ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಿಗೆ ಹೆತ್ತವರ ನೆರವು

ಮಕ್ಕಳಿಗೆ ಹೆತ್ತವರ ನೆರವು

ಮಕ್ಕಳಿಗೆ ಹೆತ್ತವರ ನೆರವು

ಅಮೆರಿಕದ ಒಂದು ಶೈಕ್ಷಣಿಕ ಸಂಸ್ಥೆಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಸವಾಲನ್ನೊಡ್ಡುತ್ತದೆ: “ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿ.” ಹೀಗೆ ಗುರಿ ಮುಟ್ಟಲು ಬಲವಂತವಾಗಿ ಪ್ರೇರಿಸಲ್ಪಟ್ಟ ಕೆಲವು ಯುವಜನರು ತಮ್ಮ ಇತಿಮಿತಿಗಳನ್ನು ಮೀರಿ ಕಾರ್ಯವೆಸಗುತ್ತಾರೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಮ್ಯಾಡಲಿನ್‌ ಲಿವೈನ್‌ ಬರೆದದ್ದು: “ಮುಂಬರಿದ ಶೈಕ್ಷಣಿಕ ಕೋರ್ಸುಗಳು, ಬಹುರೂಪಿ ಪಠ್ಯೇತರ ಚಟುವಟಿಕೆಗಳು, ಸಕಾಲಕ್ಕೆ ಮುಂಚೆಯೇ ಹೈಸ್ಕೂಲ್‌ ಅಥವಾ ಕಾಲೇಜಿನ ಶಿಕ್ಷಣಕ್ಕೆ ತಯಾರಿ, ಅಧ್ಯಯನದಲ್ಲಿ ರ್ಯಾಂಕ್‌ ಪಡೆಯಲಿಕ್ಕಾಗಿ ವಿದ್ಯಾರ್ಥಿಯ ಪ್ರತಿಭೆಯನ್ನೆಲ್ಲಾ ಹಿಂಡಿ ತೆಗೆಯಲು ವಿಶೇಷ ಕೋಚ್‌ಗಳ ಮತ್ತು ಶಿಕ್ಷಕರ ನೇಮಕ, ಇವೆಲ್ಲವುಗಳಿಂದ ಅನೇಕ ಮಕ್ಕಳು ಒತ್ತಡದ ಸುಳಿಗೆ ಬಿದ್ದು ತಮ್ಮ ಆರೋಗ್ಯವನ್ನು ಅಪಾಯಕ್ಕೊಡ್ಡುತ್ತಾರೆ.” ಈ ಪರಿಸ್ಥಿತಿಯಲ್ಲಿರುವ ವಿದ್ಯಾರ್ಥಿಗಳು ಶಾರೀರಿಕ ಮತ್ತು ಭಾವನಾತ್ಮಕ ಹಾನಿಗೆ ಒಳಗಾಗಬಲ್ಲರು.

ನಿಮ್ಮ ಮಗು ಶಾಲೆಯಲ್ಲಿ ಈ ರೀತಿ ಒತ್ತಡಕ್ಕೆ ಗುರಿಯಾಗಿರುವ ಕುರಿತು ನೀವು ಚಿಂತಿಸುವುದಾದರೆ ನೀವೇ ಶಾಲೆಗೆ ಹೋಗಿ ಶಿಕ್ಷಕರೊಂದಿಗೆ ಮಾತಾಡಬೇಕು. ಶಾಲಾ ಶಿಕ್ಷಕರು, ಸಲಹೆಗಾರರು ಮತ್ತು ಆಡಳಿತವರ್ಗದವರನ್ನು ಸಂಪರ್ಕಿಸಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಈ ಹಕ್ಕು ನಿಮಗೆ ಇದೆ.

ಮಕ್ಕಳು ಬೆಳೆದಂತೆ ಅವರ ಪ್ರಗತಿಯ ಕಡೆ ನಿಕಟ ಗಮನ ಕೊಡುವಂತೆ ಬೈಬಲ್‌ ಹೆತ್ತವರನ್ನು ಉತ್ತೇಜಿಸುತ್ತದೆ. ದೇವರ ಸೇವಕನಾದ ಮೋಶೆ ಪ್ರಾಚೀನ ಇಸ್ರಾಯೇಲ್ಯ ಹೆತ್ತವರಿಗೆ ಹೇಳಿದ್ದು: “[ದೇವರ ನಿಯಮಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:7.

ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ನಿಮಗಿರುವ ತೀವ್ರಾಸಕ್ತಿಯು ಅವರ ಖಾಸಗಿ ವಿಷಯಗಳಲ್ಲಿ ನೀವು ತಲೆಹಾಕುತ್ತೀರಿ ಎಂದು ಸೂಚಿಸುವುದಿಲ್ಲ. ಬದಲಾಗಿ ನಿಮ್ಮ ಮಕ್ಕಳಿಗೆ ನೀವು ಪ್ರೀತಿಯ ಬೆಂಬಲವನ್ನು ತೋರಿಸುತ್ತೀರೆಂಬುದನ್ನು ಸೂಚಿಸುತ್ತದೆ. ನಿಮ್ಮ ಬೆಂಬಲವು ನಿಮ್ಮ ಚಿಕ್ಕ ಮಕ್ಕಳ ಶಾಲಾ ಒತ್ತಡವನ್ನು ತಗ್ಗಿಸಲು ತುಂಬಾ ಸಹಾಯಕಾರಿ. (g 4/09)

[ಪುಟ 9ರಲ್ಲಿರುವ ಚಿತ್ರ]

ನಿಮ್ಮ ಮಗುವಿನ ಒತ್ತಡದ ಕುರಿತು ಅವನ ಶಾಲಾ ಶಿಕ್ಷಕರೊಂದಿಗೂ ಸಲಹೆಗಾರರೊಂದಿಗೂ ಮಾತಾಡಿರಿ