ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಟಸಾಮಾನಿಗಿಂತಲೂ ಹೆಚ್ಚು ಇಷ್ಟ

ಆಟಸಾಮಾನಿಗಿಂತಲೂ ಹೆಚ್ಚು ಇಷ್ಟ

ಆಟಸಾಮಾನಿಗಿಂತಲೂ ಹೆಚ್ಚು ಇಷ್ಟ

ಚಿಕ್ಕ ಮಕ್ಕಳು ಆಟಸಾಮಾನಿಗಿಂತಲೂ ಒಂದು ಪುಸ್ತಕವನ್ನು ಹೆಚ್ಚು ಇಷ್ಟಪಡುವರೋ? ಹೆತ್ತವರು ಮಕ್ಕಳಿಗೆ ಶೈಶವದಿಂದಲೇ ಪುಸ್ತಕಗಳನ್ನು ಪರಿಚಯಿಸುವಲ್ಲಿ ಅವರು ಖಂಡಿತ ಇಷ್ಟಪಡುವರು. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಮೆಬ್ರಾಟು ಮತ್ತು ಆ್ಯಂಜೆಲಾ ಎಂಬ ದಂಪತಿ ತಮ್ಮ ನವಜಾತ ಕೂಸನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದಾಗಿನಿಂದ ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್‌) ಎಂಬ ಪುಸ್ತಕವನ್ನು ಅವಳಿಗೆ ಓದಿ ಹೇಳಲಾರಂಭಿಸಿದರು.

ಅವರು ತಿಳಿಸಿದ್ದು: “ಇದರಿಂದ ನಮ್ಮ ಮಗಳಿಗೆ ಬೋಧಕ ಪುಸ್ತಕವೆಂದರೆ ಬಲು ಇಷ್ಟ. ಅವಳು ಕೇವಲ 12 ತಿಂಗಳಾಗಿರುವಾಗಲೇ ತನಗದನ್ನು ಓದಿ ತಿಳಿಸುವಂತೆ ತೊದಲು ನುಡಿಗಳಿಂದ ಹೇಳುತ್ತಿದ್ದಳು. ಅವಳದನ್ನು ಜೀಸಸ್‌ ಬುಕ್‌ ಎಂದು ಕರೆಯುತ್ತಿದ್ದಳು. ಈಗ ನಮ್ಮ ಪುಟಾಣಿ ಜೂಲಿಯಾನಗೆ ಮೂರು ವರ್ಷ ತುಂಬಿದೆ. ಪ್ರತಿ ದಿನ ಅಪ್ಪ ಅಥವಾ ಅಮ್ಮನೊಂದಿಗೆ ತಾನು ಕಳೆಯುವ ಅತ್ಯಾಪ್ತ ಗಳಿಗೆಗಾಗಿ ತವಕದಿಂದ ಕಾಯುತ್ತಾಳೆ. ನಮ್ಮ ಮಗಳು ಈ ಪುಸ್ತಕವನ್ನು ಯಾವುದೇ ಆಟಸಾಮಾನಿಗಿಂತಲೂ ಹೆಚ್ಚು ಇಷ್ಟಪಡುತ್ತಾಳೆ ಎಂದು ಹೇಳಿದರೆ ಅತಿಶಯವೇನಲ್ಲ. ಅದರಲ್ಲಿರುವ ಸುಂದರ ಚಿತ್ರಗಳು ಮತ್ತು ದೃಷ್ಟಾಂತಗಳಂತೂ ಕಲಿಸುವುದಕ್ಕೆ ತುಂಬ ಸಹಾಯಕ. ಹೆತ್ತವರಾದ ನಾವು ಸಹ ಎಷ್ಟೋ ವಿಷಯಗಳನ್ನು ಕಲಿತೆವು.”

ವರ್ಣರಂಜಿತ ಚಿತ್ರಗಳಿಂದ ಕೂಡಿದ 256 ಪುಟದ ಈ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ವಿನಂತಿಸಬಹುದು. ಈ ಪುಸ್ತಕದ ಪುಟಗಳು ಈ ಪತ್ರಿಕೆಯ ಪುಟದ ಆಕಾರದಷ್ಟಿವೆ. ಜೊತೆಗಿರುವ ಕೂಪನ್‌ ಅನ್ನು ಭರ್ತಿಮಾಡಿ ಈ ಪತ್ರಿಕೆಯ 5 ನೇ ಪುಟದಲ್ಲಿರುವ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ. (g 1/08)

ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲಾಗಿರುವ ಪುಸ್ತಕದ ಕುರಿತು ಹೆಚ್ಚಿನ ಮಾಹಿತಿಯನ್ನು ನಾನು ವಿನಂತಿಸುತ್ತಿದ್ದೇನೆ.

ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.