ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಭಿಪ್ರಾಯ ಬದಲಿಸಿದ ಅಧ್ಯಾಪಕಿ

ಅಭಿಪ್ರಾಯ ಬದಲಿಸಿದ ಅಧ್ಯಾಪಕಿ

ಅಭಿಪ್ರಾಯ ಬದಲಿಸಿದ ಅಧ್ಯಾಪಕಿ

◼ ಕೆಲವು ವರುಷಗಳ ಹಿಂದೆ ಜಾರ್ಜಿಯ ದೇಶದ ಬಾಟೂಮೀ ನಗರದ ಅಧ್ಯಾಪಕಿಯೊಬ್ಬಳು ಬೈಬಲಿನ ದಶಾಜ್ಞೆಗಳನ್ನು ಪಠಿಸುವಂತೆ ತನ್ನ ವಿದ್ಯಾರ್ಥಿಗಳನ್ನು ಕೇಳಿಕೊಂಡಳು. ಆ್ಯನ ಎಂಬ ಆಕೆಯ ವಿದ್ಯಾರ್ಥಿನಿ ಅದನ್ನು ಸರಿಯಾಗಿ ಪಠಿಸಿದಾಗ ಆಕೆಗೆ ಎಲ್ಲಿಲ್ಲದ ಅಚ್ಚರಿ. ಬೈಬಲ್‌ನ ಕುರಿತ ಇತರ ಪ್ರಶ್ನೆಗಳಿಗೆ ಆ್ಯನ ಕೊಟ್ಟ ಉತ್ತರಗಳೂ ಅಧ್ಯಾಪಕಿಯ ಮನತಟ್ಟಿದವು. ‘ನಿನಗೆ ಇಷ್ಟೊಂದು ವಿಷಯಗಳು ತಿಳಿದಿರುವುದು ಹೇಗೆ?’ ಎಂದು ಅವಳು ಕೇಳಿದಳು ಕುತೂಹಲದಿಂದ. ತಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಿದ್ದೇ ಎಂದು ಆ್ಯನ ಹೇಳಿದೊಡನೆ, ಆ ಅಧ್ಯಾಪಕಿ ಅವರು ಮತಾಂಧರೆಂದು ಹೇಳಿ ಆ್ಯನಳ ಬಾಯಿಮುಚ್ಚಿಸಿದಳು.

ಒಮ್ಮೆ ಜಾರ್ಜಿಯದ ಜನಜೀವನ ಮತ್ತು ಅದು ಎದುರಿಸುವ ಸಮಸ್ಯೆಗಳ ಬಗ್ಗೆ ಒಂದು ಪ್ರಬಂಧವನ್ನು ಬರೆಯುವಂತೆ ಆ ಅಧ್ಯಾಪಕಿ ವಿದ್ಯಾರ್ಥಿಗಳಿಗೆ ಹೇಳಿದಳು. ಆ್ಯನ ತನ್ನ ಪ್ರಬಂಧದ ಕೊನೆಯಲ್ಲಿ ಹೀಗೆ ಬರೆದಳು: “ಸಮಾಜವನ್ನು ತಿದ್ದುವ ಯಾವುದೇ ಮಾನವ ತೀವ್ರಗಾಮಿ ಪ್ರಯತ್ನಗಳು ಯಶಸ್ಸನ್ನು ಪಡೆಯಲಾರವು. ಏಕೆಂದರೆ, ಯೆರೆಮೀಯ 10:23 ಹೇಳುವಂತೆ, ‘ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.’ ಇರುವ ಸಮಸ್ಯೆಗಳೆಲ್ಲ ಪರಿಹರಿಸಲ್ಪಡುವುದು ದೇವರ ರಾಜ್ಯದಿಂದ ಮಾತ್ರ.”

ಮರುದಿನ ಆ ಅಧ್ಯಾಪಕಿ ಆ್ಯನಳ ಪ್ರಬಂಧವನ್ನು ಪ್ರಶಂಸಿಸಿ ಕ್ಲಾಸಿಗೆ ಹೇಳಿದ್ದು: “ತನ್ನ ಸ್ವಂತ ಮಾತುಗಳಲ್ಲಿ ಆ್ಯನ ಬರೆದ ಅತ್ಯುತ್ತಮ ಪ್ರಬಂಧವನ್ನು ನಾನು ಓದಿ ಆನಂದಿಸಿದೆ. ಲೋಕ ಪರಿಸ್ಥಿತಿ ಬದಲಾಗಲು ಹೇಗೆ ಸಾಧ್ಯವೆಂದು ಅವಳು ವಿವರಿಸಿರುತ್ತಾಳೆ.” ಆ ಅಧ್ಯಾಪಕಿ ಆ್ಯನಳ ನಡತೆಯಿಂದಲೂ ಪ್ರಭಾವಿತಳಾದಳು. ಅವಳ ಸಭ್ಯವರ್ತನೆ ಹಾಗೂ ಮರ್ಯಾದೆಯ ಉಡುಪನ್ನೂ ಇಡೀ ಕ್ಲಾಸಿನ ಮುಂದೆ ಶ್ಲಾಘಿಸಿದಳು.

ಅನಂತರ ಒಮ್ಮೆ ಯೆಹೋವನ ಸಾಕ್ಷಿಗಳು ಆ ಅಧ್ಯಾಪಕಿಯನ್ನು ಆಕೆಯ ಮನೆಯಲ್ಲಿ ಭೇಟಿಯಾದರು. ತಾನು ಮೊದಲು ಸಾಕ್ಷಿಗಳನ್ನು ಮತಾಂಧರೆಂದು ನೆನಸಿದ್ದಳೆಂದೂ ಆದರೆ ಆ್ಯನ ಎಂಬ ವಿದ್ಯಾರ್ಥಿನಿಯ ನಡತೆ ತನ್ನ ಅಭಿಪ್ರಾಯವನ್ನು ಬದಲಿಸಿತೆಂದೂ ಅವಳಂದಳು. 2007ರಲ್ಲಿ ಈ ಅಧ್ಯಾಪಕಿ ಯೇಸು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಉಪಸ್ಥಿತಳಾಗಿ ಕಾರ್ಯಕ್ರಮಕ್ಕೆ ಕಿವಿಗೊಟ್ಟು ಕೇಳಿದಳು.

ಯೆಹೋವನ ಸಾಕ್ಷಿಗಳು ಬೈಬಲನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾರೆಂಬ ವಿಷಯದಲ್ಲಿ ತಾನು ತೀರ ಪ್ರಭಾವಿತಳು ಎಂದು ಆ್ಯನಳ ಅಧ್ಯಾಪಕಿ ಜ್ಞಾಪಕಾಚರಣೆಗೆ ಉಪಸ್ಥಿತಳಾದ ಬಳಿಕ ಒಪ್ಪಿಕೊಂಡಳು. ಈಗ ಸಾಕ್ಷಿಗಳು ಅವಳೊಂದಿಗೆ ಕ್ರಮವಾಗಿ ಬೈಬಲ್‌ ಅಧ್ಯಯನ ನಡೆಸುತ್ತಿದ್ದಾರೆ. ಈ ಅಧ್ಯಾಪಕಿಯಂತೆ, ಇತರರ ನಂಬಿಕೆಗಳ ಮತ್ತು ವರ್ತನೆಗಳ ಹಿಂದೆ ಏನಿದೆ ಎಂಬುದನ್ನು ಪರೀಕ್ಷಿಸುವ ಬಿಚ್ಚು ಮನಸ್ಸು ನಿಮಗೂ ಇದೆ ಎಂಬುದಕ್ಕೆ ಸಂದೇಹವಿಲ್ಲ. ಒಂದು ಉಚಿತ ಬೈಬಲ್‌-ಅಧ್ಯಯನ ನಿಮಗೆ ಬೇಕಿದ್ದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಏಕೆ ಕೇಳಿಕೊಳ್ಳಬಾರದು? (g 3/09)

[ಪುಟ 9ರಲ್ಲಿರುವ ಚಿತ್ರ]

ಆ್ಯನ ಪ್ರಬಂಧವನ್ನು ಬರೆಯುತ್ತಿರುವುದು