ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಂದಿನ ಪೀಳಿಗೆಗಳನ್ನು ಭೂಮಿಯು ಪೋಷಿಸಬಲ್ಲದೋ?

ಮುಂದಿನ ಪೀಳಿಗೆಗಳನ್ನು ಭೂಮಿಯು ಪೋಷಿಸಬಲ್ಲದೋ?

ಮುಂದಿನ ಪೀಳಿಗೆಗಳನ್ನು ಭೂಮಿಯು ಪೋಷಿಸಬಲ್ಲದೋ?

ಕೆನಡದ ಎಚ್ಚರ! ಲೇಖಕರಿಂದ

ಜಗತ್ತಿನ ಪ್ರಧಾನ ಜೀವಪರಿಸರಶಾಸ್ತ್ರದ ನಾಲ್ಕು ವರ್ಷಗಳ ತನಕ ಗಹನ ಅಧ್ಯಯನವನ್ನು ಮಾಡಿದ ನಂತರ, ಮಿಲೆನಿಅಮ್‌ ಈಕೋಸಿಸ್ಟಮ್‌ ಅಸೆಸ್‌ಮೆಂಟ್‌ ಎಂಬ ಅಧ್ಯಯನ ಗುಂಪಿನಲ್ಲಿದ್ದ ಪರಿಣತರು ಮತ್ತು ಪರಿಸರೀಯ ತಜ್ಞರು ತಮ್ಮ ಮೊತ್ತಮೊದಲ ವರದಿಯನ್ನು ಪ್ರಕಾಶಿಸಿದರು. ಅವರ ಕೆಲವು ಅಂತಿಮ ತೀರ್ಮಾನಗಳು ಈ ಕೆಳಗಿನಂತಿವೆ: ಕಳೆದ ಐವತ್ತು ವರ್ಷಗಳಲ್ಲಿ ಆಹಾರ, ಶುದ್ಧನೀರು, ಮರ, ​ನಾರುಪದಾರ್ಥ ಮತ್ತು ಇಂಧನಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಗಳು ಭೂಮಿಯ ಜೀವಪರಿಸರಗಳಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿವೆ. ಇವು ಮುಂದಿನ ಪೀಳಿಗೆಗಳನ್ನು ಪೋಷಿಸಲು ಭೂಮಿಗಿರುವ ಸಾಮರ್ಥ್ಯವನ್ನು ಅತಿಯಾಗಿ ಕುಂದಿಸಿವೆ. ಸ್ವಾಭಾವಿಕ ಪೈರುಗಳ ಪರಾಗಸ್ಪರ್ಶಕ್ಕಾಗಿ, ವನ್ಯಸಸ್ಯಗಳಿಂದ ಗಾಳಿಯ ಶುದ್ಧೀಕರಣಕ್ಕಾಗಿ, ಸಾಗರಗಳಿಂದ ಪೋಷಕಾಂಶಗಳ ಮರುಬಳಕೆಗಾಗಿ ಭೂಮಿಗಿರುವ ಸ್ವಾಭಾವಿಕ ಶಕ್ತಿಯು ಉಡುಗಿಹೋಗಿದೆ. ಈ ಭೂಗ್ರಹದ ಅನೇಕಾನೇಕ ಪ್ರಾಣಿಸಂಕುಲವು ಸಹ ನಾಶನದ ಅಂಚಿನಲ್ಲಿದೆ.

“ಮಾನವರು ಭೂಮಿಗೆ ಎಷ್ಟೊಂದು ಹಾನಿಯನ್ನು ಮಾಡುತ್ತಾರೆಂದರೆ ನಿಸರ್ಗದಲ್ಲಿರುವ ಕೆಲವೊಂದು ವ್ಯವಸ್ಥೆಗಳು ಥಟ್ಟನೆ ಕುಸಿದುಹೋಗುವ ಸಾಧ್ಯತೆಯಿದೆ. ಇದರಿಂದಾಗಿ ವಿವಿಧ ರೋಗಗಳು, ಅರಣ್ಯನಾಶ ಮತ್ತು ಸಾಗರಗಳಲ್ಲಿ ಮೃತ ವಲಯಗಳು ಉಂಟಾಗಬಲ್ಲವು” ಎಂದು ಕೆನಡಾದ ಗ್ಲೋಬ್‌ ಅಂಡ್‌ ಮೈಲ್‌ ಪತ್ರಿಕೆಯು ತಿಳಿಸಿತು. ಅದು ಮತ್ತೂ ತಿಳಿಸಿದ್ದು: “ಎಲ್ಲಾ ಜೀವಿಗಳಿಗಾಗಿ ಗಾಳಿಯನ್ನು, ನೀರನ್ನು ಮತ್ತು ಪೋಷಕಾಂಶಗಳನ್ನು ಪುನಃಬಳಸುವಂತೆ ಮಾಡುವ ತೇವಭರಿತ ಜಮೀನುಗಳು, ಅರಣ್ಯಗಳು, ಹುಲ್ಲುಗಾವಲುಗಳು, ನದೀಮುಖಜ ಭೂಮಿಗಳು, ಕರಾವಳಿ ಮೀನುಗಾರಿಕೆಗಳು ಮತ್ತು ಇತರ ಇರುನೆಲಗಳು ಅಪರಿಹಾರ್ಯವಾಗಿ ಹಾನಿಗೊಳಗಾಗುವವು.” ಜೀವಪರಿಸರದ ಮೇಲೆ ಹಾಕಲ್ಪಟ್ಟಿರುವ ಒತ್ತಡವನ್ನು ಕಡಿಮೆಮಾಡುವ ಸಾಮರ್ಥ್ಯವು ಮನುಷ್ಯನಿಗೆ ಇದೆ ಎಂದು MA ಬೋರ್ಡಿನ ನಿರ್ದೇಶಕರು ತೀರ್ಮಾನಿಸಿದರು. ಆದರೂ, ಅದನ್ನು ಸಾಧಿಸಲಿಕ್ಕಾಗಿ “ನಿಸರ್ಗವನ್ನು ಮಾನವರು ಉಪಚರಿಸುವ ರೀತಿಯಲ್ಲಿ ಮಹತ್ತಾದ ಬದಲಾವಣೆಗಳನ್ನು ಮಾಡುವ ಆವಶ್ಯಕತೆ ಇದೆ” ಎಂದರವರು.

ಈ ಭೂಗ್ರಹವನ್ನು ಕಾಪಾಡಸಾಧ್ಯವಿದೆಯೋ? ಖಂಡಿತವಾಗಿಯೂ ಸಾಧ್ಯವಿದೆ! ದೇವರ ಸೃಷ್ಟಿಯ ಪರಾಮರಿಕೆ ಮಾಡುವವರೋಪಾದಿ ಪರಿಸರವನ್ನು ಸಂರಕ್ಷಿಸಲು ನಮ್ಮಿಂದಾದುದೆಲ್ಲವನ್ನು ನಾವು ಮಾಡಬೇಕು. (ಕೀರ್ತನೆ 115:16) ಆದರೂ ದೇವರ ಹಸ್ತಕ್ಷೇಪದಿಂದ ಮಾತ್ರವೇ ಜೀವಪರಿಸರ ವ್ಯವಸ್ಥೆಯು ಸಮತೋಲನಕ್ಕೆ ತರಲ್ಪಡಬಲ್ಲದು. ನಮ್ಮ “ಸೃಷ್ಟಿಕರ್ತನಾದ” ದೇವರು ತನ್ನ ಗಮನವನ್ನು ಭೂಮಿಯ ಕಡೆಗೆ ಹರಿಸಿ ಅದನ್ನು “ಬಹಳ ಫಲವತ್ತಾಗಿ” ಮಾಡುವೆನೆಂದು ವಚನಕೊಡುತ್ತಾನೆ. (ಯೋಬ 35:10; ಕೀರ್ತನೆ 65:​9-13, NIBV) ಇದರಲ್ಲಿ ಸಮುದ್ರಗಳೂ ಅದರಲ್ಲಿರುವ ಎಲ್ಲವೂ ಸೇರಿರುತ್ತವೆ ಯಾಕೆಂದರೆ ನಿರ್ಮಾಣಿಕನಾದ ಯೆಹೋವ ದೇವರಿಗೆ ಅವುಗಳ ಮೇಲೆ ಅಧಿಕಾರವಿದೆ. (ಕೀರ್ತನೆ 95:5; 104:​24-31) ದೇವರು ಏನನ್ನು ವಾಗ್ದಾನಿಸುತ್ತಾನೋ ಅವು ಸತ್ಯವಾಗಿ ಈಡೇರುವವು ಯಾಕೆಂದರೆ ಆತನು “ಸುಳ್ಳಾಡದ ದೇವರು.”-ತೀತ 1:⁠2.

ಮುಂದಿನ ಪೀಳಿಗೆಗಳನ್ನು ಭೂಮಿಯು ಪೋಷಿಸಬಲ್ಲದು ಎಂದು ತಿಳಿಯುವುದು ಅತಿ ಸಾಂತ್ವನಕರವು. ಇದು ದೇವರಿಗೆ ಭಯಪಡುವ ಎಲ್ಲರು ಆತನ ಅಪಾರ ವಿವೇಕ, ಶಕ್ತಿ, ಮತ್ತು ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸುವಂತೆಯೂ ತನ್ನ ಸೃಷ್ಟಿಯ ಮೇಲೆ ಆತನಿಗಿರುವ ಪ್ರೀತಿಗಾಗಿ ಆತನನ್ನು ಕೊಂಡಾಡುವಂತೆಯೂ ಪ್ರೇರಿಸುವುದು.​—⁠ಕೀರ್ತನೆ 150:​1-6. (g 7/08)

[ಪುಟ 10ರಲ್ಲಿರುವ ಚಿತ್ರ ಕೃಪೆ]

Globe: NASA photo