ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಎಲ್ಲರೂ ಇದನ್ನು ಓದಿದರೆ ಅದೆಷ್ಟು ಚೆನ್ನ!”

“ಎಲ್ಲರೂ ಇದನ್ನು ಓದಿದರೆ ಅದೆಷ್ಟು ಚೆನ್ನ!”

“ಎಲ್ಲರೂ ಇದನ್ನು ಓದಿದರೆ ಅದೆಷ್ಟು ಚೆನ್ನ!”

ಹೀಗೆಂದು ಬರೆದ ಸ್ತ್ರೀ ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕಕ್ಕೆ ಸೂಚಿಸುತ್ತಿದ್ದಳು. ಅವಳು ಮುಂದುವರಿಸಿ ಹೇಳಿದ್ದು: “ಯೆಹೋವನ ಪ್ರೀತಿ ನನಗೀಗ ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟವಾಗಿದೆ. ಇನ್ನು ಮೇಲೆ ನಾನು ಇತರರಿಗೆ ಹೆಚ್ಚೆಚ್ಚು ಪ್ರೀತಿ ತೋರಿಸುವೆ.” ಕೃತಜ್ಞತೆ ತುಂಬಿದ ಇನ್ನೊಬ್ಬ ಓದುಗಳು ವಿವರಿಸಿದ್ದು: “ಈ ಪುಸ್ತಕವನ್ನು ಓದಿ ನಾನೆಷ್ಟು ಆನಂದಿಸಿದ್ದೇನೆ ಮತ್ತು ಅದು ಎಷ್ಟು ಪ್ರಯೋಜನಕರವಾಗಿದೆ ಎಂದು ವರ್ಣಿಸಲು ನನ್ನಲ್ಲಿ ಸಾಕಷ್ಟು ಪದಗಳೇ ಇಲ್ಲ, . . . ನಾನದನ್ನು ಎಷ್ಟು ಬಾರಿ ಓದಿದೆನೋ ಅಷ್ಟು ಬಾರಿಯೂ ಅಧಿಕಾಧಿಕವಾಗಿ ಹುರಿದುಂಬಿಸಲ್ಪಟ್ಟೆ.”

ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕವು ದೇವರ ಪ್ರಧಾನ ಗುಣಗಳಾದ ಶಕ್ತಿ, ನ್ಯಾಯ, ವಿವೇಕ ಮತ್ತು ಪ್ರೀತಿಯನ್ನು ನಾಲ್ಕು ಮುಖ್ಯ ವಿಭಾಗಗಳಲ್ಲಿ ಚರ್ಚಿಸುತ್ತದೆ. ಒಬ್ಬಾಕೆ ಓದುಗಳು ವಿವರಿಸಿದ್ದು: “ಈ ಪುಸ್ತಕ ನನ್ನ ಸ್ವರ್ಗೀಯ ತಂದೆಯ ಅತಿ ಶ್ರೇಷ್ಠ ಗುಣಗಳನ್ನು ತಿಳುಕೊಳ್ಳಲು ನೆರವಾಯಿತು. ನನ್ನ ಜೀವನದಲ್ಲಿ ಆತನ ಪವಿತ್ರಾತ್ಮವು ಕಾರ್ಯನಡೆಸುವಂತೆ ನಾನು ಬಿಟ್ಟುಕೊಡುವಲ್ಲಿ, ಆತನ ಗುಣಗಳನ್ನು ಅನುಸರಿಸಲು ನನಗೂ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಸಹ ಅದು ನನಗೆ ಸಹಾಯಮಾಡಿತು.”

“‘ಕ್ಷಮಿಸಲು ಸಿದ್ಧನು’ ಆಗಿರುವ ದೇವರು” ಎಂಬ 26ನೇ ಅಧ್ಯಾಯವನ್ನು ಓದಿದ ಬಳಿಕ ಪೋಲೆಂಡ್‌ನ ಯೋಆನ್ನಾ ಎಂಬ ಯುವತಿ ಹೀಗಂದಳು: “ಈ ಪುಸ್ತಕದಲ್ಲಿರುವ ಸಂದೇಶವು ನನಗೆ ಅಮೂಲ್ಯ ನಿಧಿಯಂತಿದೆ. ನನಗೆ ಸಿಕ್ಕಿದ ಈ ನಿಧಿ ನನ್ನ ಜೀವನಕ್ಕೆ ಅತ್ಯಾವಶ್ಯಕವಾಗಿತ್ತು.”

ನೀವು ಸಹ ಈ 320-ಪುಟದ ಪುಸ್ತಕದಿಂದ ಅತ್ಯಮೂಲ್ಯ ಸಹಾಯ ಹಾಗೂ ಸಾಂತ್ವನವನ್ನು ಪಡೆಯುವಿರೆಂದು ನಾವು ನಂಬುತ್ತೇವೆ. ಹೆಚ್ಚಿನ ಮಾಹಿತಿಯನ್ನು, ಕೆಳಗೆ ಕೊಟ್ಟಿರುವ ಕೂಪನ್‌ ಅನ್ನು ಭರ್ತಿಮಾಡಿ ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸುವ ಮೂಲಕ ವಿನಂತಿಸಿಕೊಳ್ಳಬಹುದು. (g 9/07)

□ ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲಾಗಿರುವ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸುತ್ತಿದ್ದೇನೆ.

□ ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.