ನಾನು ಅಂಗೀಕರಿಸಿದ್ದೇನೆ. ಆದರೆ, ನನ್ನ ಜೀವನವು ಸಂತೃಪ್ತಿಕರವಾಗಿದೆ! ಈ ಚರ್ಮದ ರೋಗವಿದ್ದರೂ ತೃಪ್ತಿದಾಯಕ ಹಾಗೂ ಸಂತೋಷಭರಿತ ಜೀವನವನ್ನು ನಡೆಸಸಾಧ್ಯವಿದೆ!

ಎಮ್‌. ಎಸ್‌., ಮೊಸಾಂಬೀಕ್‌ (g05 9/8)

“ತೊನ್ನು ಎಂದರೇನು?” ಎಂಬ ಲೇಖನಕ್ಕಾಗಿ ನಿಮಗೆ ತುಂಬ ಧನ್ಯವಾದಗಳು. (ಜನವರಿ-ಮಾರ್ಚ್‌, 2005) ನನಗೆ ಐದು ವರ್ಷಗಳಿಂದ ಈ ರೋಗವಿದೆ. ಆದರೆ ನೀವು ಈ ಲೇಖನವನ್ನು ಪ್ರಕಟಿಸಿದಂದಿನಿಂದ ಈ ರೋಗವನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿಭಾಯಿಸಲು ಶಕ್ತಳಾಗಿದ್ದೇನೆ. ನಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆ ಬಹಳವಾಗಿ ಕಾಳಜಿ ತೋರಿಸುವಂಥ ಒಂದು ಕ್ರೈಸ್ತ ಸಂಘಟನೆಗೆ ಸೇರಿದವಳಾಗಿರುವುದಕ್ಕಾಗಿ ನಾನು ಸಂತೋಷಪಡುತ್ತೇನೆ!

ಕೆ. ಏಚ್‌., ಜರ್ಮನಿ

ಕಳೆದ 25 ವರ್ಷಗಳಿಂದ ನಾನು ತೊನ್ನಿನಿಂದ ಕಷ್ಟಾನುಭವಿಸುತ್ತಿದ್ದೇನೆ. ಇತರರು ಸಹ ನನ್ನ ಹಾಗೆಯೇ ಭಾವನಾತ್ಮಕ ಬೇಗುದಿಯನ್ನು ಅನುಭವಿಸುತ್ತಾರೆ ಎಂಬುದನ್ನು ತಿಳಿಯುವುದು ತಾನೇ ತುಂಬ ಸಾಂತ್ವನದಾಯಕವಾದದ್ದಾಗಿದೆ. ಈ ಅಸ್ವಸ್ಥತೆಯ ಬಗ್ಗೆ ಅನೇಕರಿಗೆ ತಪ್ಪು ಭಾವನೆಗಳಿವೆ, ಆದರೆ ಈ ಲೇಖನದ ಸಹಾಯದಿಂದ ಅವರು ನಿಷ್ಕೃಷ್ಟವಾದ ತಿಳಿವಳಿಕೆಯನ್ನು ಪಡೆದುಕೊಳ್ಳಸಾಧ್ಯವಿದೆ. ಈ ವಿಷಯದ ಕುರಿತು ಬರೆದುದಕ್ಕಾಗಿ ನಿಮಗೆ ತುಂಬ ಉಪಕಾರಗಳು!

ಕೆ. ಎಸ್‌., ಜಪಾನ್‌

ಸುಮಾರು 30 ವರ್ಷಗಳಿಂದ ನಾನು ಈ ಸಮಸ್ಯೆಯಿಂದ ಬಾಧಿತಳಾಗಿದ್ದೇನೆ. ಚಿಕ್ಕವಳಿದ್ದಾಗ, ನನ್ನ ಹೊರತೋರಿಕೆಯ ಕಾರಣ ನನ್ನ ಸಮವಯಸ್ಕರು ನನ್ನನ್ನು ಗೇಲಿಮಾಡುತ್ತಿದ್ದರು. ನಾನು ಈ ರೋಗದೊಂದಿಗೆ ಬದುಕಲು ಕಲಿತಿದ್ದೇನೆ. ಸಿಬಾಂಗಿಲಿಯಂತೆ, ಯೆಹೋವನು ಬಹಳ ಬೇಗನೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಮತ್ತು ಇದರ ಜೊತೆಗೆ ಬಹಳ ವೇದನೆಯನ್ನು ಉಂಟುಮಾಡುವಂಥ ಭಾವನಾತ್ಮಕ ಚಿಂತೆಯನ್ನು ತೆಗೆದುಹಾಕುವನು ಎಂಬ ಬೈಬಲ್‌ ವಾಗ್ದಾನದಿಂದ ಇತರರನ್ನು ಉತ್ತೇಜಿಸುವ ನಿರ್ಧಾರವನ್ನು ಮಾಡಿದ್ದೇನೆ.

ಯ. ಎಮ್‌., ಚೆಕ್‌ ರಿಪಬ್ಲಿಕ್‌

ನನ್ನ 19 ವರ್ಷದ ಮಗಳಿಗೆ ಈ ಅಸ್ವಸ್ಥತೆ ಇದೆ. ಅವಳು ಎಷ್ಟು ಕಣ್ಣೀರನ್ನು ಸುರಿಸಿದ್ದಾಳೆ ಅಥವಾ ಇದರ ಕುರಿತು ಅವಳು ಎಷ್ಟು ಸಲ ಯೆಹೋವನಿಗೆ ಪ್ರಾರ್ಥಿಸಿದ್ದಾಳೆ ಎಂಬುದು ಯಾರಿಗೂ ತಿಳಿದಿಲ್ಲ. ಅವಳು ಯೆಹೋವನನ್ನು ತುಂಬ ಪ್ರೀತಿಸುತ್ತಾಳೆ ಮತ್ತು ಇತ್ತೀಚಿಗೆ ಒಬ್ಬ ಪೂರ್ಣ ಸಮಯದ ಸೌವಾರ್ತಿಕಳಾದಳು. ನೀವು ಇಂಥ ಲೇಖನಗಳನ್ನು ಪ್ರಕಟಿಸುವುದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿದ್ದೇವೆ, ಏಕೆಂದರೆ ಇದು ಯೆಹೋವನು ನಮ್ಮ ಕುರಿತು ಕಾಳಜಿ ವಹಿಸುತ್ತಾನೆ ಎಂಬುದರ ಅನುಭವವಾಗಲು ನಮಗೆ ಸಹಾಯಮಾಡುತ್ತದೆ.

ಎಸ್‌. ಎಸ್‌., ಜಪಾನ್‌

ಸಂಕ್ಷಿಪ್ತವಾಗಿ ಹೇಳುವುದಾದರೆ, ತೊನ್ನಿನೊಂದಿಗೆ ಜೀವಿಸುವುದು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಪಂಥಾಹ್ವಾನದಾಯಕವಾದದ್ದಾಗಿದೆ. ನಾವು ಪರಸ್ಪರ ಹೆಚ್ಚು ಸಂವೇದನಾಶೀಲರಾಗಿರುವಂತೆ ಯೆಹೋವನು ನಮಗೆ ಕಲಿಸುತ್ತಿದ್ದಾನೆ. ನನ್ನ ಸಹಜ ಚರ್ಮದ ಬಣ್ಣವನ್ನು ಪುನಃ ಪಡೆಯುವ ಸಮಯಕ್ಕಾಗಿ ನಾನು ಮುನ್ನೋಡುತ್ತೇನೆ.

ಬಿ. ಡಬ್ಲ್ಯೂ., ಯುನೈಟೆಡ್‌ ಸ್ಟೇಟ್ಸ್‌ (g05 7/8)