ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕ್ರಿಸ್ತನನ್ನು ಅನುಸರಿಸೋಣ!”

“ಕ್ರಿಸ್ತನನ್ನು ಅನುಸರಿಸೋಣ!”

“ಕ್ರಿಸ್ತನನ್ನು ಅನುಸರಿಸೋಣ!”

ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ

ಮೂರು ದಿನಗಳ ಈ ಅಧಿವೇಶನಗಳ ಸರಣಿಗಳು ಭಾರತದಲ್ಲಿ ಆಗಸ್ಟ್‌ ತಿಂಗಳ ಕೊನೆಯಲ್ಲಿ ಆರಂಭಗೊಂಡು ಜಗತ್ತಿನ ಎಲ್ಲೆಡೆಯಿರುವ ನೂರಾರು ನಗರಗಳಲ್ಲಿ ಇಸವಿ 2008ರ ವರೆಗೆ ಮುಂದುವರಿಯಲಿರುವುವು. ಹೆಚ್ಚಿನ ಸ್ಥಳಗಳಲ್ಲಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ 9.20ಕ್ಕೆ ಸಂಗೀತದೊಂದಿಗೆ ಆರಂಭಗೊಳ್ಳುವುದು. ಅಧಿವೇಶನದ ಪ್ರತಿಯೊಂದು ದಿನದ ಕಾರ್ಯಕ್ರಮವು ಯೇಸು ಕ್ರಿಸ್ತನ ಮೇಲೆ ಕೇಂದ್ರೀಕರಿಸುವುದು.

ಶುಕ್ರವಾರದ ಕಾರ್ಯಕ್ರಮದ ಮುಖ್ಯವಿಷಯವು ‘ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ [ತದೇಕಚಿತ್ತದಿಂದ] ದೃಷ್ಟಿಯಿಡಿರಿ’ ಎಂದಾಗಿದೆ. (ಇಬ್ರಿಯ 12:2) ಸ್ವಾಗತ ಭಾಷಣವು “‘ಕ್ರಿಸ್ತನನ್ನು ಅನುಸರಿಸಬೇಕು’ ಏಕೆ?” ಎಂಬ ವಿಷಯವಾಗಿದೆ. ಮೂರು ಭಾಗಗಳುಳ್ಳ ಭಾಷಣಮಾಲೆಯು “ಯೇಸುವನ್ನು ಮಹಾ ಮೋಶೆ, ದಾವೀದ, ಸೊಲೊಮೋನನಾಗಿ ಮಾನ್ಯಮಾಡುವುದು” ಎಂದಾಗಿದೆ. “ಯೆಹೋವನ ಉದ್ದೇಶದಲ್ಲಿ ಯೇಸುವಿನ ಅದ್ವಿತೀಯ ಪಾತ್ರ” ಎಂಬ ಮುಖ್ಯ ಭಾಷಣದೊಂದಿಗೆ ಬೆಳಗಿನ ಸೆಷನ್‌ ಕೊನೆಗೊಳ್ಳುತ್ತದೆ.

ಶುಕ್ರವಾರ ಮಧ್ಯಾಹ್ನ ನೀಡಲ್ಪಡುವ ಮೊದಲ ಭಾಷಣ “‘ಮೆಸ್ಸೀಯನು ನಮಗೆ ಸಿಕ್ಕಿದನು!’” ಎಂದಿದೆ. ಅನಂತರದ ಭಾಷಣವು “‘ಕ್ರಿಸ್ತನಲ್ಲಿ ಅಡಗಿರುವ ನಿಕ್ಷೇಪವನ್ನು’ ಕಂಡುಕೊಳ್ಳುವುದು.” ಐದು ಭಾಗಗಳುಳ್ಳ ಒಂದು ತಾಸಿನ ಭಾಷಣಮಾಲೆಯು “ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ” ಎಂದಾಗಿದೆ. ಇದರಲ್ಲಿ “ಆತನು ‘ಅವರನ್ನು ದಯೆಯಿಂದ ಸ್ವೀಕರಿಸಿದನು,’” “ಅವನು ‘ಮರಣವನ್ನು ಹೊಂದುವಷ್ಟು ವಿಧೇಯನಾದನು,’” ಮತ್ತು “ಅವನು ‘ಕೊನೆ ವರೆಗೂ ಅವರನ್ನು ಪ್ರೀತಿಸುತ್ತಾ ಬಂದನು’” ಎಂಬ ಭಾಷಣಗಳಿವೆ. “ಅವರು ‘ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಆತನ ಹಿಂದೆ ಹೋಗುವರು’” ಎಂಬ ಭಾಷಣದೊಂದಿಗೆ ಸೆಷನ್‌ ಕೊನೆಗೊಳ್ಳುತ್ತದೆ.

ಶನಿವಾರದ ಕಾರ್ಯಕ್ರಮದ ಮುಖ್ಯವಿಷಯವು “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; . . . ಅವು ನನ್ನ ಹಿಂದೆ ಬರುತ್ತವೆ” ಎಂದಾಗಿದೆ. (ಯೋಹಾನ 10:27) “ಶುಶ್ರೂಷೆಯಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಿರಿ” ಎಂಬ ಒಂದು ತಾಸಿನ ಭಾಷಣಮಾಲೆಯು ನಮ್ಮ ಶುಶ್ರೂಷೆಯನ್ನು ಉತ್ತಮಗೊಳಿಸಲು ವ್ಯಾವಹಾರಿಕ ಸಲಹೆಗಳನ್ನು ಕೊಡುವುದು. ಅನಂತರ, “ಅವನು ‘ಧರ್ಮವನ್ನು ಪ್ರೀತಿಸಿ ಅಧರ್ಮವನ್ನು ದ್ವೇಷಿಸಿದನು’​—⁠ನೀವು ಹಾಗೆ ಮಾಡುತ್ತೀರೋ?” ಮತ್ತು “ಯೇಸುವಿನಂತೆಯೇ ‘ಸೈತಾನನನ್ನು ಎದುರಿಸಿರಿ’” ಎಂಬ ಭಾಷಣಗಳನ್ನು ನೀಡಲಾಗುವುದು. ದೀಕ್ಷಾಸ್ನಾನದ ಭಾಷಣದೊಂದಿಗೆ ಬೆಳಗಿನ ಕಾರ್ಯಕ್ರಮವು ಮುಗಿಯುವುದು. ಬಳಿಕ ಅರ್ಹರಾದವರಿಗೆ ದೀಕ್ಷಾಸ್ನಾನವಿರುವುದು.

ಶನಿವಾರದ ಮಧ್ಯಾಹ್ನದ ಕಾರ್ಯಕ್ರಮವು “ಅನುಸರಿಸಬೇಡಿರಿ . . .” ಎಂಬ ಭಾಷಣಮಾಲೆಯೊಂದಿಗೆ ಆರಂಭಗೊಳ್ಳುವುದು. ಅದರ ಆರು ಭಾಗಗಳು ಯಾವುವೆಂದರೆ “ಕೆಟ್ಟದ್ದನ್ನು ಮಾಡುವ ಬಹು ಮಂದಿಯನ್ನು,” “ನಿಮ್ಮ ಹೃದಯ ಮತ್ತು ಕಣ್ಣನ್ನು,” “ಅವಾಸ್ತವಿಕತೆಗಳನ್ನು,” “ಸುಳ್ಳು ಬೋಧಕರನ್ನು” “ಕಲ್ಪನಾ ಕಥೆಗಳನ್ನು” ಮತ್ತು “ಸೈತಾನನನ್ನು” ಎಂದಾಗಿವೆ. ಬಳಿಕ ನೀಡಲ್ಪಡುವ ಭಾಷಣಗಳಲ್ಲಿ ಕೆಲವೆಂದರೆ, “‘ಯೆಹೋವನಿಂದ ಶಿಕ್ಷಿತರಾಗುವುದರ’ ಶ್ರೇಷ್ಠತೆ” ಮತ್ತು “ಮಂದೆಗೆ ಹಿಂದಿರುಗಲು ಅವರಿಗೆ ಸಹಾಯ ಮಾಡಿರಿ.” ಅಧಿವೇಶನದ ಪ್ರಮುಖ ಭಾಷಣ: “ಬನ್ನಿ, ನನ್ನನ್ನು ಅನುಸರಿಸಿರಿ.” ಇದರೊಂದಿಗೆ ಆ ದಿನದ ಕಾರ್ಯಕ್ರಮವು ಕೊನೆಗೊಳ್ಳುತ್ತದೆ.

ಭಾನುವಾರದ ಮುಖ್ಯವಿಷಯವು “ನನ್ನನ್ನು ಅನುಸರಿಸುತ್ತಾ ಇರಿ” ಎಂದಾಗಿದೆ. (ಯೋಹಾನ 21:​19, NW) “ಕ್ರಿಸ್ತನನ್ನು ಅನುಸರಿಸದಿರಲು ‘ನೆವಗಳನ್ನು’ ಹುಡಕಬೇಡಿ” ಎಂಬ ಭಾಷಣದ ಬಳಿಕ “ಪರ್ವತ ಪ್ರಸಂಗದಿಂದ ಅಮೂಲ್ಯ ಪಾಠಗಳು” ಎಂಬ ಆರು ಭಾಗಗಳುಳ್ಳ ಭಾಷಣಮಾಲೆ ಇದೆ. ಇದು, “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು,” “ಮೊದಲು ನಿನ್ನ ಸಹೋದರನ ಸಂಗಡ ಒಂದಾಗು” ಮತ್ತು “ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ನಿಮಗೂ ಕೊಡುವರು” ಎಂಬ ಯೇಸುವಿನ ಹೇಳಿಕೆಗಳ ಮೇಲೆ ಕೇಂದ್ರೀಕೃತವಾಗಿರುವುದು. ಬೆಳಗಿನ ಕಾರ್ಯಕ್ರಮವು “ಯೇಸುವಿನ ನಿಜ ಹಿಂಬಾಲಕರು ಯಾರು?” ಎಂಬ ಬಹಿರಂಗ ಭಾಷಣದೊಂದಿಗೆ ಕೊನೆಗೊಳ್ಳುತ್ತದೆ. ಮಧ್ಯಾಹ್ನದ ಗಮನಾರ್ಹ ಭಾಗವು, ದೇವರ ಪ್ರವಾದಿ ಎಲೀಷನ ಸೇವಕನಾದ ಅತ್ಯಾಶೆಯುಳ್ಳ ಗೇಹಜಿಯ ಕುರಿತಾದ ಬೈಬಲ್‌ ವೃತ್ತಾಂತದ ಮೇಲಾಧಾರಿತವಾದ ವೇಷಭೂಷಣದ ನಾಟಕವಾಗಿದೆ. “ನಮ್ಮ ಅಜೇಯ ನಾಯಕನಾದ ಕ್ರಿಸ್ತನನ್ನು ಅನುಸರಿಸುತ್ತಾ ಇರಿ” ಎಂಬ ಭಾಷಣದೊಂದಿಗೆ ಅಧಿವೇಶನವು ಮುಕ್ತಾಯಗೊಳ್ಳುತ್ತದೆ.

ಅಧಿವೇಶನಕ್ಕೆ ಹಾಜರಾಗಲು ಈಗಲೇ ಯೋಜನೆಗಳನ್ನು ಮಾಡಿರಿ. ನಿಮಗೆ ಅತಿ ಸಮೀಪದ ಅಧಿವೇಶನ ಸ್ಥಳದ ಬಗ್ಗೆ ತಿಳಿದುಕೊಳ್ಳಲು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ಈ ಪತ್ರಿಕೆಯ ಜೊತೆ ಪತ್ರಿಕೆಯಾದ ಕಾವಲಿನಬುರುಜುವಿನ ಮಾರ್ಚ್‌ 1ನೇ ಸಂಚಿಕೆಯಲ್ಲಿ ಭಾರತದಲ್ಲಿ ನಡೆಯುವ ಎಲ್ಲ ಅಧಿವೇಶನ ಸ್ಥಳಗಳ ಪಟ್ಟಿಯನ್ನು ಕೊಡಲಾಗಿದೆ. (g 6/07)