ದೇವರು ಸರ್ವಾಂತರ್ಯಾಮಿಯೊ?
ಬೈಬಲಿನ ದೃಷ್ಟಿಕೋನ
ದೇವರು ಸರ್ವಾಂತರ್ಯಾಮಿಯೊ?
ದೇವರು ಸರ್ವಾಂತರ್ಯಾಮಿ, ಅಂದರೆ ಎಲ್ಲೆಲ್ಲಿಯೂ ಎಲ್ಲದರಲ್ಲೂ ಇದ್ದಾನೆ ಎಂದು ಅನೇಕರು ನಂಬುತ್ತಾರೆ. ಆದರೆ ರಾಜ ಸೊಲೊಮೋನನು ಯೆಹೋವ ದೇವರಿಗೆ ಪ್ರಾರ್ಥನೆಯಲ್ಲಿ ಹೀಗಂದನು: ‘ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸು.’ (1 ಅರಸುಗಳು 8:30, 39) ಹಾಗಾದರೆ ಬೈಬಲಿಗನುಸಾರ ಯೆಹೋವ ದೇವರಿಗೆ ಒಂದು ನಿವಾಸ ಸ್ಥಾನವಿದೆ. ಸೊಲೊಮೋನನು ಅದನ್ನು “ಪರಲೋಕ” ಎಂದು ಕರೆದನು. ಪರಲೋಕ ಎಂಬದರ ಅರ್ಥವೇನು?
ಬೈಬಲನ್ನು ಬರೆಯಲಾದ ಮೂಲ ಭಾಷೆಯಲ್ಲಿ ಪರಲೋಕ ಮತ್ತು ಆಕಾಶ ಎಂಬದಕ್ಕೆ ಒಂದೇ ಪದವನ್ನು ಬಳಸಲಾಗಿದೆ. ಆದರೆ ದೇವರ ನಿವಾಸವಾಗಿರುವ ಪರಲೋಕವು ನಮ್ಮ ಭೂಮಿಯ ಸುತ್ತಲಿರುವ ಆಕಾಶವಲ್ಲ. (ಆದಿಕಾಂಡ 2:1, 4) ಇದು ತರ್ಕಬದ್ಧ ಏಕೆಂದರೆ ದೇವರು ಭೌತಿಕ ವಿಶ್ವವನ್ನು ಸೃಷ್ಟಿಸುವ ಮುಂಚೆಯೇ ಆತನ ನಿವಾಸ ಸ್ಥಾನ ಅಸ್ತಿತ್ವದಲ್ಲಿತ್ತು. ಹೀಗಿರುವುದರಿಂದ ದೇವರು ವಾಸಿಸುತ್ತಿರುವ ಆ ಸ್ಥಾನ ದೃಶ್ಯವಾದ ಒಂದು ಭೌತಿಕ ಕ್ಷೇತ್ರ ಆಗಿರಲು ಸಾಧ್ಯವಿಲ್ಲ. ಆದ್ದರಿಂದ, ಪರಲೋಕವು ಯೆಹೋವ ದೇವರ ನಿವಾಸ ಎಂದು ಬೈಬಲ್ ಹೇಳುವಾಗ ಅದು ಅಂತರಿಕ್ಷದಲ್ಲಿರುವ ಯಾವುದೋ ನಿವೇಶನಕ್ಕೆ ಅಲ್ಲ ಬದಲಾಗಿ ಅದೃಶ್ಯವಾದ ಒಂದು ಕ್ಷೇತ್ರಕ್ಕೆ ಸೂಚಿಸುತ್ತಿರಬೇಕು.
ಬೆರಗುಗೊಳಿಸುವ ದರ್ಶನ
ಬೈಬಲ್ ನಮಗೆ ಯೇಸುವಿನ ಶಿಷ್ಯ ಯೋಹಾನನಿಗಾದ ಒಂದು ದರ್ಶನದ ಮೂಲಕ ಯೆಹೋವನ ನಿವಾಸ ಸ್ಥಾನದ ಬಗ್ಗೆ ಮನಸೆಳೆಯುವ ನಸುನೋಟವನ್ನು ಕೊಡುತ್ತದೆ. ಆ ದರ್ಶನದಲ್ಲಿ ಸ್ವರ್ಗದಲ್ಲಿ ತೆರೆದಿದ್ದ ಒಂದು ಬಾಗಿಲನ್ನು ಯೋಹಾನನು ಕಂಡನು. ಒಂದು ಸ್ವರ ಅವನಿಗೆ, “ಇಲ್ಲಿಗೆ ಏರಿ ಬಾ” ಎಂದು ಹೇಳಿತು.—ಪ್ರಕಟನೆ 4:1.
ಮುಂದೆ, ಯೋಹಾನನಿಗೆ ಸ್ವತಃ ಯೆಹೋವ ದೇವರ ಬೆರಗುಗೊಳಿಸುವ ದರ್ಶನವನ್ನೇ ಕೊಡಲಾಯಿತು. ಅದರಲ್ಲಿ ಅವನು ಇದನ್ನು ನೋಡಿದನು: “ಸ್ವರ್ಗದಲ್ಲಿ ಒಂದು ಸಿಂಹಾಸನವು ಅದರ ಸ್ಥಾನದಲ್ಲಿತ್ತು ಮತ್ತು ಆ ಸಿಂಹಾಸನದ ಮೇಲೆ . . . ಕುಳಿತುಕೊಂಡಿರುವಾತನು ಸೂರ್ಯಕಾಂತ ಮಣಿಯಂತೆಯೂ ಅಮೂಲ್ಯವಾದ ಕೆಂಪು ಬಣ್ಣದ ಮಣಿಯಂತೆಯೂ ತೋರುತ್ತಾನೆ; ಸಿಂಹಾಸನದ ಸುತ್ತಲೂ ಹಸಿರು ಬಣ್ಣದ ರತ್ನದಂತೆ ತೋರುವ ಒಂದು ಮುಗಿಲುಬಿಲ್ಲು ಇದೆ. . . . ಸಿಂಹಾಸನದೊಳಗಿಂದ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಹೊರಡುತ್ತಿವೆ; . . . ಇದಲ್ಲದೆ ಸಿಂಹಾಸನದ ಮುಂದೆ ಸ್ಫಟಿಕದಂಥ ಗಾಜಿನ ಸಮುದ್ರದಂತಿದ್ದದ್ದು ತೋರಿತು.”—ಪ್ರಕಟನೆ 4:2-6.
ಇದು, ಯೆಹೋವನ ಅತ್ಯದ್ಭುತ ಮನೋಹರತೆ ಹಾಗೂ ಸರಿಸಾಟಿಯಿಲ್ಲದ ಮಹಿಮೆಯ ಕುರಿತ ಕಣ್ಣಿಗೆ ಕಟ್ಟುವಂಥ ವರ್ಣನೆ. ಯೆಹೋವನ ಸಿಂಹಾಸನದ ಸುತ್ತಲಿನ ಸನ್ನಿವೇಶವನ್ನು ಗಮನಿಸಿ. ಆ ಮುಗಿಲುಬಿಲ್ಲು ಪ್ರಶಾಂತತೆ, ಶಾಂತಿಯನ್ನು ಸೂಚಿಸುತ್ತದೆ. ಮಿಂಚುಗಳು, ವಾಣಿಗಳು, ಗುಡುಗುಗಳು ದೇವರ ಶಕ್ತಿಯನ್ನು ಎತ್ತಿತೋರಿಸುತ್ತವೆ. ಗಾಜಿನ ಸಮುದ್ರವು, ದೇವರ ಸಮ್ಮುಖದಲ್ಲಿರುವವರೆಲ್ಲರ ಶುದ್ಧ ನಿಲುವಿನೆಡೆಗೆ ಗಮನ ಸೆಳೆಯುತ್ತದೆ.
ಇಲ್ಲಿ ಕೊಡಲಾಗಿರುವ ವರ್ಣನೆಯು ಸಾಂಕೇತಿಕವಾಗಿದ್ದರೂ ಅದು ದೇವರ ನಿವಾಸ ಸ್ಥಾನದ ಬಗ್ಗೆ ಬಹಳಷ್ಟನ್ನು ತಿಳಿಸುತ್ತದೆ. ಪರಲೋಕದಲ್ಲಿ ಯೆಹೋವನು ಪರಿಪೂರ್ಣ ಕ್ರಮಬದ್ಧತೆಯನ್ನು ಕಾಪಾಡುತ್ತಾನೆ. ಆತನ ನಿವಾಸ ಸ್ಥಾನವು ಗೊಂದಲದ ಗೂಡಲ್ಲ.
ಎಲ್ಲ ಸಮಯ ಎಲ್ಲ ಕಡೆ ಇದ್ದಾನೊ?
ಯೆಹೋವನಿಗೆ ಒಂದು ನಿವಾಸ ಸ್ಥಾನವಿದೆ ಎಂಬ ನಿಜಾಂಶವು ಆತನು ಎಲ್ಲ ಸಮಯ ಎಲ್ಲ ಕಡೆ ಇಲ್ಲ ಎಂಬದನ್ನು ಸೂಚಿಸುತ್ತದೆ. ಹಾಗಿದ್ದರೆ ಎಲ್ಲೆಲ್ಲಿ ಏನೇನು ನಡೆಯುತ್ತಿದೆಯೆಂದು ಆತನಿಗೆ ಗೊತ್ತಾಗುವುದು ಹೇಗೆ? (2 ಪೂರ್ವಕಾಲವೃತ್ತಾಂತ 6:39) ಒಂದು ವಿಧ, ಆತನ ಕಾರ್ಯಕಾರಿ ಶಕ್ತಿಯಾದ ಪವಿತ್ರಾತ್ಮದ ಮೂಲಕವೇ. ಕೀರ್ತನೆಗಾರನು ಬರೆದದ್ದು: “ನಾನು ನಿನ್ನ ಆತ್ಮಕ್ಕೆ ತಪ್ಪಿಸಿಕೊಳ್ಳುವಂತೆ ಎಲ್ಲಿಗೆ ಹೋಗಲಿ? ನಿನ್ನ ಕಣ್ಣಿಗೆ ಮರೆಯಾಗುವಂತೆ ಎಲ್ಲಿಗೆ ಓಡಲಿ? ಮೇಲಣ ಲೋಕಕ್ಕೆ ಏರಿಹೋದರೆ ಅಲ್ಲಿ ನೀನಿರುತ್ತೀ; ಪಾತಾಳಕ್ಕೆ [ಅಂದರೆ ಸಮಾಧಿಗೆ] ಹೋಗಿ ಮಲಗಿಕೊಂಡೇನಂದರೆ ಅಲ್ಲಿಯೂ ನೀನಿರುವಿ.”—ಕೀರ್ತನೆ 139:7-10.
ದೇವರ ಪವಿತ್ರಾತ್ಮದ ಸರ್ವವ್ಯಾಪಿ ಪರಿಣಾಮದ ಕುರಿತು ಅರ್ಥಮಾಡಿಕೊಳ್ಳಲು ಸೂರ್ಯನನ್ನು ದೃಷ್ಟಾಂತವಾಗಿ ತೆಗೆದುಕೊಳ್ಳಿ. ಅದು ಒಂದು ನಿರ್ದಿಷ್ಟ ಸ್ಥಾನದಲ್ಲಿದ್ದರೂ ಭೂಮಿಯ ವಿಸ್ತಾರ ಪ್ರದೇಶಕ್ಕೆ ಶಕ್ತಿಯನ್ನು ಕೊಡುತ್ತದೆ. ಅದೇ ರೀತಿ ಯೆಹೋವ ದೇವರಿಗೆ ಒಂದು ನಿವಾಸ ಸ್ಥಾನವಿದ್ದರೂ, ಆತನು 2 ಪೂರ್ವಕಾಲವೃತ್ತಾಂತ 16:9 ಹೀಗನ್ನುತ್ತದೆ: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”
ಉದ್ದೇಶಿಸಿದ ಏನನ್ನಾದರೂ ವಿಶ್ವದಲ್ಲಿ ಎಲ್ಲಿ ಬೇಕಾದರೂ ಪೂರೈಸಬಲ್ಲನು. ಅಷ್ಟುಮಾತ್ರವಲ್ಲ, ಯೆಹೋವನು ತನ್ನ ಪವಿತ್ರಾತ್ಮವನ್ನು ಬಳಸಿ ಯಾವುದೇ ಸಮಯದಲ್ಲಿ ಎಲ್ಲೆಲ್ಲಿ ಏನೇನು ನಡೆಯುತ್ತಿದೆಯೆಂದು ಗ್ರಹಿಸಶಕ್ತನು. ಹೀಗಿರುವುದರಿಂದಲೇದೇವದೂತರು ಎಂದು ಕರೆಯಲಾಗುವ ಆತ್ಮಜೀವಿಗಳು ಸಹ ದೇವರ ಕೈಕೆಳಗಿದ್ದಾರೆ. ಇವರು ಲಕ್ಷೋಪಲಕ್ಷ, ಬಹುಶಃ ಕೋಟ್ಯನುಕೋಟಿ ಸಂಖ್ಯೆಯಲ್ಲಿರಬಹುದೆಂದು ಬೈಬಲ್ ಸೂಚಿಸುತ್ತದೆ. (ದಾನಿಯೇಲ 7:10; ಪ್ರಕಟನೆ 5:11) ದೇವದೂತರು ದೇವರ ಪ್ರತಿನಿಧಿಗಳಾಗಿ ಭೂಮಿಗೆ ಬಂದು, ಮಾನವರೊಂದಿಗೆ ಮಾತಾಡಿ, ಹಿಂದೆ ಹೋಗಿ ದೇವರಿಗೆ ವರದಿ ಒಪ್ಪಿಸಿದ್ದರ ಹಲವಾರು ಸಂದರ್ಭಗಳ ಕುರಿತು ಬೈಬಲ್ ದಾಖಲೆಯು ತಿಳಿಸುತ್ತದೆ. ಉದಾಹರಣೆಗೆ, ಅಬ್ರಹಾಮನ ದಿನಗಳಲ್ಲಿ ಸೊದೋಮ್ ಗೊಮೋರ ಪಟ್ಟಣಗಳ ಕುರಿತ ದೊಡ್ಡ ದೂರಿನ ಮೊರೆಯ ಬಗ್ಗೆ ದೇವದೂತರು ವಿಚಾರಣೆ ನಡೆಸಿದರು. ಈ ದೇವದೂತರು ಕೊಟ್ಟ ವರದಿಯ ನಂತರವೇ ದೇವರು ಆ ಪಟ್ಟಣಗಳನ್ನು ನಾಶಮಾಡಲು ನಿರ್ಣಯಿಸಿದನೆಂಬುದು ವ್ಯಕ್ತ.—ಆದಿಕಾಂಡ 18:20, 21, 33; 19:1, 13.
ಹೀಗಿರಲಾಗಿ ಯೆಹೋವ ದೇವರು ಖುದ್ದಾಗಿ ಎಲ್ಲ ಕಡೆಗಳಲ್ಲಿ ಇರಬೇಕಾಗಿಲ್ಲವೆಂದು ಬೈಬಲ್ ಸೂಚಿಸುತ್ತದೆ. ತನ್ನ ಪವಿತ್ರಾತ್ಮದ ಕಾರ್ಯಾಚರಣೆ ಹಾಗೂ ದೇವದೂತ ಗಣಗಳ ಮುಖಾಂತರ, ತನ್ನ ಸೃಷ್ಟಿಯಲ್ಲೆಲ್ಲ ಏನೇನು ಆಗುತ್ತಿದೆಯೆಂದು ಆತನು ಪೂರ್ಣವಾಗಿ ತಿಳಿದುಕೊಳ್ಳಬಲ್ಲನು.
ನಮ್ಮ ಸೃಷ್ಟಿಕರ್ತನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ಬೈಬಲ್ ನೆರವಾಗಬಲ್ಲದು ಎಂಬುದು ಸ್ಪಷ್ಟ. ಭೌತ ಆಕಾಶದಾಚೆ ಅದೃಶ್ಯ ಕ್ಷೇತ್ರವಾದ ಪರಲೋಕ ಎಂಬಲ್ಲಿ ದೇವರು ವಾಸಿಸುತ್ತಾನೆಂದು ನಾವು ಬೈಬಲಿನಿಂದ ಕಲಿಯುತ್ತೇವೆ. ಅಲ್ಲಿ ದೇವರೊಂದಿಗೆ ಕೋಟ್ಯನುಕೋಟಿ ಬಲಿಷ್ಠ ದೇವದೂತರೂ ಇದ್ದಾರೆ. ಆತನ ನಿವಾಸ ಸ್ಥಾನದಲ್ಲಿ ಪ್ರಶಾಂತತೆ, ಪ್ರಭಾವಶಕ್ತಿ, ಶುದ್ಧತೆ ತೋರಿಬರುತ್ತದೆ. ಪರಲೋಕದಲ್ಲಿರುವ ಇಂಥ ಶಾಂತಿಭರಿತ ಪರಿಸ್ಥಿತಿಗಳನ್ನು ಮಾನವಕುಲವು ಸಕಾಲದಲ್ಲಿ ಭೂಮಿಯಲ್ಲಿ ಅನುಭವಿಸುವುದೆಂದು ಬೈಬಲ್ ಆಶ್ವಾಸನೆ ಕೊಡುತ್ತದೆ.—ಮತ್ತಾಯ 6:10. (g11-E 04)
ಈ ಬಗ್ಗೆ ಯೋಚಿಸಿದ್ದೀರೋ?
● ದೇವರು ಎಲ್ಲ ಕಡೆ ಇದ್ದಾನೊ?—1 ಅರಸುಗಳು 8:30, 39.
● ದೇವರ ಪವಿತ್ರಾತ್ಮದ ವ್ಯಾಪ್ತಿ ಎಷ್ಟು?—ಕೀರ್ತನೆ 139:7-10.
[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸೂರ್ಯ ಒಂದು ನಿರ್ದಿಷ್ಟ ಸ್ಥಾನದಲ್ಲಿದೆ. ಆದರೂ ಭೂಮಿಯ ವಿಸ್ತಾರ ಪ್ರದೇಶಕ್ಕೆ ಶಕ್ತಿ ಕೊಡುತ್ತದೆ. ಹಾಗೆಯೇ ದೇವರಿಗೆ ಒಂದು ನಿವಾಸ ಸ್ಥಾನವಿದೆ. ಆದರೂ ಆತನ ಪವಿತ್ರಾತ್ಮದ ಶಕ್ತಿಯು ವಿಶ್ವದಲ್ಲೆಲ್ಲೂ ಕಾರ್ಯನಡೆಸಬಲ್ಲದು