ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಷ್ಟದಲ್ಲಿದ್ದ ಯುವತಿಗೆ ಸಹಾಯ

ಕಷ್ಟದಲ್ಲಿದ್ದ ಯುವತಿಗೆ ಸಹಾಯ

ಕಷ್ಟದಲ್ಲಿದ್ದ ಯುವತಿಗೆ ಸಹಾಯ

ಮೆಕ್ಸಿಕೊದಲ್ಲಿ, ಸಿಬ್ಯಾ ಎಂಬ 13 ವರ್ಷದ ಶಾಲಾವಿದ್ಯಾರ್ಥಿಯು ತನ್ನ ಸಹಪಾಠಿಯೊಬ್ಬಳು ಹೆಚ್ಚಿನ ಸಂದರ್ಭಗಳಲ್ಲಿ ಅಳುತ್ತಾ ಶಾಲೆಗೆ ಬರುತ್ತಿರುವುದನ್ನು ಗಮನಿಸಿದಳು. ಸಿಬ್ಯಾ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಳು. ಒಂದು ದಿನ ಸಿಬ್ಯಾಳ ಆ ಸಹಪಾಠಿಯು ದುಃಖವನ್ನು ತೋಡಿಕೊಳ್ಳುತ್ತಾ ತನ್ನ ತಂದೆಯು ಕುಡಿದು ಯಾವಾಗಲೂ ತನ್ನ ತಾಯಿಯನ್ನು ಹೊಡೆಯುತ್ತಾನೆಂದು ತಿಳಿಸಿದಳು.

ಸಿಬ್ಯಾ ಹೇಳುವುದು: “ಅವಳು, ತನಗೆ ಬದುಕಲು ಆಸೆಯಿಲ್ಲ ಮತ್ತು ತಾನು ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸಿದ್ದೇನೆಂದು ಹೇಳಿದಳು. ತನಗೆ ತಬ್ಬಲಿಯ ಅನಿಸಿಕೆಯಾಗುತ್ತದೆಂದು, ತನ್ನನ್ನು ಯಾರೂ ಪ್ರೀತಿಸುವುದಿಲ್ಲವೆಂದು ತಿಳಿಸಿದಳು. ಆಗ ನಾನು ಅವಳಿಗೆ, ಇಡೀ ವಿಶ್ವದಲ್ಲೇ ಅತಿ ಪ್ರಾಮುಖ್ಯನಾಗಿರುವ ವ್ಯಕ್ತಿಯು ನಿನ್ನನ್ನು ತುಂಬ ಪ್ರೀತಿಸುತ್ತಾನೆ ಎಂದು ಉತ್ತರಿಸಿದೆ. ನಂತರ, ಮಾನವಕುಲಕ್ಕಾಗಿ ಯೆಹೋವನ ಉದ್ದೇಶವೇನೆಂಬುದನ್ನು ಅವಳಿಗೆ ವಿವರಿಸಿದೆ.”

ಇದಾದ ನಂತರ ಸಿಬ್ಯಾ ತನ್ನ ಸಹಪಾಠಿಗೆ ಯುವ ಜನರ ಪ್ರಶ್ನೆಗಳು​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕವನ್ನು ಕೊಟ್ಟು ಪ್ರತಿದಿನ ಶಾಲೆಯ ವಿರಾಮದ ವೇಳೆಯಲ್ಲಿ ಅದರಿಂದ ಅಧ್ಯಯನಮಾಡಲು ಆರಂಭಿಸಿದಳು. ಕ್ರಮೇಣ ಆ ಹುಡುಗಿ, ಯಾರೊಂದಿಗೂ ಬೆರೆಯದೆ ಒಂಟಿಯಾಗಿಯೇ ಇರುವ ತನ್ನ ಸ್ವಭಾವವನ್ನು ಬದಲಾಯಿಸಿಕೊಂಡು, ಇತರರೊಂದಿಗೆ ಮಾತಾಡಲು, ನಗಾಡಲು ಆರಂಭಿಸಿದಳು. ಸಿಬ್ಯಾಳಿಗೆ ಬರೆದ ಒಂದು ಪತ್ರದಲ್ಲಿ ಅವಳು ಹೀಗಂದಳು: “ನೀನು ನನ್ನನ್ನು ಇಷ್ಟೊಂದು ಚೆನ್ನಾಗಿ ಅರ್ಥಮಾಡಿಕೊಂಡದ್ದಕ್ಕೂ ನಿನ್ನ ಸ್ನೇಹಕ್ಕೂ ತುಂಬ ಉಪಕಾರ. ನಾನು ಬಯಸುತ್ತಿದ್ದಂಥ ಒಡಹುಟ್ಟಿದವಳಂತೆ ನೀನಿದ್ದೀ. ನನ್ನ ಬಗ್ಗೆ ಚಿಂತಿಸುವವನೊಬ್ಬನು, ಅಂದರೆ ಯೆಹೋವನು ಇದ್ದಾನೆಂದು ಈಗ ನನಗೆ ತಿಳಿದಿದೆ.”

ಯುವ ಜನರ ಪ್ರಶ್ನೆಗಳು ಪುಸ್ತಕದಿಂದ ಪ್ರಯೋಜನ ಪಡೆಯಬಹುದಾದ ಒಬ್ಬ ಯುವ ವ್ಯಕ್ತಿಯ ಬಗ್ಗೆ ನಿಮಗೆ ತಿಳಿದಿರಬಹುದು. ಅದರಲ್ಲಿರುವ 39 ಅಧ್ಯಾಯಗಳಲ್ಲಿ ಕೆಲವೊಂದು ಹೀಗಿವೆ: “ನಾನು ನಿಜ ಸ್ನೇಹಿತರನ್ನು ಹೇಗೆ ಮಾಡಿಕೊಳ್ಳಬಲ್ಲೆ?,” “ವಿವಾಹಕ್ಕೆ ಮುಂಚಿನ ಸಂಭೋಗದ ಕುರಿತೇನು?” ಮತ್ತು “ಅದು ನಿಜ ಪ್ರೀತಿಯೆಂದು ನಾನು ಹೇಗೆ ತಿಳಿಯಬಲ್ಲೆ?” ನೀವು ಹೆಚ್ಚಿನ ಮಾಹಿತಿಯನ್ನು ವಿನಂತಿಸಿಕೊಳ್ಳಲಿಕ್ಕಾಗಿ, ಜೊತೆಯಲ್ಲಿರುವ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತವಾದ ವಿಳಾಸಕ್ಕೆ ಅದನ್ನು ಅಂಚೆಯ ಮೂಲಕ ಕಳುಹಿಸಬಹುದು. (g 10/06)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲ್ಪಟ್ಟಿರುವ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸಿಕೊಳ್ಳುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.