ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹದಿಹರೆಯದ ಖಿನ್ನತೆಯಿಂದ ಹೊರಬರುವುದು

ಹದಿಹರೆಯದ ಖಿನ್ನತೆಯಿಂದ ಹೊರಬರುವುದು

ಹದಿಹರೆಯದ ಖಿನ್ನತೆಯಿಂದ ಹೊರಬರುವುದು

ಮೆಕ್ಸಿಕೊದಲ್ಲಿ ಇಂಗ್ಲಿಷ್‌ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಯಾವುದಾದರೊಂದು ವಿಷಯದ ಮೇಲೆ ಒಂದು ಭಾಷಣ ತಯಾರಿಸುವಂತೆ ತಿಳಿಸಲಾಯಿತು. ಮಾರೀಟ್ಸಾ ಎಂಬಾಕೆ ವಿವರಿಸುವುದು: “ನಾನು ಖಿನ್ನತೆಯಿಂದ ಬಳಲುತ್ತಿದ್ದಾಗ 2001, ಸೆಪ್ಟೆಂಬರ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿ ಬಂದಿದ್ದ ‘ಖಿನ್ನರಾಗಿರುವ ಹದಿವಯಸ್ಕರಿಗೆ ಸಹಾಯ’ ಎಂಬ ಲೇಖನಮಾಲೆಯು ನನಗೆ ಸಹಾಯಮಾಡಿತ್ತು. ಆದುದರಿಂದ ನಾನು ಆ ಪತ್ರಿಕೆಯಲ್ಲಿದ್ದ ಮಾಹಿತಿಯನ್ನು ಉಪಯೋಗಿಸಿ ಭಾಷಣ ತಯಾರಿಸಿದಾಗ ನನಗೆ ಉತ್ತಮ ಅಂಕಗಳು ಸಿಕ್ಕಿದವು. ಆಮೇಲೆ ನಾನು ಆ ಲೇಖನಮಾಲೆಯ ಪ್ರತಿಗಳನ್ನು ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಕಿಯರಿಗೂ ಹಂಚಿದೆ.”

ಎರಡು ವರುಷಗಳ ಬಳಿಕ ಮಾರೀಟ್ಸಾ ಕ್ರೈಸ್ತ ಶುಶ್ರೂಷೆಯಲ್ಲಿ ತೊಡಗಿದ್ದಾಗ ತಾನು ಕಲಿತ ಕೇಂದ್ರದಲ್ಲೇ ಇಂಗ್ಲಿಷ್‌ ವ್ಯಾಸಂಗ ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿನಿಯನ್ನು ಭೇಟಿಯಾದಳು. ಆ ವಿದ್ಯಾರ್ಥಿನಿ, ‘ಹದಿಹರೆಯದ ಖಿನ್ನತೆಗೆ’ ಸಂಬಂಧಿಸಿದ ಎಚ್ಚರ! ಪತ್ರಿಕೆಯ ಲೇಖನಮಾಲೆಯ ಪ್ರತಿಯನ್ನು ತೋರಿಸಿದಾಗ ಮಾರೀಟ್ಸಾಳಿಗೆ ಆಶ್ಚರ್ಯವಾಯಿತು. ಅನಂತರ ಅವಳಿಗೆ ತಿಳಿದುಬಂತೇನೆಂದರೆ, ಶಿಕ್ಷಕಿಯು ಆ ಲೇಖನಗಳನ್ನು ಎಷ್ಟೊಂದು ಗಣ್ಯ​ಮಾಡು ತ್ತಾಳೆಂದರೆ ತನ್ನ ವಿದ್ಯಾರ್ಥಿಗಳಲ್ಲಿ ಪ್ರತಿಯೊಬ್ಬರಿಗೂ ಅದರ ಪ್ರತಿಗಳನ್ನು ಮಾಡಿ ಕೊಡುತ್ತಾಳೆ!

ಹದಿಹರೆಯದ ಖಿನ್ನತೆಯ ಕುರಿತು ಹೆಚ್ಚಿನ ಮಾಹಿತಿ ಯುವ ಜನರ ಪ್ರಶ್ನೆಗಳು​​—⁠ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದಲ್ಲಿದೆ. ಅದರಲ್ಲಿ, “ನಾನು ನನ್ನನ್ನೇ ಇಷ್ಟಪಡುವುದಿಲ್ಲವೇಕೆ?” “ನಾನೇಕೆ ಇಷ್ಟು ಖಿನ್ನನಾಗುತ್ತೇನೆ?” ಮತ್ತು “ನನ್ನ ಒಂಟಿತನವನ್ನು ನಾನು ಹೇಗೆ ದೂರಮಾಡಬಲ್ಲೆ?” ಎಂಬ ಅಧ್ಯಾಯಗಳಿವೆ. ಹೆಚ್ಚಿನ ಮಾಹಿತಿಗಾಗಿ, ಜೊತೆಯಲ್ಲಿರುವ ಕೂಪನ್‌ ಭರ್ತಿಮಾಡಿ ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತವಾದ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಿರಿ. (g 4/08)

ಯಾವುದೇ ನಿರ್ಬಂಧಕ್ಕೆ ಒಳಪಡದೆ, ಇಲ್ಲಿ ತೋರಿಸಲಾಗಿರುವ ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾನು ವಿನಂತಿಸುತ್ತಿದ್ದೇನೆ.

ಮನೆಯಲ್ಲಿಯೇ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡುವುದಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿ.