ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಕಲ ಜನರಿಗಾಗಿರುವ ಒಂದು ಗ್ರಂಥ

ಸಕಲ ಜನರಿಗಾಗಿರುವ ಒಂದು ಗ್ರಂಥ

ಸಕಲ ಜನರಿಗಾಗಿರುವ ಒಂದು ಗ್ರಂಥ

ಯಾವ ಗ್ರಂಥಕ್ಕೆ ಈ ಮೇಲಿನ ವರ್ಣನೆಯು ಯಥೋಚಿತ ಎಂದು ನಿಮಗನಿಸುತ್ತದೆ? ಯು.ಎಸ್‌.ಎ.ಯ ಕೊಲರಾಡೊದ ಒಬ್ಬ ಸ್ತ್ರೀಯು ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರನ್ನು ಪಡೆದುಕೊಂಡಳು. ಬೈಬಲ್‌ನಲ್ಲಿ ಏನು ಒಳಗೂಡಿದೆ ಮತ್ತು ಇಂದು ಬೈಬಲ್‌ ಏಕೆ ಎಲ್ಲರೂ ಓದಬೇಕಾದಂಥ ಒಂದು ಪ್ರಮುಖ ಪುಸ್ತಕವಾಗಿದೆ ಎಂಬುದರ ಕುರಿತು ಈ ಬ್ರೋಷರ್‌ ವಿವರಿಸುತ್ತದೆ. ಒಂದು ಚಿಕ್ಕ ಪತ್ರದ ಮೂಲಕ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ಆಕೆ ಬರೆದದ್ದು:

“ನಾನು ಇದನ್ನು ತುಂಬ ಆನಂದಿಸಿದೆ. ಪೂರ್ತಿಯಾಗಿ ಓದಿದೆ. ಓದುವುದನ್ನು ನಿಲ್ಲಿಸಲು ಸಾಧ್ಯವೇ ಆಗಲಿಲ್ಲ. ದೇವರ ವಾಕ್ಯದ ಎಲ್ಲ ಮುಖ್ಯ ವಿಚಾರಗಳನ್ನು ಇದು ಎತ್ತಿಹೇಳುತ್ತದೆ. ಬೈಬಲ್‌ ಮತ್ತು ವಿಜ್ಞಾನ ಹೇಗೆ ಸಹಮತದಲ್ಲಿವೆ ಎಂಬುದರ ಕುರಿತು ಬಹು ಒಳ್ಳೆಯ ವಿವರಣೆಯನ್ನು ಇದು ನೀಡುತ್ತದೆ. ಮಾತ್ರವಲ್ಲದೆ, ಎಲ್ಲ ಜನರು ಓದಶಕ್ತರಾಗುವಂತೆ ಬೈಬಲ್‌ ಹೇಗೆ ಭಾಷಾಂತರಿಸಲ್ಪಟ್ಟಿತು ಮತ್ತು ಸಂರಕ್ಷಿಸಲ್ಪಟ್ಟಿತು ಎಂಬುದನ್ನೂ ವಿವರಿಸುತ್ತದೆ.”

ನಿಶ್ಚಯವಾಗಿಯೂ ಬೈಬಲ್‌, ಇತಿಹಾಸದಲ್ಲಿ ಬರೆಯಲ್ಪಟ್ಟಿರುವವುಗಳಲ್ಲೇ ಅತ್ಯಂತ ಗಮನಾರ್ಹವಾದ ಹಾಗೂ ಹೆಚ್ಚು ವಿತರಣೆಗೊಂಡಿರುವ ಅಸಾಧಾರಣ ಗ್ರಂಥವಾಗಿದೆ. ಸುಮಾರು 2,000 ವರ್ಷಗಳಷ್ಟು ಹಿಂದೆ ಬರೆದು ಮುಗಿಸಲ್ಪಟ್ಟದ್ದಾದರೂ ಇದು ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ ಮತ್ತು ಇದರ ಬೋಧನೆಗಳು ಆಧುನಿಕ ದಿನದ ಜೀವನಕ್ಕೆ ಪ್ರಾಯೋಗಿಕ.

ಈ 32 ಪುಟಗಳ ಬ್ರೋಷರಿನ ಕುರಿತ ಹೆಚ್ಚಿನ ಮಾಹಿತಿಗಾಗಿ ನೀವು ಕೆಳಕಂಡ ಕೂಪನ್‌ ಅನ್ನು ಭರ್ತಿಮಾಡಿ, ಈ ಪತ್ರಿಕೆಯ 5 ನೇ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ಸೂಕ್ತವಾದ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿರಿ. (g 2/08)

ಯಾವುದೇ ನಿರ್ಬಂಧಕ್ಕೆ ಒಳಪಡದೆ, ನಾನು ಈ ಬ್ರೋಷರಿನ ಕುರಿತು ಹಚ್ಚಿನ ಮಾಹಿತಿಯನ್ನು ಪಡೆಯಲು ಬಯಸುತ್ತೇನೆ.

ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.