ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ತರಬೇತಿಯ ಸತ್ಪರಿಣಾಮಗಳು

ದೈವಿಕ ತರಬೇತಿಯ ಸತ್ಪರಿಣಾಮಗಳು

ದೈವಿಕ ತರಬೇತಿಯ ಸತ್ಪರಿಣಾಮಗಳು

ಬಾಲ್ಯದಿಂದಲೇ ತಮ್ಮ ಮಕ್ಕಳನ್ನು ತರಬೇತಿಗೊಳಿಸುವ ಹೆತ್ತವರು ಹೆಚ್ಚಾಗಿ ತಮ್ಮ ಪರಿಶ್ರಮದ ಸತ್ಪರಿಣಾಮಗಳನ್ನು ಅನುಭವಿಸುತ್ತಾರೆ. ದಕ್ಷಿಣ ಅಮೆರಿಕದ ಪೆರು ಎಂಬಲ್ಲಿರುವ ಡೋರಿಯನ್‌ ಕೇವಲ ನಾಲ್ಕು ವರ್ಷದವನಾಗಿದ್ದಾಗಲೇ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ವಿದ್ಯಾರ್ಥಿ ಭಾಷಣವನ್ನು ನೀಡಿದನು. ಮಾತ್ರವಲ್ಲ, ಅವನು ಶಾಲೆಗೆ ಹೋಗಲು ಆರಂಭಿಸಿದಾಗ ತನ್ನ ಶಿಕ್ಷಕಿಗೂ ಸಹಪಾಠಿಗಳಿಗೂ ತಾನೇಕೆ ಕ್ರಿಸ್‌ಮಸ್‌ ಆಚರಿಸಲಿಲ್ಲ ಎಂದು ಬೈಬಲ್‌ನಿಂದ ವಿವರಿಸಶಕ್ತನಾಗಿದ್ದನು.

ಡೋರಿಯನ್‌ ಐದು ವರ್ಷದವನಾಗಿದ್ದಾಗ ‘ಪಿತೃದಿನ’ (Father’s Day) ಬಗ್ಗೆ ಅವನ ಅಭಿಪ್ರಾಯವೇನೆಂದು ತಿಳಿಸುವಂತೆ ಕೇಳಲಾಯಿತು. ಅವನು ಅದನ್ನು ಹೆಚ್ಚುಕಡಿಮೆ 500 ವಿದ್ಯಾರ್ಥಿಗಳಿದ್ದ ಇಡೀ ಶಾಲೆಯ ಮುಂದೆ ವಿವರಿಸಬೇಕಿತ್ತು. ಅದಕ್ಕಾಗಿ ಬೈಬಲಿನ ಎಫೆಸ 6:4ರ ವಚನದ ಮೇಲೆ ಆಧರಿಸಿದ “ತಂದೆಯೊಬ್ಬನ ಜವಾಬ್ದಾರಿಗಳು” ಎಂಬ ವಿಷಯದಲ್ಲಿ 10 ನಿಮಿಷದ ಭಾಷಣವನ್ನು ಅವನು ತಯಾರಿಸಿದನು. ಆ ಭಾಷಣದ ಕೊನೆಯಲ್ಲಿ ಅವನಂದದ್ದು: “ಕೇವಲ ವರ್ಷಕ್ಕೊಮ್ಮೆ ‘ಪಿತೃದಿನ’ ಆಚರಿಸುವುದಕ್ಕೆ ಬದಲಾಗಿ ಮಕ್ಕಳು ಪ್ರತಿದಿನವೂ ತಮ್ಮ ಹೆತ್ತವರಿಗೆ ಗೌರವ ತೋರಿಸಿ ಅವರ ಮಾತಿಗೆ ವಿಧೇಯರಾಗಬೇಕು.”

ಇಸವಿ 1943ರಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಯೆಹೋವನ ಸಾಕ್ಷಿಗಳ ಸಾಪ್ತಾಹಿಕ ಕೂಟಗಳಲ್ಲಿ ಒಂದಾಯಿತು. ಹಿರಿ-ಕಿರಿಯರಿಗೆ ಬಹಿರಂಗವಾಗಿ ಮಾತಾಡುವ ಸಾಮರ್ಥ್ಯವನ್ನು ಉತ್ತಮಗೊಳಿಸಲಿಕ್ಕಾಗಿಯೇ ಈ ಶಾಲೆಯನ್ನು ಆರಂಭಿಸಲಾಯಿತು. ಅಂದಿನಿಂದ ಈ ಶಾಲೆಯು ಹೆತ್ತವರು ತಮ್ಮ ಮಕ್ಕಳಿಗೆ ನೀಡಬೇಕಾದ ಉಪದೇಶಕ್ಕೆ ಪೂರಕವಾಗಿ ಬೈಬಲಾಧಾರಿತ ತರಬೇತಿಯನ್ನು ನೀಡಿದೆ.​—⁠ಜ್ಞಾನೋಕ್ತಿ 22:⁠6.

ಸ್ವಿಟ್ಸರ್‌ಲ್ಯಾಂಡ್‌ನಲ್ಲಿರುವ ಸೀಮಾನ್‌ ಎಂಬ ಬಾಲಕನನ್ನು ಪರಿಗಣಿಸಿ. ಅವನು 2005ರ ನವೆಂಬರ್‌ನಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ತನ್ನ ಮೊದಲ ಬೈಬಲ್‌ ಓದುವಿಕೆಯ ನೇಮಕವನ್ನು ಪೂರೈಸಿದನು. ಆಗ ಅವನು ಕೇವಲ ಆರು ವರ್ಷದವನಾಗಿದ್ದನಷ್ಟೆ. ಸುಮಾರು ಒಂದು ವರ್ಷದ ಬಳಿಕ ಅವನನ್ನು ಯೆಹೋವನ ಸಾಕ್ಷಿಗಳ ಒಂದು ದೊಡ್ಡ ಸಮ್ಮೇಳನದಲ್ಲಿ ಇಂಟರ್‌ವ್ಯೂ ಮಾಡಲಾಯಿತು. ಆಧ್ಯಾತ್ಮಿಕ ವಿಷಯಗಳ ಕುರಿತು ಅವನು ಯಾವ ರೀತಿಯ ಮನೋಭಾವವನ್ನು ಬೆಳೆಸಿಕೊಂಡಿದ್ದನು?

ಕ್ರೈಸ್ತ ಕೂಟಗಳಿಗೆ ಹಾಜರಾಗುವುದೆಂದರೆ ಸೀಮಾನ್‌ಗೆ ಅಚ್ಚುಮೆಚ್ಚು. ಅವನು ತುಂಬ ದಣಿದಿರುವಾಗಲೂ ಒಂದೇ ಒಂದು ಕೂಟವನ್ನೂ ತಪ್ಪಿಸದೇ ಇರುವುದರಿಂದ ಇದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಅವನು ಕುಟುಂಬ ಸದಸ್ಯರೊಂದಿಗೆ ಕೂಡಿ ಕ್ರಮವಾಗಿ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುತ್ತಾನೆ. ಎಲ್ಲ ವಯಸ್ಸಿನ ಜನರಿಗೆ 30 ರಿಂದ 50 ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಪ್ರತಿ ತಿಂಗಳು ಅವನು ನೀಡುತ್ತಾನೆ. ಅದಲ್ಲದೆ, ಅವನು ತನ್ನ ತಂದೆಯೊಂದಿಗೆ ಆಗಾಗ್ಗೆ ಬೈಬಲಿನ ಕುರಿತು ಮಾತಾಡುತ್ತಾ ಸಭಾಕೂಟಗಳಿಗೆ ತಮ್ಮೊಂದಿಗೆ ಬರುವಂತೆ ಉತ್ತೇಜಿಸುತ್ತಾನೆ.

‘[ಯೆಹೋವನಿಗೆ] ಮೆಚ್ಚಿಗೆಯಾಗಿರುವ ಬಾಲಶಿಕ್ಷೆ ಮತ್ತು ಬಾಲೋಪದೇಶದಲ್ಲಿ’ ತಮ್ಮ ಮಕ್ಕಳನ್ನು ಹೆತ್ತವರು ಬೆಳೆಸುವಾಗ ಹಾಗೂ ಮಕ್ಕಳು ಅದಕ್ಕೆ ಸ್ಪಂದಿಸಿ ನೀತಿಯೆಂಬ ಫಲವನ್ನು ಫಲಿಸುವಾಗ ನಿಶ್ಚಯವಾಗಿಯೂ ಹೆತ್ತವರಿಗಾಗುವ ಆನಂದಕ್ಕೆ ಪಾರವೇ ಇಲ್ಲ.​—⁠ಎಫೆಸ 6:4; ಯಾಕೋಬ 3:17, 18. (g 8/07)

[ಪುಟ 26ರಲ್ಲಿರುವ ಚಿತ್ರ]

ಡೋರಿಯನ್‌ ತನ್ನ ಶಾಲೆಯಲ್ಲಿ

[ಪುಟ 26ರಲ್ಲಿರುವ ಚಿತ್ರ]

ಸೀಮಾನ್‌ ರಾಜ್ಯ ಸಭಾಗೃಹದಲ್ಲಿ