ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ?

ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ?

ನೀವೇನು ನಂಬುತ್ತೀರೆಂಬುದು ಪ್ರಾಮುಖ್ಯವೊ?

ಜೀವನಕ್ಕೊಂದು ಉದ್ದೇಶವಿದೆಯೆಂದು ನೆನಸುತ್ತೀರೊ? ಜೀವವಿಕಾಸ ಸಿದ್ಧಾಂತವು ಸತ್ಯವಾಗಿರುತ್ತಿದ್ದಲ್ಲಿ, ಸೈಅಂಟಿಫಿಕ್‌ ಅಮೆರಿಕನ್‌ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಈ ಹೇಳಿಕೆಯು ಸರಿ: “ಜೀವವಿಕಾಸದ ಕುರಿತಾದ ನಮ್ಮ ಆಧುನಿಕ ತಿಳುವಳಿಕೆಯು . . . ಕಟ್ಟಕಡೆಗೆ ಜೀವನಕ್ಕೆ ಅರ್ಥವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ.”

ಆ ಮಾತುಗಳ ಸೂಚ್ಯಾರ್ಥವನ್ನು ಪರಿಗಣಿಸಿರಿ. ಒಂದುವೇಳೆ ಕಟ್ಟಕಡೆಗೆ ಜೀವನಕ್ಕೆ ಯಾವುದೇ ಅರ್ಥವಿಲ್ಲದಿರುವಲ್ಲಿ, ಜೀವನದಲ್ಲಿ ಸ್ವಲ್ಪ ಒಳಿತನ್ನು ಮಾಡಲು ಪ್ರಯತ್ನಿಸುವುದು ಮತ್ತು ಬಹುಶಃ ನಿಮ್ಮ ವಂಶವಾಹಿ ಗುಣಲಕ್ಷಣಗಳನ್ನು ಮುಂದಿನ ಪೀಳಿಗೆಗೆ ದಾಟಿಸುವುದನ್ನು ಬಿಟ್ಟರೆ ನಿಮಗೆ ಜೀವನದಲ್ಲಿ ಬೇರೇನೂ ಉದ್ದೇಶವಿಲ್ಲ. ನೀವು ಸಾಯುವಾಗ, ನಿಮ್ಮ ಅಸ್ತಿತ್ವವು ನಿತ್ಯಕ್ಕೂ ಅಂತ್ಯಗೊಳ್ಳುವುದು. ಜೀವನದ ಉದ್ದೇಶದ ಬಗ್ಗೆ ಯೋಚಿಸುವ, ತರ್ಕಿಸುವ ಮತ್ತು ಧ್ಯಾನಿಸುವ ಸಾಮರ್ಥ್ಯವುಳ್ಳ ನಿಮ್ಮ ಮಿದುಳು ಪ್ರಕೃತಿಯ ಒಂದು ಆಕಸ್ಮಿಕ ಅಷ್ಟೇ.

ಇವುಗಳಲ್ಲದೆ ಬೇರೆ ಸೂಚ್ಯಾರ್ಥಗಳೂ ಇವೆ. ಜೀವವಿಕಾಸದಲ್ಲಿ ನಂಬುವ ಅನೇಕರು, ದೇವರೇ ಇಲ್ಲ ಅಥವಾ ಒಂದುವೇಳೆ ಇದ್ದರೂ ಆತನು ಮಾನವ ವ್ಯವಹಾರಗಳಲ್ಲಿ ಕೈಹಾಕುವುದಿಲ್ಲವೆಂದು ನಂಬುತ್ತಾರೆ. ಇವುಗಳಲ್ಲಿ ಯಾವುದೇ ಒಂದನ್ನು ನಂಬಿದರೂ, ನಮ್ಮ ಭವಿಷ್ಯವು ರಾಜಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಮುಖಂಡರ ಕೈಯಲ್ಲಿದೆ ಎಂದಾಗುವುದು. ಮತ್ತು ಇವರೆಲ್ಲರ ಗತ ಚರಿತ್ರೆಯ ಆಧಾರದಿಂದ ಹೇಳುವುದಾದರೆ, ಮಾನವ ಸಮಾಜದಲ್ಲಿನ ಕೋಲಾಹಲ, ಕಲಹ ಹಾಗೂ ಭ್ರಷ್ಟಾಚಾರ ಮುಂದುವರಿಯುತ್ತಾ ಹೋಗುವುದು. ಹೌದು, ಜೀವವಿಕಾಸ ಸಿದ್ಧಾಂತವು ನಿಜವಾಗಿರುವಲ್ಲಿ, “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ವಿಷಮಭರಿತ ಧ್ಯೇಯಮಂತ್ರಕ್ಕನುಸಾರ ಜೀವಿಸಲು ಅದು ಸಾಕಷ್ಟು ಕಾರಣವನ್ನೀಯುವಂತೆ ತೋರುವುದು.​—⁠1 ಕೊರಿಂಥ 15:⁠32.

ಆದರೆ ಯೆಹೋವನ ಸಾಕ್ಷಿಗಳು ಈ ಮೇಲಿನ ಹೇಳಿಕೆಗಳನ್ನು ಅಂಗೀಕರಿಸುವುದಿಲ್ಲ ಎಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಬಲ್ಲಿರಿ. ಆ ಹೇಳಿಕೆಗಳು ಯಾವ ಆಧಾರದ ಮೇಲೆ ಮಾಡಲ್ಪಟ್ಟಿವೆಯೊ ಅದನ್ನು, ಅಂದರೆ ಜೀವವಿಕಾಸ ಸಿದ್ಧಾಂತವನ್ನು ಸಹ ಸಾಕ್ಷಿಗಳು ಸ್ವೀಕರಿಸುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಬೈಬಲ್‌ ಸತ್ಯವಾಗಿದೆಯೆಂದು ಸಾಕ್ಷಿಗಳು ನಂಬುತ್ತಾರೆ. (ಯೋಹಾನ 17:17) ಆದುದರಿಂದಲೇ, ನಾವು ಹೇಗೆ ಅಸ್ತಿತ್ವಕ್ಕೆ ಬಂದೆವೆಂಬುದರ ಬಗ್ಗೆ ಅದು ಹೇಳುವ ಈ ಮಾತನ್ನು ಅವರು ನಂಬುತ್ತಾರೆ: “[ದೇವರ] ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” (ಕೀರ್ತನೆ 36:9) ಈ ಮಾತುಗಳಿಗೆ ಮಹತ್ವಪೂರ್ಣವಾದ ಸೂಚ್ಯಾರ್ಥಗಳಿವೆ.

ಬದುಕಿಗೊಂದು ಅರ್ಥವಿದೆ. ನಮ್ಮ ಸೃಷ್ಟಿಕರ್ತನಿಗೆ ಒಂದು ಪ್ರೀತಿಪೂರ್ಣ ಉದ್ದೇಶವಿದೆ, ಮತ್ತು ಇದರಲ್ಲಿ ಆತನ ಚಿತ್ತಕ್ಕನುಸಾರ ಜೀವಿಸಲು ಆಯ್ಕೆಮಾಡುವವರೆಲ್ಲರು ಒಳಗೂಡಿರುತ್ತಾರೆ. (ಪ್ರಸಂಗಿ 12:13) ಆ ಉದ್ದೇಶದಲ್ಲಿ, ಕೋಲಾಹಲ, ಕಲಹ, ಭ್ರಷ್ಟಾಚಾರ ಹಾಗೂ ಮರಣದಿಂದಲೂ ಮುಕ್ತವಾಗಿರುವ ಲೋಕವೊಂದರಲ್ಲಿ ಮಾನವರು ಜೀವಿಸುವುದು ಸೇರಿದೆ. (ಯೆಶಾಯ 2:4; 25:​6-8) ಲೋಕದಲ್ಲೆಲ್ಲಾ ಇರುವ ಲಕ್ಷಾಂತರ ಮಂದಿ ಯೆಹೋವನ ಸಾಕ್ಷಿಗಳು, ಬೇರಾವುದೇ ವಿಷಯಕ್ಕಿಂತಲೂ ಹೆಚ್ಚಾಗಿ ದೇವರ ಬಗ್ಗೆ ಕಲಿಯುವುದು ಮತ್ತು ಆತನ ಚಿತ್ತವನ್ನು ಮಾಡುವುದು ಬದುಕಿಗೆ ಅರ್ಥವನ್ನು ಕೊಡುತ್ತದೆಂದು ಸಾಕ್ಷ್ಯಕೊಡಬಲ್ಲರು!​—⁠ಯೋಹಾನ 17:⁠3.

ನೀವೇನು ನಂಬುತ್ತೀರೊ ಅದು ನಿಶ್ಚಯವಾಗಿಯೂ ಪ್ರಾಮುಖ್ಯವಾಗಿದೆ, ಏಕೆಂದರೆ ಅದು ನಿಮ್ಮ ಸದ್ಯದ ಸಂತೋಷದ ಮೇಲೂ ನಿಮ್ಮ ಭವಿಷ್ಯದ ಜೀವನದ ಮೇಲೂ ಪರಿಣಾಮಬೀರಬಲ್ಲದು. ಹಾಗಾದರೆ, ಪ್ರಾಕೃತಿಕ ಜಗತ್ತಿನಲ್ಲಿರುವ ವಿನ್ಯಾಸದ ಬಗ್ಗೆ ಹೆಚ್ಚುತ್ತಿರುವ ಪುರಾವೆಗಳಿಗೆ ಸೂಕ್ತ ವಿವರಣೆಗಳನ್ನು ನೀಡಲಾಗದ ಒಂದು ಸಿದ್ಧಾಂತದಲ್ಲಿ ನೀವು ನಂಬಿಕೆಯಿಡುವಿರೊ? ಅಥವಾ ಬೈಬಲ್‌ ಹೇಳುವಂತೆ, ಭೂಮಿಯೂ ಅದರಲ್ಲಿರುವ ಜೀವರಾಶಿಯೂ, ಅದ್ಭುತಕರ ವಿನ್ಯಾಸಕನು ಮತ್ತು ‘ಸಮಸ್ತವನ್ನು ಸೃಷ್ಟಿಸಿದ’ ಯೆಹೋವ ದೇವರ ರಚನೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುವಿರೊ? ಆಯ್ಕೆ ನಿಮ್ಮದು.​—⁠ಪ್ರಕಟನೆ 4:⁠11. (9/06)