ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ನಿಮ್ಮ ಉತ್ತರವೇನು?

ಇದು ನಡೆದದ್ದೆಲ್ಲಿ?

1. ಈ ಘಟನೆ ಯಾವ ನಗರದಲ್ಲಿ ನಡೆಯಿತು?

ಸುಳಿವು: ಅ. ಕಾರ್ಯಗಳು 18:1-3 ಓದಿ.

ನಕ್ಷೆಯಲ್ಲಿ ಗುರುತು ಹಾಕಿ.

ರೋಮ್‌

ಕೊರಿಂಥ

ಎಫೆಸ

ತಾರ್ಸ

◼ ಈ ಮೂವರು ಏನು ಮಾಡುತ್ತಿದ್ದಾರೆ?

.....

◼ ಈ ದಂಪತಿಯ ಹೆಸರುಗಳೇನು, ಮತ್ತು ಅವರ ಸ್ನೇಹಿತನ ಹೆಸರೇನು?

.....

ಚರ್ಚೆಗಾಗಿ:

ಈ ದಂಪತಿ ಸಹಾಯಮಾಡಿದ ಇನ್ನೊಬ್ಬ ವ್ಯಕ್ತಿಯ ಹೆಸರೇನು?

ಸುಳಿವು: ಅ. ಕಾರ್ಯಗಳು 18:24-26.

ಈ ದಂಪತಿಗೆ ಯಾವ ಕೆಲಸ ತುಂಬ ಇಷ್ಟ ಆಗುತ್ತಿತ್ತೆಂದು ನೆನಸುತ್ತೀರಿ ಮತ್ತು ಏಕೆ?

ಮಕ್ಕಳೇ, ಚಿತ್ರಗಳನ್ನು ಪತ್ತೆಹಚ್ಚಿರಿ

ಇಲ್ಲಿರುವ ಚಿತ್ರಗಳು ಈ ಸಂಚಿಕೆಯಲ್ಲಿ ಎಲ್ಲಿವೆಯೆಂದು ನೀವು ಪತ್ತೆಹಚ್ಚಬಲ್ಲಿರಾ? ಪ್ರತಿಯೊಂದು ಚಿತ್ರದಲ್ಲಿ ಏನು ಸಂಭವಿಸುತ್ತಿದೆ ಎಂದು ನಿಮ್ಮ ಸ್ವಂತ ಮಾತುಗಳಲ್ಲಿ ವಿವರಿಸಿ.

ಈ ಸಂಚಿಕೆಯಿಂದ

ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ, ಬಿಟ್ಟುಹೋದ ಬೈಬಲ್‌ ವಚನ(ಗಳನ್ನು) ತುಂಬಿಸಿರಿ.

ಪುಟ 3 ಕುಟುಂಬದ ಅಗತ್ಯಗಳನ್ನು ಪೂರೈಸದ ವ್ಯಕ್ತಿ ಯಾರಿಗಿಂತಲೂ ಕಡೆ? 1 ತಿಮೊಥೆಯ 5:________

ಪುಟ 5 ಒಬ್ಬರಿಗಿಂತ ಇಬ್ಬರು ಲೇಸು ಏಕೆ? ಪ್ರಸಂಗಿ 4:________

ಪುಟ 11 ವಿವೇಕ ಯಾರಲ್ಲಿದೆ? ಯೋಬ 12:________

ಪುಟ 29 ವ್ಯಕ್ತಿಯೊಬ್ಬನು ಯಾವುದರಿಂದ ದೂರವಿರಬೇಕು? 1 ಥೆಸಲೊನೀಕ 4: ________

ನ್ಯಾಯಸ್ಥಾಪಕ ಗಿದ್ಯೋನನ ಕುರಿತು ನಿಮಗೇನು ತಿಳಿದಿದೆ?

ನ್ಯಾಯಸ್ಥಾಪಕರು 6:1–7:25 ಓದಿ, ಮುಂದಿನ ಪ್ರಶ್ನೆಗಳನ್ನು ಉತ್ತರಿಸಿ.

2. .....

ಅವನು ಯಾವ ಕುಲದವನು?

3. .....

ಅವನು ಇಸ್ರಾಯೇಲ್ಯರನ್ನು ಯಾರ ಕೈಯಿಂದ ಬಿಡಿಸಿದನು?

4. .....

ಸರಿಯೋ ತಪ್ಪೋ? ಅವನು ಮೋಶೆಗೂ ಮುಂಚೆ ಜೀವಿಸಿದ್ದನು.

ಚರ್ಚೆಗಾಗಿ:

ಯೆಹೋವನು ಗಿದ್ಯೋನನನ್ನು ನೇಮಿಸಿದಾಗ ಅವನು ಯಾವ ಗುಣವನ್ನು ತೋರಿಸಿದನು?

ಸುಳಿವು: ನ್ಯಾಯಸ್ಥಾಪಕರು 6:14-16 ಓದಿ.

ಇದು ಸದ್ಗುಣ ಎಂದೆಣಿಸುತ್ತೀರೋ? ಯಾಕೆಂದು ವಿವರಿಸಿ.

◼ ಉತ್ತರಗಳು ಪುಟ 27ರಲ್ಲಿವೆ

ಪುಟ 31ರ ಉತ್ತರಗಳು

1. ಕೊರಿಂಥ.

◼ ಡೇರೆ ಹೊಲಿಯುತ್ತಿದ್ದಾರೆ.

◼ ಅಕ್ವಿಲ, ಪ್ರಿಸ್ಕಿಲ್ಲ ಮತ್ತು ಪೌಲ.

2. ಮನಸ್ಸೆ.—ನ್ಯಾಯಸ್ಥಾಪಕರು 6:15.

3. ಮಿದ್ಯಾನ.—ನ್ಯಾಯಸ್ಥಾಪಕರು 6:6.

4. ತಪ್ಪು.