ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರಿಗೆ ನಿಜವಾಗಿಯೂ ಕಾಳಜಿಯಿದೆ!

ದೇವರಿಗೆ ನಿಜವಾಗಿಯೂ ಕಾಳಜಿಯಿದೆ!

ದೇವರಿಗೆ ನಿಜವಾಗಿಯೂ ಕಾಳಜಿಯಿದೆ!

ಏದೆನಿನಲ್ಲಿ ಆರಂಭವಾದ ದಂಗೆಯನ್ನು ದೇವರು ನಿರ್ವಹಿಸಿರುವ ರೀತಿಯು, ಆತನಿಗೆ ನಮ್ಮಲ್ಲಿ ಪ್ರತಿಯೊಬ್ಬರ ಮೇಲೂ ಇರುವ ಗಾಢ ಪ್ರೀತಿ ಹಾಗೂ ನಮ್ಮ ಭವಿಷ್ಯದ ಕುರಿತಿರುವ ಕಳಕಳಿಯನ್ನು ವ್ಯಕ್ತಪಡಿಸುತ್ತದೆ. ದೇವರಿಗೆ ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿಯಿದೆ ಎಂಬುದಕ್ಕೆ ಮುಂದಿನ ಪುರಾವೆಯನ್ನು ದಯವಿಟ್ಟು ಪರಿಗಣಿಸಿರಿ. ಮತ್ತು ನಿಮ್ಮ ಬಳಿ ಬೈಬಲ್‌ ಇರುವಲ್ಲಿ ಪ್ರತಿಯೊಂದು ವಚನವನ್ನು ಅದರಲ್ಲಿ ತೆರೆದುನೋಡಿರಿ.

● ಆತನು ನಮಗೆ ಈ ಭೂಗ್ರಹವನ್ನು ಮತ್ತು ಅದರಲ್ಲಿ ಪ್ರಾಕೃತಿಕ ಸೊಬಗು, ವಿಸ್ಮಯಕಾರಿ ಪ್ರಾಣಿಗಳು ಹಾಗೂ ಫಲವತ್ತಾದ ಭೂಮಿಯನ್ನು ಕೊಟ್ಟಿದ್ದಾನೆ.​—⁠ಅ. ಕೃತ್ಯಗಳು 14:17; ರೋಮಾಪುರ 1:⁠20.

● ಆತನು ನಮಗೊಂದು ಅದ್ಭುತವಾದ ದೇಹವನ್ನು ಕೊಟ್ಟಿದ್ದಾನೆ ಮತ್ತು ಇದರಿಂದಾಗಿ ನಾವು ಪ್ರತಿನಿತ್ಯವೂ ಹಲವಾರು ವಿಷಯಗಳನ್ನು ಆನಂದಿಸಬಲ್ಲೆವು. ಉದಾಹರಣೆಗೆ, ಸ್ವಾದಿಷ್ಟ ಆಹಾರವನ್ನು ಸವಿಯುವಾಗ, ಸೂರ್ಯಾಸ್ತಮಾನದ ಸೊಬಗನ್ನು ನೋಡುವಾಗ, ಒಂದು ಮಗುವಿನ ಕಿಲಕಿಲ ನಗುವನ್ನು ಕೇಳಿಸಿಕೊಳ್ಳುವಾಗ, ಒಬ್ಬ ಪ್ರಿಯ ವ್ಯಕ್ತಿಯ ಕೋಮಲ ಸ್ಪರ್ಶವನ್ನು ಅನುಭವಿಸುವಾಗ ನಮ್ಮಲ್ಲಿ ಹರ್ಷ ತುಂಬುತ್ತದೆ.​—⁠ಕೀರ್ತನೆ 139:⁠14.

● ಆತನು ವಿವೇಕಯುತ ಮಾರ್ಗದರ್ಶನವನ್ನು ಒದಗಿಸುತ್ತಾನೆ ಮತ್ತು ಇದರಿಂದಾಗಿ ನಮಗೆ ಸಮಸ್ಯೆಗಳು ಹಾಗೂ ಒತ್ತಡಗಳನ್ನು ನಿಭಾಯಿಸುವಂತೆ ಸಹಾಯಸಿಗುತ್ತದೆ.​—⁠ಕೀರ್ತನೆ 19:​7, 8; 119:105; ಯೆಶಾಯ 48:​17, 18.

● ಆತನು ನಮಗೊಂದು ಅದ್ಭುತಕರ ನಿರೀಕ್ಷೆಯನ್ನು ಕೊಡುತ್ತಾನೆ. ಈ ನಿರೀಕ್ಷೆಯಲ್ಲಿ, ಭೂಮಿ ಮೇಲಿನ ಪರದೈಸಿನಲ್ಲಿ ಜೀವಿಸುವ ಮತ್ತು ಮೃತರಾಗಿರುವ ನಮ್ಮ ಪ್ರಿಯ ಜನರು ಪುನಃ ಜೀವಕ್ಕೆ ಬರುವುದರ ಪ್ರತೀಕ್ಷೆಯು ಸೇರಿದೆ.​—⁠ಲೂಕ 23:43; ಯೋಹಾನ 5:​28, 29.

● ದೇವರು ತನ್ನ ಏಕಜಾತ ಪುತ್ರನನ್ನು ನಮಗಾಗಿ ಸಾಯುವಂತೆ ಭೂಮಿಗೆ ಕಳುಹಿಸಿದನು. ಇದರಿಂದಾಗಿ ನಮಗೆ ಸದಾಕಾಲ ಬದುಕುವ ನಿರೀಕ್ಷೆ ಇರಬಲ್ಲದು.​—⁠ಯೋಹಾನ 3:⁠16.

● ಆತನು ಸ್ವರ್ಗದಲ್ಲಿ ಮೆಸ್ಸೀಯ ರಾಜ್ಯವನ್ನು ಸ್ಥಾಪಿಸಿದ್ದಾನೆ ಮತ್ತು ಆ ರಾಜ್ಯವು ಬೇಗನೆ ಭೂಮಿಯ ಸಂಪೂರ್ಣ ರಾಜ್ಯಭಾರವನ್ನು ವಹಿಸಿಕೊಳ್ಳುವುದು ಎಂಬುದಕ್ಕೆ ಹೇರಳ ಪುರಾವೆಯನ್ನು ಕೊಟ್ಟಿದ್ದಾನೆ.​—⁠ಯೆಶಾಯ 9:​6, 7; ಮತ್ತಾಯ 24:​3, 4, 7; ಪ್ರಕಟನೆ 11:15; 12:⁠10.

● ನಾವು ಪ್ರಾರ್ಥನೆಯ ಮೂಲಕ ಆತನ ಬಳಿಸಾರುವಂತೆ, ಆತನಲ್ಲಿ ನಮ್ಮ ಅಂತರಂಗವನ್ನು ತೋಡಿಕೊಳ್ಳುವಂತೆ ಆತನು ಆಮಂತ್ರಿಸುತ್ತಾನೆ ಮತ್ತು ನಾವು ಹಾಗೆ ಮಾಡುವಾಗ ಆತನು ನಿಜವಾಗಿಯೂ ಕಿವಿಗೊಡುತ್ತಾನೆ.​—⁠ಕೀರ್ತನೆ 62:​8; 1 ಯೋಹಾನ 5:​14, 15.

● ಮಾನವರ ಕಡೆಗೆ ತನಗಿರುವ ಗಾಢವಾದ ಪ್ರೀತಿ ಹಾಗೂ ಚಿಂತೆಯ ಬಗ್ಗೆ ಆತನು ಪದೇಪದೇ ಆಶ್ವಾಸನೆಕೊಡುತ್ತಾನೆ.​—⁠1 ಯೋಹಾನ 4:​9, 10, 19. (g 11/06)