ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ರಸನೇಂದ್ರಿಯಗಳು

ನಿಮ್ಮ ರಸನೇಂದ್ರಿಯಗಳು

ರಚಿಸಲ್ಪಟ್ಟವೋ?

ನಿಮ್ಮ ರಸನೇಂದ್ರಿಯಗಳು

ನಿಮ್ಮ ಅಚ್ಚುಮೆಚ್ಚಿನ ಊಟದ ತುತ್ತನ್ನು ಬಾಯಿಗಿಟ್ಟೊಡನೆ ನಿಮ್ಮ ರಸನೇಂದ್ರಿಯವು ತಟ್ಟನೆ ಪ್ರತಿಕ್ರಿಯಿಸಿ ಅದರ ಸವಿಯನ್ನು ಕೊಡುವುದು. ಆದರೆ ಈ ಆಶ್ಚರ್ಯಕರ ಪ್ರಕ್ರಿಯೆ ನಡೆಯುವುದು ಹೇಗೆ?

ತುಸು ಆಲೋಚಿಸಿ: ನಮ್ಮ ನಾಲಗೆ, ಬಾಯಿ ಹಾಗೂ ಗಂಟಲಿನ ಇತರ ಭಾಗಗಳಲ್ಲಿರುವ ಚರ್ಮಕೋಶಗಳ ಗುಂಪಿಗೆ ರಸನಾಂಕುರಗಳು ಎಂದು ಹೆಸರು. ನಾಲಗೆಯ ಮೇಲ್ಮೈಯಲ್ಲಿರುವ ಪ್ಯಾಪಿಲಾದೊಳಗೆ ಇಂಥ ಹಲವಾರು ರಸನಾಂಕುರಗಳಿವೆ. ಒಂದು ರಸನಾಂಕುರದಲ್ಲಿ ನೂರರಷ್ಟು ಗ್ರಾಹಕಕೋಶಗಳಿವೆ. ಇವುಗಳಲ್ಲಿ ಪ್ರತಿಯೊಂದು ನಾಲ್ಕು ವಿಧದ ರುಚಿಗಳಾದ ಹುಳಿ, ಉಪ್ಪು, ಸಿಹಿ ಅಥವಾ ಕಹಿಗಳಲ್ಲಿ ಒಂದನ್ನು ಗುರುತಿಸಬಲ್ಲದು. * ಖಾರ ಮಾತ್ರ ಪೂರ ಬೇರೆಯೇ ಆದ ವರ್ಗಕ್ಕೆ ಸೇರಿದೆ. ಅದು ನೋವಿನ ಸಂವೇದಕ ಕೋಶಗಳನ್ನು ಪ್ರಚೋದಿಸುತ್ತದೆ, ರಸನಾಂಕುರಗಳನ್ನಲ್ಲ! ಈ ರುಚಿಗ್ರಾಹಕ ಕೋಶಗಳು ಜ್ಞಾನವಾಹಿ ನರಗಳಿಗೆ ಜೋಡಿಸಲ್ಪಟ್ಟಿವೆ. ಊಟದಲ್ಲಿರುವ ರಾಸಾಯನಿಕಗಳಿಂದ ಪ್ರಚೋದಿಸಲ್ಪಟ್ಟಾಗ ತಕ್ಷಣವೇ ಈ ನರಗಳು ಮಿದುಳು ಬಳ್ಳಿಯ ಮೂಲಕ್ಕೆ ಸಂದೇಶಗಳನ್ನು ಕಳುಹಿಸುತ್ತವೆ.

ಆದರೂ ನಾವು ರುಚಿ ನೋಡುವುದು ಕೇವಲ ಬಾಯಿಂದ ಮಾತ್ರವಲ್ಲ. ವಾಸನೆಯನ್ನು ಕಂಡುಹಿಡಿಯಬಲ್ಲ 50 ಲಕ್ಷ ಗ್ರಾಹಕಗಳು ಮೂಗಿನಲ್ಲಿವೆ. ಅವು ಸುಮಾರು 10,000 ವಿವಿಧ ವಾಸನೆಗಳನ್ನು ಕಂಡುಹಿಡಿದು ರುಚಿ​ನೋಡುವ ಪ್ರಕ್ರಿಯೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ರುಚಿ ಸವಿಯುವುದರಲ್ಲಿ ಸುಮಾರು 75 ಪ್ರತಿಶತ ಭಾಗವು ಘ್ರಾಣಶಕ್ತಿಯಿಂದಲೇ ಆಸ್ವಾದಿಸಲ್ಪಡುತ್ತದೆಂದು ಅಂದಾಜುಮಾಡಲಾಗಿದೆ.

ಆಘ್ರಾಣಿಸಲು ಶಕ್ತವಾದ ಎಲೆಕ್ಟ್ರೋಕೆಮಿಕಲ್‌ ನೋಸ್‌ ಎಂಬ ಕೃತಕ ಮೂಗನ್ನು ವಿಜ್ಞಾನಿಗಳು ತಯಾರಿಸಿದ್ದಾರೆ. ಅದು ರಾಸಾಯನಿಕ ಅನಿಲಗಳ ಮೂಲಕ ವಾಸನೆಯನ್ನು ಕಂಡುಹಿಡಿಯುತ್ತದೆ. ಹಾಗಿದ್ದರೂ, ನರತಜ್ಞರಾದ ಜಾನ್‌ ಕಾವರ್‌ ರಿಸರ್ಚ್‌/ಪೆನ್‌ ಸ್ಟೇಟ್‌ ಪತ್ರಿಕೆಯಲ್ಲಿ ಹೇಳಿದ್ದು: “ಅತ್ಯುತ್ತಮವಾಗಿ ವಿನ್ಯಾಸಿಸಲ್ಪಟ್ಟ ಹಾಗೂ ಜಟಿಲ ದೇಹರಚನೆಗೆ ಹೋಲಿಸುವಾಗ ಮಾನವನು ತಯಾರಿಸಿದ ಯಾವುದೇ ಕೃತಕ ಸಾಧನವು ಸರ್ವಸಾಮಾನ್ಯ.”

ರಸನೇಂದ್ರಿಯವು ಊಟದ ಸ್ವಾದವನ್ನು ಹೆಚ್ಚಿಸುತ್ತದೆ ಎಂಬುದನ್ನು ಒಪ್ಪದವರು ಯಾರು? ಆದರೂ ಒಬ್ಬರಿಗೆ ಸಿಹಿ ಇಷ್ಟವಾದರೆ ಇನ್ನೊಬ್ಬರಿಗೆ ಖಾರ ಇಷ್ಟವಾಗುವುದು ಹೇಗೆಂದು ಸಂಶೋಧಕರಿಗೆ ಇನ್ನೂ ತಿಳಿದಿಲ್ಲ. “ವಿಜ್ಞಾನಿಗಳಿಗೆ ಮನುಷ್ಯನ ದೇಹದ ಮೂಲಭೂತ ಕ್ರಿಯೆಗಳ ಕುರಿತು ಅನೇಕ ವಿಷಯಗಳು ತಿಳಿದಿದ್ದರೂ, ನಮ್ಮ ರಸನೇಂದ್ರಿಯ ಮತ್ತು ಘ್ರಾಣೇಂದ್ರಿಯಗಳು ಅವರಿಗೆ ಇನ್ನೂ ತುಸು ರಹಸ್ಯವಾಗಿಯೇ ಉಳಿದಿವೆ” ಎಂದು ಸೈಅನ್ಸ್‌ ಡೈಲಿ ಪತ್ರಿಕೆ ಹೇಳುತ್ತದೆ.

ನಿಮ್ಮ ಅಭಿಪ್ರಾಯ? ನಿಮ್ಮ ರಸನೇಂದ್ರಿಯಗಳು ಆಕಸ್ಮಿಕವಾಗಿ ಬಂದವೋ ಅಥವಾ ರಚಿಸಲ್ಪಟ್ಟವೋ? (g 7/08)

[ಪಾದಟಿಪ್ಪಣಿ]

^ ಇತ್ತೀಚೆಗೆ ವಿಜ್ಞಾನಿಗಳು ‘ಯುಮಾಮಿ’ಯನ್ನು ರುಚಿಪಟ್ಟಿಯಲ್ಲಿ ಸೇರಿಸಿದ್ದಾರೆ. ಪ್ರೋಟೀನ್‌ಗಳಲ್ಲಿರುವ ಗ್ಲೂಟ್ಯಾಮಿಕ್‌ ಆ್ಯಸಿಡ್‌ನ ಉಪ್ಪಿನಂಶಗಳಿಂದ ತೆಗೆಯಲ್ಪಟ್ಟ ಸತ್ತ್ವ ಅಥವಾ ಉಪ್ಪುರುಚಿ ಕೊಡುವಂಥದ್ದೇ ಯುಮಾಮಿ. ಈ ಕ್ಷಾರಗಳು ಬೇರೆ ಪದಾರ್ಥಗಳಲ್ಲಿ ಅಲ್ಲದೆ ಮೋನೋಸೋಡಿಯಂ ರುಚಿವರ್ಧಕಗಳಲ್ಲಿಯೂ ಕಂಡುಬರುತ್ತವೆ.

[ಪುಟ 14ರಲ್ಲಿರುವ ರೇಖಾಕೃತಿ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ನಾಲಗೆಯ ಅಡ್ಡಸೀಳಿಕೆ

[ರೇಖಾಕೃತಿ]

ಪ್ಯಾಪಿಲಾ

[ಕೃಪೆ]

© Dr. John D. Cunningham/Visuals Unlimited