ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂತ್ರ 5 ಮಣಿಯಿರಿ

ಸೂತ್ರ 5 ಮಣಿಯಿರಿ

ಸೂತ್ರ 5 ಮಣಿಯಿರಿ

“ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.”—ಫಿಲಿಪ್ಪಿ 4:5.

ಅರ್ಥವೇನು? ಯಶಸ್ವೀ ಕುಟುಂಬಗಳಲ್ಲಿ ಗಂಡಹೆಂಡತಿಯರು ಒಬ್ಬರು ಇನ್ನೊಬ್ಬರ ತಪ್ಪುಗಳನ್ನು ಉದಾರವಾಗಿ ಕ್ಷಮಿಸುತ್ತಾರೆ. (ರೋಮನ್ನರಿಗೆ 3:23) ಅವರು ತಮ್ಮ ಮಕ್ಕಳಿಗೆ ಅತಿಯಾದ ಕಟ್ಟುನಿಟ್ಟಿನ ಸಂಕೋಲೆ ಬಿಗಿಯುವುದಿಲ್ಲ ಇಲ್ಲವೆ ತುಂಬ ಸಡಿಲೂ ಬಿಡುವುದಿಲ್ಲ. ಮನೆಯಲ್ಲಿ ಹಿತಮಿತವಾದ ನಿಯಮಗಳನ್ನು ಸ್ಥಾಪಿಸುತ್ತಾರೆ. ಮಕ್ಕಳನ್ನು ತಿದ್ದಬೇಕಾಗುವಾಗ ಅವರು “ಮಿತಿಮೀರಿ” ಹೋಗುವುದಿಲ್ಲ.—ಯೆರೆಮೀಯ 30:11.

ಪ್ರಾಮುಖ್ಯವೇಕೆ? ಬೈಬಲ್‌ ಹೇಳುವುದು: “ಮೇಲಣಿಂದ ಬರುವ ವಿವೇಕವು . . . ನ್ಯಾಯಸಮ್ಮತವಾದದ್ದು” ಅಂದರೆ ಮಣಿಯುವಂಥದ್ದು, ಅತಿರೇಕಕ್ಕೆ ಹೋಗದಿರುವುದು ಆಗಿದೆ. (ಯಾಕೋಬ 3:17) ಪಾಪಪೂರ್ಣ ಮಾನವರಿಂದ ದೇವರೇ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ. ಹೀಗಿರುವಾಗ ದಂಪತಿಗಳು ಪರಸ್ಪರರಿಂದ ಪರಿಪೂರ್ಣತೆಯನ್ನೇಕೆ ನಿರೀಕ್ಷಿಸಬೇಕು? ಚಿಕ್ಕಪುಟ್ಟ ತಪ್ಪುಗಳ ಬಗ್ಗೆ ಸದಾ ಕಚ್ಚಾಡುವುದು ವೈಮನಸ್ಯಕ್ಕೆ ಕಾರಣವಾದೀತೆ ಹೊರತು ಯಾವ ಒಳಿತನ್ನೂ ಸಾಧಿಸದು. ಹೀಗಿರಲಾಗಿ, “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಎಂಬ ನಿಜತ್ವವನ್ನು ಒಪ್ಪಿಕೊಳ್ಳುವುದು ಉತ್ತಮ.—ಯಾಕೋಬ 3:2.

ಯಶಸ್ವೀ ಹೆತ್ತವರು ತಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗ ಅತಿರೇಕಕ್ಕೆ ಹೋಗುವುದಿಲ್ಲ. ಅವರು ಕೊಡುವ ಶಿಕ್ಷೆ ವಿಪರೀತವಾಗಿರುವುದಿಲ್ಲ ಇಲ್ಲವೆ “ಮೆಚ್ಚಿಸಲು ಕಷ್ಟಕರವಾಗಿರುವ” ವ್ಯಕ್ತಿಗಳೂ ಅವರಾಗಿರುವುದಿಲ್ಲ. (1 ಪೇತ್ರ 2:18) ಜವಾಬ್ದಾರಿಯಿಂದ ವರ್ತಿಸುವ ತಮ್ಮ ಹದಿಹರೆಯದ ಮಕ್ಕಳಿಗೆ ಅವರು ಕೆಲವೊಂದು ವಿಷಯಗಳಲ್ಲಿ ಸ್ವಾತಂತ್ರ್ಯ ಕೊಡುತ್ತಾರೆ. ಹೆಜ್ಜೆಹೆಜ್ಜೆಗೂ ಅವರೇನು ಮಾಡಬೇಕೆಂಬದನ್ನು ಹೇಳುತ್ತಾ ಇರುವುದಿಲ್ಲ. ಹಾಗೆ ಮಾಡುವುದು ಒಂದು ಕೃತಿ ಹೇಳುವಂತೆ, “ಆವೇಶದಿಂದ ನೃತ್ಯಮಾಡಿ ಮಳೆ ಬರಿಸಲು ಪ್ರಯತ್ನಿಸುವಂತಿದೆ. ಮಳೆ ಖಂಡಿತ ಬರುವುದಿಲ್ಲ ಆದರೆ ನೀವು ಬಸವಳಿದು ಹೋಗುವುದಂತೂ ಖಂಡಿತ.”

ಹೀಗೆ ಮಾಡಿ. ಮಣಿಯುವ ಸ್ವಭಾವ ನಿಮ್ಮಲ್ಲಿ ಎಷ್ಟಿದೆ ಎಂದು ಪರಿಶೀಲಿಸಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

ನಾನು ನನ್ನ ಸಂಗಾತಿಯನ್ನು ಕೊನೆ ಬಾರಿ ಪ್ರಶಂಸಿಸಿದ್ದು ಯಾವಾಗ?

ನನ್ನ ಸಂಗಾತಿಯನ್ನು ಕೊನೆ ಬಾರಿ ಟೀಕಿಸಿದ್ದು ಯಾವಾಗ?

ದೃಢನಿರ್ಣಯ ಮಾಡಿ. ಪಕ್ಕದಲ್ಲಿರುವ ಮೊದಲ ಪ್ರಶ್ನೆಗೆ ಉತ್ತರ ಕೊಡಲು ನಿಮಗೆ ಕಷ್ಟವಾಗಿ ಎರಡನೇ ಪ್ರಶ್ನೆಯನ್ನು ಉತ್ತರಿಸಲು ಸುಲಭವಾದಲ್ಲಿ, ನಿಮ್ಮ ಸಂಗಾತಿಯೊಂದಿಗೆ ನಡಕೊಳ್ಳುವಾಗ ಮಣಿಯುವ ವಿಷಯದಲ್ಲಿ ಒಂದು ಗುರಿಯಿಡಿ.

ನಿಮ್ಮ ಸಂಗಾತಿಯೊಂದಿಗೆ ಕೂತು ನೀವಿಬ್ಬರೂ ಯಾವ ದೃಢನಿರ್ಣಯಗಳನ್ನು ಮಾಡಬಹುದೆಂದು ಚರ್ಚಿಸಬಾರದೇಕೆ?

ನಿಮ್ಮ ಹದಿಹರೆಯದ ಮಗ/ಮಗಳು ಜವಾಬ್ದಾರಿಯಿಂದ ವರ್ತಿಸುತ್ತಿರುವಲ್ಲಿ ಅವರಿಗೆ ಯಾವ್ಯಾವ ವಿಷಯದಲ್ಲಿ ಸ್ವಾತಂತ್ರ್ಯ ಕೊಡಬಹುದೆಂದು ಯೋಚಿಸಿ.

ನಿಮ್ಮ ಹದಿಹರೆಯದವರೊಂದಿಗೆ ಭಿನ್ನಾಭಿಪ್ರಾಯವಿರುವ ವಿಷಯಗಳ ಕುರಿತು ಮುಕ್ತವಾಗಿ ಮಾತಾಡಬಾರದೇಕೆ? ಉದಾಹರಣೆಗೆ, ‘ಇಷ್ಟೇ ಗಂಟೆಯೊಳಗೆ ಮನೆಯಲ್ಲಿರಬೇಕು’ ಎಂಬ ನಿಯಮದ ಕುರಿತು ಮಾತಾಡಿ. (g09-E 10)

[ಪುಟ 7ರಲ್ಲಿರುವ ಚಿತ್ರ]

ಜೋಕೆವಹಿಸುವ ವಾಹನ ಚಾಲಕನಂತೆ, ಒಬ್ಬ ನ್ಯಾಯಸಮ್ಮತ ವ್ಯಕ್ತಿ ತನ್ನ ಕುಟುಂಬ ಸದಸ್ಯರಿಗೆ ಮಣಿಯುತ್ತಾನೆ