ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಎಲ್ಲೆಡೆಯೂ ಭರವಸೆಯ ಬಿಕ್ಕಟ್ಟು’

‘ಎಲ್ಲೆಡೆಯೂ ಭರವಸೆಯ ಬಿಕ್ಕಟ್ಟು’

‘ಎಲ್ಲೆಡೆಯೂ ಭರವಸೆಯ ಬಿಕ್ಕಟ್ಟು’

ಪಶ್ಚಿಮ ಆಫ್ರಿಕದಲ್ಲಿ 12 ವರ್ಷದ ಬಾಲಕನೊಬ್ಬ ಆಸ್ಪತ್ರೆಯ ಬೆಡ್ಡಲ್ಲಿ ಮಲಗಿದ್ದಾನೆ. ಮಲೇರಿಯ ಔಷಧಿಯೆಂದು ಮಾರಲಾಗುತ್ತಿದ್ದ ನಕಲಿ ಮದ್ದನ್ನು ಸೇವಿಸಿದರ ಪರಿಣಾಮ ಇದು. ಅವನ ತಾಯಿ ಅದನ್ನು ಕಾನೂನುಸಮ್ಮತ ಔಷಧಿ ಅಂಗಡಿಯಿಂದಲೇ ಖರೀದಿಸಿದ್ದರು. “15 ವರ್ಷಗಳಿಂದ ನಕಲಿ ಔಷಧಗಳ ಮಾರಾಟ ನಡೆಯುತ್ತಿದೆ” ಎಂದು ಆಸ್ಪತ್ರೆಯ ವೈದ್ಯರೊಬ್ಬರು ಹೇಳುತ್ತಾರೆ.

ಏಷ್ಯಾದಲ್ಲಿ ಒಂದು ದಂಪತಿಯು ಪೌಷ್ಟಿಕಾಂಶಯುಕ್ತ ಎಂದೇ ಹೆಸರು ಪಡೆದ ಹಾಲನ್ನು ತಮ್ಮ ನವಜಾತ ಕೂಸಿಗೆ ಕುಡಿಸುತ್ತಿದ್ದರು. ಅದರಲ್ಲಿ ಮಾರಕ ಪದಾರ್ಥ ಬೆರಕೆಯಾಗಿದೆ ಎಂದು ತಿಳಿದುಬಂದಾಗ ಅವರಿಗೆ ಆಘಾತ. ದುಃಖದ ಸಂಗತಿ ಏನೆಂದರೆ ಈ ಹಾಲು ಮಗುವನ್ನು ಬಲಿತೆಗೆದುಕೊಂಡಿತು.

ಅಮೆರಿಕದ ನೆಚ್ಚಿನ ವ್ಯಾಪಾರಿಯೊಬ್ಬ ತನ್ನ ಗ್ರಾಹಕರ ಬಿಲಿಯಗಟ್ಟಲೆ ಡಾಲರನ್ನು ನುಂಗಿಹಾಕಿದ. ಸಾವಿರಾರು ಮಂದಿಯ ಪಿಂಚಣಿ ಹಣ ಮಾಯವಾಯಿತು. ಇದನ್ನು “ಶತಮಾನದ ಅತಿ ದೊಡ್ಡ ವಂಚನೆ” ಎಂದು ಕರೆಯಲಾಗಿದೆ.

ಈ ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯಲ್ಲಿ ನಂಬಿಕೆದ್ರೋಹ ಆಗಿರುತ್ತದೆ. “ಎಲ್ಲೆಡೆಯೂ ಇರುವ ಭರವಸೆಯ ಬಿಕ್ಕಟ್ಟಿನ” ಬಗ್ಗೆ ಫ್ರೆಂಚ್‌ ವಾರ್ತಾಪತ್ರಿಕೆ ಲಾ ಮಾಂಡ್‌ ತಿಳಿಸುತ್ತದೆ. ಇದು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೂ ಮುಖ್ಯ ಕಾರಣ.

ಇಂದಿರುವ ‘ಭರವಸೆಯ ಬಿಕ್ಕಟ್ಟಿಗೆ’ ಕಾರಣಗಳೇನು? ಯಾರನ್ನಾದರೂ ನಂಬಲು ಸಾಧ್ಯವೇ? (g10-E 10)

[ಪಾದಟಿಪ್ಪಣಿ]

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಪ್ರಕಟಗೊಂಡ ಲಾ ಫಿಗಾರೋ ವಾರ್ತಾಪತ್ರಿಕೆಯ ವರದಿ.