ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾರ್ಗದರ್ಶನ ಹಾಗೂ ನಿರೀಕ್ಷೆಯ ವಿಶ್ವಾಸಾರ್ಹ ಮೂಲ

ಮಾರ್ಗದರ್ಶನ ಹಾಗೂ ನಿರೀಕ್ಷೆಯ ವಿಶ್ವಾಸಾರ್ಹ ಮೂಲ

ಮಾರ್ಗದರ್ಶನ ಹಾಗೂ ನಿರೀಕ್ಷೆಯ ವಿಶ್ವಾಸಾರ್ಹ ಮೂಲ

ಯೆಹೋವ ದೇವರು ಸರ್ವಜ್ಞಾನಿಯೂ ಸರ್ವಶಕ್ತನೂ ಆಗಿದ್ದಾನೆ. ಆತನು ಪ್ರೀತಿಯ ಸಾಕಾರರೂಪವೂ ಆಗಿದ್ದಾನೆ. (1 ಯೋಹಾನ 4:8) ಆತನು ಕೊಡುವ ಸಲಹೆ ಬುದ್ಧಿವಾದಗಳು ಸದಾ ಒಳ್ಳೇದಾಗಿರುತ್ತವೆ, ಉಚಿತವಾಗಿರುತ್ತವೆ. ನಮ್ಮ ಹಿತಕ್ಷೇಮಕ್ಕಾಗಿಯೇ ಅದನ್ನು ಕೊಡುತ್ತಾನೆ. ಅಭೌತ ಮತ್ತು ಅತೀಂದ್ರಿಯ ಶಕ್ತಿಯುಳ್ಳ ಜನರು ಕೊಡುವ ಸಲಹೆಗೆ ಇದೆಷ್ಟು ತದ್ವಿರುದ್ಧ! ದೇವರನ್ನುವುದು: “ಎಲೈ, [ಆಧ್ಯಾತ್ಮಿಕವಾಗಿ] ಬಾಯಾರಿದ ಸಕಲಜನರೇ, ನೀರಿನ ಬಳಿಗೆ ಬನ್ನಿರಿ, ಹಣವಿಲ್ಲದವನು ಸಹ ಬರಲಿ! ಬನ್ನಿರಿ, ಕೊಂಡುಕೊಳ್ಳಿರಿ, ಉಣ್ಣಿರಿ! ಬಂದು ದ್ರಾಕ್ಷಾರಸವನ್ನೂ ಹಾಲನ್ನೂ ಹಣಕೊಡದೆ ಕ್ರಯವಿಲ್ಲದೆ ತೆಗೆದುಕೊಳ್ಳಿರಿ. ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ರಯಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ.”—ಯೆಶಾಯ 55:1, 2.

ಬೈಬಲನ್ನು ಬರೆಯಲು ಪ್ರೇರಿಸಿದವನು ನಮ್ಮ ಪ್ರೀತಿಯ ಸೃಷ್ಟಿಕರ್ತನಾಗಿರುವುದರಿಂದ, ಬೈಬಲಿನಿಂದ ನಮಗೆ ನಿರೀಕ್ಷೆ, ಆಧ್ಯಾತ್ಮಿಕ ಸಂರಕ್ಷಣೆ, ಜೀವನೋದ್ದೇಶ ಮತ್ತು ಜೀವನಕ್ಕಾಗಿ ಅತ್ಯುತ್ತಮ ಸೂತ್ರಗಳು ಸಿಗುತ್ತವೆ. ಪಕ್ಕದ ಚೌಕದಲ್ಲಿರುವ ಪ್ರಶ್ನೆಗಳೂ ಅದಕ್ಕೆ ಸಂಬಂಧಪಟ್ಟ ಬೈಬಲ್‌ ವಚನಗಳ ಬಗ್ಗೆಯೂ ಒಂದು ಕ್ಷಣ ಯೋಚಿಸಿನೋಡಿ. (g11-E 02)

[ಪುಟ 15ರಲ್ಲಿರುವ ಚೌಕ]

ನನಗೆ ನಿಜ ಆಂತರಿಕ ನೆಮ್ಮದಿ ಹೇಗೆ ಸಿಗಬಲ್ಲದು? ಬೈಬಲ್‌ ತಿಳಿಸುವುದು: “ನಿನ್ನ ವಿಮೋಚಕನೂ ಇಸ್ರಾಯೇಲ್ಯರ ಸದಮಲಸ್ವಾಮಿಯೂ ಆದ ಯೆಹೋವನು ಹೀಗನ್ನುತ್ತಾನೆ—ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.”—ಯೆಶಾಯ 48:17, 18.

ದುಷ್ಟತ್ವ ಯಾವಾಗಲೂ ಇರುವುದೊ? “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಹೌದು, ದುಷ್ಟ ಮಾನವರೂ, ದುಷ್ಟ ದೂತರೂ ಇವರೆಲ್ಲರೂ ಬೆಂಕಿಯಿಂದಲೊ ಎಂಬಂತೆ ಶಾಶ್ವತವಾಗಿ ನಾಶವಾಗುವರು.—ಪ್ರಕಟನೆ 20:10, 14.

ರೋಗರುಜಿನ, ಕಷ್ಟಸಂಕಟ ಎಂದಾದರೂ ಕೊನೆಗೊಳ್ಳುವವೊ? “ಇಗೋ, ದೇವರ ಗುಡಾರವು ಮಾನವಕುಲದೊಂದಿಗೆ ಇದೆ; ಆತನು ಅವರೊಂದಿಗೆ ವಾಸಮಾಡುವನು ಮತ್ತು ಅವರು ಆತನ ಜನರಾಗಿರುವರು. ದೇವರು ತಾನೇ ಅವರೊಂದಿಗಿರುವನು. ಆತನು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು [ಇಂದಿನ ಸಮಸ್ಯೆಗಳು] ಗತಿಸಿಹೋಗಿವೆ.”—ಪ್ರಕಟನೆ 21:3, 4.

ದೆವ್ವಗಳಿಗಿಂತ ಭಿನ್ನವಾಗಿ ದೇವರಾದರೊ ಎಂದೂ ಸುಳ್ಳಾಡುವುದಿಲ್ಲ. ನಿಜಾಂಶವೇನೆಂದರೆ ಆತನು “ಸುಳ್ಳಾಡಲು ಸಾಧ್ಯವಿಲ್ಲದ” ದೇವರು. (ತೀತ 1:2) ಮುಂದಿನ ಲೇಖನ ತೋರಿಸಲಿರುವಂತೆ, ಆತನಿಂದ ಬರುವ ಸತ್ಯವು ಬಿಡುಗಡೆಯನ್ನೂ ಜೀವವನ್ನೂ ಕೊಡುವಂಥದ್ದಾಗಿದೆ.—ಯೋಹಾನ 8:32; 17:3.