ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನಗೆ ಸರಿಹೊಂದುವ ಸ್ನೇಹಿತರನ್ನು ಎಲ್ಲಿ ಹುಡುಕಲಿ?

ನನಗೆ ಸರಿಹೊಂದುವ ಸ್ನೇಹಿತರನ್ನು ಎಲ್ಲಿ ಹುಡುಕಲಿ?

ಯುವಜನರ ಪ್ರಶ್ನೆ

ನನಗೆ ಸರಿಹೊಂದುವ ಸ್ನೇಹಿತರನ್ನು ಎಲ್ಲಿ ಹುಡುಕಲಿ?

“ನನ್ನ ವಯಸ್ಸು 21. ನನ್ನ ವಯಸ್ಸಿನವರು ಇಲ್ಲಿ ತುಂಬ ಕಡಿಮೆ. ಆದ್ದರಿಂದ ಒಂದೊ ಹೈಸ್ಕೂಲ್‌ನಲ್ಲಿರುವ ಮಕ್ಕಳ ಇಲ್ಲವೆ ದಂಪತಿಗಳ ಜೊತೆ ನಾನು ಕಾಲ ಕಳೆಯಬೇಕು. ಮೊದಲ ಗುಂಪಿನವರಿಗೆ ಪರೀಕ್ಷೆಗಳ ತಲೆನೋವು, ಎರಡನೇ ಗುಂಪಿನವರಿಗೆ ಸಾಲಗಳ ಚಿಂತೆ. ಈ ಎಲ್ಲ ಚಿಂತೆ ನನಗಿಲ್ಲ. ಆದ್ದರಿಂದ ನನಗೆ ಸರಿಹೊಂದುವ ಕೆಲವು ಫ್ರೆಂಡ್ಸ್‌ ಸಿಗುತ್ತಿದ್ದಲ್ಲಿ ಎಷ್ಟು ಚೆನ್ನಾಗಿರುತ್ತಿತ್ತು!”—ಕಾರ್ಮೆನ್‌.*

ವಯಸ್ಸು ಎಷ್ಟೇ ಇರಲಿ ಬಹುಮಟ್ಟಿಗೆ ಎಲ್ಲರಿಗೂ ಇತರರು ತಮ್ಮನ್ನು ಸ್ವೀಕರಿಸಬೇಕೆಂಬ ಆಸೆ ಇರುತ್ತದೆ. ನಿಮಗೂ ಇರಬಹುದು. ಆದ್ದರಿಂದ ಎಲ್ಲರೂ ನಮ್ಮನ್ನು ದೂರಮಾಡಿದರೆ, ಅಲಕ್ಷಿಸಿದರೆ ಅಥವಾ 15 ವರ್ಷದ ಮೊನಿಷಾ ತನ್ನ ಬಗ್ಗೆಯೇ ವರ್ಣಿಸಿದಂತೆ “ತಾನು ಮರೆಯಲ್ಲಿರುವ ವ್ಯಕ್ತಿಯಂತೆ ಕಾಣುವುದಿಲ್ಲವೊ” ಎಂಬಂತೆ ಇತರರು ವರ್ತಿಸಿದರೆ ಮನಸ್ಸಿಗೆ ತುಂಬ ನೋವಾಗುತ್ತದೆ.

ನೀವು ಯೆಹೋವನ ಸಾಕ್ಷಿ ಆಗಿದ್ದರಂತೂ ನಿಮಗೆ ಸರಿಹೊಂದುವ ‘ಸಹೋದರರ ಇಡೀ ಬಳಗವೇ’ ಇದೆ. (1 ಪೇತ್ರ 2:17) ಆದರೆ ಅವರ ಮಧ್ಯೆ ಇದ್ದಾಗಲೂ ನಿಮಗೆ ಒಮ್ಮೊಮ್ಮೆ ಪರಕೀಯ ಭಾವನೆ ಬರಬಹುದು. 20 ವರ್ಷದ ಹೆಲೆನಾ ಜ್ಞಾಪಿಸಿಕೊಳ್ಳುವುದು: “ಎಲ್ಲರೊಂದಿಗೆ ಬೆರೆಯಲು ನಾನೆಷ್ಟು ಪ್ರಯತ್ನಪಟ್ಟರೂ ನನ್ನಿಂದ ಆಗುತ್ತಿರಲಿಲ್ಲ. ಆದ್ದರಿಂದ ಕ್ರೈಸ್ತ ಕೂಟಗಳ ಬಳಿಕ ಮನೆಗೆ ಹಿಂದಿರುಗುವಾಗೆಲ್ಲ ಕಾರಿನ ಹಿಂದಿನ ಸೀಟಿನಲ್ಲಿ ಕೂತು ಅಳುತ್ತಿದ್ದೆ.”

ಒಂದು ಗುಂಪಿನಲ್ಲಿರುವಾಗ ನೀವು ಪರಕೀಯರೆಂಬ ಭಾವನೆ ಬರುವಲ್ಲಿ ಏನು ಮಾಡಬಲ್ಲಿರಿ? ಆ ಪ್ರಶ್ನೆಯನ್ನು ಉತ್ತರಿಸಲು ಮೊದಲಾಗಿ ಇದನ್ನು ತಿಳಿದುಕೊಳ್ಳೋಣ: (1) ಎಂಥ ರೀತಿಯ ಜನರೊಂದಿಗೆ ಬೆರೆಯಲು ನಿಮಗೆ ತುಂಬ ಕಷ್ಟವೆನಿಸುತ್ತದೆ? (2) ಅಂಥವರು ನಿಮ್ಮ ಜೊತೆಯಲ್ಲಿರುವಾಗ ಸಾಮಾನ್ಯವಾಗಿ ಹೇಗೆ ಪ್ರತಿಕ್ರಿಯಿಸುತ್ತೀರಿ?

ನಿಮಗೆ ಬೆರೆಯಲು ಸಾಧ್ಯವೇ ಇಲ್ಲವೆಂದನಿಸುವ ಗುಂಪಿಗೆ ✔ ಹಾಕಿ.

1. ವಯಸ್ಸು

❑ ನನಗಿಂತ ಚಿಕ್ಕವರು ❑ ನನ್ನದೇ ವಯಸ್ಸಿನವರು ❑ ನನಗಿಂತ ದೊಡ್ಡವರು

2. ಸಾಮರ್ಥ್ಯ

❑ ಕ್ರೀಡಾಪ್ರೇಮಿಗಳು ❑ ಪ್ರತಿಭಾವಂತರು ❑ ಬುದ್ಧಿವಂತರು

3. ವ್ಯಕ್ತಿತ್ವ

❑ ಆತ್ಮವಿಶ್ವಾಸವುಳ್ಳವರು ❑ ಎಲ್ಲರೂ ಮೆಚ್ಚುವಂಥವರು ❑ ತಮ್ಮದೇ ಆದ ಪ್ರತ್ಯೇಕ ಗುಂಪಿನಲ್ಲಿರುವವರು

ಈಗ, ನೀವು ಮೇಲೆ ಗುರುತಿಸಿರುವ ಜನರೊಂದಿಗಿದ್ದರೆ ಸಾಮಾನ್ಯವಾಗಿ ಹೇಗೆ ಪ್ರತಿಕ್ರಿಯಿಸುತ್ತೀರೆಂದು ವರ್ಣಿಸುವ ಹೇಳಿಕೆಗೆ ✔ ಹಾಕಿ.

❑ ನನಗೆ ಅವರಂಥದ್ದೇ ಅಭಿರುಚಿಗಳು ಇಲ್ಲವೆ ಸಾಮರ್ಥ್ಯಗಳಿವೆ ಎಂಬಂತೆ ನಟಿಸುತ್ತೇನೆ.

❑ ಅವರ ಅಭಿರುಚಿಗಳನ್ನು ಅಲಕ್ಷಿಸಿ, ನನ್ನ ಸ್ವಂತ ಅಭಿರುಚಿಗಳ ಕುರಿತು ಮಾತಾಡುತ್ತೇನೆ.

❑ ಸುಮ್ಮನಿದ್ದು, ಸಿಕ್ಕಿದ ಮೊದಲ ಅವಕಾಶದಲ್ಲೇ ಅಲ್ಲಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತೇನೆ.

ನಿಮಗೆ ಎಂಥ ಜನರೊಂದಿಗೆ ಬೆರೆಯಲು ತುಂಬ ಕಷ್ಟವಾಗುತ್ತದೆಂದೂ, ನಿಮ್ಮ ಪ್ರತಿಕ್ರಿಯೆಯನ್ನೂ ನೀವು ಗುರುತಿಸಿರುವುದರಿಂದ, ನೀವು ಈ ಸನ್ನಿವೇಶವನ್ನು ಹೇಗೆ ನಿಭಾಯಿಸಬಹುದೆಂದು ಈಗ ನೋಡೋಣ. ಆದರೆ ಅದಕ್ಕಿಂತ ಮುಂಚೆ, ಬೇರೆಯವರೊಂದಿಗೆ ಬೆರೆಯದಂತೆ ನಿಮ್ಮನ್ನು ತಡೆಯಬಲ್ಲ ಮತ್ತು ನೀವು ಮಾಡಬಾರದ ಕೆಲವು ವಿಷಯಗಳಿವೆ.

ತಡೆ 1: ಯಾರೊಂದಿಗೂ ಸೇರದಿರುವುದು

ಕಾರಣ. ನಿಮ್ಮೊಂದಿಗಿರುವ ಜನರ ಅಭಿರುಚಿಗಳು ಇಲ್ಲವೆ ಪ್ರತಿಭೆಗಳು ನಿಮ್ಮದಕ್ಕಿಂತ ಭಿನ್ನವಾಗಿರುವಾಗ ಅವರ ಮಧ್ಯೆ ನೀವೊಬ್ಬ ವಿಚಿತ್ರ ವ್ಯಕ್ತಿ ಆಗಿರುವಂತೆ ಅನಿಸುವುದು ಸಹಜ. ನೀವು ನಾಚಿಕೆಸ್ವಭಾವದವರು ಆಗಿರುವಲ್ಲಿ ಇದು ಇನ್ನಷ್ಟು ಸತ್ಯ. 18 ವರ್ಷದ ಅನಿತಾ ಹೇಳುವುದು: “ನನಗೆ ಸಂಭಾಷಣೆಯಲ್ಲಿ ಭಾಗಿಯಾಗಲು ತುಂಬ ಕಷ್ಟವಾಗುತ್ತದೆ. ಹೇಳಬಾರದ ಮಾತನ್ನು ಹೇಳುವೆನೊ ಎಂಬ ಹೆದರಿಕೆ.”

ಬೈಬಲ್‌ ಏನನ್ನುತ್ತದೆ? “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” (ಜ್ಞಾನೋಕ್ತಿ 18:1) ಹೌದು, ಯಾರೊಂದಿಗೂ ಸೇರದೆ ಒಂದು ಚಿಪ್ಪಿನೊಳಗೇ ಅಡಗಿರುವುದರಿಂದ ನಿಮ್ಮ ಸನ್ನಿವೇಶ ಇನ್ನಷ್ಟು ಕೆಡುವುದು ಅಷ್ಟೇ. ನೀವು ನಿಮ್ಮನ್ನೇ ಒಂಟಿಯಾಗಿರಿಸುವಾಗ ಈ ವಿಷಚಕ್ರದಲ್ಲಿ ಸಿಕ್ಕಿಬೀಳುತ್ತೀರಿ: ನಿಮ್ಮ ಒಂಟಿತನದ ಭಾವನೆಯು ನಿಮಗೆ ಬೇರೆಯವರೊಂದಿಗೆ ಬೆರೆಯಲು ಸಾಧ್ಯವಿಲ್ಲ ಎಂದು ನಿಮಗೆ ಮನದಟ್ಟುಮಾಡುತ್ತದೆ. ಇದರಿಂದಾಗಿ ನೀವು ಬೇರೆಯವರಿಂದ ದೂರವಿರುತ್ತೀರಿ. ದೂರವಿರುವಾಗ ನೀವು ಒಂಟಿಯಾಗುತ್ತೀರಿ ಮತ್ತು ಇದು ನೀವು ಯಾರೊಂದಿಗೂ ಬೆರೆಯಲಾರಿರೆಂದು ಮನದಟ್ಟು ಮಾಡುತ್ತದೆ. ನೀವು ಯಾವುದೇ ಕ್ರಮಗೈಯದಿದ್ದರೆ ಈ ಚಕ್ರದಲ್ಲೇ ಸಿಕ್ಕಿಬಿದ್ದು ಗಿರಕಿ ಹೊಡೆಯುತ್ತಿರುವಿರಿ!

“ಜನರಿಗೆ ನಿಮ್ಮ ಮನಸ್ಸನ್ನು ಓದಲಿಕ್ಕಾಗುವುದಿಲ್ಲ. ನೀವೇನು ಬಯಸುತ್ತೀರೆಂದು ನೀವು ಬಾಯಿಬಿಟ್ಟು ಹೇಳದಿದ್ದರೆ ಅದು ಸಿಗಲಾರದು. ನೀವು ನಿಮ್ಮಷ್ಟಕ್ಕೆ ಒಂಟಿಯಾಗಿದ್ದರೆ ನಿಮಗೆ ಸ್ನೇಹಿತರು ಸಿಗಲಾರರು. ನೀವು ಏನಾದರೂ ಪ್ರಯತ್ನ ಮಾಡಲೇಬೇಕು. ಇದು ಇನ್ನೊಬ್ಬ ವ್ಯಕ್ತಿಯ ಜವಾಬ್ದಾರಿಯೆಂದು ನೆನಸುವುದು ಸರಿಯಲ್ಲ. ಸ್ನೇಹ ಬೆಳೆಯಲು ಎರಡೂ ವ್ಯಕ್ತಿಗಳ ಪ್ರಯತ್ನ ಅಗತ್ಯ.”—ಮೇಘಾ, 19.

ತಡೆ 2: ಹತಾಶೆ

ಕಾರಣ. ಕೆಲವರು ಇತರರೊಂದಿಗೆ ಬೆರೆಯಲಿಕ್ಕಾಗಿ ಏನು ಮಾಡಲೂ ಸಿದ್ಧರಾಗಿ ಕೆಟ್ಟ ಸಹವಾಸಕ್ಕೆ ಬೀಳುತ್ತಾರೆ. ಸ್ನೇಹಿತರೇ ಇಲ್ಲದಿರುವದಕ್ಕಿಂತ ಯಾರು ಸಿಕ್ಕಿದರೂ ಸರಿ ಅವರನ್ನು ಸ್ನೇಹಿತರನ್ನಾಗಿ ಮಾಡಬೇಕೆಂಬ ಯೋಚನೆ ಅವರದ್ದು. “ನಮ್ಮ ಸ್ಕೂಲಿನ ‘ಜನಪ್ರಿಯ’ ಗುಂಪಿನಲ್ಲಿ ನಾನಿಲ್ಲ ಅಂತ ನಾನೆಷ್ಟು ಬೇಸರದಿಂದಿದ್ದೆನೆಂದರೆ, ಅವರಿಂದ ಸ್ವೀಕರಿಸಲ್ಪಡುವಂತೆ ತೊಂದರೆಯಲ್ಲಿ ಸಿಕ್ಕಿಬೀಳಲೂ ಹಾರೈಸುತ್ತಿದ್ದೆ” ಎನ್ನುತ್ತಾಳೆ 15 ವರ್ಷದ ರೂಪಾ.

ಬೈಬಲ್‌ ಏನನ್ನುತ್ತದೆ? “ಜ್ಞಾನಹೀನರ ಒಡನಾಡಿ ಸಂಕಟಪಡುವನು” ಇಲ್ಲವೆ ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌ ಹೇಳುವಂತೆ “ಮೂರ್ಖರ ಒಡನಾಟದಿಂದ ನಿಮಗೇ ಹಾನಿ ತಂದುಕೊಳ್ಳುವಿರಿ.” (ಜ್ಞಾನೋಕ್ತಿ 13:20) ಇಲ್ಲಿ ತಿಳಿಸಲಾಗಿರುವ ‘ಜ್ಞಾನಹೀನರು’ ಅಥವಾ ‘ಮೂರ್ಖರು’ ಏನೂ ಗೊತ್ತಿಲ್ಲದ ಮೂಢ ವ್ಯಕ್ತಿಗಳೆಂದು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ. ಅವರು ಒಂದುವೇಳೆ ಕ್ಲಾಸಿನಲ್ಲಿ ರ್ಯಾಂಕ್‌ ಸ್ಟೂಡೆಂಟ್‌ಗಳೂ ಆಗಿರಬಹುದು. ಆದರೆ ಅವರಿಗೆ ಬೈಬಲಿನ ಮಟ್ಟಗಳೆಡೆಗೆ ಗೌರವವಿಲ್ಲದಿದ್ದರೆ, ದೇವರ ದೃಷ್ಟಿಯಲ್ಲಿ ಅವರು ಮೂರ್ಖರೇ. ಅಲ್ಲದೆ, ಅವರೊಂದಿಗೆ ಬೆರೆಯಲಿಕ್ಕಾಗಿ ನೀವು ಗೋಸುಂಬೆ ಥರ ನಿಮ್ಮ ಬಣ್ಣ ಬದಲಾಯಿಸುತ್ತಿರುವಲ್ಲಿ ನಿಮಗೇ ಹಾನಿ ತಂದುಕೊಳ್ಳುವಿರಿ.—1 ಕೊರಿಂಥ 15:33.

“ಪ್ರತಿಯೊಬ್ಬನೂ ಸಹವಾಸಕ್ಕೆ ಯೋಗ್ಯನು ಎಂದಲ್ಲ. ನೀವು ಅವರ ಜೊತೆ ಇರುವಾಗ ಅವರಂತಿರಲಿಕ್ಕಾಗಿ ಬದಲಾಗಬೇಕೆಂದು ಬಯಸುವ ಸ್ನೇಹಿತರು ನಿಮಗೆ ಬೇಡ. ಅದರ ಬದಲು ನಿಮ್ಮನ್ನು ನಿಜವಾಗಿ ಪ್ರೀತಿಸುವ ಮತ್ತು ನಿಮ್ಮ ಕಷ್ಟದಲ್ಲಿ ನೆರವಾಗುವ ಸ್ನೇಹಿತರು ನಿಮಗಿರಬೇಕು.”—ಪ್ರಿಯಾ, 21.

ನೀವೇ ಮುಂದಾಗಿ

ಇತರರು ನಿಮ್ಮ ಬಳಿ ಬಂದು ‘ದಯಮಾಡಿ ನಮ್ಮ ಸ್ನೇಹಿತರಾಗಿ’ ಎಂಬ ಆಮಂತ್ರಣ ಕೊಡುವರೆಂದು ಕಾಯಬೇಡಿ. 21 ವರ್ಷದ ಜೀತ್‌ ಹೇಳುವುದು: “ಯಾವಾಗಲೂ ಇತರರು ನಮ್ಮ ಬಳಿ ಬಂದು ಪರಿಚಯ ಮಾಡಿಕೊಳ್ಳಲಿ ಎಂದು ನಾವು ನಿರೀಕ್ಷಿಸಬಾರದು. ಅವರ ಪರಿಚಯಮಾಡಲು ನಾವೇ ಪ್ರಯತ್ನಮಾಡಬೇಕು.” ಈ ನಿಟ್ಟಿನಲ್ಲಿ ನಿಮ್ಮ ಸಹಾಯಕ್ಕಾಗಿ ಮುಂದೆ ಎರಡು ಸಲಹೆಗಳಿವೆ:

ನಿಮ್ಮ ವಯೋಮಾನದ ಹೊರಗಿನವರ ಸ್ನೇಹಬೆಳೆಸಿ. ಬೈಬಲಿನಲ್ಲಿ ತಿಳಿಸಲಾಗಿರುವ ಇಬ್ಬರು ವ್ಯಕ್ತಿಗಳಾದ ಯೋನಾತಾನ್‌ ಮತ್ತು ದಾವೀದರ ವಯಸ್ಸಿನಲ್ಲಿ 30 ವರ್ಷಗಳ ಅಂತರವಿತ್ತು. ಆದರೂ ಅವರು ಪ್ರಾಣಮಿತ್ರರಾದರು. * (1 ಸಮುವೇಲ 18:1) ಇದರಿಂದ ಪಾಠ? ವಯಸ್ಕರನ್ನು ಸ್ನೇಹಿತರನ್ನಾಗಿ ಮಾಡಲು ಸಾಧ್ಯವಿದೆ! ಸ್ವಲ್ಪ ಯೋಚಿಸಿ ನೋಡಿ: ಇಂತಿಷ್ಟೇ ವಯಸ್ಸಿನ ಸ್ನೇಹಿತರು ಬೇಕೆಂಬ ನಿರ್ಬಂಧವಿಟ್ಟು ಆಮೇಲೆ ‘ನನಗೆ ಸ್ನೇಹಿತರೇ ಸಿಗುವುದಿಲ್ಲ’ ಎಂದು ಏಕೆ ದೂರಬೇಕು? ಇದು, ನಿರ್ಜನ ದ್ವೀಪದ ಸುತ್ತಲಿನ ನೀರಿನಲ್ಲಿ ಮೀನುಗಳು ತುಂಬಿದ್ದರೂ ನೀವಲ್ಲಿ ಹಸಿವಿನಿಂದ ಸಾಯುವುದಕ್ಕೆ ಸಮಾನವಾಗಿರುವುದು! ನಿಜಾಂಶವೇನೆಂದರೆ, ನೀವು ಸ್ನೇಹಿತರನ್ನಾಗಿ ಮಾಡಬಹುದಾದ ಒಳ್ಳೇ ಜನರು ಖಂಡಿತವಾಗಿ ನಿಮ್ಮ ಸುತ್ತ ಇದ್ದಾರೆ. ಅವರು ಸಿಗುವ ಒಂದು ವಿಧ ನಿಮ್ಮ ವಯೋಮಾನದ ಹೊರಗಿರುವವರಲ್ಲಿ ಹುಡುಕುವುದೇ.

“ಸಭೆಯಲ್ಲಿ ನನಗಿಂತ ದೊಡ್ಡವರೊಂದಿಗೆ ಮಾತಾಡಲು ಪ್ರಯತ್ನಿಸುವಂತೆ ನನ್ನ ತಾಯಿ ಉತ್ತೇಜಿಸಿದರು. ಅವರಲ್ಲೂ ನನ್ನಲ್ಲೂ ಎಷ್ಟೊಂದು ಸಮಾನ ಅಭಿರುಚಿಗಳಿವೆಯೆಂದು ತಿಳಿದಾಗ ನನಗೇ ಆಶ್ಚರ್ಯವಾದೀತೆಂದು ಅಮ್ಮ ಹೇಳಿದರು. ಅವರ ಮಾತು ಸತ್ಯ. ಈಗ ನನಗೆ ಅನೇಕ ಸ್ನೇಹಿತರಿದ್ದಾರೆ!”—ಹೆಲೆನಾ, 20.

ಸಂಭಾಷಣಾ ಕೌಶಲ ಬೆಳೆಸಿಕೊಳ್ಳಿ. ವಿಶೇಷವಾಗಿ ನೀವು ನಾಚುವ ಸ್ವಭಾವದವರಾಗಿದ್ದಲ್ಲಿ ಸಂಭಾಷಣೆ ನಡೆಸಲು ಪ್ರಯತ್ನ ಅಗತ್ಯ. ಆದರೆ ನೀವದನ್ನು ಖಂಡಿತ ಮಾಡಬಲ್ಲಿರಿ. ಅದಕ್ಕೆ ಕೀಲಿಕೈ (1) ಕಿವಿಗೊಡುವುದು, (2) ಪ್ರಶ್ನೆ ಕೇಳುವುದು ಮತ್ತು (3) ನಿಜವಾದ ಕಳಕಳಿ ತೋರಿಸುವುದು.

“ನಾನೇ ಮಾತಾಡುತ್ತಾ ಇರುವುದಿಲ್ಲ, ಕಿವಿಗೊಡಲು ಪ್ರಯತ್ನಿಸುತ್ತೇನೆ. ನಾನು ಮಾತಾಡುವಾಗ ನನ್ನ ಬಗ್ಗೆಯೇ ಹೇಳುತ್ತಾ ಇರುವುದಿಲ್ಲ ಇಲ್ಲವೆ ಯಾರ ಬಗ್ಗೆಯೂ ಕೆಟ್ಟದ್ದಾಗಿ ಮಾತಾಡದಿರುತ್ತೇನೆ.”—ಸೆರೆನಾ, 18.

“ನನಗೆ ಗೊತ್ತಿಲ್ಲದ ಒಂದು ವಿಷಯದ ಬಗ್ಗೆ ಯಾರಾದರೂ ಮಾತಾಡಲು ಇಚ್ಛಿಸುವಲ್ಲಿ ನಾನವರಿಗೆ ಆ ವಿಷಯಗಳನ್ನು ವಿವರಿಸಿ ಹೇಳುವಂತೆ ಕೇಳುತ್ತೇನೆ. ಇದು ಅವರಿಗೆ ನನ್ನ ಜೊತೆ ಇನ್ನಷ್ಟು ಹೆಚ್ಚು ಮಾತಾಡುವಂತೆ ಮಾಡೀತೆಂದು ನನ್ನ ನಿರೀಕ್ಷೆ.”—ಜಾರೆಡ್‌, 21.

ಹೆಚ್ಚು ಮಾತಾಡದಿರುವುದು ನಿಮ್ಮ ಸಹಜ ಸ್ವಭಾವ ಆಗಿರಬಹುದು. ಅದರಲ್ಲೇನೂ ತಪ್ಪಿಲ್ಲ. ನೀವೇನು ಬಾಯಿಬಡುಕರಾಗಬೇಕೆಂದಿಲ್ಲ! ಆದರೆ ನಿಮಗೆ ಸರಿಹೊಂದುವ ಫ್ರೆಂಡ್ಸ್‌ ಸಿಗುವುದು ಕಷ್ಟವೆಂದನಿಸುವಲ್ಲಿ, ಈ ಲೇಖನದಲ್ಲಿರುವ ಸಲಹೆಗಳನ್ನು ಪಾಲಿಸಿ ನೋಡಿ. ನಿಮಗೂ ಲಲಿತಾಳಂತೆ ಅನಿಸಬಹುದು. ಆಕೆಯನ್ನುವುದು: “ನನ್ನದು ನಾಚಿಕೆಸ್ವಭಾವ. ಆದ್ದರಿಂದ ಇತರರೊಂದಿಗೆ ಸಂಭಾಷಣೆ ಮಾಡಲು ನನ್ನನ್ನೇ ದೂಡಬೇಕಾಗುತ್ತದೆ. ಆದರೆ ನಮಗೆ ಸ್ನೇಹಿತರು ಬೇಕಾದರೆ ನಾವು ಸ್ನೇಹದಿಂದಿರಬೇಕಲ್ಲವೆ? ಹಾಗಾಗಿ ನಾನೀಗ ಇತರರೊಂದಿಗೆ ಮಾತಾಡಲು ಆರಂಭಿಸಿದ್ದೇನೆ.” (g11-E 04)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

ದಾವೀದನು ಯೋನಾತಾನನ ಮಿತ್ರನಾದಾಗ ಹದಿಹರೆಯದವನಾಗಿದ್ದಿರಬಹುದು.

[ಪುಟ 21ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

“ನಾನು ಕ್ರೈಸ್ತ ಕೂಟದಲ್ಲಿ ಮಾತಾಡಲು ಮುಂಚೆ ಯೋಚಿಸಿದ್ದಿರದ ಒಬ್ಬರೊಂದಿಗಾದರೂ ಮಾತಾಡಲು ಪ್ರಯತ್ನಿಸುತ್ತೇನೆ. ಬರೇ ವಂದನೆ ಹೇಳಿಯೂ ಸ್ನೇಹ ಬೆಸೆಯಲು ಸಾಧ್ಯವೆಂದು ಕಂಡುಕೊಂಡಿದ್ದೇನೆ!”

“ಯಾವ ಪ್ರಯತ್ನವನ್ನೇ ಮಾಡದೆ, ‘ನನ್ನನ್ನು ಇತರರು ಇಷ್ಟಪಡುವುದಿಲ್ಲ, ಆದ್ದರಿಂದ ಅವರೊಂದಿಗೆ ಬೆರೆಯುವ ಅವಕಾಶವೇ ಇಲ್ಲ’ ಎಂದು ಹೇಳುವುದು ಸುಲಭ. ಆದರೆ ನಾನೇ ಪ್ರಯತ್ನ ಮಾಡಬೇಕಿತ್ತು. ಬೆರೆಯಲು ನಾವೇ ಮುಂದಾಗುವುದು ಕೊನೆಗೆ ಪ್ರಯೋಜನ ತರುತ್ತದೆ. ಅದರಿಂದ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ.”

“ವಯಸ್ಕರ ಸಂಭಾಷಣೆಗಳಲ್ಲಿ ನಾನು ನಿಧಾನವಾಗಿ ಭಾಗಿಯಾಗಲು ಆರಂಭಿಸಿದೆ. ಮೊದಮೊದಲು ತುಂಬ ಮುಜುಗರವಾಗುತ್ತಿತ್ತು! ಆದರೆ ಕೊನೆಗೆ ನನಗೇ ಪ್ರಯೋಜನವಾಯಿತು. ಎಳೆಯ ಪ್ರಾಯದಲ್ಲೇ ನಾನು ಜೀವನುದ್ದದ ಸ್ನೇಹಿತರನ್ನು ಮಾಡಿಕೊಂಡೆ. ಅವರು ನನ್ನ ನೆರವಿಗೆ ಬರಲು ಸದಾ ಸಿದ್ಧರಾಗಿರುವ ಸ್ನೇಹಿತರು.”

[ಚಿತ್ರಗಳು]

ಲಾರೆನ್‌

ರೆಯಾನ್‌

ಕ್ಯಾರಿಸಾ

[ಪುಟ 22ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ನೀವು ನನ್ನ ಪ್ರಾಯದವರಾಗಿದ್ದಾಗ ಇತರರೊಂದಿಗೆ ಬೆರೆಯಲು ನಿಮಗೂ ಕಷ್ಟವಾಗುತ್ತಿತ್ತೊ? ಯಾವ ರೀತಿಯ ಜನರೊಂದಿಗೆ ಬೆರೆಯಲು ನಿಮಗೆ ತುಂಬ ಕಷ್ಟವಾಗುತ್ತಿತ್ತು? ನೀವು ಆ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಿದಿರಿ?

.....

[ಪುಟ 22ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಒಂಟಿತನದ ವಿಷಚಕ್ರ

ನಾನು ಒಂಟಿ,

ಆದ್ದರಿಂದ

. . . ↓

. . . ಎಲ್ಲರೂ

ನನ್ನನ್ನು ದೂರವಿಡುತ್ತಾರೆ

↑ ಎಂದನಿಸುತ್ತದೆ, ಇದರಿಂದಾಗಿ . . .

. . . ನಾನು ಯಾರೊಂದಿಗೂ ←

ಬೆರೆಯುವುದಿಲ್ಲ,

ಹಾಗಾಗಿ . . .